For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಉಪಯುಕ್ತ ಸಲಹೆ

ಸ್ಟಾಕ್ ಮತ್ತು ಸ್ಟಾಕ್ ಮಾರುಕಟ್ಟೆಗಳ ಕುರಿತಾಗಿ ಇಷ್ಟೆಲ್ಲಾ ತಿಳುವಳಿಕೆ ಇರಬೇಕಾಗುತ್ತದೆ ಎಂಬ ವಿಚಾರವೇ ಹೊಸಬರನ್ನ ಕಂಗೆಡಿಸಿಬಿಡುತ್ತದೆ.

By Siddu
|

"ಇಕ್ವಿಟಿ ಟ್ರೇಡಿಂಗ್" ಅನ್ನೋದು ತಮಾಷೆಯ ವಿಷಯವಲ್ಲ. ಅದರ ಕುರಿತು ನೀವು ಓದಲು ಮತ್ತು ಅಭ್ಯಸಿಸಲು ಆರಂಭಿಸಿದಾಗ, ಇಕ್ವಿಟಿ ಟ್ರೇಡಿಂಗ್ ಸ್ವತ: ಒಂದು ವೃತ್ತಿಯೆಂದೇ ನಿಮಗೆ ಅನಿಸದೇ ಇರದು. ಹೂಡಿಕೆಗೆ ಮೊದಲು, ಅದರೊಂದಿಗೆ ತಳುಕು ಹಾಕಿಕೊಂಡಿರುವ ಕೆಲವು ಮೂಲಾಂಶಗಳು ಹಾಗೂ ರಿಸ್ಕ್ ಗಳ ಬಗ್ಗೆ ಹೂಡಿಕೆದಾರನು ತಿಳಿದುಕೊಂಡಿರುವುದು ಅತ್ಯಾವಶ್ಯಕ. ಸ್ಟಾಕ್ ಮಾರುಕಟ್ಟೆಗಳಲ್ಲಿ ವ್ಯವಹಾರವನ್ನು ಕೈಗೊಳ್ಳುವುದಕ್ಕೆ ಮುಂಚಿತವಾಗಿ ಈ ಅರಿವನ್ನು ಅದಾಗಲೇ ಸಾಧಿಸಿರಬೇಕು.

ಸ್ಟಾಕ್ ಮತ್ತು ಸ್ಟಾಕ್ ಮಾರುಕಟ್ಟೆಗಳ ಕುರಿತಾಗಿ ಇಷ್ಟೆಲ್ಲಾ ತಿಳುವಳಿಕೆ ಇರಬೇಕಾಗುತ್ತದೆ ಎಂಬ ವಿಚಾರವೇ ಹೊಸಬರನ್ನ ಕಂಗೆಡಿಸಿಬಿಡುತ್ತದೆ. ಸ್ಟಾಕ್ ಮಾರುಕಟ್ಟೆಗಳ ಕುರಿತು ಇನ್ನಷ್ಟು ಉತ್ತಮ ಪರಿಕಲ್ಪನೆಯನ್ನು ನಿಮ್ಮಲ್ಲಿ ಮೂಡಿಸುವುದಕ್ಕಾಗಿ ಆರು ಸಲಹೆಗಳನ್ನು ನಾವಿಲ್ಲಿ ಪ್ರಸ್ತಾಪಿಸಿದ್ದು, ತನ್ಮೂಲಕ ನಿಮ್ಮ ಹೂಡಿಕೆಯ ಪ್ರಯಾಣಕ್ಕೆ ನಾವು ಹಸಿರು ನಿಶಾನೆಯನ್ನು ತೋರಿಸುತ್ತಿದ್ದೇವೆ.. ಷೇರುಪೇಟೆ ಹೂಡಿಕೆ ಬಗ್ಗೆ ನಿಮಗೆಷ್ಟು ಗೊತ್ತು?

ನಿಮ್ಮ ಉಳಿತಾಯವನ್ನು ಹೂಡಬೇಡಿರಿ

ನಿಮ್ಮ ಉಳಿತಾಯವನ್ನು ಹೂಡಬೇಡಿರಿ

ಸ್ಟಾಕ್ ಮಾರುಕಟ್ಟೆಗಳು ಅತೀ ಹೆಚ್ಚಿನ ಪ್ರಮಾಣದ ರಿಸ್ಕ್ ಅನ್ನು ಒಳಗೊಂಡಿರುವ ಹೂಡಿಕೆಗಳೆಂದೇ ಪರಿಗಣಿತವಾಗಿದ್ದು, ನೀವು ಹೂಡಿದ ಅಸಲು ಹಣವನ್ನೂ ಸಹ ಹಿಂಪಡೆಯುವುದರ ಬಗ್ಗೆ ಯಾವುದೇ ಖಚಿತತೆ ಇರುವುದಿಲ್ಲ. ಆದ್ದರಿಂದ, ಹೆಚ್ಚಿನ ರಿಟರ್ನ್ ಗಳ ಆಸೆಯ ಬಲೆಯಲ್ಲಿ ಸಿಲುಕಿಕೊಳ್ಳುವುದು ಜಾಣತನವಲ್ಲ. ನಿಮ್ಮ ಇನ್ನಿತರ ಉಳಿತಾಯಗಳು ಹೆಚ್ಚಿನ ಸುರಕ್ಷತೆಯಲ್ಲಿವೆ ಎಂದಾದ ಬಳಿಕವಷ್ಟೇ ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಶಿಫಾರಸು ಮಾಡಲಾಗುತ್ತದೆ. ನಿಮ್ಮ ಭವಿಷ್ಯದ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ನೀವು ರಿಸ್ಕ್ ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ತನ್ಮೂಲಕ ಸ್ಟಾಕ್ ಮಾರುಕಟ್ಟೆಯತ್ತ ಹೆಜ್ಜೆಯಿಡಲು ಸಾಧ್ಯವಾಗುತ್ತದೆ.

ಹೂಡಿಕೆಯ ಕುರಿತಾಗಿ ಶಿಸ್ತನ್ನು ಅಳವಡಿಸಿಕೊಳ್ಳಿರಿ

ಹೂಡಿಕೆಯ ಕುರಿತಾಗಿ ಶಿಸ್ತನ್ನು ಅಳವಡಿಸಿಕೊಳ್ಳಿರಿ

ಸ್ಟಾಕ್ ಮಾರುಕಟ್ಟೆಯೊಳಗೆ ಬೆಲೆಗಳ ಏರಿಳಿತಗಳು ಹೊಸದೇನೂ ಅಲ್ಲ. ಮಾರುಕಟ್ಟೆಯಲ್ಲಿನ ಈ ಅಸ್ಥಿರತೆಯು ಹೂಡಿಕೆದಾರನು ಕೆಲವೊಮ್ಮೆ ಹಣವನ್ನು ಕಳೆದುಕೊಳ್ಳುವಂತೆ ಮಾಡಿದೆ. ಜೊತೆಗೆ, ಅಂತಹ ಪರಿಸ್ಥಿತಿಗಳಲ್ಲಿ ಮಾರುಕಟ್ಟೆಯ ಬೆಲೆಗಳನ್ನು ಪೂರ್ವಭಾವಿಯಾಗಿ ಊಹಿಸಿಕೊಂಡು, ವಿತ್ತೀಯ ಸ್ವತ್ತುಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ನಿರ್ಧಾರಗಳನ್ನು ಕೈಗೊಳ್ಳುವುದು (ಮಾರುಕಟ್ಟೆಯ ಟೈಮಿಂಗ್) ನಿಜಕ್ಕೂ ಸವಾಲಿನ ಕೆಲಸ. ನಿಮ್ಮ ಹಣವನ್ನು ಕಳೆದುಕೊಳ್ಳುವ ಅಪಾಯವನ್ನು ತಪ್ಪಿಸುವುದಕ್ಕಾಗಿ, ಹೂಡಿಕೆಯನ್ನು ಶಿಸ್ತುಬದ್ಧವಾಗಿ ಮಾಡಬೇಕು. ಸಿಸ್ಟೆಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲ್ಯಾನ್ಸ್ (ಸಿಪ್) ಅಥವಾ ವ್ಯವಸ್ಥಿತ ಹೂಡಿಕಾ ಯೋಜನೆಗಳು ಅಂತಹ ಶಿಸ್ತುಬದ್ಧ ಹೂಡಿಕೆಗೆ ಉದಾಹರಣೆಗಳಾಗಿರುತ್ತವೆ. ನಿಮ್ಮ ಪೋರ್ಟ್ಫ಼ೋಲಿಯೋವನ್ನು ಗಮನಿಸಿಕೊಳ್ಳುವ ವಿಚಾರದಲ್ಲಿ ನಿಮಗೆ ಶಿಸ್ತು ಮತ್ತು ತಾಳ್ಮೆ ಇದ್ದಲ್ಲಿ, ಅತ್ಯುತ್ತಮ ರಿಟರ್ನ್ ಗಳನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶಗಳು ಪ್ರಖರವಾಗಿರುತ್ತವೆ.

ರಿಸ್ಕ್ ಮತ್ತು ಹಣವನ್ನು ಜಾಣ್ಮೆಯಿಂದ ನಿರ್ವಹಿಸಿರಿ

ರಿಸ್ಕ್ ಮತ್ತು ಹಣವನ್ನು ಜಾಣ್ಮೆಯಿಂದ ನಿರ್ವಹಿಸಿರಿ

ಓರ್ವ ಹೂಡಿಕೆದಾರನಾಗಿ, ಮಾರುಕಟ್ಟೆಯನ್ನು ನಿಯಂತ್ರಿಸಲು ನಿಮ್ಮಿಂದಾಗದು. ಆದರೆ, ನೀವು ಕೈಗೊಳ್ಳುವ ಪ್ರತೀ ವ್ಯವಹಾರದ ಮೂಲಕ ಖಂಡಿತವಾಗಿಯೂ ನೀವು ಅವರ ಹಣವನ್ನು ನಿರ್ವಹಿಸಬಹುದು. ನಿಮ್ಮಲ್ಲಿ ಕೇವಲ ಉತ್ತಮವಾದ ವ್ಯಾವಹಾರಿಕ ಯೋಜನೆಗಳಷ್ಟೇ ಇದ್ದರೆ, ಅವು ಯಾವುದೇ ಪ್ರಯೋಜನಕ್ಕೆ ಬಾರದೇ ಹೋಗಬಹುದು. ಅದರ ಜೊತೆಗೆ, ನಿಮ್ಮ ಹೂಡಿಕೆಯಲ್ಲೊಂದಿಷ್ಟು ಹಣವನ್ನೂ ಉಳಿಸಿರಬೇಕಾದದ್ದು ಅತ್ಯಗತ್ಯ.

ನೀವು ಹೂಡಿದ ಹಣದಮುಂಚಿನ ಮೌಲ್ಯ 5% ರಿಂದ 15% ದ ನಡುವೆ ತಲುಪಿದಾಗ, ಸ್ಟಾಪ್-ಲಾಸ್ ಟೂಲ್ ಸ್ವಯಂಚಾಲಿತವಾಗಿ ಆರ್ಡರ್ ಅನ್ನು ಹುಟ್ಟುಹಾಕುತ್ತದೆ. ಈ ಆರ್ಡರ್, ಹೂಡಿಕೆಯನ್ನು ಬಿಡುಗಡೆಗೊಳಿಸುತ್ತದೆ ಹಾಗೂ ಮತ್ತಷ್ಟು ನಷ್ಟವನ್ನು ತಡೆಗಟ್ಟುತ್ತದೆ.

ಬೇರೆ ಬೇರೆ ಪೋರ್ಟ್ಫೋಲಿಯೋಗಳನ್ನು ಹೊಂದಿರಿ

ಬೇರೆ ಬೇರೆ ಪೋರ್ಟ್ಫೋಲಿಯೋಗಳನ್ನು ಹೊಂದಿರಿ

ಸ್ಟಾಕ್ ಮಾರುಕಟ್ಟೆ ವೈವಿಧ್ಯಮಯವಾದ ಸೇವೆಗಳನ್ನು ಸಲ್ಲಿಸತಕ್ಕಂತಹ ವಿವಿಧ ಕ್ಷೇತ್ರಗಳಿಗೆ ಸೇರಿರುವ ಕಂಪೆನಿಗಳಿಂದ ತುಂಬಿಕೊಂಡಿದೆ. ಹೀಗಾಗಿ, ನಿಮ್ಮ ಸ್ಟಾಕ್ ಅನ್ನು ವಿವಿಧ ಕ್ಷೇತ್ರಗಳಿಗೆ ಸೇರಿರುವ ಉದ್ದಿಮೆಗಳಲ್ಲಿ ಹಂಚಿಕೆ ಮಾಡಿರಿ. ಹೀಗೆ ಮಾಡಿದಲ್ಲಿ, ನೀವು ಹೂಡಿದ ಒಂದು ಉದ್ಯಮವು ಚೆನ್ನಾಗಿ ನಡೆಯುತ್ತಿಲ್ಲವೆಂದಾದಲ್ಲಿ, ಅದೇ ವೇಳೆಗೆ ನೀವು ಹೂಡಿಕೆ ಮಾಡಿರುವ ಮತ್ತೊಂದು ಉದ್ಯಮವು ಏರುಗತಿಯಲ್ಲಿ ಸಾಗುವ ಸಾಧ್ಯತೆ ಇರುತ್ತದೆ. ರಿಟರ್ನ್ ಗಳನ್ನು ಕೊಡಮಾಡುವ ಸಾಧ್ಯತೆಯು ಹೆಚ್ಚು ಖಚಿತವಾಗಿರುವಂತಹ ಪ್ರಖ್ಯಾತ ಕಂಪನಿಗಳ ಸ್ಟಾಕ್ ಗಳ ಕುರಿತು ನೀವು ಹೆಚ್ಚಿನ ಗಮನ ಹರಿಸಬೇಕು. ಮುಂದೆ ಬೆಳವಣಿಗೆಯನ್ನು ಸಾಧಿಸಬಹುದು ಎಂದು ನೀವು ನಂಬಬಹುದಾದಂತಹ ಕೆಲವು ಹೊಸ ಕಂಪನಿಗಳ ಸ್ಟಾಕ್ ಗಳ ಮೇಲೂ ಕಣ್ಣಿಟ್ಟಿರಿ. ಹೀಗೆ ಮಾಡುವುದರ ಮೂಲಕ, ಆ ಕಂಪನಿಗಳು ಮುಂದೆ ಬೆಳವಣಿಗೆಯನ್ನು ಸಾಧಿಸಿದಂತೆಲ್ಲಾ, ನೀವೂ ಕೂಡಾ ನಿಮ್ಮ ಗಳಿಕೆಯನ್ನು ಗರಿಷ್ಟಗೊಳಿಸಿಕೊಳ್ಳಬಹುದು.

ದೀರ್ಘಕಾಲೀನ ಗುರಿಯನ್ನಿರಿಸಿಕೊಳ್ಳಿರಿ

ದೀರ್ಘಕಾಲೀನ ಗುರಿಯನ್ನಿರಿಸಿಕೊಳ್ಳಿರಿ

ಅಲ್ಪಾವಧಿಯ ದೃಷ್ಟಿಯಿಂದ ಸ್ಟಾಕ್ ಮಾರುಕಟ್ಟೆಗಳು ಅಸ್ಥಿರವಾದವುಗಳು. ಆದರೆ, ದೀರ್ಘಕಾಲೀನ ದೃಷ್ಟಿಯಿಂದ ನೋಡುವುದಾದರೆ, ಅವು ಕಡಿಮೆ ಪ್ರಮಾಣದ ರಿಸ್ಕ್ ಅನ್ನು ಒಳಗೊಂಡಿದ್ದು, ಒಟ್ಟಾರೆಯಾಗಿ ಮತ್ತಷ್ಟು ಉತ್ತಮ ರಿಟರ್ನ್ ಗಳನ್ನು ಕೊಡಮಾಡುತ್ತವೆ. ಹೀಗಾಗಿ, ದೀರ್ಘಕಾಲದವರೆಗೆ ಸ್ಟಾಕ್ ಗಳನ್ನು ಕಾಯ್ದಿರಿಸಿಕೊಂಡಿದ್ದಲ್ಲಿ, ನಿಮಗೆ ಅತ್ಯುತ್ತಮ ರಿಟರ್ನ್ ಗಳು ಸಿಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ, ಸ್ಟಾಕ್ ಗಳಲ್ಲಿ ಅಲ್ಪಕಾಲೀನ ದೃಷ್ಟಿಕೋನದಿಂದ ಹೂಡುವುದಕ್ಕಿಂತಲೂ ದೀರ್ಘಕಾಲೀನ ದೃಷ್ಟಿಕೋನದಿಂದ ಹೂಡಿಕೆ ಮಾಡುವುದು ಉತ್ತಮ. ಸದ್ಯಕ್ಕೆ ಅಥವಾ ಮುಂದಿನ ಒಂದಷ್ಟು ದಿನಗಳವರೆಗೆ ಅವಶ್ಯಕವಿಲ್ಲವೆನಿಸುವ ಹಣವನ್ನು ಲಾಕ್-ಇನ್ ಮಾಡುವುದು ಜಾಣತನ. ಹೀಗೆ ಮಾಡುವುದರ ಮೂಲಕ ಒಂದು ವೇಳೆ ಬೆಲೆಗಳು ಕಡಿಮೆ ಇದ್ದಾಗ ನೀವು ಸ್ಟಾಕ್ ಗಳನ್ನು ಮಾರಿದಲ್ಲಿ, ಆರಂಭದಲ್ಲಿ ನೀವು ಹಣವನ್ನು ಕಳೆದುಕೊಳ್ಳಬಹುದು. ಆದರೆ, ವರ್ಷಗಳ ಅವಧಿಯ ತರುವಾಯ, ಸ್ಟಾಕ್ ಗಳು ಪುನ: ಏರುಗತಿಯಲ್ಲಿ ಸಾಗಲಾರಂಭಿಸುತ್ತವೆ.

ಒಂದು ಸ್ಟಾಕ್, ಒಂದು ಕಂಪನಿಗೆ ಸಮ ಎಂಬುದನ್ನು ನೆನಪಿಟ್ಟುಕೊಳ್ಳಿರಿ

ಒಂದು ಸ್ಟಾಕ್, ಒಂದು ಕಂಪನಿಗೆ ಸಮ ಎಂಬುದನ್ನು ನೆನಪಿಟ್ಟುಕೊಳ್ಳಿರಿ

ನೀವು ಲಾಭವನ್ನೇ ಗಳಿಸಿರಿ ಇಲ್ಲಾ ನಷ್ಟವನ್ನೇ ಹೊಂದಿರಿ ಈ ಹೂಡಿಕೆಯ ಹಿಂದಿರುವ ಮೂಲಭೂತ ಉದ್ದೇಶವನ್ನು ನೆನಪಿಟ್ಟುಕೊಳ್ಳುವುದು ಮುಖ್ಯ. ಭವಿಷ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತದೆ ಎಂಬ ನಂಬಿಕೆ ಮತ್ತು ಆಶಾಭಾವನೆಯಿಂದ ನೀವು ಕಂಪನಿಯೊಂದರಲ್ಲಿ ಹೂಡಿಕೆ ಮಾಡುತ್ತಿದ್ದೀರಿ. ಆದ್ದರಿಂದ, ಸ್ಟಾಕ್ ಗಳನ್ನು ಒಂದು ಆಟವೆಂತಲೋ ಅಥವಾ ಜೂಜು ಎಂತಲೋ ಭಾವಿಸುವುದು ಬೇಡ. ನಿಮ್ಮ ಹಣವು ಒಂದು ನೈಜ ಕಂಪನಿಯಲ್ಲಿ ಹೂಡಿಕೆಯಾಗುತ್ತಿದೆ. ನಿಮ್ಮ ಹೂಡಿಕೆಯ ಬೆಳವಣಿಗೆಯಾಗಲು ಆ ಕಂಪನಿಯಲ್ಲಿ ನೈಜ ಅರ್ಥದಲ್ಲಿ ಕೆಲಸಕಾರ್ಯಗಳು ನಡೆಯಬೇಕಿವೆ. ಆದ್ದರಿಂದ, ನೀವು ಹೂಡಿಕೆ ಮಾಡಲು ಮುಂದಾಗಿರುವ ಆ ಕಂಪನಿಯ ಕುರಿತಾಗಿ ಸಾಧ್ಯವಾದಷ್ಟು ಎಲ್ಲಾ ಮಾಹಿತಿಗಳನ್ನೂ ನೀವು ಕಲೆಹಾಕುವುದು ಅತ್ಯಗತ್ಯ ಹಾಗೂ ಆ ಕಂಪನಿಯ ಭವಿಷ್ಯದ ಬಗ್ಗೆ ಸರಿಯಾಗಿ ಅಂದಾಜಿಸುವುದು ಮತ್ತಷ್ಟು ಅಗತ್ಯವಾಗಿರುತ್ತದೆ. ನಿಮ್ಮ ಸ್ವಂತ ಹೂಡಿಕೆಯ ಆಶಯಗಳೊಂದಿಗೆ ಕಂಪನಿಯ ಗುರಿಗಳೂ ಹೊಂದಾಣಿಕೆಯಾಗುತ್ತವೆಯೋ ಎಂಬ ಅಂಶವನ್ನೂ ನೀವು ಪರಿಗಣಿಸಬೇಕಾಗುತ್ತದೆ.

English summary

Best Tips for a fresher to start investing in Stocks

Here are 6 tips to give you a better idea about stock markets and get you started on this investment journey.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X