For Quick Alerts
ALLOW NOTIFICATIONS  
For Daily Alerts

ಬ್ಯಾಂಕುಗಳು ಈ ಸೇವೆಗೆ ವಿಧಿಸುವ ಶುಲ್ಕ ಎಷ್ಟು ಗೊತ್ತಾ?

ಮೊಬೈಲ್ ಬ್ಯಾಂಕಿಂಗ್, ಮೊಬೈಲ್ ಆಪ್, ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಶೀಘ್ರ ಪಾವತಿ ಸೇವೆ (IMPS) ಮೂಲಕ ಯಾರಿಗೆ ಬೇಕಾದರೂ, ಯಾವ ಬ್ಯಾಂಕಿನ ಖಾತೆಗಾದರೂ ರೂ. 2 ಲಕ್ಷದವರೆಗೂ ಹಣ ವರ್ಗಾವಣೆ ಮಾಡಬಹುದು.

|

ಡಿಜಿಟಲ್ ಯುಗದಲ್ಲಿರುವ ನಮಗೆ ಎಲ್ಲವೂ ತತ್ ಕ್ಷಣದಲ್ಲಿ ಆಗಬೇಕು! ಮೊಬೈಲ್/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಒಬ್ಬರ ಖಾತೆಯಿಂದ ಇನ್ನೊಬ್ಬರ ಖಾತೆಗೆ ಹಣ ವರ್ಗಾಯಿಸುವುದು ಚಿಟಿಕೆ ಹೊಡೆದಷ್ಟೇ ಸುಲಭ.
ಯಾವಾಗ ಬೇಕಾದರೂ, ಯಾವ ಸಮಯದಲ್ಲಾದರೂ, ರಜೆ ಭಯವಿಲ್ಲದೆ, ಯಾವುದೇ ನಿಯಮಗಳ ಗೋಜಿಲ್ಲದೆ ಇದ್ದಲ್ಲಿಂದಲೇ ಬ್ಯಾಂಕೊಂಗ್ ವ್ಯವಹಾರ ಕೈಗೊಳ್ಳಬಹುದು.

ಮೊಬೈಲ್ ಬ್ಯಾಂಕಿಂಗ್, ಮೊಬೈಲ್ ಆಪ್, ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಶೀಘ್ರ ಪಾವತಿ ಸೇವೆ (IMPS) ಮೂಲಕ ಯಾರಿಗೆ ಬೇಕಾದರೂ, ಯಾವ ಬ್ಯಾಂಕಿನ ಖಾತೆಗಾದರೂ ರೂ. 2 ಲಕ್ಷದವರೆಗೂ ಹಣ ವರ್ಗಾವಣೆ ಮಾಡಬಹುದು.

ಆದರೆ ಐಎಂಪಿಎಸ್ ಸೇವೆಗೆ ಎಸ್ಬಿಐ, ಹೆಚ್.ಡಿ.ಎಫ್.ಸಿ, ಐಸಿಐಸಿಐ, ಎಕ್ಸಿಸ್ ಬ್ಯಾಂಕುಗಳು ವಿಭಿನ್ನ ಶುಲ್ಕಗಳನ್ನು ವಿಧಿಸುತ್ತವೆ. ಅವು ವಿಧಿಸುವ ಶುಲ್ಕಗಳನ್ನು ಈ ಕೆಳಗೆ ನೀಡಲಾಗಿದೆ.

ಎಸ್ಬಿಐ ಐಎಂಪಿಎಸ್ ಸೇವಾ ಶುಲ್ಕ

ಎಸ್ಬಿಐ ಐಎಂಪಿಎಸ್ ಸೇವಾ ಶುಲ್ಕ

ರೂ. 1,000 ವರೆಗೆ - ಯಾವುದೇ ಶುಲ್ಕವಿಲ್ಲ
ರೂ. 1,001-10,000 ವರೆಗೆ - ರೂ. 1 + ಜಿಎಸ್ಟಿ
ರೂ. 10,001-1,00,000 ವರೆಗೆ - ರೂ. 2 + ಜಿಎಸ್ಟಿ
ರೂ. 1,00,001-2,00,000 ವರೆಗೆ - ರೂ. 3 + ಜಿಎಸ್ಟಿ
(ಎಸ್ಬಿಐನ onlinesbi.com ವೆಬ್ಸೈಟ್ ನಲ್ಲಿ ಮಾಹಿತಿ ನೀಡಿರುವಂತೆ)

ಹೆಚ್.ಡಿ.ಎಫ್.ಸಿ. ಐಎಂಪಿಎಸ್ ಸೇವಾ ಶುಲ್ಕ

ಹೆಚ್.ಡಿ.ಎಫ್.ಸಿ. ಐಎಂಪಿಎಸ್ ಸೇವಾ ಶುಲ್ಕ

ರೂ. 1 - 1,00,000 ವರೆಗೆ - ರೂ. 5 + ಜಿಎಸ್ಟಿ
ರೂ. 1 ಲಕ್ಷದಿಂದ 2 ಲಕ್ಷದವರೆಗೆ - ರೂ. 15 + ಜಿಎಸ್ಟಿ
(ಹೆಚ್.ಡಿ.ಎಫ್.ಸಿ. hdfcbank.com ವೆಬ್ಸೈಟ್ ನಲ್ಲಿ ಮಾಹಿತಿ ನೀಡಿರುವಂತೆ)

ಐಸಿಐಸಿಐ ಬ್ಯಾಂಕಿನಲ್ಲಿ ವಿಧಿಸುವ ಸೇವಾಶುಲ್ಕ

ಐಸಿಐಸಿಐ ಬ್ಯಾಂಕಿನಲ್ಲಿ ವಿಧಿಸುವ ಸೇವಾಶುಲ್ಕ

ರೂ. 10,000 ವರೆಗೆ - ರೂ. 5+ಜಿಎಸ್ಟಿ
ರೂ. 10,000-1,00,000ವರೆಗೆ - ರೂ. 5 + ಜಿಎಸ್ಟಿ
ರೂ. 1 ಲಕ್ಷದಿಂದ 2 ಲಕ್ಷದವರೆಗೆ - ರೂ. 15 + ಜಿಎಸ್ಟಿ
( ICICI ಬ್ಯಾಂಕ್ website- icicibank.com ನಲ್ಲಿ ನೀಡಿರುವಂತೆ)

ಎಕ್ಸಿಸ್ ಬ್ಯಾಂಕ್ ನಲ್ಲಿ ಐಎಂಪಿಎಸ್ ಸೇವಾ ಶುಲ್ಕ

ಎಕ್ಸಿಸ್ ಬ್ಯಾಂಕ್ ನಲ್ಲಿ ಐಎಂಪಿಎಸ್ ಸೇವಾ ಶುಲ್ಕ

ರೂ. 1,000 ವರೆಗೆ - ರೂ. 2.50 + ಜಿಎಸ್ಟಿ
ರೂ. 1,000-1,00,000 ವರೆಗೆ - ರೂ. 5+ ಜಿಎಸ್ಟಿ
ರೂ. 1 ಲಕ್ಷದಿಂದ 2 ಲಕ್ಷದವರೆಗೆ - ರೂ. 15 + ಜಿಎಸ್ಟಿ
(Axis Bank'website- axisbank.com ನಲ್ಲಿ ಮಾಹಿತಿ ನೀಡಿರುವಂತೆ)

English summary

Immediate Payment Service (IMPS) Charges Levied By Majour Banks

Immediate Payment Service (IMPS) is an instant payments service that enables round-the-clock money transfer.
Story first published: Tuesday, February 19, 2019, 11:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X