For Quick Alerts
ALLOW NOTIFICATIONS  
For Daily Alerts

ಟಾಪ್ 10 ಅತಿಹೆಚ್ಚು ಸಂಬಳ ಪಾವತಿಸುವ ಒತ್ತಡ ರಹಿತ ಉದ್ಯೋಗಗಳು

ಸಂಬಳ ಹೆಚ್ಚಾಗಿದ್ದಷ್ಟೂ ಕೆಲಸದಲ್ಲಿ ಒತ್ತಡ ಜಾಸ್ತಿ ಎಂಬ ನಂಬಿಕೆಯೊಂದು ಉದ್ಯೋಗ ವಲಯದಲ್ಲಿ ಬೆಳೆದು ಬಂದಿದೆ. ಆದರೆ ಈ ನಂಬಿಕೆ ಎಲ್ಲ ರೀತಿಯ ಕೆಲಸಗಳಿಗೆ ಅನ್ವಯವಾಗಲಾರದು.

By Siddu
|

ಸಂಬಳ ಹೆಚ್ಚಾಗಿದ್ದಷ್ಟೂ ಕೆಲಸದಲ್ಲಿ ಒತ್ತಡ ಜಾಸ್ತಿ ಎಂಬ ನಂಬಿಕೆಯೊಂದು ಉದ್ಯೋಗ ವಲಯದಲ್ಲಿ ಬೆಳೆದು ಬಂದಿದೆ. ಆದರೆ ಈ ನಂಬಿಕೆ ಎಲ್ಲ ರೀತಿಯ ಕೆಲಸಗಳಿಗೆ ಅನ್ವಯವಾಗಲಾರದು. ದೊಡ್ಡ ಮೊತ್ತದ ಸಂಬಳ ಹಾಗೂ ಇನ್ನಿತರ ಆಕರ್ಷಕ ಸೌಲಭ್ಯಗಳೊಂದಿಗೆ ಒತ್ತಡವಿಲ್ಲದ ಹಲವಾರು ಉದ್ಯೋಗಗಳು ಲಭ್ಯವಿವೆ. ಇವುಗಳನ್ನು ಗುರುತಿಸಿ ಅಂಥ ಕೆಲಸಗಳಿಗೆ ನಾವು ಅರ್ಹತೆ ಪಡೆಯಬೇಕಾದುದು ಮುಖ್ಯವಾಗಿದೆ.

ದುಡ್ಡು ಹಾಗೂ ಯಶಸ್ಸಿನ ಬೆನ್ನು ಹತ್ತಿರುವ ಭಾರತದಂಥ ದೇಶದಲ್ಲಿ ನೂರಕ್ಕೆ ನೂರರಷ್ಟು ಒತ್ತಡವೇ ಇಲ್ಲದ ಉದ್ಯೋಗ ಇರುವುದಕ್ಕೆ ಸಾಧ್ಯವಿಲ್ಲ. ಜೈಲಿನಲ್ಲಿದ್ದರೆ ಮಾತ್ರ ಎಲ್ಲ ಜವಾಬ್ದಾರಿಗಳಿಂದ ಪಾರಾಗಬಹುದಾಗಿದೆ. ಆದರೂ ಸಾಮಾನ್ಯ ನಂಬಿಕೆಗೆ ವ್ಯತಿರಿಕ್ತವಾಗಿ ಉತ್ತಮ ಸಂಬಳದೊಂದಿಗೆ ಅತ್ಯುತ್ತಮ ಸಾಮಾಜಿಕ ಜೀವನವನ್ನೂ ನಡೆಸಬಹುದಾದ ಹಲವಾರು ವೃತ್ತಿಗಳು ದೇಶದಲ್ಲಿ ಇವೆ.
'ಬಿಸಿನೆಸ್ ಇನ್ಸೈಡರ್ ಇಂಡಿಯಾ' ಸಂಸ್ಥೆಯು ಭಾರತದಲ್ಲಿ ಲಭ್ಯವಿರುವ ಕಡಿಮೆ ಒತ್ತಡದ ಹಾಗೂ ಉತ್ತಮ ಸಂಬಳ ನೀಡುವ 10 ಪ್ರಮುಖ ವೃತ್ತಿಗಳನ್ನು ಪಟ್ಟಿ ಮಾಡಿದೆ. ಅಂಥ ಕೆಲಸಗಳು ಯಾವುವು ಎಂಬುದನ್ನು ಇಲ್ಲಿ ತಿಳಿಸಿದ್ದೇವೆ.

ಕಡಿಮೆ ಒತ್ತಡ ಹಾಗೂ ಅಧಿಕ ಸಂಬಳ ನೀಡುವ ಟಾಪ್ 10 ಉದ್ಯೋಗಗಳು:

1. ಖಗೋಳ ಶಾಸ್ತ್ರಜ್ಞ (ವರ್ಷಕ್ಕೆ ರೂ. 9.6 ರಿಂದ 18 ಲಕ್ಷ)

1. ಖಗೋಳ ಶಾಸ್ತ್ರಜ್ಞ (ವರ್ಷಕ್ಕೆ ರೂ. 9.6 ರಿಂದ 18 ಲಕ್ಷ)

ಖಗೋಳ ವಿದ್ಯಮಾನದ ಮೇಲೆ ನಿಗಾ ವಹಿಸುವ, ಸಂಶೋಧನೆ ನಡೆಸುವ ಹಾಗೂ ಅದರ ಬಗ್ಗೆ ಮುನ್ಸೂಚನೆ ನೀಡುವ ಕೆಲಸವನ್ನು ಖಗೋಳ ಶಾಸ್ತ್ರಜ್ಞರು ಮಾಡುತ್ತಾರೆ. ದೇಶದಲ್ಲಿನ ಹವಾಮಾನ ಬದಲಾವಣೆಗಳ ಬಗ್ಗೆ ವಾಸ್ತವ ಅಂಕಿ ಅಂಶಗಳನ್ನು ಇವರು ಒದಗಿಸುತ್ತಾರೆ. ಖಗೋಳ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಮಾಡಿದ್ದರೆ ನೀವೂ ಸಹ ಖಗೋಳ ಶಾಸ್ತ್ರಜ್ಞರಾಗಿ ಕೆಲಸ ಮಾಡಬಹುದು.

2. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ (ವರ್ಷಕ್ಕೆ ರೂ. 4 ರಿಂದ 15 ಲಕ್ಷ)

2. ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ (ವರ್ಷಕ್ಕೆ ರೂ. 4 ರಿಂದ 15 ಲಕ್ಷ)

ವಿದ್ಯಾರ್ಥಿಗಳಿಗೆ ಪಾಠ ಮಾಡುವುದು, ಪಠ್ಯಕ್ರಮ ತಯಾರಿಸುವುದು ಹಾಗೂ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದು ಸೇರಿದಂತೆ ಶೈಕ್ಷಣಿಕ ವಲಯದ ಸುಧಾರಣೆಗೆ ಬೇಕಾದ ಸಂಶೋಧನೆಗಳನ್ನು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ಮಾಡುತ್ತಾರೆ. ಅವಶ್ಯಕತೆ ಬಿದ್ದಾಗ ದೀರ್ಘಾವಧಿ ರಜೆ, ಋತುಮಾನದ ರಜೆ ಹಾಗೂ ಸಾರ್ವಜನಿಕ ರಜಾದಿನಗಳೊಂದಿಗೆ ಉತ್ತಮ ಸಂಬಳ ನೀಡುವ ವೃತ್ತಿ ಇದಾಗಿದೆ. ಪ್ರಾಧ್ಯಾಪಕ ವೃತ್ತಿಯು ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿದೆ. ಯಾವಾಗಲೋ ಒಮ್ಮೆ ಕಾರ್ಯಾಗಾರಗಳನ್ನು ಅಟೆಂಡ್ ಮಾಡುವುದನ್ನು ಹೊರತುಪಡಿಸಿದರೆ ಆಗಾಗ ಸುತ್ತಾಟದ ಗೊಡವೆಯೂ ಇರುವುದಿಲ್ಲ. ಈ ವೃತ್ತಿಯಲ್ಲಿ ಸಿಗುವ ಸಂಬಳ ಅತ್ಯಧಿಕವಾಗಿರದಿದ್ದರೂ, ಯುವ ಸಮೂಹದೊಂದಿಗೆ ಬೆರೆತು ಅವರಿಗೆ ಕಲಿಸುತ್ತ ತಾವೂ ಕಲಿಯುವುದು ಈ ವೃತ್ತಿಯ ಶ್ರೇಷ್ಠತೆಯಾಗಿದೆ.

3. ಪೌಷ್ಟಿಕಾಂಶ ತಜ್ಞರು (ವರ್ಷಕ್ಕೆ ರೂ. 4.6 ರಿಂದ 15.3 ಲಕ್ಷ)
 

3. ಪೌಷ್ಟಿಕಾಂಶ ತಜ್ಞರು (ವರ್ಷಕ್ಕೆ ರೂ. 4.6 ರಿಂದ 15.3 ಲಕ್ಷ)

ಆಧುನಿಕ ಜೀವನ ಶೈಲಿಯಿಂದ ಬೊಜ್ಜು ಬೆಳೆಸಿಕೊಂಡು ಪರದಾಡುತ್ತಿರುವ ಜನರಿಗೆ ಆಹಾರ ತಜ್ಞರ ಅವಶ್ಯಕತೆ ಈ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಸಮತೋಲಿತ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡುವ ಪೌಷ್ಟಿಕಾಂಶ ತಜ್ಞರಿಗೆ ಬೇಡಿಕೆ ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ದೊಡ್ಡ ಮೊತ್ತದ ಸಂಬಳದೊಂದಿಗೆ ಆಸ್ಪತ್ರೆ, ಶಾಲಾ-ಕಾಲೇಜು ಮುಂತಾದ ಕಡೆ ಕೆಲಸ ಮಾಡಲು ಇವರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅಲ್ಲದೆ ಆಹಾರ ಪದ್ಧತಿಯಲ್ಲಿ ಪರಿಣತಿ ಸಾಧಿಸಿದವರು ಸ್ವ ಉದ್ಯೋಗವನ್ನು ಸಹ ಕೈಗೊಳ್ಳಬಹುದು.

4. ಗ್ರಂಥಪಾಲಕ (ವರ್ಷಕ್ಕೆ ರೂ. 2.5 ರಿಂದ 9.5 ಲಕ್ಷ)

4. ಗ್ರಂಥಪಾಲಕ (ವರ್ಷಕ್ಕೆ ರೂ. 2.5 ರಿಂದ 9.5 ಲಕ್ಷ)

ಬೃಹತ್ ಪುಸ್ತಕ ಭಂಡಾರದ ನಿರ್ವಹಣೆ ಮಾಡುವುದು ನಿಜವಾಗಿಯೂ ಒತ್ತಡ ರಹಿತವಾದ ಕೆಲಸಗಳಲ್ಲೊಂದಾಗಿದೆ. ಯಾವಾಗಲೂ ಪ್ರಶಾಂತವಾದ ವಾತಾವರಣದಲ್ಲಿ ಕೆಲಸ ಮಾಡುವ ದೊಡ್ಡ ಗ್ರಂಥಾಲಯಗಳ ಗ್ರಂಥಪಾಲಕರಿಗೆ ಉತ್ತಮ ಸಂಬಳವನ್ನೂ ನೀಡಲಾಗುತ್ತಿದೆ. ಪುಸ್ತಕಗಳ ಮಧ್ಯೆ ಕೆಲಸ ಮಾಡುತ್ತ ನೆಮ್ಮದಿಯ ವೃತ್ತಿಯನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ.

5. ಅಪ್ಲಿಕೇಶನ್ ಸಾಫ್ಟವೇರ್ ಡೆವಲಪರ್ (ವರ್ಷಕ್ಕೆ ರೂ. 4.2 ರಿಂದ 18 ಲಕ್ಷ)

5. ಅಪ್ಲಿಕೇಶನ್ ಸಾಫ್ಟವೇರ್ ಡೆವಲಪರ್ (ವರ್ಷಕ್ಕೆ ರೂ. 4.2 ರಿಂದ 18 ಲಕ್ಷ)

ಸಾಫ್ಟವೇರ್ ಅಪ್ಲಿಕೇಶನ್‌ಗಳನ್ನು ತಯಾರಿಸುವ ಎಂಜಿನಿಯರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ನಡೆದಿದೆ. ಬೇಡಿಕೆ ಹೆಚ್ಚಾದಷ್ಟೂ ಸಂಬಳವೂ ಹೆಚ್ಚಿಗೆ ಸಿಗುವುದು ಖಚಿತ. ಕೆಲವೊಂದು ಕಂಪನಿಗಳನ್ನು ಹೊರತು ಪಡಿಸಿದರೆ ಈ ಕೆಲಸ ಬಹುತೇಕ ಕಡಿಮೆ ಒತ್ತಡದಿಂದ ಕೂಡಿದೆ. ಉತ್ತಮ ಕೆಲಸದ ವಾತಾವರಣವಿರುವ ಕಂಪನಿಯನ್ನು ಆರಿಸಿಕೊಳ್ಳುವುದು ಮುಖ್ಯವಾಗಿದೆ.

6. ಭೂ ವಿಜ್ಞಾನಿ (ವರ್ಷಕ್ಕೆ ರೂ. 8.5 ರಿಂದ 27 ಲಕ್ಷ)

6. ಭೂ ವಿಜ್ಞಾನಿ (ವರ್ಷಕ್ಕೆ ರೂ. 8.5 ರಿಂದ 27 ಲಕ್ಷ)

ಭೂಮಿಯ ಮೇಲ್ಮೈ ಬಗ್ಗೆ ಅಧ್ಯಯನ ನಡೆಸುವ ಭೂವಿಜ್ಞಾನಿಗಳು ನಿರ್ದಿಷ್ಟ ಭೂ ವಲಯದ ಲಕ್ಷಣಗಳ ಬಗ್ಗೆ ಸಂಶೋಧನೆಗಳನ್ನು ಕೈಗೊಳ್ಳುತ್ತಾರೆ. ಭೂಮಿಯ ಗುಣಲಕ್ಷಣಗಳ ಆಧಾರದಲ್ಲಿ ಆಯಾ ನಿರ್ದಿಷ್ಟ ಪ್ರದೇಶದ ಜನರ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಇವರು ತಿಳಿಸಿ ಕೊಡುತ್ತಾರೆ. ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಈ ಕ್ಷೇತ್ರದಲ್ಲಿ ಉತ್ತಮ ಸಂಬಳದ ಉದ್ಯೋಗವನ್ನು ಪಡೆಯಲು ಸಾಧ್ಯವಿದೆ.

7. ಬಿಸಿನೆಸ್ ಅನಾಲಿಟಿಕ್ಸ್ ಎಕ್ಸಪರ್ಟ್ (ವರ್ಷಕ್ಕೆ ರೂ. 4.5 ರಿಂದ 12 ಲಕ್ಷ)

7. ಬಿಸಿನೆಸ್ ಅನಾಲಿಟಿಕ್ಸ್ ಎಕ್ಸಪರ್ಟ್ (ವರ್ಷಕ್ಕೆ ರೂ. 4.5 ರಿಂದ 12 ಲಕ್ಷ)

ಎಲೆಕ್ಟ್ರಾನಿಕ್ ಡೇಟಾ ಸಂಗ್ರಹಣೆ ಹಾಗೂ ಅದನ್ನು ಸಂಗ್ರಹಿಸಲು ಬೇಕಾಗುವ ಮೆಮೊರಿ ಸಾಧನಗಳ ದರಗಳು ಇತ್ತೀಚೆಗೆ ಕಡಿಮೆಯಾಗುತ್ತಿವೆ. ಹೀಗಾಗಿ ಬಹುತೇಕ ದೊಡ್ಡ ಕಂಪನಿಗಳು ತಮ್ಮ ವ್ಯಾಪಾರ ಅಭಿವೃದ್ಧಿಗೆ ಗ್ರಾಹಕರ ದತ್ತಾಂಶಗಳನ್ನು ಬಳಸಿಕೊಳ್ಳುವುದು ಹೆಚ್ಚಾಗುತ್ತಿದೆ. ಇದರಿಂದ ಲಭ್ಯವಿರುವ ಡೇಟಾ ಬಳಸಿ ಅದನ್ನು ಸಂಶೋಧನೆಗೊಳಪಡಿಸುವ ಬಿಸಿನೆಸ್ ಅನಾಲಿಟಿಕ್ಸ್ ಎಕ್ಸಪರ್ಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಗಣಿತ ಶಾಸ್ತ್ರದ ಉತ್ತಮ ಜ್ಞಾನ, ಆಧುನಿಕ ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸಿರುವ ಹಾಗೂ ವ್ಯವಹಾರ ಪ್ರಕ್ರಿಯೆ ಬಗ್ಗೆ ತಿಳಿದಿರುವ ತಜ್ಞರು ಅತ್ಯುತ್ತಮ ಸಂಬಳದ ಉದ್ಯೋಗವನ್ನು ಪಡೆಯುವುದು ಸುಲಭವಾಗಿದೆ.

8. ಉದ್ಯಮ ಸಲಹೆಗಾರರು (ವರ್ಷಕ್ಕೆ ರೂ. 14.2 ರಿಂದ 30 ಲಕ್ಷ)

8. ಉದ್ಯಮ ಸಲಹೆಗಾರರು (ವರ್ಷಕ್ಕೆ ರೂ. 14.2 ರಿಂದ 30 ಲಕ್ಷ)

ಯಾವುದೇ ಉದ್ಯಮ ಅಥವಾ ವ್ಯವಹಾರದ ಬೆಳವಣಿಗೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಲು ಉದ್ಯಮ ಸಲಹೆಗಾರರ ಪಾತ್ರ ಪ್ರಮುಖವಾಗಿದೆ. ವ್ಯವಹಾರದಲ್ಲಿನ ತೊಡಕುಗಳನ್ನು ನಿವಾರಿಸುವ ಪರಿಣತಿ ಹೊಂದಿರುವ ಇವರು ಯಾವುದೇ ಉದ್ಯಮ ಸಂಸ್ಥೆಯ ಉನ್ನತ ವಲಯದಲ್ಲಿ ಉದ್ಯೋಗಾವಕಾಶವನ್ನು ಪಡೆದಿರುತ್ತಾರೆ.
ಕಂಪನಿಯ ಉನ್ನತ ಮಟ್ಟದ ಆಡಳಿತವನ್ನು ನಿಭಾಯಸುವುದು ಒತ್ತಡದ ಕೆಲಸವೇ ಆಗಿದ್ದರೂ ಉತ್ತಮ ಕಂಪನಿಯಲ್ಲಿ ಕೆಲಸ ಸಿಕ್ಕರೆ ಒಳ್ಳೆಯ ವೃತ್ತಿಜೀವನ ನಡೆಸಬಹುದಾಗಿದೆ. ಈ ವಲಯದಲ್ಲಿ ಶ್ರೇಷ್ಠ ಮಟ್ಟದ ಪರಿಣಿತರಾಗಿದ್ದಲ್ಲಿ ಸ್ವ ಉದ್ಯೋಗಿಗಳಾಗಿಯೂ ಕೆಲಸ ಮಾಡಬಹುದು.

9. ಬಯೋಮೆಡಿಕಲ್ ಎಂಜಿನಿಯರ್ (ವರ್ಷಕ್ಕೆ ರೂ. 2.2 ರಿಂದ 11 ಲಕ್ಷ)

9. ಬಯೋಮೆಡಿಕಲ್ ಎಂಜಿನಿಯರ್ (ವರ್ಷಕ್ಕೆ ರೂ. 2.2 ರಿಂದ 11 ಲಕ್ಷ)

ಜೀವ ವಿಜ್ಞಾನ ಹಾಗೂ ಔಷಧ ಶಾಸ್ತ್ರಗಳ ಅಧ್ಯಯನ ನಡೆಸುವ ಬಯೋಮೆಡಿಕಲ್ ಎಂಜಿನಿಯರುಗಳು ಮಾನವ ಕುಲದ ಉತ್ತಮ ಆರೋಗ್ಯಕ್ಕಾಗಿ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಸಾಮಾನ್ಯವಾಗಿ ಒತ್ತಡ ರಹಿತವಾಗಿರುವ ಈ ವೃತ್ತಿಯು ಜೀವ ಸಂಕುಲದ ಒಳಿತಿಗಾಗಿ ಕೆಲಸ ಮಾಡುವ ಗೌರವವನ್ನು ಪಡೆದುಕೊಂಡಿದೆ.

10. ರಾಜಕೀಯ ವಿಶ್ಲೇಷಕರು (ವರ್ಷಕ್ಕೆ ರೂ. 5 ರಿಂದ 20 ಲಕ್ಷ)

10. ರಾಜಕೀಯ ವಿಶ್ಲೇಷಕರು (ವರ್ಷಕ್ಕೆ ರೂ. 5 ರಿಂದ 20 ಲಕ್ಷ)

ರಾಜಕೀಯ ವ್ಯವಸ್ಥೆ ಹಾಗೂ ಅದರಲ್ಲಿ ಘಟಿಸಬಹುದಾದ ಬದಲಾವಣೆಗಳ ಬಗ್ಗೆ ರಾಜಕೀಯ ವಿಶ್ಲೇಷಕರು ಸಂಶೋಧನೆಗಳನ್ನು ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ರಾಜಕೀಯ ಪಕ್ಷಗಳು ಇಂಥ ವಿಶ್ಲೇಷಕರ ಸೇವೆಯನ್ನು ಹೆಚ್ಚಾಗಿ ಪಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ರಾಜ್ಯಶಾಸ್ತ್ರ ಅಥವಾ ಸಾರ್ವಜನಿಕ ಆಡಳಿತ ವಿಷಯದಲ್ಲಿ ಡಾಕ್ಟರೇಟ್ ಹೊಂದಿರುವ ಪೊಲಿಟಿಕಲ್ ಪಂಡಿತರು ಸರಕಾರದ ಆಡಳಿತ ವ್ಯವಸ್ಥೆ ಹಾಗೂ ರಾಜಕೀಯ ಪಕ್ಷಗಳಲ್ಲಿ ಉನ್ನತ ಮಟ್ಟದ ಉದ್ಯೋಗವನ್ನು ಪಡೆಯಬಹುದಾಗಿದೆ.

ಕೊನೆ ಮಾತು

ಕೊನೆ ಮಾತು

ಕಳೆದ ಎರಡು ದಶಕಗಳಲ್ಲಿ ಭಾರತದ ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಮೊತ್ತದ ಸಂಬಳ ನೀಡುವ ಹಲವಾರು ಹುದ್ದೆಗಳು ಸೃಷ್ಟಿಯಾಗಿವೆ. ಆದರೆ ಇಲ್ಲಿ ಸಂಬಳ ಹೆಚ್ಚಾದಷ್ಟೂ ಕೆಲಸದ ಒತ್ತಡ ಅಧಿಕವಾಗಿ ಸಾಮಾನ್ಯ ಜೀವನ ಶೈಲಿಯೂ ಏರುಪೇರಾಗುತ್ತದೆ. ಇದನ್ನು ಅರಿತಿರುವ ಇಂದಿನ ಯುವ ಸಮೂಹ ಆದಷ್ಟೂ ಒತ್ತಡ ರಹಿತವಾಗಿ, ಉತ್ತಮ ಜೀವನ ಶೈಲಿಯ ಕೆಲಸ ಮಾಡಲು ಹಾತೊರೆಯುವಂತಾಗಿದೆ. ಇಂಥ ಸಂದರ್ಭಗಳಲ್ಲಿ ಉತ್ತಮ ಸಂಬಳದೊಂದಿಗೆ ಕಡಿಮೆ ಒತ್ತಡ ಹಾಗೂ ಗೌರವದಿಂದ ಉದ್ಯೋಗ ಮಾಡುವಂಥ 10 ಪ್ರಮುಖ ವೃತ್ತಿಗಳನ್ನು ನಿಮಗಾಗಿ ತಿಳಿಸಿದ್ದೇವೆ. ಇವುಗಳಷ್ಟೇ ಅಲ್ಲದೆ ದೇಶದಲ್ಲಿ ಲಭ್ಯವಿರುವ ಇಂಥ ಕೆಲಸಗಳ ಬಗ್ಗೆ ಮಾಹಿತಿ ಪಡೆದು ಅವುಗಳಲ್ಲಿ ನೆಮ್ಮದಿಯ ವೃತ್ತಿ ಜೀವನ ಕಂಡುಕೊಳ್ಳಬಹುದಾಗಿದೆ.

English summary

Top 10 stress free highest paying Jobs

There are several jobs that pay well and will still make sure you have a nice social life.
Story first published: Thursday, September 6, 2018, 9:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X