For Quick Alerts
ALLOW NOTIFICATIONS  
For Daily Alerts

  ಗೂಗಲ್‌ ಕಂಪನಿಯ ಉಚಿತ 8 ಕೋರ್ಸ್ ಕಲಿತು ಕೈತುಂಬಾ ಹಣ ಸಂಪಾದಿಸಿ..

  |

  ಸರ್ಚ್ ಎಂಜಿನ್ ಎಂದಾಕ್ಷಣ ನಮಗೆ ನೆನಪಿಗೆ ಬರುವುದೇ ಗೂಗಲ್. ಅಂತರ್ಜಾಲ ಜಗತ್ತಿನ ದೈತ್ಯನಾಗಿ ಗುರುತಿಸಿಕೊಂಡಿರುವ ಗೂಗಲ್ ಅಲ್ಫಾಬೆಟ್ ಸಂಸ್ಥೆಯ ಅಂಗ ಕಂಪನಿಯಾಗಿದೆ. ಗೂಗಲ್ ಎಂದರೆ ಬರಿ ಹುಡುಕಾಟ ಮಾತ್ರವಲ್ಲ. ಅದು ಇಂದು ನಮ್ಮ ನಿತ್ಯ ಪ್ರತಿಕ್ಷಣದ ಜೀವನವನ್ನು ನಿಯಂತ್ರಿಸುವ ಸಾಧನವಾಗಿಯೂ ಬೆಳೆದಿದೆ. ಇಷ್ಟು ಮಾತ್ರವಲ್ಲದೆ ಗೂಗಲ್ ಹಲವಾರು ಉಚಿತ ಆನ್ಲೈನ್ ಕೋರ್ಸ್‌ಗಳನ್ನು ಸಹ ಕಲಿಯಲು ಅವಕಾಶ ಮಾಡಿಕೊಡುತ್ತಿದೆ.

  ತಂತ್ರಜ್ಞಾನದಲ್ಲಿ ಆಸಕ್ತಿಯುಳ್ಳ ಯಾರು ಬೇಕಾದರೂ ಈ ಕೋರ್ಸ್‌ಗಳನ್ನು ಕಲಿತು ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು ಜಾಬ್ ಮಾರ್ಕೆಟ್‌ನಲ್ಲಿ ಮೌಲ್ಯವೃದ್ಧಿ ಮಾಡಿಕೊಳ್ಳಬಹುದು ಅಥವಾ ಸ್ವಂತ ಯಾವುದಾದರೂ ಸ್ಟಾರ್ಟ್ಅಪ್ ಸಹ ಆರಂಭಿಸಬಹುದು.

  ಎಲ್ಲರಿಗೂ ಸುಲಭವಾಗಿ ಕೈಗೆಟುಕುತ್ತಿರುವ ಇಂಟರನೆಟ್‌ನಿಂದಾಗಿ ಇವತ್ತು ಕಲಿಕೆ ಹಾಗೂ ಶಿಕ್ಷಣ ಎಲ್ಲರಿಗೂ ಸಿಗುವಂತಾಗಿದ್ದು ನಮ್ಮೆಲ್ಲರ ಭಾಗ್ಯವೆಂದೇ ಹೇಳಬಹುದು. ಶಿಕ್ಷಣ ಎಂಬುದು ಈಗ ಮೊದಲಿನಂತೆ ಕೈಗೆಟುಕದ ವಸ್ತುವಾಗಿ ಉಳಿದಿಲ್ಲ. ಜ್ಞಾನದ ಪರಿಧಿ ವಿಸ್ತರಿಸಿಕೊಳ್ಳಬೇಕೆನ್ನುವ ಎಲ್ಲರಿಗೂ ಇಂಟರನೆಟ್ ಉಪಯುಕ್ತ ಮಾಧ್ಯಮವಾಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ಎಷ್ಟೋ ವಿಷಯಗಳನ್ನು ಕಲಿತು ವಿಶೇಷ ಕ್ಷೇತ್ರದಲ್ಲಿ ಪರಿಣತಿ ಸಾಧಿಸಬಹುದು.

   

  ಇಂದು ಮೌಸ್‌ನ ಒಂದು ಕ್ಲಿಕ್ ಮೂಲಕ ಅದೆಷ್ಟೊ ಕೋರ್ಸ್‌ಗಳನ್ನು ಇಂಟರನೆಟ್‌ನಲ್ಲಿ ಕಲಿಯಲಾರಂಭಿಸಬಹುದು, ಅದೂ ಕೂಡ ಉಚಿತವಾಗಿ. ತಂತ್ರಜ್ಞಾನ ಕ್ಷೇತ್ರವು ಪ್ರತಿಕ್ಷಣವೂ ಅಭಿವೃದ್ಧಿ ಹೊಂದುತ್ತಿದ್ದು ಕೇವಲ ಅದನ್ನು ನೋಡುತ್ತ ಬಳಸುತ್ತ ಕುಳಿತರೆ ಸಾಲದು. ನಾವೂ ಅದನ್ನು ಕಲಿತು ಅದರ ಭಾಗವಾದಲ್ಲಿ ಅದೆಷ್ಟೊ ಮಟ್ಟಿಗೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದು.

  ಇದಕ್ಕಾಗಿಯೇ ಗೂಗಲ್ ಸೇರಿದಂತೆ ಹಲವಾರು ಇಂಟರನೆಟ್ ಕಂಪನಿಗಳು ತಮ್ಮ ಕಲಿಕಾ ಕೋರ್ಸ್‌ಗಳನ್ನು ಆನ್ಲೈನ್ ಮೂಲಕ ಉಚಿತವಾಗಿ ಒದಗಿಸುತ್ತಿವೆ. ನೀವಿರುವ ಜಾಗದಿಂದಲೇ ಆನ್ಲೈನ್ ಮೂಲಕ ರಜಿಸ್ಟರ್ ಮಾಡಿಕೊಂಡು ಈ ಕೋರ್ಸ್‌ಗಳನ್ನು ಕಲಿಯಬಹುದು ಹಾಗೂ ಕಲಿಕೆಯ ನಂತರ ಸರ್ಟಿಫಿಕೇಟ್ ಸಹ ಪಡೆದುಕೊಳ್ಳಬಹುದು. ಮನೆಯಲ್ಲಿ ಕುಳಿತು ಕೇವಲ 10 ಸಾವಿರ ಬಂಡವಾಳದಲ್ಲಿ ಈ ಬಿಸಿನೆಸ್ ಮಾಡಿ ನೋಡಿ..

  ಇಂಟರನೆಟ್ ದೈತ್ಯ ಗೂಗಲ್‌ನ 8 ಪ್ರಮುಖ ಹಾಗೂ ಉಚಿತವಾದ ಆನ್ಲೈನ್ ಕೋರ್ಸ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದ್ದು ಈ ಅಮೂಲ್ಯ ಮಾಹಿತಿಯ ಸದುಪಯೋಗ ಪಡೆದುಕೊಂಡು ನೀವೂ ಟೆಕ್ ಜೀನಿಯಸ್ ಆಗಲು ಪ್ರಯತ್ನಿಸಬಹುದು.

  ಗೂಗಲ್ ಕಂಪನಿಯ 8 ಆನ್ಲೈನ್ ಉಚಿತ ಕೋರ್ಸ್‌ಗಳ ವಿವರ ಇಲ್ಲಿ ನೀಡಲಾಗಿದ್ದು, ಉಪಯೋಗ ನಿಮ್ಮದಾಗಿಸಿ..

  1. ಗೂಗಲ್ ಪ್ರೈಮರ್ (Google Primer)

  ಗೂಗಲ್ ಪ್ರೈಮರ್ ಇದೊಂದು ಆಪ್ ಆಗಿದ್ದು ಇದರ ಮೂಲಕ ಕಡಿಮೆ ಅವಧಿಯಲ್ಲಿ ಮಾರ್ಕೆಟಿಂಗ್ ಹಾಗೂ ಬಿಸಿನೆಸ್ ಕುರಿತು ಪ್ರಾಕ್ಟಿಕಲ್ ಆಗಿ ಜ್ಞಾನ ಸಂಪಾದಿಸಬಹುದು. ಡಿಜಿಟಲ್ ಜಗತ್ತಿನ ಕೌಶಲಗಳ ಬಗ್ಗೆ ಕಲಿಯಲು ಆಸಕ್ತ ವಿದ್ಯಾರ್ಥಿಗಳು ಹಾಗೂ ನವೋದ್ಯಮಿಗಳಿಗೆ ಈ ಕೋರ್ಸ್ ತುಂಬಾ ಉಪಯುಕ್ತವಾಗಿದೆ. ಬಿಸಿನೆಸ್ ಪ್ಲಾನ್ ತಯಾರಿಸುವುದು, ವೆಬ್ಸೈಟ್ ಡಿಸೈನ್ ಟಿಪ್ಸ್, ಇಮೇಲ್ ಮಾರ್ಕೆಟಿಂಗ್, ಕಂಟೆಂಟ್ ಮಾರ್ಕೆಟಿಂಗ್, ಸ್ಟೋರಿ ಟೆಲ್ಲಿಂಗ್, ಇಂಟರನೆಟ್ ಬಳಕೆದಾರರ ಮಾಹಿತಿ ಸಂಗ್ರಹಣೆ ಹೀಗೆ ಹಲವಾರು ವಿಷಯಗಳ ಬಗ್ಗೆ ಗೂಗಲ್ ಪ್ರೈಮರ್ ಮೂಲಕ ಕಲಿಯಬಹುದಾಗಿದೆ. ಈ ಆಪ್ ಅಂಡ್ರಾಯ್ಡ್ ಹಾಗೂ ಆಪಲ್ ಡಿವೈಸ್‌ಗಳ ಮೇಲೆ ಲಭ್ಯವಿದೆ. https://www.yourprimer.com/

  2. ಡಿಜಿಟಲ್ ಗ್ಯಾರೇಜ್ (Digital Garage)

  ಯಾವುದೇ ರೀತಿಯ ವ್ಯವಹಾರದ ಡಿಜಿಟಲ್ ಸಾಮರ್ಥ್ಯದ ಬಗ್ಗೆ ಅಳೆಯಲು ಈ ಆನ್ಲೈನ್ ಪ್ಲಾಟಫಾರ್ಮ ಅನ್ನು ತಯಾರಿಸಲಾಗಿದೆ. ಇದರಲ್ಲಿ ಒಟ್ಟು 26 ವಿವಿಧ ವಿಷಯಗಳ ಬಗ್ಗೆ ಪಾಠಗಳಿದ್ದು, ಸುಲಭವಾಗಿ ತಿಳಿಯುವಂತೆ ವಿಡಿಯೋಗಳನ್ನು ಸಹ ಹಾಕಲಾಗಿದೆ.
  ಆನ್ಲೈನ್ ಜಗತ್ತಿನಲ್ಲಿ ವ್ಯವಹಾರದ ಅವಕಾಶಗಳು, ಸರ್ಚ್ ಎಂಜಿನ್ ಬಳಸುವಿಕೆ, ಜಾಹೀರಾತು ಪ್ರದರ್ಶನ, ಆನ್ಲೈನ್ ಸ್ಟೋರ್, ಇಂಟರನೆಟ್ ಮೂಲಕ ಮಾರಾಟ, ಕಂಟೆಂಟ್ ಮಾರ್ಕೆಟಿಂಗ್ ಹೀಗೆ ಹಲವಾರು ವಿಷಯಗಳು ಇದರಲ್ಲಿ ಅಡಕವಾಗಿವೆ. ಸತತವಾಗಿ 8 ತಾಸು ಅಭ್ಯಾಸ ಮಾಡಿದಲ್ಲಿ ಈ ಕೋರ್ಸ್ ಮುಗಿಸಿಬಿಡಬಹುದು. https://learndigital.withgoogle.com/digitalunlocked

  3. ಯೂಟ್ಯೂಬ್ ಕ್ರಿಯೇಟರ್ಸ್ (YouTube Creators)

  ಯೂಟ್ಯೂಬ್ ಚಾನೆಲ್ ಆರಂಭಿಸಲು ಬಯಸುವವರು ಅಥವಾ ಆನ್ಲೈನ್ ವಿಡಿಯೋ ಜಗತ್ತಿನಲ್ಲಿ ಹೊಸದೇನನ್ನಾದರೂ ಮಾಡಲು ಬಯಸುವವರಿಗೆ ಯೂಟ್ಯೂಬ್ ಕ್ರಿಯೇಟರ್ಸ್ ಅಕಾಡೆಮಿ ಪ್ಲಾಟಫಾರ್ಮ ಅತ್ಯಂತ ಉಪಯುಕ್ತವಾಗಿದೆ.

  ಯೂಟ್ಯೂಬ್ ಮೂಲಕ ಹಣ ಸಂಪಾದನೆ, ಆಡಿಯೊ ವಿಶ್ಯುವಲ್ ತಯಾರಿಕೆ, ವಿಡಿಯೊ ಗೇಮ್ಸ್ ಚಾನೆಲ್, ಯೂಟ್ಯೂಬ್ ಅನಾಲಿಟಿಕ್ಸ್, ಕಾಪಿರೈಟ್ಸ್, ಲೈವ್ ಬ್ರಾಡಕಾಸ್ಟ್ ಹೀಗೆ ಹಲವಾರು ವಿಷಯಗಳ ಬಗ್ಗೆ ಇಲ್ಲಿ ಕಲಿಯಬಹುದಾಗಿದೆ.

  4. ಗೂಗಲ್ ಮೈ ಬಿಸಿನೆಸ್ (Google My Business)

  ಆನ್ಲೈನ್ ಹಾಗೂ ವಾಸ್ತವ ಜಗತ್ತಿನ ಬಿಸಿನೆಸ್ ಕಂಪನಿಗಳು ಆನ್ಲೈನ್ ಸರ್ಚ್ ಎಂಜಿನ್‌ನಲ್ಲಿ ಮೇಲೆ ಕಾಣುವಂತೆ ಮಾಡಲು ಗೂಗಲ್ ಮೈ ಬಿಸಿನೆಸ್ ಸಹಕಾರಿಯಾಗಿದೆ. ತಮ್ಮ ವ್ಯವಹಾರದ ಹೊಸ ಸುದ್ದಿ, ಫೋಟೊ, ಪ್ರಮೋಶನ್ಸ್, ಲೋಕೆಶನ್ ಮುಂತಾದ ವಿಷಯಗಳನ್ನು ನಿರಂತರವಾಗಿ ಅಪ್ಡೇಟ್ ಮಾಡುವುದು ಹೇಗೆ ಎಂಬುದನ್ನು ಇದು ತಿಳಿಸುತ್ತದೆ. ಉದ್ಯಮಿಗಳು ಇಂಟರನೆಟ್‌ನಲ್ಲಿ ತಮ್ಮ ಉತ್ಪನ್ನಗಳನ್ನು ಸೂಕ್ತವಾಗಿ ಮಾರಾಟ ಮಾಡುವುದು ಹೇಗೆ ಮತ್ತು ಗ್ರಾಹಕರನ್ನು ಟಾರ್ಗೆಟ್ ಮಾಡುವುದು ಹೇಗೆಂಬುದನ್ನು ಗೂಗಲ್ ಮೈ ಬಿಸಿನೆಸ್ ಕಲಿಸಿಕೊಡುತ್ತದೆ. https://www.google.com/intl/en_in/business/

  5. ಮಶೀನ್ ಲರ್ನಿಂಗ್ (Machine Learning)

  ಮಶೀನ್ ಲರ್ನಿಂಗ್ ಕೋರ್ಸ್ ಒಂದು ದೀರ್ಘಾವಧಿಯ ಕೋರ್ಸ್ ಆಗಿದೆ. ಇದನ್ನು ಕಲಿಯಲು ಮೂಲ ಬೀಜಗಣಿತ, ಪ್ರೊಗ್ರಾಮಿಂಗ್ ಹಾಗೂ ಪೈಥಾನ್ ಕೋಡಿಂಗ್ ಬಗ್ಗೆ ಮೊದಲೇ ಜ್ಞಾನ ಇರಬೇಕಾಗುತ್ತದೆ. ಇದರಲ್ಲಿ 25 ಪಾಠಗಳು ಹಾಗೂ 40 ಕ್ಕೂ ಹೆಚ್ಚು ಎಕ್ಸರಸೈಜ್‌ಗಳಿವೆ. ಆನ್ಲೈನ್ ಜಗತ್ತಿನ ವಾಸ್ತವ ಸಾಧನೆಗಳು ಹಾಗೂ ಸಂವಹನಾತ್ಮಕ ಅಲ್ಗೊರಿದಂ ಗಳನ್ನು ಇದು ಒಳಗೊಂಡಿದೆ. ಇದು 15 ಗಂಟೆಗಳ ಕೋರ್ಸ್ ಆಗಿದೆ. https://developers.google.com/machine-learning/crash-course/

  6. ಗೂಗಲ್ ಅನಾಲಿಟಿಕ್ಸ್ ಅಕಾಡೆಮಿ (Google Analytics Academy)

  ಗೂಗಲ್ ಸರ್ಚ್ ಎಂಜಿನ್ ಅಳೆಯುವ ಸಾಧನ ಹಾಗೂ ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಸಮರ್ಥವಾಗಿ ಬಳಸುವಿಕೆಯ ಬಗ್ಗೆ ಈ ಕೋರ್ಸ್ ಮಾಹಿತಿ ನೀಡುತ್ತದೆ. ಇದರಲ್ಲಿ ಆರಂಭಿಕ ಕಲಿಕೆದಾರರಿಗೆ, ಅಡ್ವಾನ್ಸಡ್ ಕಲಿಕೆದಾರರಿಗೆ ಹಾಗೂ ಗೂಗಲ್ ಅನಾಲಿಟಿಕ್ಸ್-360 ಬೇಸಿಕ್ ತಿಳುವಳಿಕೆ ಹೀಗೆ ಮೂರು ರೀತಿಯ ವಿಭಾಗಗಳಿವೆ. https://analytics.google.com/analytics/academy/

  7. ಗೂಗಲ್ ಆಡ್ಸ್ ಬೆಸ್ಟ್ ಪ್ರಾಕ್ಟೀಸಸ್ (Google Ads Best Practices)

  ಆಡ್ ವರ್ಡ್‌ಗಳನ್ನು ಸಮರ್ಥವಾಗಿ ಬಳಸಿಕೊಂಡು ಹೇಗೆ ಲಾಭ ಮಾಡಬಹುದು ಎಂಬುದನ್ನು ಈ ಕೋರ್ಸ್ ಕಲಿಸುತ್ತದೆ. ನಿಮ್ಮ ವೆಬೈಟ್‌ಗೆ ಹೆಚ್ಚು ಆನ್ಲೈನ್ ಟ್ರಾಫಿಕ್ ಬರುವಂತೆ ಮಾಡುವುದು ಹಾಗೂ ಸೂಕ್ತವಾದ ಕೀ ವರ್ಡಗಳ ಮೂಲಕ ಸರ್ಚ್ ಎಂಜಿನ್‌ಗಳಲ್ಲಿ ನಿಮ್ಮ ವೆಬ್ಸೈಟ್ ಮೇಲೆ ಕಾಣುವಂತೆ ಮಾಡುವುದು ಹೀಗೆ ಹಲವಾರು ವಿಷಯಗಳು ಇದರಲ್ಲಿ ಅಡಕವಾಗಿವೆ. https://ads.google.com/intl/en_in/home/

  8. ಗೂಗಲ್ ಕ್ಲೌಡ್ ಪ್ಲಾಟಫಾರ್ಮ ಬಿಗ್ ಡೇಟಾ ಮತ್ತು ಮಶೀನ್ ಲರ್ನಿಂಗ್ ಫಂಡಾಮೆಂಟಲ್ಸ್

  ಈ ಕೋರ್ಸ್ ಮೈಕ್ರೊಡೇಟಾ ಫಂಕ್ಷನ್ಸ್ ಮತ್ತು ಗೂಗಲ್ ಕ್ಲೌಡ್ ಪ್ಲಾಟಫಾರ್ಮನ ಅಟೊಮ್ಯಾಟಿಕ್ ಲರ್ನಿಂಗ್‌ಗಳ ಬಗ್ಗೆ ತಿಳಿಸುತ್ತದೆ. ಈ ಕೋರ್ಸ್‌ಗೆ ಶುಲ್ಕವನ್ನು ನಿಗದಿಪಡಿಸಲಾಗಿದ್ದರೂ ಕೇವಲ ಹಾಜರಾತಿ ವಿದ್ಯಾರ್ಥಿಯಾಗಿ ಈ ಕೋರ್ಸ್ ಅನ್ನು ಉಚಿತವಾಗಿ ಕಲಿಯಬಹುದು. ಡೇಟಾ ಮಾಡೆಲಿಂಗ್, ಮಶೀನ್ ಲರ್ನಿಂಗ್ ಅಥವಾ ಪೈಥಾನ್ ಪ್ರೊಗ್ರಾಮಿಂಗ್‌ಗಳಲ್ಲಿ ಒಂದು ವರ್ಷದ ಕೆಲಸದ ಅನುಭವವಿರುವವರು ಮಾತ್ರ ಈ ಕೋರ್ಸ್ ಉಚಿತವಾಗಿ ಕಲಿಯಲು ಅವಕಾಶವಿದೆ.

  Read more about: google money finance news business
  English summary

  8 Free Google Courses to Learn and Earn Big

  Google, the king of search and part of Alphabet, Inc. offers range of free online courses for everyone.
  Story first published: Wednesday, February 20, 2019, 10:29 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more