For Quick Alerts
ALLOW NOTIFICATIONS  
For Daily Alerts

ಪಿಎಫ್ ಖಾತೆಯನ್ನು ವರ್ಗಾವಣೆ ಮಾಡುವುದು ಹೇಗೆ?

ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಪಿಪಿಎಫ್ ಖಾತೆದಾರರು ತಮ್ಮ ಖಾತೆಗಳನ್ನು ಒಂದು ಬ್ಯಾಂಕಿನಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು ಅಥವಾ ಒಂದು ಅಂಚೆ ಕಚೇರಿ ಶಾಖೆಯಿಂದ ಮತ್ತೊಂದು ಅಂಚೆ ಕಚೇರಿಗೆ ಅಥವಾ ಬ್ಯಾಂಕಿಗೆ ವರ್ಗಾಯಿಸಬಹುದು.

By Siddu
|

ಉನ್ನತ ಮಟ್ಟದ ಸುರಕ್ಷತೆ ಹಾಗು ತೆರಿಗೆ ವಿನಾಯಿತಿಯಂತ ಪ್ರಮುಖ ಪ್ರಯೋಜನಗಳಿಂದಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಭಾರತೀಯರ ಜನಪ್ರಿಯ ಹೂಡಿಕೆ ಯೋಜನೆಯಾಗಿದೆ.

ನೀವು ಬ್ಯಾಂಕುಗಳ ಮೂಲಕ ಮತ್ತು ಪೋಸ್ಟ್ ಆಫೀಸ್ ಮೂಲಕ ಪಿಪಿಎಫ್ ನಲ್ಲಿ ಹೂಡಿಕೆ ಮಾಡಬಹುದು. ನೀವು ಬ್ಯಾಂಕುಗಳಲ್ಲಿ ಆನ್ಲೈನ್ ಮೂಲಕ ಹಣವನ್ನು ವರ್ಗಾಯಿಸುವಂತೆ ಪೋಸ್ಟ್ ಆಫೀಸ್ ಗಳಲ್ಲಿ ಈ ಆಯ್ಕೆ ಇರುವುದಿಲ್ಲ. ನೀವು ಹೂಡಿಕೆ ಮಾಡಲು ಬಯಸುವ ಪ್ರತಿ ಬಾರಿಯೂ ಪೋಸ್ಟ್ ಆಫೀಸ್ ಗೆ ಭೇಟಿ ನೀಡುವುದೇ ಸಮಸ್ಯಾತ್ಮಕ ಹಾಗು ಬೇಸರದ ಸಂಗತಿಯಾಗಿದೆ. ಇದು ಪೋಸ್ಟ್ ಆಫೀಸ್ ನಿಂದ ಬ್ಯಾಂಕುಗಳಿಗೆ ತಮ್ಮ ಖಾತೆಯನ್ನು ವರ್ಗಾವಣೆ ಮಾಡಲು ಕಾರಣವಾಗಬಹುದು. ಭಾರತದಲ್ಲಿ ಈ 25 ಆದಾಯ ಹಾಗು ಹೂಡಿಕೆಗಳಿಗೆ ತೆರಿಗೆ ಇಲ್ಲ!

ಖಾತೆ ವರ್ಗಾವಣೆಗೆ ಕಾರಣ

ಖಾತೆ ವರ್ಗಾವಣೆಗೆ ಕಾರಣ

ಶಾಖೆಗೆ ಭೇಟಿ ನೀಡಲು ಅಥವಾ ಉದ್ಯೋಗ ಉದ್ದೇಶಗಳಿಗಾಗಿ ಮತ್ತೊಂದು ನಗರಕ್ಕೆ ಸ್ಥಳಾಂತರಗೊಳ್ಳುವಾಗ ಬ್ಯಾಂಕುಗಳಲ್ಲಿನ ಪಿಪಿಎಫ್ ಖಾತೆಯನ್ನು ಹೊಂದಿರುವ ಕೆಲವರು ತಮ್ಮ ಖಾತೆಯನ್ನು ವರ್ಗಾಯಿಸಲು ಬಯಸುತ್ತಾರೆ.

ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಪಿಪಿಎಫ್ ಖಾತೆದಾರರು ತಮ್ಮ ಖಾತೆಗಳನ್ನು ಒಂದು ಬ್ಯಾಂಕಿನಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು ಅಥವಾ ಒಂದು ಅಂಚೆ ಕಚೇರಿ ಶಾಖೆಯಿಂದ ಮತ್ತೊಂದು ಅಂಚೆ ಕಚೇರಿಗೆ ಅಥವಾ ಬ್ಯಾಂಕಿಗೆ ವರ್ಗಾಯಿಸಬಹುದು.
ಖಾತೆ ವರ್ಗಾವಣೆ ಮಾಡುವ ವಿವರಗಳನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ..  ನಿಮ್ಮ ಹಣಕಾಸು ಸುಭದ್ರತೆ ಹಾಗು ಆರ್ಥಿಕ ಅಭಿವೃದ್ಧಿಯ ನೆರವಿಗಾಗಿ ಸರ್ಕಾರದಿಂದ ಲಭ್ಯವಿರುವ ಯೋಜನೆಗಳು

ಒಂದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗೆ ವರ್ಗಾವಣೆ

ಒಂದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಗೆ ವರ್ಗಾವಣೆ

ನೀವು ಬ್ಯಾಂಕ್ ನಿಂದ ಬ್ಯಾಂಕ್ ಗೆ ಅಥವಾ ಪೋಸ್ಟ್ ಆಫೀಸ್ ನಿಂದ ಪೋಸ್ಟ್ ಆಫೀಸ್ ಗೆ ವರ್ಗಾಯಿಸಲು ಬಯಸಿದರೆ ಪ್ರಕ್ರಿಯೆಯು ತುಂಬಾ ಸರಳವಾಗಿದೆ.
ನಿಮ್ಮ ಅಸ್ತಿತ್ವದಲ್ಲಿರುವ ಶಾಖೆಯನ್ನು ನೀವು ಭೇಟಿ ಮಾಡಬೇಕು ಮತ್ತು ಶಾಖೆ ಬದಲಿಸಲು ಅಪ್ಲಿಕೇಶನ್ ಅನ್ನು ಸಲ್ಲಿಸಬೇಕು. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಶಾಖೆಯನ್ನು ಅವಲಂಬಿಸಿ ಈ ಪ್ರಕ್ರಿಯೆಯು ಒಂದರಿಂದ ಏಳು ದಿನಗಳನ್ನು ತೆಗೆದುಕೊಳ್ಳಬಹುದು.

ಬ್ಯಾಂಕ್ ನಿಂದ ಪೋಸ್ಟ್ ಆಫೀಸ್ ಗೆ ಮತ್ತು ಪೋಸ್ಟ್ ಆಫೀಸ್ ನಿಂದ ಬ್ಯಾಂಕ್ ಗೆ ಖಾತೆ ವರ್ಗಾವಣೆ

ಬ್ಯಾಂಕ್ ನಿಂದ ಪೋಸ್ಟ್ ಆಫೀಸ್ ಗೆ ಮತ್ತು ಪೋಸ್ಟ್ ಆಫೀಸ್ ನಿಂದ ಬ್ಯಾಂಕ್ ಗೆ ಖಾತೆ ವರ್ಗಾವಣೆ

ನಿಮ್ಮ ಖಾತೆಯನ್ನು ಅಂಚೆ ಕಚೇರಿಯಿಂದ ಬ್ಯಾಂಕ್ ಅಥವಾ ಬ್ಯಾಂಕ್ ನಿಂದ ಅಂಚೆ ಕಚೇರಿಗೆ ವರ್ಗಾಯಿಸಲು ನೀವು ಬಯಸಿದರೆ, ನಿಮ್ಮ PPF ಖಾತೆಯನ್ನು ಹೇಗೆ ವರ್ಗಾವಣೆ ಮಾಡಬಹುದು ಎಂಬುದನ್ನು ಇಲ್ಲಿ ನೀಡಲಾಗಿದೆ.

ಹಂತ 1.
ನಿಮ್ಮ ಪಿಪಿಎಫ್ ಪಾಸ್ಬುಕ್ ನೊಂದಿಗೆ ಅಸ್ತಿತ್ವದಲ್ಲಿರುವ ಬ್ಯಾಂಕ್ / ಪೋಸ್ಟ್ ಆಫೀಸ್ ಶಾಖೆಗೆ ಭೇಟಿ ನೀಡಿ.
ಹಂತ 2.
ನೀವು ವರ್ಗಾವಣೆ ಅಪ್ಲಿಕೇಶನ್ ವಿನಂತಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಯಲ್ಲಿ ನಿಮ್ಮ ಪಿಪಿಎಫ್ ಖಾತೆಯನ್ನು ನೀವು ವರ್ಗಾಯಿಸಲು ಬಯಸುವ ಪೋಸ್ಟ್ ಆಫೀಸ್ / ಬ್ಯಾಂಕ್ ಶಾಖೆಯ ಪೂರ್ಣ ವಿಳಾಸವನ್ನು ನೀವು ನಮೂದಿಸಬೇಕು.

ಹಂತ 3.
ನಿಮ್ಮ PPF ವರ್ಗಾವಣೆ ಅಪ್ಲಿಕೇಶನ್ ವಿನಂತಿಯನ್ನು ಸ್ವೀಕರಿಸಿದ ನಂತರ, ಅಸ್ತಿತ್ವದಲ್ಲಿರುವ ಶಾಖೆ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ. ವರ್ಗಾವಣೆ ವಿನಂತಿಯ ಸ್ವೀಕೃತಿಯನ್ನು ಸಂಗ್ರಹಿಸಿ. ಅಸ್ತಿತ್ವದಲ್ಲಿರುವ ಶಾಖೆ ಹೊಸ ಶಾಖೆಗೆ ಕೆಳಗಿನ ದಾಖಲೆಗಳನ್ನು ಕಳುಹಿಸುತ್ತದೆ:
ಎ) ಖಾತೆಯ ಪ್ರಮಾಣಿತ ನಕಲು
ಬಿ) ಮೂಲ ಖಾತೆ ತೆರೆಯುವ ಅರ್ಜಿ ನಮೂನೆ
ಸಿ) ನಾಮಿನೆಶನ್ ಫಾರ್ಮ್
ಡಿ) ನಿಮ್ಮ ಸಹಿಗಳ ನಮೂನೆ
ಇ) ಚೆಕ್ ಅಥವಾ ಡಿಮಾಂಡ್ ಡ್ರಾಪ್ಟ್ ಔಟ್ ಸ್ಡಾಂಡಿಂಗ್ ಬ್ಯಾಲೆನ್ಸ್
ಎಫ್) ಅಸ್ತಿತ್ವದಲ್ಲಿರುವ PPF ಪಾಸ್ಬುಕ್

ಹೊಸ ಖಾತೆಯ ಪ್ರಕ್ರಿಯೆ

ಹೊಸ ಖಾತೆಯ ಪ್ರಕ್ರಿಯೆ

ಹಂತ 4
ಹಳೆ ಶಾಖೆಯಿಂದ ನಿಮ್ಮ ದಾಖಲೆಗಳನ್ನು ಹೊಸ ಬ್ಯಾಂಕ್ / ಪೋಸ್ಟ್ ಆಫೀಸ್ ಪಡೆದಾಗ, ಶಾಖಾಧಿಕಾರಿಗಳು ನಿಮ್ಮ ದಾಖಲೆಗಳ ಸ್ವೀಕೃತಿಯ ಬಗ್ಗೆ ನಿಮ್ಮನ್ನು ಸಂಪರ್ಕಿಸುತ್ತಾರೆ.

ಹಂತ 5
ಹೊಸ ಶಾಖೆಯಲ್ಲಿ, ನೀವು ಹೊಸ ಖಾತೆಯ ಆರಂಭಿಕ ಫಾರ್ಮ್, ನಾಮಿನಿ ಬದಲಾವಣೆಯ ಫಾರ್ಮ್, ಯಾವುದಾದರೂ ಮತ್ತು ಮೂಲ ಪಾಸ್ಬುಕ್ ಅನ್ನು ಸಲ್ಲಿಸಬೇಕಾಗುತ್ತದೆ.
ವರ್ಗಾವಣಾ ಪ್ರಕ್ರಿಯೆ ಒಂದು ಸಮಯಾವಕಾಶ ತೆಗೆದುಕೊಳ್ಳಬಹುದು.

ನೆನಪಿನಲ್ಲಿರಬೇಕಾದ ವಿಷಯಗಳು

ನೆನಪಿನಲ್ಲಿರಬೇಕಾದ ವಿಷಯಗಳು

ಪಿಪಿಎಫ್ ಖಾತೆ ವರ್ಗಾವಣೆ ಮಾಡುವುದಕ್ಕೂ ಕೂಡ ಕೆವೈಸಿ ಪ್ರಕ್ರಿಯೆ ಮಾಡಬೇಕಗುತ್ತದೆ. ವರ್ಗಾವಣಾ ಖಾತೆಯನ್ನು ನಿರಂತರ ಖಾತೆಯೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪಿಪಿಎಫ್ ಕಾತೆ ಮೂಲಕ ಸಿಗುವ ಯಾವುದೇ ಪ್ರಯೋಜನ, ಸಾಲ ಸೌಲಭ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ.
ವರ್ಗಾವಣೆ ಪ್ರಕ್ರಿಯೆಯ ಕಾರಣದಿಂದಾಗಿ ಹೊಸ PPF ಪಾಸ್ಬುಕ್ ನಿಮಗೆ ನೀಡಲಾಗುತ್ತದೆ. ಹಳೆಯ ವ್ಯವಹಾರಗಳ ದಾಖಲೆಗಾಗಿ ಹಳೆಯ ಪಾಸ್ಬುಕ್ ನ ಛಾಯಾಚಿತ್ರವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ.

English summary

How to Transfer PPF Account

Bank and post office PPF account holders can transfer their accounts from one bank to another, or from one post office branch to another or bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X