ಟಾಪ್ 10 ಇಂಟರ್‌ನೆಟ್ ಸ್ಟಾರ್ಟಅಪ್ ಐಡಿಯಾಗಳು

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಡಿಜಿಟಲೀಕರಣ ಎಂಬುದು ಪ್ರಸ್ತುತ ಯುಗದ ಅಲ್ಲಗಳೆಯಲಾಗದ ಸತ್ಯ ಪ್ರಕ್ರಿಯೆಯಾಗಿದ್ದು, ಇದು ಇಂದಿನ ವ್ಯಾಪಾರ, ವ್ಯವಹಾರ ಕ್ಷೇತ್ರಗಳ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಸಾಂಪ್ರದಾಯಿಕ ಅಂಗಡಿ, ಮಳಿಗೆಗಳಲ್ಲಿ ವ್ಯಾಪಾರ ಮಾಡುವುದಕ್ಕಿಂತಲೂ ಇಂಟರ್‌ನೆಟ್ ಮೂಲಕ ವಿಶಿಷ್ಟ ಮಾದರಿಯಲ್ಲಿ ವ್ಯವಹಾರ ಆರಂಭಿಸುವುದು (ಸ್ಟಾರ್ಟಅಪ್) ಇಂದು ಹೆಚ್ಚು ಪರಿಣಾಮಕಾರಿ ಹಾಗೂ ಲಾಭದಾಯಕವಾಗಿದೆ.
  ಗ್ರಾಹಕರು ಭೌಗೋಳಿಕವಾಗಿ ಎಲ್ಲಿಯೇ ಇರಲಿ ಚಿಂತೆ ಇಲ್ಲ. ಜಗತ್ತಿನಲ್ಲಿರುವ ಎಲ್ಲ ಗ್ರಾಹಕರನ್ನೂ ಕ್ಷಣ ಮಾತ್ರದಲ್ಲಿ ತಲುಪಬಲ್ಲ ಶಕ್ತಿ ಆನ್‌ಲೈನ್ ವ್ಯವಹಾರಕ್ಕೆ ಇರುವುದು ಸತ್ಯ.

  ಇಂಟರ್‌ನೆಟ್ ಸೌಲಭ್ಯ ಹೊಂದಿದ ಒಂದು ಲ್ಯಾಪ್‌ಟಾಪ್ ಜತೆಗಿದ್ದರೆ ಸಾಕು, ಅದೇ ನಿಮ್ಮ ಮೂಲ ಬಂಡವಾಳ. ನಿಮ್ಮ ಮನೆಯ ಕೋಣೆಯಲ್ಲಿ ಕುಳಿತೇ ಆನ್‌ಲೈನ್ ಮೂಲಕ ವ್ಯವಹಾರ ಆರಂಭಿಸಬಹುದು. ದೊಡ್ಡ ವ್ಯಾಪಾರ ಆರಂಭಿಸಲು ಬೇಕಾಗುವ ದಶಕಗಳ ಪರಿಣತಿ ಬೇಕೆಂದಿಲ್ಲ. ನಿಮಗೆ ತಿಳಿದಿರುವ ಜ್ಞಾನದಲ್ಲಿಯೇ ಸ್ಟಾರ್ಟಅಪ್ ಮಾಡಬಹುದು. ಇವತ್ತು ಜಗತ್ತಿನ ದೊಡ್ಡ ವ್ಯಾಪಾರಗಳು ಸಹ ಆನ್‌ಲೈನ್ ಕೇಂದ್ರೀಕೃತವಾಗುತ್ತಿರುವುದನ್ನು ನಾವೆಲ್ಲ ನೋಡಿಯೇ ಇದ್ದೇವೆ. ಭಾರತ ಸರಕಾರದ 8 ವಿಮಾ ಯೋಜನೆಗಳ ಪ್ರಯೋಜನಗಳೇನು ಗೊತ್ತೆ?

   

  ಳನ್ನು ನಡೆಸಿ ಹಣ ಸಂಪಾದಿಸಬಹುದು? ವರ್ತಮಾನದ ಉತ್ತಮ ಇಂಟರ್‌ನೆಟ್ ಆಧಾರಿತ ಬಿಸಿನೆಸ್‌ಗಳು ಯಾವುವು ಎಂಬುದನ್ನು ತಿಳಿದುಕೊಳ್ಳಲು ಈ ಅಂಕಣ ನಿಮಗೆ ನೆರವಾಗಲಿದೆ.

  2018ರ ಟಾಪ್ 10 ಇಂಟರ್‌ನೆಟ್ ಆಧಾರಿತ ಸ್ಟಾರ್ಟಅಪ್ ಐಡಿಯಾಗಳು ಹೀಗಿವೆ:

  1. ಸೋಶಿಯಲ್ ಮೀಡಿಯಾ ಕನ್ಸಲ್ಟನ್ಸಿ

  ಇವತ್ತಿನ ಡಿಜಿಟಲ್ ಸ್ಟಾರ್ಟಅಪ್ ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾ ಸಲಹಾ ಸಂಸ್ಥೆ (ಕನ್ಸಲ್ಟನ್ಸಿ) ಗಳಿಗೆ ಭಾರಿ ಬೇಡಿಕೆ ಕಂಡು ಬರುತ್ತಿದೆ. ಎಲ್ಲ ದೊಡ್ಡ ಕಂಪನಿಗಳು ಒಂದಿಲ್ಲೊಂದು ರೀತಿಯಲ್ಲಿ ಸೋಶಿಯಲ್ ಮೀಡಿಯಾ ಬಗ್ಗೆ ಕನ್ಸಲ್ಟನ್ಸಿ ಸೇವೆ ಪಡೆಯಲು ಮುಂದಾಗುತ್ತಿವೆ.

  ನಿರ್ದಿಷ್ಟ ಜನ ಸಮುದಾಯವನ್ನು ತಲುಪಿ, ಆ ಮೂಲಕ ಗ್ರಾಹಕರ ಸಂಖ್ಯೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಳ್ಳಲು ಇಂದು ಸೋಶಿಯಲ್ ಮೀಡಿಯಾ ಅತ್ಯಂತ ಶಕ್ತಿಯುತ ಹಾಗೂ ಪ್ರಭಾವಶಾಲಿ ಮಾಧ್ಯಮವಾಗಿ ಹೊರಹೊಮ್ಮಿದೆ. ಸೋಶಿಯಲ್ ಮೀಡಿಯಾದಲ್ಲಿ ಯಶಸ್ಸಿನ ಮೇಲೆ ಇಂದಿನ ಜಗತ್ತಿನ ಸೋಲು, ಗೆಲುವುಗಳು ನಿರ್ಧರಿಸಲ್ಪಡುತ್ತಿರುವುದು ವಾಸ್ತವವಾಗಿದೆ.
  ನೀವು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವೈನ್, ಸ್ನ್ಯಾಪಚಾಟ್ ಮುಂತಾದ ಜನಪ್ರಿಯ ಸೋಶಿಯಲ್ ಮೀಡಿಯಾ ಆಪ್‌ಗಳ ಬಳಕೆಯಲ್ಲಿ ಪರಿಣತಿ ಹೊಂದಿದ್ದರೆ ಆನ್‌ಲೈನ್ ಮುಖಾಂತರವೇ ಸೋಶಿಯಲ್ ಮೀಡಿಯಾ ಕನ್ಸಲ್ಟನ್ಸಿ ಆರಂಭಿಸಿ ಹಣ ಗಳಿಸಲಾರಂಭಿಸಬಹುದು.

  2. ವರ್ಚುವಲ್ ರಿಯಾಲಿಟಿ

  ಆಧುನಿಕ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಹಾಗೂ ಡಿಜಿಟಲೈಸೇಷನ್ ವಲಯದಲ್ಲಿನ ಆವಿಷ್ಕಾರಗಳ ಬಗ್ಗೆ ಸೆಳೆತ ನಿಮಗಿದ್ದರೆ ವರ್ಚುವಲ್ ರಿಯಾಲಿಟಿ ಕ್ಷೇತ್ರಕ್ಕೆ ನೀವು ಧುಮುಕಬಹುದು.
  ಇದು ಸಂಪೂರ್ಣ ಜ್ಞಾನಾಧಾರಿತ ಸ್ಟಾರ್ಟಅಪ್ ಆಗಿದ್ದು, ಇದಕ್ಕೆ ಹಣಕಾಸು ಬಂಡವಾಳದ ಅವಶ್ಯಕತೆಯಿಲ್ಲ. ಈ ಕ್ಷೇತ್ರದಲ್ಲಿ ಇರುವ ಅವಕಾಶಗಳು ಅಪರಿಮಿತವಾಗಿವೆ. ಇಡೀ ಡಿಜಿಟಲೈಸೇಷನ್ ಪ್ರಕ್ರಿಯೆಗೆ ಹೊಸ ದಿಕ್ಕು ನೀಡಬಲ್ಲ ವರ್ಚುವಲ್ ರಿಯಾಲಿಟಿ ಕ್ಷೇತ್ರದಲ್ಲಿ ಇನ್ನೂ ಅಷ್ಟೊಂದು ಸ್ಟಾರ್ಟಅಪ್ಗಳು ಬಂದಿಲ್ಲ.
  ನಾವು ಪ್ರತಿದಿನ ಮಾಡುವ ಸಾಮಾನ್ಯ ಕೆಲಸಗಳಿಗೆ ಸಹ ವರ್ಚುವಲ್ ರಿಯಾಲಿಟಿ ಜೋಡಿಸಬಹುದಾಗಿದ್ದು, ಇದು ನಮ್ಮ ಜಗತ್ತನ್ನೇ ಬದಲಾಯಿಸಬಹುದಾಗಿದೆ. 3ಡಿ ಚಲನಚಿತ್ರಗಳು, ಗೇಮಿಂಗ್, ರಿಯಲ್ ಎಸ್ಟೇಟ್, ತಂಡಗಳ ರಚನೆ ಮುಂತಾದ ಕ್ಷೇತ್ರಗಳಲ್ಲಿ ವರ್ಚುವಲ್ ರಿಯಾಲಿಟಿ ಅಗಾಧ ಅವಕಾಶಗಳನ್ನು ಹೊಂದಿದೆ.

  3. ಆನ್‌ಲೈನ್ ಕಲಿಸುವಿಕೆ ಹಾಗೂ ಶಿಕ್ಷಣ

  ಕೆಲ ಸಮೀಕ್ಷೆಗಳ ಪ್ರಕಾರ ಕಲಿಸುವಿಕೆಯು ಜಗತ್ತಿನಾದ್ಯಂತ 6 ಬಿಲಿಯನ್ ಡಾಲರ್ ಮೊತ್ತದ ವ್ಯವಹಾರವಾಗಿದೆ. ಮಕ್ಕಳಿಗಾಗಿ ಕಲಿಕೆಯನ್ನು ಸುಲಭ ಮಾಡಬಲ್ಲ ಅನೇಕ ಶಿಕ್ಷಣ ಆಪ್ ಹಾಗೂ ಮಾಹಿತಿ ನೀಡುವ ಕೆಲಮಟ್ಟಿನ ವ್ಯವಸ್ಥೆ ಇದೆಯಾದರೂ ಈ ಕ್ಷೇತ್ರದಲ್ಲಿ ಈವರೆಗೂ ದೊಡ್ಡ ಮಟ್ಟದ ಉದ್ಯಮಕ್ಕೆ ಯಾರೂ ಕೈ ಹಾಕಿಲ್ಲ.
  ಕಲಿಕಾ ಕ್ಷೇತ್ರದಲ್ಲಿ ಆಮೂಲಾಗ್ರ ಸುಧಾರಣೆ ತರಲು ಹಲವಾರು ಅವಕಾಶಗಳಿವೆ. ಭಾರತದಲ್ಲಿ ಶೇ. 74.04ರಷ್ಟು ಜನ ಸಾಕ್ಷರರಾಗಿದ್ದಾರೆ. ಇದು ಹೆಮ್ಮೆ ಪಡುವಂತಹ ಸಂಖ್ಯೆಯೇನೂ ಅಲ್ಲ. ಶಿಕ್ಷಣ ವಂಚಿತ ಕೆಳವರ್ಗದ ಮಕ್ಕಳಿಗೆ ಆನ್‌ಲೈನ್ ಮೂಲಕ ಶಿಕ್ಷಣವನ್ನು ಸುಲಭವಾಗಿಸಿ ಸಾಕ್ಷರತೆಯನ್ನು ಹೆಚ್ಚಿಸುವ ಮೂಲಕ ರಾಷ್ಟ್ರ ಹಿತಾಸಕ್ತಿಗೆ ಕೊಡುಗೆ ನೀಡಬಹುದು ಹಾಗೂ ಸ್ವತಃ ಆನ್‌ಲೈನ್ ವಹಿವಾಟಿನ ಮುಖಾಂತರ ಆದಾಯವನ್ನು ಸಹ ಗಳಿಸಬಹುದಾಗಿದೆ.

  4. ಪೋಸ್ಟ್ ಪ್ರೊಡಕ್ಷನ್ ವಿಡಿಯೋ ಸರ್ವಿಸ್

  ಪೋಸ್ಟ್ ಪ್ರೊಡಕ್ಷನ್ ವಿಡಿಯೋ ಸರ್ವಿಸ್ ಇದು ಚಲನ ಚಿತ್ರ ನಿರ್ಮಾಣದಲ್ಲಿನ ವಿಡಿಯೋ ಎಡಿಟಿಂಗ್ ಕೆಲಸವಾಗಿದೆ. ಚಲನ ಚಿತ್ರ ಶೂಟಿಂಗ್ ನಂತರ ಅದರ ಕಚ್ಚಾ ಪ್ರತಿ ತಿದ್ದುವುದು, ಸ್ಪೆಷಲ್ ಎಫೆಕ್ಟ್ಸ್ ಸೇರಿಸುವುದು, ಕಲಾವಿದರ ಧ್ವನಿ ಅಳವಡಿಕೆ, ಡಬ್ಬಿಂಗ್ ಮುಂತಾದ ಎಡಿಟಿಂಗ್ ಕಾರ್ಯಗಳು ಇದರಲ್ಲಿ ಸೇರಿವೆ. ಯಾವುದೇ ಚಲನಚಿತ್ರ ನಿರ್ಮಾಣದಲ್ಲಿ ಪೋಸ್ಟ್ ಪ್ರೊಡಕ್ಷನ್ ಎಡಿಟಿಂಗ್ ಎಂಬುದು ಮೂರನೆಯ ಹಾಗೂ ಕೊನೆಯ ಹಂತದ ಕೆಲಸವಾಗಿರುತ್ತದೆ.

  ಚಿಕ್ಕ ಹಾಗೂ ದೊಡ್ಡ ಕಂಪನಿಗಳು ತಮ್ಮ ಜಾಹೀರಾತಿಗಾಗಿ, ವೆಬ್‌ಸೈಟ್‌ನಲ್ಲಿ ಪ್ರಕಟಿಸಲು ಹಾಗೂ ತಮ್ಮ ಸೇವೆಗಳ ಮಾಹಿತಿಯನ್ನು ಜನರಿಗೆ ತಲುಪಿಸಲು ವಿಶೇಷ ವಿಡಿಯೋಗಳನ್ನು ತಯಾರಿಸುತ್ತವೆ. ಸದ್ಯ ಪ್ರತಿದಿನ ಇಂಟರ್‌ನೆಟ್‌ನಲ್ಲಿ ಎಷ್ಟೋ ಕೋಟಿಗಟ್ಟಲೆ ವಿಡಿಯೋಗಳನ್ನು ಜನ ವೀಕ್ಷಿಸುತ್ತಾರೆ ಎಂದ ಮೇಲೆ ಈ ಕ್ಷೇತ್ರದ ಅಗಾಧತೆ ಹಾಗೂ ಇಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಮನಗಾಣಬಹುದು.
  ಇನ್ನು ಪೋಸ್ಟ್ ಪ್ರೊಡಕ್ಷನ್ ಮಾಡುವುದು ಹೇಗೆ ಎಂಬ ಬಗ್ಗೆ ಟ್ಯುಟೋರಿಯಲ್ ವಿಡಿಯೋ ತಯಾರಿಸಿ ಅದನ್ನು ಆನ್‌ಲೈನ್‌ನಲ್ಲಿ ಇಟ್ಟು ಹಣ ಗಳಿಸಬಹುದು.

  5. ಸರ್ಚ್ ಎಂಜಿನ್ ಆಪ್ಟಿಮೈಸೇಶನ್ (SEO)

  ಇಂದು ಎಲ್ಲ ಕಂಪನಿಗಳಿಗೂ ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಎಷ್ಟು ಅಗತ್ಯ ಎಂಬುದು ತಿಳಿದಿದ್ದು, ಎಲ್ಲರೂ ತಮ್ಮ ವೆಬ್‌ಸೈಟ್ ಸರ್ಚ್ ಎಂಜಿನ್‌ಗಳಲ್ಲಿ ಮೊದಲಿಗೆ ಕಾಣಬೇಕೆಂದು ಬಯಸುತ್ತಾರೆ. ಗೂಗಲ್, ಬಿಂಗ್ ಮುಂತಾದ ಸರ್ಚ್ ಎಂಜಿನ್‌ಗಳಲ್ಲಿ ನಿರ್ದಿಷ್ಟ ವೆಬ್‌ಸೈಟ್‌ಗಳು ಮೊದಲಿಗೆ ಕಾಣುವಂತೆ ಮಾಡುವುದೇ ಸರ್ಚ್ ಎಂಜಿನ್ ಆಪ್ಟಿಮೈಸೇಶನ್‌ನ ಕೆಲಸವಾಗಿದೆ.
  ಸ್ಥಳೀಯವಾಗಿ ಸರ್ಚ್ ಎಂಜಿನ್ ಆಪ್ಟಿಮೈಸೇಶನ್ ಹಲವಾರು ಅಂಶಗಳ ಮೇಲೆ ಆಧಾರಿತವಾಗಿರುತ್ತದೆ. ಗೂಗಲ್ ಮುಂತಾದ ಸರ್ಚ್ ಎಂಜಿನ್‌ಗಳಲ್ಲಿ ವೆಬ್‌ಸೈಟ್ ಮೊದಲಿಗೆ ಕಾಣುವಂತೆ ಮಾಡುವುದು, ಬಿಸಿನೆಸ್ ಡೈರೆಕ್ಟರಿಗಳಾದ ಯೆಲ್ಪ್, ಸುಪರ್‌ಪೇಜಸ್, ಫೋರ್‌ಸ್ಕ್ವೇರ್, ಯೆಲ್ಲೊಬುಕ್, ಗೂಗಲ್ ಮೈ ಬಿಸಿನೆಸ್ ಲಿಸ್ಟಿಂಗ್, ಬಿಂಗ್ ಬಿಸಿನೆಸ್ ಪೇಜ್‌ಗಳಲ್ಲಿ ಕಂಪನಿ ವೆಬ್‌ಸೈಟ್ ಅನ್ನು ಮುಂದೆ ಇರುವಂತೆ ಮಾಡುವುದು ಹಾಗೂ ಗ್ರಾಹಕರ ಅಭಿಪ್ರಾಯ ಸೇರಿದಂತೆ ಇನ್ನಿತರ ಮಾಹಿತಿ ಕ್ರೋಢೀಕರಿಸುವುದು ಇದರಲ್ಲಿ ಸೇರಿವೆ.

  6. ಕೌನ್ಸೆಲಿಂಗ್ ಹಾಗೂ ಚಿಕಿತ್ಸೆ

  ಮಾನಸಿಕ ಕಾಯಿಲೆಗಳು ಉಲ್ಬಣಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಇಡೀ ಜಗತ್ತಿನಲ್ಲಿಯೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಈ ಸಮಸ್ಯೆಗಳಿಂದ ಬಳಲುತ್ತಿವವರಿಗೆ ಸಹಾಯ ಮಾಡುವುದು ಸಹ ಒಂದು ದೊಡ್ಡ ಸ್ಟಾರ್ಟಪ್ ಅವಕಾಶವಾಗಿದೆ. ಒಂದು ಕಡೆ ಸಮಾಜ ಸೇವೆ ಹಾಗೂ ಮತ್ತೊಂದೆಡೆ ವ್ಯವಹಾರ ಹೀಗೆ ಎರಡು ವಿಧದಲ್ಲಿ ಇಲ್ಲಿ ಕೆಲಸ ಮಾಡಲು ಅವಕಾಶವಿದೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ಉಪಯುಕ್ತ ಮಾಹಿತಿ ನೀಡಬಲ್ಲ ವಿಡಿಯೋಗಳನ್ನು ತಯಾರಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು.
  ಮಾನಸಿಕ ಕಾಯಿಲೆಗಳಿಂದ ಬಳಲುವ ಹಲವಾರು ಜನ ತಜ್ಞರ ಬಳಿ ಹೋಗಿ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ಈ ಸಮಸ್ಯೆ ನಿವಾರಣೆಗೆ ರೋಗಿಗಳು ಹಾಗೂ ತಜ್ಞರ ಮಧ್ಯೆ ಕೊಂಡಿಯಾಗುವಂತೆ ಆನ್‌ಲೈನ್‌ನಲ್ಲಿ ಸ್ಟಾರ್ಟಪ್ ಆರಂಭಿಸಬಹುದು. ಇದು ರೋಗಿಗಳಿಗೆ ಕೌನ್ಸೆಲಿಂಗ್‌ನ ಸಹಾಯ ಮಾಡಿ ಚಿಕಿತ್ಸೆ ಪಡೆಯಲು ನೆರವಾಗುತ್ತದೆ.

  7. ಡೇಟಿಂಗ್ ಅಪ್ಲಿಕೇಶನ್‌ಗಳು

  ಈಗಾಗಲೇ ಮಾರ್ಕೆಟ್‌ನಲ್ಲಿರುವ Tinder ಹಾಗೂ Grindr ಎಂಬ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳ ಬಗ್ಗೆ ನಮಗೆ ಗೊತ್ತೇ ಇದೆ. ಆದರೆ ಈ ಕ್ಷೇತ್ರದಲ್ಲಿ ಇನ್ನೂ ಬಹಳಷ್ಟು ಅವಕಾಶಗಳಿದ್ದು, ಇದರಲ್ಲಿ ಸಿಗುವ ಹಣವೂ ದೊಡ್ಡ ಮೊತ್ತದ್ದಾಗಿದೆ ಎನ್ನುತ್ತಾರೆ ಆನ್‌ಲೈನ್ ಪರಿಣಿತರು. ನೀವು ಕ್ರಿಯಾಶೀಲ ಬುದ್ಧಿಯುಳ್ಳವರಾಗಿದ್ದು, ಸ್ವಲ್ಪ ಮಟ್ಟಿನ ಹಣಕಾಸು ಬೆಂಬಲ ಹೊಂದಿದ್ದರೆ ಡೇಟಿಂಗ್ ಅಪ್ಲಿಕೇಶನ್ ಕ್ಷೇತ್ರದಲ್ಲಿ ಸ್ಟಾರ್ಟಅಪ್ ಆರಂಭಿಸಬಹುದು.
  ನಿಮ್ಮಲ್ಲಿ ಈ ಬಗ್ಗೆ ಕೆಲ ಗೊಂದಲಗಳಿದ್ದರೆ ಆರಂಭದಲ್ಲಿ ನಿಮ್ಮ ಕ್ರಿಯಾಶೀಲತೆಗೆ ತಕ್ಕಂತೆ ಸಣ್ಣ ಪ್ರಮಾಣದ ಡೇಟಿಂಗ್ ಸೈಟ್ ಆರಂಭಿಸಿ ಮುಂದೆ ದೊಡ್ಡದಾಗಿ ಬೆಳೆಸಬಹುದು.

  8. ಸಾಫ್ಟವೇರ್ ಶಿಕ್ಷಣ

  ಆನ್‌ಲೈನ್ ಮೂಲಕ ಸಾಫ್ಟವೇರ್ ಕಲಿಕೆ ಇತ್ತೀಚಿನ ದಿನಗಳಲ್ಲಿ ಬಹು ಜನಪ್ರಿಯವಾಗುತ್ತಿದೆ. ಫೈನಲ್ ಕಟ್, ಕ್ವಿಕ್ ಬುಕ್ಸ್, ಫೋಟೊಶಾಪ್ ಮುಂತಾದ ಸಾಫ್ಟವೇರ್‌ಗಳು ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಇವುಗಳನ್ನು ಕಲಿಸುವವರಿಗೂ ಸಹಜವಾಗಿಯೇ ಡಿಮ್ಯಾಂಡ್ ಹೆಚ್ಚಾಗುತ್ತಿದೆ. ಇಂಥ ಸಾಫ್ಟವೇರ್‌ಗಳನ್ನು ಕಲಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಸ್ಟಾರ್ಟಪ್ ಆರಂಭಿಸಬಹುದು.
  ಒಂದು ಬಾರಿ ಇದರಲ್ಲಿ ಯಶಸ್ಸಿನ ರುಚಿ ಕಂಡರೆ ಮುಂದೆ ಇದಕ್ಕೆ ಸಂಬಂಧಿಸಿದಂತೆ ಇ-ಬುಕ್ಸ್, ಲೈವ್ ಸೆಶನ್ಸ್ ಆರಂಭಿಸಿ ಅವಕಾಶಗಳನ್ನು ವಿಸ್ತರಿಸಿಕೊಳ್ಳಬಹುದು.

  9. ಫಿಟ್‌ನೆಸ್ ಸೆಂಟರ್

  ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ೨೦೧೬ ರಲ್ಲಿ ಜಗತ್ತಿನಾದ್ಯಂತ ೧೮ ವರ್ಷ ಮೇಲ್ಪಟ್ಟ 1.9 ಬಿಲಿಯನ್ ಜನ ಅತಿಯಾದ ಬೊಜ್ಜು ಹೊಂದಿದ್ದಾರೆ. ಹೀಗಾಗಿ ಬೊಜ್ಜು ಇಳಿಸಿಕೊಂಡು ಆರೋಗ್ಯ ಹೆಚ್ಚಿಸಲು ಫಿಟ್‌ನೆಸ್ ಕೇಂದ್ರಗಳು, ಸಲಹಾ ಸಂಸ್ಥೆಗಳು, ಕ್ರಮಬದ್ಧ ಆಹಾರ ಸೇವನೆ ಮುಂತಾದ ಸೇವೆಗಳಿಗೆ ಬೇಡಿಕೆ ಹೆಚ್ಚುವುದರಲ್ಲಿ ಸಂದೇಹವಿಲ್ಲ.
  ಈ ಕ್ಷೇತ್ರದಲ್ಲಿ ಅವಶ್ಯಕತೆ ಇರುವವರಿಗೆ ಸೂಕ್ತ ಮಾರ್ಗದರ್ಶನ ಮಾಡಬಲ್ಲ ವೆಬ್‌ಸೈಟ್, ಆಪ್ ತಯಾರಿಸಿ ಆನ್‌ಲೈನ್ ಮೂಲಕ ಹಣ ಸಂಪಾದಿಸಲು ಅನೇಕ ಅವಕಾಶಗಳಿವೆ. ವಿಶಿಷ್ಟ ಕ್ರಿಯಾಶೀಲ ಬುದ್ಧಿ ನಿಮ್ಮಲ್ಲಿದ್ದರೆ ಈ ಕ್ಷೇತ್ರದಲ್ಲಿ ಯಶಸ್ಸು ಸುಲಭ.

  10. ರಿಮೋಟ್ ಟೆಕ್ನಿಕಲ್ ಅಸಿಸ್ಟನ್ಸ್

  ದೂರದಿಂದಲೇ ಆನ್‌ಲೈನ್ ಮೂಲಕ ತಾಂತ್ರಿಕ ಸಹಾಯ ನೀಡುವುದೇ ರಿಮೋಟ್ ಟೆಕ್ನಿಕಲ್ ಅಸಿಸ್ಟನ್ಸ್ ಕಾರ್ಯವಾಗಿದೆ. ಮೊಬೈಲ್, ಸಾಫ್ಟವೇರ್ ಹಾಗೂ ಇನ್ನಿತರ ಹಲವಾರು ಕಂಪನಿಗಳ ತಮ್ಮ ಉತ್ಪನ್ನಗಳ ಕುಂದು ಕೊರತೆ ನಿವಾರಿಸಲು ಗ್ರಾಹಕರಿಗೆ ರಿಮೋಟ್ ತಾಂತ್ರಿಕ ಸಹಾಯ ನೀಡುತ್ತವೆ.
  ಆದರೆ ಚಿಕ್ಕ ಕಂಪನಿಗಳು ಈ ಕೆಲಸಕ್ಕೆ ದೊಡ್ಡ ಮೊತ್ತದ ಹಣಕಾಸು ತೊಡಗಿಸಲು ಸಾಧ್ಯವಾಗುವುದಿಲ್ಲ. ಹಾಗಂತ ಗ್ರಾಹಕರಿಗೆ ಸೇವೆ ನೀಡುವುದರಿಂದಲೂ ಅವು ತಪ್ಪಿಸಿಕೊಳ್ಳಲಾಗುವುದಿಲ್ಲ. ಇಂಥ ಸಂದರ್ಭಗಳಲ್ಲಿ ಕಂಪನಿಗಳ ಅವಶ್ಯಕತೆಗಳಿಗೆ ತಕ್ಕಂತೆ ಅವರ ಗ್ರಾಹಕರಿಗೆ ಆನ್‌ಲೈನ್ ತಾಂತ್ರಿಕ ಸಹಾಯ ನೀಡಬಲ್ಲ ಸ್ಟಾರ್ಟಪ್ ಆರಂಭಿಸಬಹುದು. ಇದಕ್ಕಾಗಿ ನೆರವಾಗಬಲ್ಲ ಅನೇಕ ಸಾಫ್ಟವೇರ್‌ಗಳು ಸಹ ಲಭ್ಯವಿದ್ದು, ಇವುಗಳನ್ನು ಬಳಸಿಕೊಂಡು ವ್ಯವಹಾರ ಬೆಳೆಸಬಹುದಾಗಿದೆ.

  Read more about: startups business money finance news
  English summary

  10 Best Internet Based Startup Ideas

  Keeping all the above pointers, we have curated a list of 10 best internet based startup ideas for 2018.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more