For Quick Alerts
ALLOW NOTIFICATIONS  
For Daily Alerts

ಸೆಬಿ (SEBI) ಮ್ಯೂಚುವಲ್ ಫಂಡ್ ಮರು ವರ್ಗೀಕರಣ: ಆಗಬಹುದಾದ 10 ಪರಿಣಾಮಗಳೇನು?

ಮ್ಯೂಚುವಲ್ ಫಂಡ್‌ಗಳ ವರ್ಗೀಕರಣ ಹಾಗೂ ಸರಳೀಕರಣ ಯೋಜನೆಯನ್ನು ಜಾರಿಗೊಳಿಸಿರುವ ಷೇರು ಮಾರುಕಟ್ಟೆ ನಿಯಂತ್ರಕ ಪ್ರಾಧಿಕಾರ ಸೆಬಿ ಮ್ಯೂಚುವಲ್ ಫಂಡ್‌ಗಳ ಮರು ವರ್ಗೀಕರಣ, ಸಂಯೋಜನೆ ಹಾಗೂ ವಿಲೀನಗಳನ್ನು ಕಡ್ಡಾಯಗೊಳಿಸಿದೆ.

By Siddu
|

ಮ್ಯೂಚುವಲ್ ಫಂಡ್‌ಗಳ ವರ್ಗೀಕರಣ ಹಾಗೂ ಸರಳೀಕರಣ ಯೋಜನೆಯನ್ನು ಜಾರಿಗೊಳಿಸಿರುವ ಷೇರು ಮಾರುಕಟ್ಟೆ ನಿಯಂತ್ರಕ ಪ್ರಾಧಿಕಾರ 'ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ' (Securities and Exchange Board of India-SEBI), ಮ್ಯೂಚುವಲ್ ಫಂಡ್‌ಗಳ ಮರು ವರ್ಗೀಕರಣ, ಮರು ಸಂಯೋಜನೆ ಹಾಗೂ ವಿಲೀನಗಳನ್ನು ಕಡ್ಡಾಯಗೊಳಿಸಿದೆ. ಷೇರು ಮಾರುಕಟ್ಟೆಯಲ್ಲಿನ ಗೊಂದಲ ಹಾಗೂ ಅವ್ಯವಸ್ಥೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇಂಥ ಕ್ರಮ ಅತಿ ಅಗತ್ಯವೂ ಆಗಿತ್ತು.

ಪ್ರಸ್ತುತ ಭಾರತದ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ೨೦೦೦ ಕ್ಕೂ ಅಧಿಕ ವಿವಿಧ ಮ್ಯೂಚುವಲ್ ಫಂಡ್ ಯೋಜನೆಗಳು ಜಾರಿಯಲ್ಲಿವೆ. ಪ್ರತಿ ಫಂಡ್ ನೇರ ಹಾಗೂ ನಿಯಮಿತ ಯೋಜನೆ ಮತ್ತು ಲಾಭಾಂಶ ಹಾಗೂ ಬೆಳವಣಿಗೆ ಆಯ್ಕೆಯನ್ನು ಹೊಂದಿವೆ. ಮ್ಯೂಚುವಲ್ ಫಂಡ್ ಕಂಪನಿಗಳು ಬೇರೆ ಬೇರೆ ಹೆಸರಲ್ಲಿ ಹಲವಾರು ಯೋಜನೆಗಳನ್ನು ಹೊಂದಿದ್ದರೂ, ಅವುಗಳ ರಚನೆ ಹಾಗೂ ತಿರುಳು ಮಾತ್ರ ಒಂದೇ ಆಗಿದೆ. ಮಾರುಕಟ್ಟೆಯಲ್ಲಿನ ಹೂಡಿಕೆ ಆಯ್ಕೆಗಳ ಬಗ್ಗೆ ಹೂಡಿಕೆದಾರರಿಗೆ ಸ್ಪಷ್ಟತೆ ಮೂಡಿಸುವ ನಿಟ್ಟಿನಲ್ಲಿ ಸೆಬಿ ಈ ಸುಧಾರಣಾ ಕ್ರಮಗಳ ಜಾರಿಗೆ ಮುಂದಾಗಿದೆ.

ಸೆಬಿಯ ಈ ಮರು ವರ್ಗೀಕರಣದಿಂದ ನಿಮ್ಮ ಹೂಡಿಕೆಗಳು ಸಹ ಮರು ಮೌಲ್ಯಮಾಪನಗೊಳ್ಳುವುದು ನಿಶ್ಚಿತ. ಮರು ವರ್ಗೀಕರಣದ ನಂತರ ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿ ಉಂಟಾಗಬಹುದಾದ 10 ಪ್ರಮುಖ ಬದಲಾವಣೆಗಳು ಹೀಗಿವೆ..

1. ಸೆಬಿಯ ನೂತನ ಆದೇಶ

1. ಸೆಬಿಯ ನೂತನ ಆದೇಶ

ಸೆಬಿಯ ನೂತನ ಆದೇಶದ ಪ್ರಕಾರ ಒಂದು ಮ್ಯೂಚುವಲ್ ಫಂಡ್ ಕಂಪನಿ 10 ವಿಧದ ಇಕ್ವಿಟಿ ಫಂಡ್ಸ್, 16 ವರ್ಗದ ಬಾಂಡ್ ಯೋಜನೆಗಳು ಮತ್ತು 6 ಬಗೆಯ ಹೈಬ್ರಿಡ್ ಫಂಡ್ ಯೋಜನೆಗಳನ್ನು ಮಾತ್ರ ಹೊಂದಬಹುದಾಗಿದೆ. ಇವುಗಳನ್ನು ಹೊರತು ಪಡಿಸಿ ಇಂಡೆಕ್ಸ್ ಫಂಡ್ಸ್, ಫಂಡ್ಸ್ ಆಫ್ ಫಂಡ್ಸ್ ಹಾಗೂ ಇತರ ಪರಿಹಾರ ಆಧರಿತ ಸ್ಕೀಂ ಗಳನ್ನು ಜಾರಿಗೊಳಿಸಬಹುದು.

2. ಭದ್ರತಾ ಯೋಜನೆ

2. ಭದ್ರತಾ ಯೋಜನೆ

ನಿರ್ದಿಷ್ಟ ಫಂಡ್ ಅನ್ನು ಎಷ್ಟು ಅವಧಿ ಹಾಗೂ ಯಾವ ವಿಧದ ಭದ್ರತೆಯಲ್ಲಿ ತೊಡಗಿಸಬಹುದು ಎಂಬುದನ್ನು ಹೊಸ ವರ್ಗೀಕರಣ ಯೋಜನೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಉದಾಹರಣೆಗೆ- ಅಲ್ಪಾವಧಿಯ ಫಂಡ್ ಅನ್ನು ೧ ರಿಂದ ೩ ವರ್ಷಗಳ ಪರಿಪಕ್ವತಾ ಯೋಜನೆಯಲ್ಲಿ ಹಾಗೂ ಮಧ್ಯಮ ಕಾಲಾವಧಿಯ ಫಂಡ್‌ಗಳನ್ನು ೪ ರಿಂದ ೭ ವರ್ಷ ಅವಧಿಯ ಭದ್ರತಾ ಯೋಜನೆಗಳಲ್ಲಿ ತೊಡಗಿಸಬಹುದು.

3. ಕಾರ್ಪೊರೇಟ್ ಬಾಂಡ್

3. ಕಾರ್ಪೊರೇಟ್ ಬಾಂಡ್

ಯಾವುದೇ ಕಾರ್ಪೊರೇಟ್ ಬಾಂಡ್ ಫಂಡ್ ಅನ್ನು ಅದರ ಕನಿಷ್ಠ ಶೇ. ೮೦ರಷ್ಟನ್ನು 'ಎಎ' (AA) ರೇಟಿಂಗ್ ಇರುವ ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹಾಗೂ ಯಾವುದೇ ಕ್ರೆಡಿಟ್ ರಿಸ್ಕ್ ಫಂಡ್‌ನ ಶೇ. ೬೫ರಷ್ಟನ್ನು 'ಎಎ' (AA) ರೇಟಿಂಗ್ ಇರುವ ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

4. ಪಕ್ವತಾ ಅವಧಿ

4. ಪಕ್ವತಾ ಅವಧಿ

ಅಲ್ಪಾವಧಿ ಇನಕಮ್ ಫಂಡ್‌ನ ಒಟ್ಟಾರೆ ಕಾಲಾವಧಿ 3 ವರ್ಷದೊಳಗಿದ್ದರೆ, ಅದನ್ನು 10 ರಿಂದ 20 ವರ್ಷಗಳ ಪಕ್ವತಾ ಅವಧಿಯ ಸರಕಾರಿ ಭದ್ರತಾ ಯೋಜನೆಯಲ್ಲಿ ತೊಡಗಿಸಬಹುದು.

5. ಅಲ್ಪಾವಧಿ ಇನಕಮ್ ಫಂಡ್

5. ಅಲ್ಪಾವಧಿ ಇನಕಮ್ ಫಂಡ್

ಕಾಲಾವಧಿಯನ್ನು ಅತ್ಯಂತ ಸೂಕ್ಷ್ಮವಾಗಿ ಗುರುತಿಸಲಾಗಿರುವುದರಿಂದ ಫಂಡ್ ಮ್ಯಾನೇಜರ್‌ಗಳ ಸ್ವಾತಂತ್ರ್ಯ ಕಡಿಮೆಯಾಗಲಿದೆ. ಉದಾಹರಣೆಗೆ- ೨ ವರ್ಷ ೮ ತಿಂಗಳ ಹೂಡಿಕೆ ಕಾಲಾವಧಿಯ ಯಾವುದೇ ಅಲ್ಪಾವಧಿ ಇನಕಮ್ ಫಂಡ್ ಮತ್ತಷ್ಟು ಹೊಸ ಭದ್ರತೆಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂದರೆ ಅದು ೩ ವರ್ಷಕ್ಕೂ ಅಧಿಕ ಕಾಲ ಜಾರಿಯಲ್ಲಿರುವ ಸಾಧ್ಯತೆ ಇರುವುದರಿಂದ ೩.೫ ವರ್ಷಗಳಲ್ಲಿ ಮತ್ತಷ್ಟು ಭದ್ರತೆ ಹೊಂದಲಾಗುವುದಿಲ್ಲ.

6. ಬ್ಯಾಲೆನ್ಸಡ್ ಫಂಡ್

6. ಬ್ಯಾಲೆನ್ಸಡ್ ಫಂಡ್

ಈ ಮುಂಚೆ ಬ್ಯಾಲೆನ್ಸಡ್ ಫಂಡ್‌ಗಳನ್ನು ಯಾವತ್ತೂ ಬ್ಯಾಲೆನ್ಸ್ ಮಾಡಲಾಗುತ್ತಿರಲಿಲ್ಲ. ಅದರ ಹೆಸರಿಗೆ ತಕ್ಕಂತೆ ಅವುಗಳ ಶೇ. 65 ರಿಂದ ೭೦ರಷ್ಟನ್ನು ಇಕ್ವಿಟಿಗಳಲ್ಲಿ ಹಾಗೂ ಇನ್ನುಳಿದಿರುವುದನ್ನು ಡೆಬ್ಟ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ಆದರೆ ೨೦೧೮ರ ಮೇ ತಿಂಗಳ ಕೊನೆಯಲ್ಲಿ ಅದರ ಗಾತ್ರ ಸಂಪೂರ್ಣ ಇಕ್ವಿಟಿ ಫಂಡ್‌ಗಳ ಶೇ. 24ರಷ್ಟು ಮಾತ್ರ ಇತ್ತು. ಇದು ಕಳೆದ ಎರಡು ವರ್ಷಗಳ ಹಿಂದೆ ಇರುವುದಕ್ಕಿಂತ ಶೇ. ೧೦ರಷ್ಟು ಹೆಚ್ಚಾಗಿದೆ. ಈಗ ಡೆಬ್ಟ್ ಹಾಗೂ ಇಕ್ವಿಟಿ ಫಂಡ್‌ಗಳಲ್ಲಿ ಸರಾಸರಿ ಸಮತೋಲಿತ ಬ್ಯಾಲೆನ್ಸಡ್ ಫಂಡ್‌ಗಳಿಗೆ ಮಾತ್ರ ಸೆಬಿ ಅನುಮತಿ ನೀಡುತ್ತಿದೆ.

7. ಡೆಬ್ಟ್ ಫಂಡ್‌ನಲ್ಲಿ ಹೂಡಲು ಅವಕಾಶ

7. ಡೆಬ್ಟ್ ಫಂಡ್‌ನಲ್ಲಿ ಹೂಡಲು ಅವಕಾಶ

ಮರು ವರ್ಗೀಕರಣದ ನಂತರ ಯಾವುದೇ ಬ್ಯಾಲೆನ್ಸಡ್ ಹೈಬ್ರಿಡ್ ಫಂಡ್‌ನಲ್ಲಿ ಒಟ್ಟು ಬಂಡವಾಳದ ಶೇ. ೪೦ ರಿಂದ ೬೦ರಷ್ಟು ಇಕ್ವಿಟಿಗಳಲ್ಲಿ ಹಾಗೂ ಮಿಕ್ಕಿದ್ದು ಡೆಬ್ಟ್ ಫಂಡ್‌ನಲ್ಲಿ ಹೂಡಲು ಅವಕಾಶವಿದೆ.

8. ಇಕ್ವಿಟಿ, ಡೆಬ್ಟ್‌ಗಳಲ್ಲಿ ಹೂಡಿಕೆ

8. ಇಕ್ವಿಟಿ, ಡೆಬ್ಟ್‌ಗಳಲ್ಲಿ ಹೂಡಿಕೆ

ಯಾವುದೇ ತೀವ್ರ ಗತಿಯ ಹೈಬ್ರಿಡ್ ಫಂಡ್ ತನ್ನ ಬಂಡವಾಳದ ಶೇ. ೬೫ ರಿಂದ ೮೦ರಷ್ಟು ಇಕ್ವಿಟಿಗಳಲ್ಲಿ ಮತ್ತು ಶೇ. ೨೦ ರಿಂದ ೩೦ರಷ್ಟನ್ನು ಡೆಬ್ಟ್‌ಗಳಲ್ಲಿ ಹೂಡಬಹುದು.

9. ಫಂಡ್ ಮ್ಯಾನೇಜರ್‌

9. ಫಂಡ್ ಮ್ಯಾನೇಜರ್‌

ಹೊಸ ವರ್ಗೀಕರಣದ ಪ್ರಕಾರ ಹೈಬ್ರಿಡ್ ಫಂಡ್ ಅನ್ನು ಡೈನಾಮಿಕ್ ಅಸೆಟ್ ಅಲೊಕೇಶನ್ ಅಥವಾ ಬ್ಯಾಲೆನ್ಸಡ್ ಅಡ್ವಾಂಟೇಜ್ ಫಂಡ್ ಎಂದು ಕರೆಯಲಾಗುತ್ತದೆ. ಫಂಡ್ ಮ್ಯಾನೇಜರ್ ಇಕ್ವಿಟಿ ಹಾಗೂ ಡೆಬ್ಟ್‌ಗಳ ಮಧ್ಯೆ ಬದಲಾವಣೆ ಮಾಡಬಹುದು. ಒಂದು ವೇಳೆ ಇಕ್ವಿಟಿ ಮಾರುಕಟ್ಟೆ ಇಳಿಕೆಯಲ್ಲಿದ್ದರೆ ಸಂಪೂರ್ಣವಾಗಿ ಡೆಬ್ಟ್‌ಗೆ ಬದಲಾಯಿಸುವ ಆಯ್ಕೆ ಫಂಡ್ ಮ್ಯಾನೇಜರ್‌ಗೆ ಇರುತ್ತದೆ. ಅದೇ ರೀತಿ ಇಕ್ವಿಟಿ ಮಾರುಕಟ್ಟೆ ಏರಿಕೆಯಾದರೆ ಸಂಪೂರ್ಣವಾಗಿ ಇಕ್ವಿಟಿಗೆ ಹೊರಳುವ ಅವಕಾಶವೂ ಇದೆ.

10. ಸಾಂಪ್ರದಾಯಿಕ ಹೈಬ್ರಿಡ್ ಫಂಡ್, ಡೆಬ್ಟ್

10. ಸಾಂಪ್ರದಾಯಿಕ ಹೈಬ್ರಿಡ್ ಫಂಡ್, ಡೆಬ್ಟ್

ಯಾವುದೇ ಸಾಂಪ್ರದಾಯಿಕ ಹೈಬ್ರಿಡ್ ಫಂಡ್‌ನಲ್ಲಿ ಶೇ. 10 ರಿಂದ ೨೫ರಷ್ಟನ್ನು ಇಕ್ವಿಟಿಗಳಲ್ಲಿ ಹಾಗೂ ಮಿಕ್ಕಿದ್ದನ್ನು ಡೆಬ್ಟ್‌ನಲ್ಲಿ ಹೂಡುವ ಅವಕಾಶವಿದೆ. ಮುಂಚೆ ಮ್ಯೂಚುವಲ್ ಫಂಡ್ ಕಂಪನಿಗಳು ಈ ಫಂಡ್‌ಗಳನ್ನು ನಿಶ್ಚಿತ ಮಾಸಿಕ ಅಥವಾ ತ್ರೈಮಾಸಿಕ ಆದಾಯ ಫಂಡ್‌ಗಳೆಂದು ಗುರುತಿಸುತ್ತಿದ್ದವು.

ಕೊನೆ ಮಾತು

ಕೊನೆ ಮಾತು

ಮ್ಯೂಚುವಲ್ ಫಂಡ್ ಮಾರುಕಟ್ಟೆಯಲ್ಲಿನ ವಿವಿಧ ರೀತಿಯ ಯೋಜನೆಗಳು ಹಾಗೂ ಅವುಗಳ ಒಂದೇ ರೀತಿಯ ಹೂಡಿಕೆಯಿಂದ ಹೂಡಿಕೆದಾರರಿಗೆ ಆಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಸೆಬಿ ನೂತನ ಮರು ವರ್ಗೀಕರಣ ಯೋಜನೆ ಜಾರಿಗೊಳಿಸಿದೆ. ಇನ್ನು ಮುಂಚಿನ ರೀತಿಯ ಗೊಂದಲಗಳು ಹೂಡಿಕೆದಾರರಲ್ಲಿ ಇರಲಾರವು ಎಂದು ಆಶಿಸಬಹುದು.

English summary

SEBI Mutual Fund re-categorisation: What are the possible 10 effect

Securities and Exchange Board of India (SEBI) has made mutual funds reclassification, re-categorisation, and merger mandatory.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X