For Quick Alerts
ALLOW NOTIFICATIONS  
For Daily Alerts

ಇವು 2018-19ರಲ್ಲಿನ ಅತ್ಯುತ್ತಮ ಅವಧಿ ವಿಮಾ ಯೋಜನೆಗಳು (Term Insurance Plans)

ಟರ್ಮ್ ಇನ್ಸೂರೆನ್ಸ್ (ಅವಧಿ ವಿಮಾ ಯೋಜನೆ) ಅನ್ನುವುದು ಪ್ರತಿಯೊಬ್ಬರೂ ಅತ್ಯವಶ್ಯವಾಗಿ ಹೊಂದಿರಬೇಕಾದ ಆರ್ಥಿಕ ಭದ್ರತೆ ಒದಗಿಸುವ ಅತ್ಯುಪಯುಕ್ತ ಉತ್ಪನ್ನ. ಇದು ಇತರೆ ವಿಮಾ ಯೋಜನೆಗಳಂತೆಯೇ ಸರಳವಾಗಿದ್ದರೂ ಒಂದಿಷ್ಟು ಭಿನ್ನತೆಗಳನ್ನೂ ಒಳಗೊಂಡಿದೆ.

By Siddu
|

ಟರ್ಮ್ ಇನ್ಸೂರೆನ್ಸ್ (ಅವಧಿ ವಿಮಾ ಯೋಜನೆ) ಅನ್ನುವುದು ಪ್ರತಿಯೊಬ್ಬರೂ ಅತ್ಯವಶ್ಯವಾಗಿ ಹೊಂದಿರಬೇಕಾದ ಆರ್ಥಿಕ ಭದ್ರತೆ ಒದಗಿಸುವ ಅತ್ಯುಪಯುಕ್ತ ಉತ್ಪನ್ನ. ಇದು ಇತರೆ ವಿಮಾ ಯೋಜನೆಗಳಂತೆಯೇ ಸರಳವಾಗಿದ್ದರೂ ಒಂದಿಷ್ಟು ಭಿನ್ನತೆಗಳನ್ನೂ ಒಳಗೊಂಡಿದೆ. ಈ ವಿಮೆಯನ್ನು ಹೊಂದಿದ ವ್ಯಕ್ತಿ ವಿಮಾ ಕವರೇಜ್‍ನ ಅವಧಿಯಲ್ಲಿ ನಿಧನ ಹೊಂದಿದರೆ ಆ ವ್ಯಕ್ತಿಯ ಕುಟುಂಬ/ನಾಮಿನಿಗೆ ವಿಮೆಯ ಮೊತ್ತದ ಹಣ ದೊರಕುತ್ತದೆ. ಈ ಬಗೆಯ ವಿಮೆಯಲ್ಲಿ ಪಕ್ವತಾ ಮೌಲ್ಯ ದೊರಕುವುದಿಲ್ಲ. ಇವು ಜೀವ ಅಪಾಯದ ಕವರೇಜ್‍ಗಳನ್ನು ಮಾತ್ರವೇ ಒಳಗೊಂಡಿರುತ್ತವೆ. ವಿಮೆಯ ಪಕ್ವತೆಯ ಕಾಲಕ್ಕೆ ಯಾವುದೇ ಮೊತ್ತ ಪಾಲಿಸಿದಾರರಿಗೆ ಲಭಿಸುವುದಿಲ್ಲ.

ಐ.ಆರ್.ಡಿ.ಎ. ಮಾರ್ಗಸೂಚಿಗಳ ಅನುಸಾರ ಪಾಲಿಸಿ ಖರೀದಿಸಿದ ಮೂರು ವರ್ಷಗಳ ಬಳಿಕ ಯಾವುದೇ ಕಾರಣದಿಂದಲೂ ವಿಮೆಯ ಕ್ಲೈಮನ್ನು ತಿರಸ್ಕರಿಸುವಂತಿಲ್ಲ. ಇದು ಪಾಲಿಸಿದಾರರಿಗೆ ನಿಜಕ್ಕೂ ವರದಾನ. ಹಾಗಾಗಿ ಇನ್ನು ಮುಂದೆ ಕ್ಲೈಮ್ ಸೆಟಲ್‍ಮೆಂಟ್ ಅನುಪಾತ ಎಂಬುದು ಮೊದಲಿನಂತೆ ಪಾಲಿಸಿ ಆಕಾಂಕ್ಷಿಗಳನ್ನು ಬಾಧಿಸಬೇಕಿಲ್ಲ. ಹಾಗಿದ್ದರೂ ವಿಮೆ ಖರೀದಿಯ ವೇಳೆ ಅತ್ಯುತ್ತಮ ಕ್ಲೈಮ್ ಅನುಪಾತದ ಗರಿಮೆ ಹೊಂದಿರುವ ಸಂಸ್ಥೆಗೆ ಆದ್ಯತೆ ನೀಡುವುದು ಉತ್ತಮ.

2018-19ರ ಈ ಕೆಳಕಂಡ ಆಯ್ದ ಎಂಟು ಅತ್ಯುತ್ತಮ ಟರ್ಮ್ ವಿಮಾ ಪಾಲಿಸಿಗಳತ್ತ ಒಮ್ಮೆ ದೃಷ್ಟಿ ಹರಿಸೋಣ. ಆಯಾ ಪಾಲಿಸಿಗಳ ಪ್ರಮುಖ ಅಂಶಗಳನ್ನು ನಿಮಗಾಗಿ ಪ್ರಸ್ತುತಪಡಿಸುತ್ತಿದ್ದೇವೆ..

1. ಎಲ್ಐಸಿ ಇ-ಟರ್ಮ್ ಇನ್ಸೂರೆನ್ಸ್ ಪ್ಲಾನ್

1. ಎಲ್ಐಸಿ ಇ-ಟರ್ಮ್ ಇನ್ಸೂರೆನ್ಸ್ ಪ್ಲಾನ್

ಎಲ್ಐಸಿ ಸಂಸ್ಥೆ ಭಾರತದಲ್ಲಿ ಅತಿ ಹೆಚ್ಚಿನ ಜನಮನ್ನಣೆ ಹಾಗು ಮಾನ್ಯತೆ ಪಡೆದು ಅತ್ಯಂತ ನಂಬಿಕಸ್ಥ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ.

ಮುಖ್ಯವಾಗಿ ಗ್ರಾಮೀಣ ಭಾಗದ ಬಹುಪಾಲು ಜನರಿಗೆ ಇನ್ಸೂರೆನ್ಸ್ ಅಂದರೆ ಅದು ಎಲ್.ಐ.ಸಿ. ಅಂತ ಅಂದುಕೊಳ್ಳುವಷ್ಟು ಈ ಸಂಸ್ಥೆ ಜನಮಾನಸದಲ್ಲಿ ಬೇರೂರಿದೆ.
ಗ್ರಾಮೀಣ ಭಾರತದ ಹಲವಾರು ಮಂದಿ ಅರೆಶಿಕ್ಷಿತರೂ ಎಲ್.ಐ.ಸಿ. ಏಜೆಂಟ್‍ಗಳಾಗಿ ಕಾರ್ಯನಿರ್ವಹಿಸುವ ಮೂಲಕ ಜೀವನೋಪಾಯ ಕಂಡುಕೊಂಡಿದ್ದಾರೆ. ಮಾತ್ರವಲ್ಲ ಗ್ರಾಮೀಣ ಭಾಗದ ಜನರನ್ನು ವಿಮಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಿಸುವುದರಲ್ಲಿ ಇವರ ಪರಿಶ್ರಮ ಮತ್ತು ಕೊಡುಗೆ ಅಪಾರ. ಇ-ಟರ್ಮ್ ಇನ್ಶ್ಯೂರೆನ್ಸ್ ಪಾಲಿಸಿ ಎಲ್.ಐ.ಸಿ ತನ್ನ ಗ್ರಾಹಕರಿಗೆ ಕೊಡಮಾಡುತ್ತಿರುವ ಒಂದು ಅತ್ಯುತ್ತಮ ಟರ್ಮ್ ಪಾಲಿಸಿ ಉತ್ಪನ್ನವಾಗಿದೆ. ಈ ಪಾಲಿಸಿಯ ಮುಖ್ಯಾಂಶಗಳು ಕೆಳಕಂಡಂತಿವೆ

• ಪಾಲಿಸಿದಾರರ ಪ್ರವೇಶ ವಯೋಮಾನದ ಮಿತಿ-ಕನಿಷ್ಟ 18 ವರ್ಷ ಮತ್ತು ಗರಿಷ್ಟ 60 ವರ್ಷಗಳು
• ಗರಿಷ್ಟ ಪಕ್ವತಾ ವಯಸ್ಸು - 75 ವರ್ಷಗಳು
• ಪಾಲಿಸಿಯ ಅವಧಿ - 10 ವರ್ಷಗಳಿಂದ 35 ವರ್ಷಗಳ ನಡುವೆ ಯಾವುದೇ ಅವಧಿಯನ್ನು ಈ ಪಾಲಿಸಿಯ ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು
• ಕನಿಷ್ಟ ವಿಮಾ ಮೊತ್ತ ರೂ. 25 ಲಕ್ಷ
• ಗರಿಷ್ಟ ಮೊತ್ತ-ಯಾವುದೇ ಮಿತಿ ಇಲ್ಲ
• ಈ ಪ್ಲಾನ್‍ಗೆ ಯಾವುದೇ ಹೆಚ್ಚುವರಿ ರೈಡರ್ ಸೌಲಭ್ಯ ದೊರಕುವುದಿಲ್ಲ.
• 2016-17 ರ ಅನುಸಾರ ಶೇ. 98 ರ ಕ್ಲೈಮ್ ಇತ್ಯರ್ಥ ಅನುಪಾತವನ್ನು ಇದು ಹೊಂದಿದೆ. ಧೂಮಪಾನಿಗಳಲ್ಲದವರಿಗೆ ಈ ಕನಿಷ್ಟ ಮೊತ್ತವು ರೂ. 50 ಲಕ್ಷಗಳಾಗಿರುತ್ತವೆ.

ಅಫಘಾತದಿಂದ ಉಂಟಾಗುವ ನಿಧನವನ್ನೂ ಒಳಗೊಂಡಂತೆ ಎಲ್ಲಾ ಬಗೆಯ ಸಾವಿನ ಸಂದರ್ಭದಲ್ಲೂ ಈ ವಿಮೆ ವ್ಯಕ್ತಿಯ ಅವಲಂಬಿತರನ್ನು ಆರ್ಥಿಕವಾಗಿ ಕಾಪಾಡುತ್ತದೆ. ಆದರೆ ಇಲ್ಲಿ ಒಂದು ಅಂಶವನ್ನು ಗಮನಿಸಬೇಕು, ಪಾಲಿಸಿ ಪಡೆದ ಮೊದಲ ವರ್ಷ ತುಂಬುವ ಮೊದಲು ಆತ್ಮಹತ್ಯೆಯಿಂದ ಸಾವು ಸಂಭವಿಸಿದರೆ ಈ ಪಾಲಿಸಿ ನೆರವಿಗೆ ಬರುವುದಿಲ್ಲ.

ಈ ಪಾಲಿಸಿಯನ್ನು ಖುದ್ದು ತಮ್ಮ ಹೆಸರಲ್ಲಿ ಪಡೆಯಬೇಕಾಗುತ್ತದೆ. ಉದ್ಯೋಗದಲ್ಲಿ ಇರದ ತಮ್ಮ ಬಾಳಸಂಗಾತಿಯ ಹೆಸರಲ್ಲಿ ಈ ಪಾಲಿಸಿಯನ್ನು ಪಡೆಯುವ ಅವಕಾಶವಿಲ್ಲ.
30 ವರ್ಷದ ಧೂಮಪಾನಿಯಲ್ಲದ ವ್ಯಕ್ತಿ ವಾರ್ಷಿಕ ರೂ. 19,700 ಪಾವತಿ ಮಾಡುವ ಮೂಲಕ ಒಂದು ಕೋಟಿ ರೂಪಾಯಿಯ ಮೊತ್ತದ ವಿಮೆ ಭದ್ರತೆ ಹೊಂದಬಹುದು.
ಪ್ರೀಮಿಯಮ್ ಮೊತ್ತವನ್ನು ಒಮ್ಮೆ ನಿರ್ಧರಿಸಿದ ಮೇಲೆ ವಿಮಾ ಅವಧಿಯಲ್ಲಿ ಈ ಮೊತ್ತವನ್ನು ಬದಲಿಸಲು ಆಗದು

ಒಂದು ವೇಳೆ ನೀವು ವಿದೇಶದಲ್ಲಿ ಉದ್ಯೋಗ ಮಾಡುವ ಉದ್ದೇಶ ಹೊಂದಿದ್ದರೆ ಅಥವಾ ವಿದೇಶ ಪ್ರವಾಸ ಮಾಡುವ ಉದ್ದೇಶವಿದ್ದರೆ ಆಗ ಕೂಡ ಎಲ್.ಐ.ಸಿ ಟರ್ಮ್ ವಿಮಾ ಪಾಲಿಸಿ ವಿಮಾ ಕವರೇಜ್ ಒದಗಿಸುತ್ತದೆ.

ಎಲ್ಐಸಿ ಇ-ಟರ್ಮ್ ವಿಮಾ ಪ್ಲಾನ್ 2018-2019 ರ ಅತ್ಯಂತ ಹೆಚ್ಚು ಬೇಡಿಕೆಯ ಆನ್‍ಲೈನ್ ಟರ್ಮ್ ಇನ್ಶ್ಯೂರೆನ್ಸ್ ಪ್ಲಾನ್ ಎಂಬ ಹಿರಿಮೆಗೆ ಪಾತ್ರವಾಗಿದೆ. ದಶಕಗಳ ಕಾಲ ಎಲ್ಐಸಿ ಸಂಸ್ಥೆ ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರಾಂಡ್ ಆಗಿ ರೂಪುಗೊಂಡಿದ್ದು ಲಕ್ಷಾಂತರ ಭಾರತೀಯರ ನಂಬಿಕೆಯನ್ನು ಗಳಿಸಿಕೊಂಡಿದೆ.

2. ಮ್ಯಾಕ್ಸ್ ಲೈಫ್ ಟರ್ಮ್ ಇನ್ಸೂರೆನ್ಸ್ ಪ್ಲಾನ್ ಪ್ಲಸ್

2. ಮ್ಯಾಕ್ಸ್ ಲೈಫ್ ಟರ್ಮ್ ಇನ್ಸೂರೆನ್ಸ್ ಪ್ಲಾನ್ ಪ್ಲಸ್

ಮ್ಯಾಕ್ಸ್ ಲೈಫ್ ಒದಗಿಸುತ್ತಿರುವ ಈ ಟರ್ಮ್ ಇನ್ಸೂರೆನ್ಸ್ ನ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ.

• ಕನಿಷ್ಟ ಪ್ರವೇಶ ವಯಸ್ಸು 18 ವರ್ಷಗಳಾಗಿದ್ದು, ಗರಿಷ್ಠ ಪ್ರವೇಶ ವಯಸ್ಸು 60 ವರ್ಷಗಳು
• ಗರಿಷ್ಠ ಪಕ್ವತೆಯ ವಯಸ್ಸು 70 ವರ್ಷ
• ಪಾಲಿಸಿಯ ಅವಧಿಃ 10 ವರ್ಷ ಮತ್ತು 40 ವರ್ಷ
• ಕನಿಷ್ಠ ವಿಮಾ ರಕ್ಷಣೆಯ ಮೊತ್ತ ರೂ. 25 ಲಕ್ಷ
• ಗರಿಷ್ಠ ವಿಮಾ ರಕ್ಷಣೆಯ ಮೊತ್ತ ರೂ. 100 ಕೋಟಿ
• ಸಮಗ್ರ ಅಪಘಾತ ಬೆನಿಫಿಟ್ ರೈಡರ್‍ನ ಹೆಚ್ಚುವರಿ ಸೌಲಭ್ಯ ಸಹ ಈ ಯೋಜನೆ ಜೊತೆ ಲಭ್ಯವಿದೆ.
• ಈ ಪ್ಲಾನ್ ಮೂರು ವಿವಿಧ ಕವರೇಜ್‍ಗಳಲ್ಲಿ ಲಭ್ಯವಿದೆ. 1. ಬೇಸಿಕ್ ಲೈಫ್ ಕವರ್ 2. ಬೇಸಿಕ್ ಲೈಫ್ ಕವರ್ + ಮಾಸಿಕ ಕವರ್ 3. ಬೇಸಿಕ್ ಕವರ್ + ಏರಿಕೆ ಕ್ರಮದ ಮಾಸಿಕ ಆದಾಯ
• 2016-17 ರ ಅವಧಿಯಲ್ಲಿ ಇದರ ಕ್ಲೈಮ್ ಇತ್ಯರ್ಥ ಅನುಪಾತ ಶೇ. 97.8 ರಷ್ಟಿದ್ದು, ಇದು ಎಲ್ಲಾ ವಿಮಾ ಸಂಸ್ಥೆಗಳ ಪೈಕಿ ಸರ್ವಾಧಿಕ ವಾದದ್ದು.
ಮ್ಯಾಕ್ಸ್ ಲೈಫ್ ಟರ್ಮ್ ವಿಮಾ ಪ್ಲಾನ್ ಪ್ಲಸ್ - ಇದು 2018 ರ ಅತ್ಯುತ್ತಮ ಟರ್ಮ್ ಪಾಲಿಸಿಗಳ ಪೈಕಿ ಪ್ರಮುಖವಾದದ್ದು. ಕಡಿಮೆ ಮೊತ್ತದ ಪ್ರೀಮಿಯಮ್ ಮತ್ತು ಹೆಚ್ಚಿನ ಕ್ಲೈಮ್ ಇತ್ಯರ್ಥ ಅನುಪಾತ ಈ ಪಾಲಿಸಿ ಬಿಸಿ ದೋಸೆಯಂತೆ ಖರ್ಚಾಗಲು ಸಹಾಯಕವಾಗಿದೆ.

3. ಎಚ್ಡಿಎಫ್ಸಿ ಕ್ಲಿಕ್ 2 ಪ್ರೊಟೆಕ್ಟ್ ಪ್ಲಸ್ ವಿಮಾ ಪ್ಲಾನ್

3. ಎಚ್ಡಿಎಫ್ಸಿ ಕ್ಲಿಕ್ 2 ಪ್ರೊಟೆಕ್ಟ್ ಪ್ಲಸ್ ವಿಮಾ ಪ್ಲಾನ್

ಎಎಚ್ಡಿಎಫ್ಸಿ ಯ ಈ ಟರ್ಮ್ ಪ್ಲಾನ್ ನ ಮುಖ್ಯ ಲಕ್ಷಣಗಳ ಬಗ್ಗೆ ಇಲ್ಲಿ ಮಾಹಿತಿ ಒದಗಿಸುತ್ತಿದ್ದೀವಿ.

• ಕನಿಷ್ಟ ಪ್ರವೇಶ ವಯಸ್ಸು 18 ವರ್ಷ ಹಾಗು ಗರಿಷ್ಠ ವಯಸ್ಸು 65 ವರ್ಷ
• ಗರಿಷ್ಟ ಪಕ್ವತಾ ವಯಸ್ಸು - 70 ವರ್ಷ
• ಪಾಲಿಸಿಯ ಅವಧಿ 5 ವರ್ಷಗಳಿಂದ ಶುರುಗೊಂಡು 40 ವರ್ಷ
• ಕನಿಷ್ಟ ವಿಮಾಯಿತ ಮೊತ್ತ ರೂ. 10 ಲಕ್ಷ
• ಗರಿಷ್ಠ ವಿಮಾಯಿತ ಮೊತ್ತದ ಮೇಲೆ ಯಾವುದೇ ಮಿತಿಗಳಿಲ್ಲ
ಈ ಪ್ಲಾನ್ ಜೊತೆ ವಿವಿಧ ಬಗೆಯ ರೈಡರ್ ಆಯ್ಕೆಗಳು ಕೂಡ ಲಭ್ಯವಿದೆ. ಉದಾ: ಲೈಫ್ ಆಪ್ಷನ್, ಎಕ್ಸ್ಟ್ರಾ ಲೈಫ್ ಆಪ್ಷನ್, ಪ್ರೀಮಿಯಮ್ ಅನ್ನು ಮರಳಿಸುವ ಆಯ್ಕೆ ಇತ್ಯಾದಿ. ಆರ್ಥಿಕ ವರ್ಷ 2016-17 ರ ಕ್ಲೈಮ್ ಇತ್ಯರ್ಥ ಅನುಪಾತ ಶೇ. 97.6 ರಷ್ಟಿದೆ.
ಧೂಮಪಾನ ಮಾಡದ 30 ವರ್ಷದ ಆರೋಗ್ಯವಂತ ವ್ಯಕ್ತಿ 30 ವರ್ಷಗಳ ಅವಧಿಗೆ ವಾರ್ಷಿಕವಾಗಿ ರೂ. 13,000 (ತೆರಿಗೆಗಳನ್ನು ಹೊರತುಪಡಿಸಿ) ಪಾವತಿಸಿದರೆ ೧ ಕೋಟಿ ರೂಪಾಯಿ ಮೊತ್ತಕ್ಕೆ ವಿಮಾಯಿತರಾಗಬಹುದು. ಈ ಪ್ಲಾನ್ ಹೊಂದುವ ಮೊದಲು ಇದರ ಕುರಿತು ಇತರೆ ಗ್ರಾಹಕರ ಅಭಿಪ್ರಾಯಗಳನ್ನು ಪರಾಮರ್ಶಿಸಬಹುದು.

4. ಏಗೋನ್ ರೆಲಿಗೇರ್ ಐ-ಟರ್ಮ್ ಇನ್ಸೂರೆನ್ಸ್‌ ಪ್ಲಾನ್

4. ಏಗೋನ್ ರೆಲಿಗೇರ್ ಐ-ಟರ್ಮ್ ಇನ್ಸೂರೆನ್ಸ್‌ ಪ್ಲಾನ್

ಈ ಪ್ಲಾನ್‍ನ ಪ್ರಮುಖ ವಿಶೇಷತೆಗಳನ್ನು ಇಲ್ಲಿ ವಿವರಿಸಲಾಗಿದೆ.
• ಕನಿಷ್ಟ ಮತ್ತು ಗರಿಷ್ಠ ಪ್ರವೇಶ ವಯಸ್ಸು ಕ್ರಮವಾಗಿ 20 ವರ್ಷ ಹಾಗು 65 ವರ್ಷ
• ಗರಿಷ್ಠ ಪಕ್ವತಾ ವಯಸ್ಸು - 75 ವರ್ಷ
• ಪಾಲಿಸಿಯ ಅವಧಿ 5 ವರ್ಷಗಳಿಂದ 40 ವರ್ಷ
• ಕನಿಷ್ಟ ವಿಮಾಯಿತ ಮೊತ್ತ ರೂ. 10 ಲಕ್ಷ
• ಗರಿಷ್ಠ ವಿಮಾಯಿತ ಮೊತ್ತದ ಮೇಲೆ ಯಾವುದೇ ಮಿತಿಗಳಿಲ್ಲ
• ಆರ್ಥಿಕ ವರ್ಷ 2016-17 ರ ಕ್ಲೈಮ್ ಇತ್ಯರ್ಥ ಅನುಪಾತ ಶೇ. 97.1 ರಷ್ಟಿದೆ.
ಈ ಪಾಲಿಸಿಯ ಅನುಸಾರ ಎರಡು ಬಗೆಯ ಡೆತ್ ಬೆನಿಫಿಟ್ ಆಯ್ಕೆಗಳಿವೆ.
1. ಸರಳ ಡೆತ್ ಬೆನಿಫಿಟ್- ಪೂರ್ತಿ ವಿಮೆಯ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ.
2. ವಿಮಾಯಿತ ವ್ಯಕ್ತಿಯ ನಿಧನದ ವೇಳೆ ನಾಮಿನಿಗೆ ಶೇ. ೫೦ ರಷ್ಟು ಮೊತ್ತವನ್ನು ನೀಡಲಾಗುತ್ತದೆ ಹಾಗೂ ಮುಂದಿನ 5 ವರ್ಷಗಳ ವರೆಗೆ ಪ್ರತಿ ತಿಂಗಳು ವಿಮಾಯಿತ ಮೊತ್ತದ ಶೇ. 3 ರಷ್ಟು ಮೊತ್ತ ನೀಡಲಾಗುತ್ತದೆ.
ಧೂಮಪಾನಿಯಲ್ಲದ 30 ವರ್ಷದ ವ್ಯಕ್ತಿ 30 ವರ್ಷಗಳ ಅವಧಿಗೆ ವಾರ್ಷಿಕ ರೂ. 6,636 ಪ್ರೀಮಿಯಂ ಮೊತ್ತ ಪಾವತಿಮಾಡುವ ಮೂಲಕ ೧ ಕೋಟಿಯ ವಿಮಾ ಮೊತ್ತದ ಲಭ್ಯತೆ ಪಡೆಯಬಹುದು.
ಏಗೋನ್ ರೆಲಿಗೇರ್ ಟರ್ಮ್ ಪ್ಲಾನ್ ಕುರಿತ ಹೆಚ್ಚಿನ ವಿವರಗಳನ್ನು ಈ ವೆಬ್ ಕೊಂಡಿಯ ಮೂಲಕ ಪಡೆದುಕೊಳ್ಳಬಹುದು.

5. ಐಸಿಐಸಿಐ ಐಪ್ರೊಟೆಕ್ಟ್ ಸ್ಮಾರ್ಟ್ ಟರ್ಮ್ ಇನ್ಶ್ಯೂರೆನ್ಸ್ ಪ್ಲಾನ್

5. ಐಸಿಐಸಿಐ ಐಪ್ರೊಟೆಕ್ಟ್ ಸ್ಮಾರ್ಟ್ ಟರ್ಮ್ ಇನ್ಶ್ಯೂರೆನ್ಸ್ ಪ್ಲಾನ್

ಈ ಪಾಲಿಸಿಯ ಮುಖ್ಯ ಅಂಶಗಳು ಕೆಳಕಂಡಂತಿವೆ.
• ಕನಿಷ್ಟ ಪ್ರವೇಶ ವಯಸ್ಸು 18 ವರ್ಷ ಹಾಗು ಗರಿಷ್ಠ ವಯಸ್ಸು 60 ವರ್ಷ
• ಗರಿಷ್ಠ ಪಕ್ವತಾ ವಯಸ್ಸು - 75 ವರ್ಷ
• ಪಾಲಿಸಿಯ ಅವಧಿಃ 5 ವರ್ಷ 40 ವರ್ಷಗಳ ತನಕ
• ಕನಿಷ್ಟ ವಿಮಾಯಿತ ಮೊತ್ತ - ವಾರ್ಷಿಕ ಕನಿಷ್ಟ ಪ್ರೀಮಿಯಮ್ ಮೊತ್ತ ರೂ. 3,600 ಅನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
• ಗರಿಷ್ಠ ವಿಮೆ ಮೊತ್ತದ ಮೇಲೆ ಯಾವುದೇ ಮಿತಿಗಳಿಲ್ಲ.
• ಆರ್ಥಿಕ ವರ್ಷ 2016-17 ರ ಕ್ಲೈಮ್ ಇತ್ಯರ್ಥ ಅನುಪಾತ ಶೇ. 96.6 ರಷ್ಟಿದೆ.
ಈ ಪಾಲಿಸಿಯಲ್ಲಿ ಹೆಚ್ಚುವರಿ ರೈಡರ್ ಆಯ್ಕೆಯೂ ಲಭ್ಯವಿದೆ. ಇದರ ಅನುಸಾರ ಯಾವುದಾದರೂ 34 ಗಂಭೀರ ಆರೋಗ್ಯ ತೊಂದರೆ/ಖಾಯಿಲೆ ಹೊಂದಿದ್ದರೆ ಅದರ ಚಿಕಿತ್ಸೆಗೆ ಹಣ ದೊರೆಯುತ್ತದೆ.
ಇದು ನಾಲ್ಕು ಹಂತದ ಸುರಕ್ಷತೆಯನ್ನು ಒದಗಿಸುತ್ತದೆ.
೧. ಲೈಫ್, ೨. ಲೈಫ್ ಪ್ಲಸ್ ೩. ಜೀವ ವಿಮೆ ಮತ್ತು ಆರೋಗ್ಯ ೪. ಆಲ್ ಇನ್ ಒನ್.
ಧೂಮಪಾನ ಮಾಡದ 30 ವರ್ಷದ ವ್ಯಕ್ತಿ 30 ವರ್ಷಗಳ ಅವಧಿಗೆ ವಾರ್ಷಿಕ ರೂ. 8,279 ಪ್ರೀಮಿಯಮ್ ಮೊತ್ತ ಪಾವತಿ ಮಾಡುವ ಮೂಲಕ ೧ ಕೋಟಿಯ ವಿಮಾಯಿತ ಮೊತ್ತದ ಸುರಕ್ಷತೆ ಪಡೆಯಬಹುದು.
ಐಸಿಐಸಿಐ i-ಪ್ರೊಟೆಕ್ಟ್ ಟರ್ಮ್ ಪ್ಲಾನ್ ಒಂದು ಅತ್ಯುತ್ತಮ ಆನ್‍ಲೈನ್ ಟರ್ಮ್ ವಿಮಾ ಪ್ಲಾನ್ ಆಗಿದೆ. ಇದು ಹಲವಾರು ಅನುಕೂಲಗಳನ್ನು ಒದಗಿಸುವ ಪ್ಲಾನ್ ಆಗಿರುವುದರ ಜೊತೆಗೆ ಇದರೊಂದಿಗೆ ದೊರಕುವ ಸೌಲಭ್ಯಗಳು ಉಪಯುಕ್ತವಾಗಿವೆ.

6. ಎಸ್ಬಿಐ ಲೈಫ್ ಇ-ಶೀಲ್ಡ್ ಟರ್ಮ್ ಇನ್ಶ್ಯೂರೆನ್ಸ್ ಪ್ಲಾನ್

6. ಎಸ್ಬಿಐ ಲೈಫ್ ಇ-ಶೀಲ್ಡ್ ಟರ್ಮ್ ಇನ್ಶ್ಯೂರೆನ್ಸ್ ಪ್ಲಾನ್

ಇ-ಶೀಲ್ಡ್ ಸಾರ್ವಜನಿಕ ಕ್ಷೇತ್ರದ ಅತಿ ದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಸ್.ಬಿ.ಐ ನ ಉತ್ಪನ್ನವಾಗಿದೆ. ಈ ಪ್ಲಾನ್ ಪಾಲಿಸಿದಾರರಿಗೆ ಕೊಡಮಾಡುವ ಪ್ರಮುಖ ಅನುಕೂಲತೆಗಳು ಕೆಳಕಂಡಂತಿವೆ.
• ಕನಿಷ್ಟ ಪ್ರವೇಶ ವಯಸ್ಸು 18 ವರ್ಷ ಹಾಗು ಗರಿಷ್ಠ ವಯಸ್ಸು 65 ವರ್ಷ
• ಗರಿಷ್ಠ ಪಕ್ವತಾ ವಯಸ್ಸು - 70 ವರ್ಷ
• ಪಾಲಿಸಿಯ ಅವಧಿ 5 ವರ್ಷಗಳಿಂದ 30 ವರ್ಷಗಳ ತನಕದ ಯಾವುದೇ ಸೂಕ್ತ ಅವಧಿಯನ್ನು ಆಯ್ದುಕೊಳ್ಳಬಹುದು.
• ಕನಿಷ್ಟ ವಿಮಾಯಿತ ಮೊತ್ತ ರೂ. 35 ಲಕ್ಷ
• ಗರಿಷ್ಠ ವಿಮಾಯಿತ ಮೊತ್ತದ ಮೇಲೆ ಯಾವುದೇ ಮಿತಿಗಳಿಲ್ಲ
• ಆರ್ಥಿಕ ವರ್ಷ 2016-17 ರ ಕ್ಲೈಮ್ ಇತ್ಯರ್ಥ ಅನುಪಾತ ಶೇ. 96.6 ರಷ್ಟಿದೆ.

ಈ ಪಾಲಿಸಿ ಎರಡು ಬಗೆಯ ಪ್ಲಾನ್ ಆಯ್ಕೆಗಳನ್ನು ಹೊಂದಿದೆ.
1. ಲೆವೆಲ್ ಕವರ್ ಬೆನಿಫಿಟ್
2. ಏರಿಸಬಹುದಾದ ಕವರ್ ಬೆನಿಫಿಟ್
ಇದರ ಜೊತೆಗೆ ಈ ಪಾಲಿಸಿಯಲ್ಲಿ " ಉತ್ಕರ್ಷಿತ ಟರ್ಮಿನಲ್ ಇಲ್‍ನೆಸ್ ಬೆನಿಫಿಟ್" ಅಂತರ್ಗತವಾಗಿದೆ.
ಹಾಗೆಯೇ ಈ ಪಾಲಿಸಿಯಲ್ಲಿ ಎರಡು ಹೆಚ್ಚುವರಿ ರೈಡರ್ಗಳು ಅಡಕಗೊಂಡಿವೆ. 1) Accidental Death Benefit Rider, 2) Accidental Total and Permanent Disability Benefit Rider.

ಧೂಮಪಾನ ಮಾಡದ 30 ವರ್ಷದ ವ್ಯಕ್ತಿ 30 ವರ್ಷಗಳ ಅವಧಿಗೆ ವಾರ್ಷಿಕ ರೂ. 12,000 ಪ್ರೀಮಿಯಮ್ ಮೊತ್ತ ಪಾವತಿಮಾಡುವ ಮೂಲಕ ೧ ಕೋಟಿಯ ವಿಮಾ ರಕ್ಷಣೆ ಹೊಂದಬಹುದು.

ಎಸ್.ಬಿ.ಐ. ಇ-ಶೀಲ್ಡ್ ಟರ್ಮ್ ವಿಮಾ ಪಾಲಿಸಿಯು 2018 ರ ಒಂದು ಅತ್ಯುತ್ತಮ ಆಯ್ಕೆಯಾಗಿದ್ದು, ಹಲವಾರು ಅನುಕೂಲತೆಗಳನ್ನು ಒಳಗೊಂಡಿದೆ.

 

7. ಟಾಟಾ ಎ.ಐ.ಎ. ಲೈಫ್ ಐ-ರಕ್ಷಾ ಆನ್‍ಲೈನ್ ಟರ್ಮ್ ಇನ್ಸೂರೆನ್ಸ್ ಪ್ಲಾನ್

7. ಟಾಟಾ ಎ.ಐ.ಎ. ಲೈಫ್ ಐ-ರಕ್ಷಾ ಆನ್‍ಲೈನ್ ಟರ್ಮ್ ಇನ್ಸೂರೆನ್ಸ್ ಪ್ಲಾನ್

ಟಾಟಾ ಎ..ಐ.ಎ. ಲೈಫ್ ನಾಲ್ಕು ಬಗೆಯ ಟರ್ಮ್ ವಿಮೆಗಳನ್ನು ಒದಗಿಸುತ್ತಿದೆ. ಇವುಗಳ ಪೈಕಿ ಟಾಟಾ ಎ.ಐ.ಎ. ಲೈಫ಼ ಐ-ರಕ್ಷಾ ಆನ್‍ಲೈನ್ ಟರ್ಮ್ ಇನ್ಶ್ಯೂರೆನ್ಸ್ ಪ್ಲಾನ್ ಒಂದು ಅತ್ಯುತ್ತಮ ವಿಮಾ ಪಾಲಿಸಿಯಾಗಿದೆ.
ಈ ಪಾಲಿಸಿಯ ಅನನ್ಯ ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.

• ಕನಿಷ್ಟ ಹಾಗೂ ಗರಿಷ್ಠ ಪ್ರವೇಶ ವಯಸ್ಸು ಕ್ರಮವಾಗಿ 18 ವರ್ಷ ಹಾಗು 70 ವರ್ಷ
• ಗರಿಷ್ಠ ಪಕ್ವತಾ ವಯಸ್ಸು- 80 ವರ್ಷ
• ಪಾಲಿಸಿಯ ಅವಧಿ 10 ವರ್ಷಗಳಿಂದ ಶುರುಗೊಂಡು 40 ವರ್ಷಗಳ ತನಕದ ಅವಧಿ ಲಭ್ಯವಿದೆ.
• ಕನಿಷ್ಟ ವಿಮಾಯಿತ ಮೊತ್ತ ರೂ. 50 ಲಕ್ಷ
• ಗರಿಷ್ಠ ವಿಮಾಯಿತ ಮೊತ್ತದ ಮೇಲೆ ಯಾವುದೇ ಮಿತಿಗಳಿಲ್ಲ
• ಆರ್ಥಿಕ ವರ್ಷ 2016-17 ರ ಕ್ಲೈಮ್ ಇತ್ಯರ್ಥ ಅನುಪಾತ ಶೇ. 96 ರಷ್ಟಿದೆ.

8. ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸೂರೆನ್ಸ್ ಶೀಲ್ಡ್ ಟರ್ಮ್ ಪ್ಲಾನ್

8. ಆದಿತ್ಯ ಬಿರ್ಲಾ ಸನ್ ಲೈಫ್ ಇನ್ಸೂರೆನ್ಸ್ ಶೀಲ್ಡ್ ಟರ್ಮ್ ಪ್ಲಾನ್

ಈ ಪ್ಲಾನ್‍ನ ಪ್ರಮುಖ ವೈಶಿಷ್ಟ್ಯತೆಗಳು ಕೆಳಕಂಡಂತಿವೆ.
• ಕನಿಷ್ಟ ಪ್ರವೇಶ ವಯಸ್ಸು 18 ವರ್ಷ ಹಾಗು ಗರಿಷ್ಠ ವಯಸ್ಸು 65 ವರ್ಷ
• ಗರಿಷ್ಠ ಪಕ್ವತಾ ವಯಸ್ಸು - 80 ವರ್ಷ
• ಪಾಲಿಸಿಯ ಅವಧಿ 10 ವರ್ಷಗಳಿಂದ ಶುರುಗೊಂಡು 50 ವರ್ಷಗಳ ತನಕ
• ಕನಿಷ್ಟ ವಿಮಾಯಿತ ಮೊತ್ತ ರೂ. 25 ಲಕ್ಷ
• ಗರಿಷ್ಠ ವಿಮಾಯಿತ ಮೊತ್ತದ ಮೇಲೆ ಯಾವುದೇ ಮಿತಿಗಳಿಲ್ಲ
• ಆರ್ಥಿಕ ವರ್ಷ 2016-17 ರ ಕ್ಲೈಮ್ ಇತ್ಯರ್ಥ ಅನುಪಾತ ಶೇ. 94.7 ರಷ್ಟಿದೆ.
ಈ ಆಯ್ಕೆಗಳು ಈ ಪ್ಲಾನ್‍ನಲ್ಲಿ ಲಭ್ಯವಿದೆ.
1) Level Term Assurance 2) Level Term Assurance with Waiver of Premium 3) Increasing Term Insurance 4) Increasing Term Assurance with waiver of premium 5) Decreasing Term Assurance

ನಮ್ಮ ಸಲಹೆ

ನಮ್ಮ ಸಲಹೆ

ಮಾರಕಟ್ಟೆಯಲ್ಲಿ ಹಲವಾರು ಉತ್ತಮ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಟರ್ಮ್ ಇನ್ಶ್ಯೂರೆನ್ಸ್ ಪಾಲಿಸಿಗಳು ಲಭ್ಯ ಇವೆ. ಈ ಮೇಲೆ ಸೂಚಿಸಿರುವ ಟಾಪ್ ಪಾಲಿಸಿಗಳ ಪೈಕಿ ಯಾವುದಾದರೂ ಪಾಲಿಸಿಯನ್ನು ಖಂಡಿತ ಪರಿಗಣಿಸಿ. ವಿವಿಧ ಪಾಲಿಸಿಗಳ ಹೋಲಿಕೆ ಮಾಡಿ ನಿಮಗೆ ಸರಿ ಹೊಂದುವುದನ್ನು ಆಯ್ಕೆ ಮಾಡಿಕೊಳ್ಳಿ. ಒಂದೇ ಸಂಸ್ಥೆಯಿಂದ ಒಂದು ದೊಡ್ಡ ವಿಮಾಯಿತ ಮೊತ್ತದ ಪಾಲಿಸಿಯ ಬದಲಿಗೆ ನೀವು ಚಿಕ್ಕ ಮೊತ್ತದ ಎರಡು ಮೂರು ಪಾಲಿಸಿಗಳನ್ನು ಹೊಂದುವುದು ಸಹ ಉತ್ತಮ ಮಾರ್ಗ. ಉದಾಹರಣೆಗೆ ಒಂದು ಸಂಸ್ಥೆಯಿಂದ 1 ಕೋಟಿಯ ಒಂದು ಟರ್ಮ್ ಪಾಲಿಸಿಯ ಬದಲಿಗೆ ಎರಡು ಬೇರೆ ಸಂಸ್ಥೆಗಳಿಂದ ತಲಾ 50 ಲಕ್ಷಗಳ ಒಂದೊಂದು ಪಾಲಿಸಿಗಳನ್ನು ಪಡೆಯಬಹುದು. ಟರ್ಮ್ ವಿಮಾ ಪಾಲಿಸಿಗಳು ಯಾವ ನಿಟ್ಟಿನಿಂದ ಯೋಚಿಸಿದರೂ ಅತ್ಯವಶ್ಯಕ. ಇವು ಕಡಿಮೆ ಪ್ರೀಮಿಯಮ್ ಮೊತ್ತ ಮತ್ತು ಹೆಚ್ಚಿನ ರಿಸ್ಕ್ ಕವರೇಜ್‍ನ ಲಾಭ ಒದಗಿಸುತ್ತವೆ. ಆರ್ಥಿಕ ಯೋಜನೆಯ ದೃಷ್ಟಿಯಿಂದ ನೋಡುವುದಾದರೆ ಇದು ಪ್ರತಿಯೊಬ್ಬರೂ ಕೈಗೊಳ್ಳಬೇಕಾದ ಮೊದಲ ಹೆಜ್ಜೆ.

ಇನ್ನಿತರ ಸೌಲಭ್ಯಗಳು

ಇನ್ನಿತರ ಸೌಲಭ್ಯಗಳು

• ಈ ಪಾಲಿಸಿಗಳಿಗೆ ಪಾವತಿ ಮಾಡುವ ಪ್ರೀಮಿಯಮ್ ಮೊತ್ತಕ್ಕೆ ಆದಾಯ ತೆರಿಗೆ ವಿನಾಯ್ತಿ ದೊರೆಯುತ್ತದೆ.
• ಈ ಪ್ಲಾನ್‍ಗಳಲ್ಲಿ ಪ್ರೀಮಿಯಮ್ ಮೊತ್ತವನ್ನು ಒಮ್ಮೆ ನಿರ್ಧರಿಸಿದ ಬಳಿಕ ಪಾಲಿಸಿ ಚಾಲ್ತಿಯಲ್ಲಿರುವ ಅವಧಿಯಲ್ಲಿ ಆ ಮೊತ್ತವನ್ನು ಮಾರ್ಪಾಡಿಸುವ ಅವಕಾಶ ಬಹುತೇಕ ಸಂದರ್ಭಗಳಲ್ಲಿ ಇರುವುದಿಲ್ಲ. ಹಾಗಾಗಿ ನಮ್ಮ ಆರ್ಥಿಕ ಸ್ಥಿತಿ ಮತ್ತು ಅವಶ್ಯಕವಿರುವ ವಿಮೆಯ ಮೊತ್ತವನ್ನು ಗಮನದಲ್ಲಿ ಇರಿಸಿಕೊಂಡು ಪ್ರೀಮಿಯಮ್ ಮೊತ್ತದ ಕುರಿತು ಸೂಕ್ತ ಲೆಕ್ಕಾಚಾರ ಹೊಂದಬೇಕು.
• ಬಹುಪಾಲು ಎಲ್ಲಾ ಸಂಸ್ಥೆಗಳೂ ಆನ್‍ಲೈನ್ ಮೂಲಕ ಪ್ರೀಮಿಯಮ್ ಪಾವತಿಗೆ ಅವಕಾಶ ಒದಗಿಸಿವೆ. ಹೀಗಾಗಿ ಪ್ರೀಮಿಯಮ್ ಮೊತ್ತ ತುಂಬಲು ಇನ್ಶ್ಯೂರೆನ್ಸ್ ಕಛೇರಿಗೆ ಎಡತಾಕಬೇಕಿಲ್ಲ. ಪಾಲಿಸಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಬಂಧಿಸಿದ ಸಂಸ್ಥೆಯ ವೆಬ್‍ಸೈಟ್‍ನಲ್ಲಿ ಪಡೆಯಬಹುದು.
• ಪ್ರತಿ ಸಂಸ್ಥೆ ತನ್ನ ಗ್ರಾಹಕರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಗ್ರಾಹಕ ಸೇವಾ ಕೇಂದ್ರಗಳನ್ನೂ ಒದಗಿಸುತ್ತಿವೆ, ಗ್ರಾಹಕ ಸೇವಾ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಂಬಂಧಿಸಿದ ಮಾಹಿತಿ ಪಡೆಯಬಹುದು. ದೂರು/ಅಹವಾಲುಗಳನ್ನೂ ಸಲ್ಲಿಸಬಹುದು.
• ಒಂದು ವೇಳೆ ಸೂಕ್ತ ಸಮಯಕ್ಕೆ ಪಾಲಿಸಿ ನವೀಕರಣ ಸಾಧ್ಯವಾಗದಿದ್ದರೆ ಆತಂಕ ಪಡಬೇಕಿಲ್ಲ. ಪಾಲಿಸಿಗೆ ದೊರಕುವ ಗ್ರೇಸ್ ಅವಧಿಯಲ್ಲಿ ಪ್ರೀಮಿಯಮ್ ಪಾವತಿಸುವ ಮೂಲಕ ಪಾಲಿಸಿಯನ್ನು ಸಕ್ರಿಯವಾಗಿ ಇರಿಸಬಹುದು.

ಅಗತ್ಯ ಮಾಹಿತಿ

ಅಗತ್ಯ ಮಾಹಿತಿ

ಪಾಲಿಸಿಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು (ಇನ್ಶ್ಯೂರೆನ್ಸ್ ಬಾಂಡ್, ಪ್ರೀಮಿಯಮ್ ಪಾವತಿ ರಶೀದಿ ಇತ್ಯಾದಿ) ಮತ್ತು ಪಾಲಿಸಿ ಮೊತ್ತ ಪಡೆಯಲು ಅನುಸರಿಸಬೇಕಾದ ವಿಧಿ ವಿಧಾನಗಳನ್ನೂ ಅವರಿಗೆ ತಿಳಿಸಿಕೊಡುವ ಜವಾಬ್ದಾರಿ ಪಡೆಯಬೇಕು. ಇದು ಸಾಧ್ಯವಾಗಲಿಲ್ಲ ಅಂತಾದರೆ, ಅನಿರೀಕ್ಷಿತ ಅವಘಡಗಳು ಜರುಗಿದ ಸಂದರ್ಭದಲ್ಲಿ ಈ ಪಾಲಿಸಿಯ ಕುರಿತ ವಿವರಗಳು ಮಾಹಿತಿಗಳು ಲಭ್ಯ ಇರದ ಕಾರಣಕ್ಕೆ ಪಾಲಿಸಿದಾತರ ಅವಲಂಬಿತರಿಗೆ ಇದರಿಂದ ಯಾವ ಪ್ರಯೋಜನವೂ ದೊರಕುವುದಿಲ್ಲ. ಹೀಗಾಗದಂತೆ ಎಚ್ಚರ ವಹಿಸುವುದು ಅತ್ಯಂತ ಅಪೇಕ್ಷಣೀಯ.

English summary

Best Term Insurance Plans in India in 2018-19

Here are the Top 8 Best Term Insurance Plans for 2018-2019. We are giving major features of these term insurance plans.
Story first published: Wednesday, June 20, 2018, 10:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X