ಅಲ್ಪಾವಧಿ, ಮಧ್ಯಮಾವಧಿ ಹಾಗು ದೀರ್ಘಾವಧಿ ಹೀಗೆ ವಿಭಿನ್ನ ಆಯಾಮಗಳಲ್ಲಿ ಹೂಡಿಕೆ ಮಾಡಿ ಹೆಚ್ಚು ರಿಟರ್ನ್ ಮಡೆಯಲು ತುಂಬಾ ಜನ ಯೋಜಿಸುತ್ತಾರೆ.
ಅಲ್ಪಾವಧಿ, ಮಧ್ಯಮಾವಧಿ ಹಾಗು ದೀರ್ಘಾವಧಿ ಹೀಗೆ ವಿಭಿನ್ನ ಆಯಾಮಗಳಲ್ಲಿ ಹೂಡಿಕೆ ಮಾಡಿ ಹೆಚ್ಚು ರಿಟರ್ನ್ ಮಡೆಯಲು ತುಂಬಾ ಜನ ಯೋಜಿಸುತ್ತಾರೆ. ಇನ್ನೂ ಕೆಲವರು ಒಂದು ಬಾರಿ ಬೃಹತ್ ಮೊತ್ತವನ್ನು ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿಗೆ ಹೂಡಿಕೆ ಮಾಡಿ ಕೋಟ್ಯಾಧಿಪತಿಯಾಗಲು ಬಯಸುತ್ತಾರೆ.
ಈ ಕೆಳಗಿನ ಉದಾಹರಣೆಯ ಮೂಲಕ ನೋಡೋಣ ಬನ್ನಿ..
ನನಗೆ 39 ವರ್ಷಗಳು ಮತ್ತು ಐದು ವರ್ಷ ಅಥವಾ ಕಡಿಮೆ ಅವಧಿಯಲ್ಲಿ ರೂ. 1 ಕೋಟಿ ಕಾರ್ಪಸ್ ಸೃಷ್ಟಿಸಲು ಇಚ್ಛಿಸಿದ್ದು, ಅದಕ್ಕಾಗಿ ರೂ. 20 ಲಕ್ಷ ಹೂಡಿಕೆ ಮಾಡಲು ಬಯಸಿದ್ದೇನೆ. ಸಲಹೆ ನೀಡಿ..
ಮೊದಲ ಹಂತ
ಸೂಕ್ತ ಮಾರ್ಗದರ್ಶನಕ್ಕಾಗಿ ನಿಮ್ಮ ಟ್ಯಾಕ್ಸ್ ಸ್ಲಾಬ್, ಅಪಾಯ ಎದುರಿಸುವ ಮನಸ್ಥಿತಿ, ಹೂಡಿಕೆ ಮಟ್ಟ, ಭವಿಷ್ಯದ ಹೂಡಿಕೆಗಳಂತಹ ಮಾಹಿತಿ ಅತ್ಯಗತ್ಯವಾಗಿ ಇರಬೇಕಾಗುತ್ತದೆ. ಲಭ್ಯವಿರುವ ಮಾಹಿತಿ ಪ್ರಕಾರ, ನಿಮ್ಮ ಮೊತ್ತ ಹಂಚಿಕೆಯನ್ನು (asset allocation) ನಿರ್ಧರಿಸುವುದು ಮೊದಲ ಹಂತವಾಗಿದೆ.
ಐದು ವರ್ಷಗಳ ಅಥವಾ ಕಡಿಮೆ ಅವಧಿಯ ಹೂಡಿಕೆ ಮೇಲೆ ಒಂದು ಕೋಟಿ ಕಾರ್ಪಸ್ ಸೃಷ್ಠಿಸುವುದು ಸವಾಲಿನ ಕೆಲಸವಾಗಿದೆ ಎಂದು ಪ್ರಬಲೀನ್ ಬಾಜ್ಪಾಯಿ(ಸ್ಥಾಪಕ, ಮ್ಯಾನೆಜಿಂಗ್ ಪಾರ್ಟ್ನರ್, ಫಿನ್ಫಿಕ್ಸ್ ರಿಸರ್ಚ್ & ಅನಾಲಿಟಿಕ್ಸ್)ಹೇಳಿದ್ದು, ಈ ಮುಂದಿನಂತೆ ವಿವರಿಸಿದ್ದಾರೆ. ಹೂಡಿಕೆ ಪವಾಡ! ತಿಂಗಳಿಗೆ ಕೇವಲ 1000 ತೊಡಗಿಸಿ ರೂ. 1.5 ಕೋಟಿ ಪಡೆದುಕೊಳ್ಳಿ..
1 ಕೋಟಿ ಕಾರ್ಪಸ್ ಹೇಗೆ?
ಐದು ವರ್ಷಗಳ ಅಥವಾ ಕಡಿಮೆ ಅವಧಿಯ ಹೂಡಿಕೆ ಮೇಲೆ ಸಿಗಬಹುದಾದ ರಿಟರ್ನ್ ಶೇ. 8-9ಕ್ಕಿಂತ ಹೆಚ್ಚು ಮೀರಲು ಸಾಧ್ಯವಿರುವುದಿಲ್ಲ. ನೀವು ರೂ. 1 ಕೋಟಿ ಕಾರ್ಪಸ್ ಸೃಷ್ಟಿಸಲು ಇಪ್ಪತ್ತೈದು ಲಕ್ಷ ಸಾಕಾಗುವುದಿಲ್ಲ. ಬದಲಾಗಿ ಸುಮಾರು ರೂ. 65 ಲಕ್ಷ ಹೂಡಿಕೆ ಮಾಡಬೇಕಾಗುತ್ತದೆ. ನಿಮಗ ಸಿಗಬಹುದಾದ ರಿಟರ್ನ್ ಶೇ. 9 ಎಂದುಕೊಂಡರೆ, ನಿಮ್ಮ ಗುರಿ ತಲುಪಲು ನೀವು ಹೂಡಿಕೆ ಮಾಡಬೇಕಾದ ಮೊತ್ತವು ಸಮಯಕ್ಕನುಗುಣವಾಗಿ ಹೆಚ್ಚುತ್ತಾ ಹೋಗುತ್ತದೆ. 5-10 ವರ್ಷಗಳ ಅವಧಿಗೆ 5 ಸಾವಿರ ಹೂಡಿಕೆ ಮಾಡಿ ಕೋಟಿ ಗಳಿಸಿ..
1 ಕೋಟಿ ಗುರಿ ತಲುಪಲು ಯೋಜನೆ ಹೇಗಿರಬೇಕು?
ನಿಮ್ಮ ಗುರಿಯನ್ನು ತಲುಪಲು ನೀವು ಹೂಡಿಕೆ ಮಾಡಬೇಕಾದ ಮೊತ್ತವು ಸಮಯದೊಂದಿಗೆ ಹೆಚ್ಚಾಗುತ್ತದೆ. ರೂ. 20 ಲಕ್ಷದ ಮೊದಲ ಭಾಗವನ್ನು 70:30 ಅನುಪಾತದಲ್ಲಿ ಇಕ್ವಿಟಿ ಮತ್ತು ಡೆಬ್ಟ್ ಹೂಡಿಕೆಗಳ ನಡುವೆ ವಿಭಜಿಸಬಹುದು. ಇಕ್ವಿಟಿಯಲ್ಲಿ, ನೀವು 1-2 ಲಾರ್ಜ್ ಕ್ಯಾಪ್ ಫಂಡ್ ಗಳೊಂದಿಗೆ ಹೂಡಿಕೆ ಮಾಡಬೇಕು. ಡೆಬ್ಟ್ ಗಾಗಿ, ನೀವು ಸಂಚಯ ಫಂಡ್ ನಲ್ಲಿ (accrual fund) ಹೂಡಿಕೆ ಮಾಡಬಹುದು. ನೀವು ಹೆಚ್ಚು ರಿಸ್ಕ್ ತೆಗೆದುಕೊಂಡರೆ, ಇಕ್ವಿಟಿ ಮಾನ್ಯತೆ ಹೆಚ್ಚಿಸಬಹುದು. ಸಂಚಯ ಫಂಡ್ (accrual fund) ಹೂಡಿಕೆ ಕನಿಷ್ಠ ಮೂರು ವರ್ಷಗಳಾಗಿದ್ದರೆ, ಕಾರ್ಪೋರೇಟ್ ಬಾಂಡ್ ಅಥವಾ ಕ್ರೆಡಿಟ್ ರಿಸ್ಕ್ ಫಂಡ್ ಗಳನ್ನು ಆಯ್ಕೆ ಮಾಡಬಹುದು. ನಿಮ್ಮ ಗುರಿ ತಲುಪಲುಹೂಡಿಕೆ ವಿಧಾನಗಳ ಆಯ್ಕೆಯು ವೈವಿಧ್ಯತೆಯಿಂದ ಕೂಡಿರಬೇಕು. ಪ್ರತಿದಿನ 66 ಹೂಡಿಕೆ ಮಾಡಿ 1.11 ಕೋಟಿ ಗಳಿಸಿ, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..


Click it and Unblock the Notifications