For Quick Alerts
ALLOW NOTIFICATIONS  
For Daily Alerts

ಪ್ರತಿದಿನ 66 ಹೂಡಿಕೆ ಮಾಡಿ 1.11 ಕೋಟಿ ಗಳಿಸಿ, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..

ಹೂಡಿಕೆ ಮಾಡಿ ಉತ್ತಮ ರಿಟರ್ನ್ ಪಡೆಯುವುದು ಹೊಸ ಪ್ರವೃತ್ತಿಯಾಗಿದೆ. ನಮ್ಮಲ್ಲಿ ತುಂಬಾ ಜನರು ತಮ್ಮ ಬಳಿ ಇರುವ ಹಣವನ್ನು ನಿಯಮಿತವಾಗಿ ಹೂಡಿಕೆ ಮಾಡಿ ಆ ಮೂಲಕ ಲಕ್ಷ, ಕೋಟಿ ಗಳಿಸಬೇಕು ಎಂಬ ಕನಸು ಹೊಂದಿರುತ್ತಾರೆ.

|

ಹೂಡಿಕೆ ಮಾಡಿ ಉತ್ತಮ ರಿಟರ್ನ್ ಪಡೆಯುವುದು ಹೊಸ ಪ್ರವೃತ್ತಿಯಾಗಿದೆ. ನಮ್ಮಲ್ಲಿ ತುಂಬಾ ಜನರು ತಮ್ಮ ಬಳಿ ಇರುವ ಹಣವನ್ನು ನಿಯಮಿತವಾಗಿ ಹೂಡಿಕೆ ಮಾಡಿ ಆ ಮೂಲಕ ಲಕ್ಷ, ಕೋಟಿ ಗಳಿಸಬೇಕು ಎಂಬ ಕನಸು ಹೊಂದಿರುತ್ತಾರೆ. ಇಕ್ವಿಟಿ ಲಿಂಕ್ಡ್ ಇನವೆಸ್ಟ್ಮೆಂಟ್ ಇಷ್ಟಪಡುವ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ (Systematic Investment Plan) ಹೆಚ್ಚಿನ ಆದ್ಯತೆ ನೀಡುತ್ತಾರೆ. ಹೂಡಿಕೆ ತಜ್ಞರ ಪ್ರಕಾರ, ಒಂದು ಮ್ಯೂಚುವಲ್ ಫಂಡ್ (SIP) ನಲ್ಲಿ ದೀರ್ಘಾವಧಿಯವರೆಗೆ ಅಂದರೆ 10 ವರ್ಷಕ್ಕಿಂತಲೂ ಹೆಚ್ಚಿನ ಅವಧಿಗೆ ಹೂಡಿಕೆ ಮಾಡಿದರೆ ಉತ್ತಮ ಆದಾಯವನ್ನು ನೀಡುತ್ತದೆ.

ಶೇ. 14-16 ರವರೆಗೆ ಆದಾಯ

ಶೇ. 14-16 ರವರೆಗೆ ಆದಾಯ

10-15 ವರ್ಷಗಳ ಕಾಲ ನಿರಂತರವಾಗಿ ಮ್ಯೂಚುವಲ್ ಫಂಡ್ ಸಿಪ್ ಮೇಲೆ ಹೂಡಿಕೆ ಮಾಡಿದರೆ ಶೇ. 12 ರಿಂದ 14 ರವರೆಗೆ ರಿಟರ್ನ್ ಪಡೆಯಬಹುದು. ಕಳೆದ ನಾಲ್ಕೈದು ವರ್ಷಗಳಲ್ಲಿನ ಮಾರುಕಟ್ಟೆಯ ಕಾರ್ಯಕ್ಷಮತೆಗೆ ಅನುಗುಣವಾಗಿ ಹೇಳುವುದಾದರೆ 30 ವರ್ಷಗಳಿಗಿಂತ ಹೆಚ್ಚಿನ ಹೂಡಿಕೆ ಮೇಲೆ ಶೇ. 14 ರಿಂದ 16 ರವರೆಗೆ ಆದಾಯ ಗಳಿಸಬಹುದು. ಇದು ಶೇ. 17ರವರೆಗೂ ಹೋಗಬಹುದು.

ಹೂಡಿಕೆ ತಜ್ಞರ ಸಲಹೆ

ಹೂಡಿಕೆ ತಜ್ಞರ ಸಲಹೆ

ಮ್ಯೂಚುವಲ್ ಫಂಡ್ ಹೂಡಿಕೆಯನ್ನು ದೀರ್ಘಕಾಲದವರೆಗೆ ಅಂದರೆ 10 ವರ್ಷಗಳಿಗಿಂತ ಹೆಚ್ಚಿಗೆ ಮಾಡಿದರೆ ಶೇ. 12-14ರಷ್ಟು ಆದಾಯವನ್ನು ನಿರೀಕ್ಷಿಸಬಹುದು. ಒಬ್ಬ ಹೂಡಿಕೆದಾರರ ತನ್ನ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಹೂಡಿಕೆ ಪ್ರಾರಂಭಿಸಿದರೆ, ಅವರು 30 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಗಿಂತಲೂ ಕಾಲ ಹೂಡಿಕೆ ಮುಂದುವರಿಸಬೇಕು ಎಂದು ಹೂಡಿಕೆ ತಜ್ಞ ಜಿತೇಂದ್ರ ಸೊಲಂಕಿ ಹೇಳುತ್ತಾರೆ. ತಿಂಗಳಿಗೆ ಕೇವಲ 1000 ತೊಡಗಿಸಿ ರೂ. 1.5 ಕೋಟಿ ಪಡೆದುಕೊಳ್ಳಿ..

ಸಿಪ್ ಬೆಸ್ಟ್

ಸಿಪ್ ಬೆಸ್ಟ್

ಮ್ಯೂಚುವಲ್ ಫಂಡ್ ಸಿಪ್ ಹೂಡಿಕೆ ಯಾವಾಗಲೂ ಉತ್ತಮ ಆಯ್ಕೆಯಾಗಿದ್ದು, 30 ವರ್ಷಗಳವರೆಗಿನ SIP ಹೂಡಿಕೆ ಮೇಲೆ ಶೇ. 14-16 ರವರೆಗೆ ಆದಾಯ ಗಳಿಸಬಹುದು. ಅದೇ ಮಾರುಕಟ್ಟೆ ಉತ್ತಮ ಲಯದಲ್ಲಿದ್ದರೆ ಇದರ ಶೇ. 17ಕ್ಕಿಂತ ಹೆಚ್ಚು ನಿರೀಕ್ಷಿಸಬಹುದು. ಕಳೆದ ಕೆಲ ವರ್ಷಗಳ ಹೂಡಿಕೆಯಲ್ಲಿ ಮಾರುಕಟ್ಟೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. 30 ವರ್ಷಗಳವರೆಗಿನ ಮ್ಯುಚುವಲ್ ಫಂಡ್ SIP ಹೂಡಿಕೆಯಿಂದ ಎಷ್ಟು ಆದಾಯ ಹಿಂತಿರುಗಬಹುದು ಎಂಬ ಪ್ರಶ್ನೆಗೆ ವೆಲ್ತ್ ಮ್ಯಾನೇಜ್ಮೆಂಟ್ ಅಟ್ ಟ್ರಾನ್ಸೆಂಟ್ ಕನ್ಸಲ್ಟೆಂಟ್ಸ್ ನಿರ್ದೇಶಕ ಕಾರ್ತಿಕ್ ಜಾವೆರಿ ಹೀಗೆ ಪ್ರತಿಕ್ರಿಯಿಸಿದರು.

ಪ್ರತಿದಿನ 66 ಹೂಡಿಕೆ ಮಾಡಿದರೆ..?

ಪ್ರತಿದಿನ 66 ಹೂಡಿಕೆ ಮಾಡಿದರೆ..?

ಈ ಮೇಲಿನಂತೆ ಇಬ್ಬರೂ ಹೂಡಿಕೆ ತಜ್ಞರ ಅಭಿಪ್ರಾಯಗಳನ್ನು ನೋಡಿದರೆ, ಹೂಡಿಕೆದಾರರು ತಿಂಗಳಿಗೆ 2000 ಅಂದರೆ ಪ್ರತಿದಿನದ ಲೆಕ್ಕದಲ್ಲಿ ರೂ. 66 ಹೂಡಿಕೆ ಮಾಡುತ್ತಾ ಹೋದರೆ 30 ವರ್ಷಗಳ ಅವಧಿಗೆ ನಿಮ್ಮ ಹೂಡಿಕೆ ಮೊತ್ತ 7.2 ಲಕ್ಷ ಆಗುತ್ತದೆ. ಆದರೆ ಇಪ್ಪತ್ತು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಶೇ. 12-14ರ ಬಡ್ಡಿದರದಂತೆ ರಿಟರ್ನ್ ಸಿಗುತ್ತದೆ.

ಹೂಡಿಕೆದಾರ ಕೋಟ್ಯಾಧಿಪತಿ!

ಹೂಡಿಕೆದಾರ ಕೋಟ್ಯಾಧಿಪತಿ!

ಎಸ್ಬಿಐ ಮ್ಯೂಚುವಲ್ ಫಂಡ್ ಸಿಪ್ ಕ್ಯಾಲ್ಕುಲೇಟರ್ ಪ್ರಕಾರ ಶೆ. 14ರ ಬಡ್ಡಿದರದಂತೆ ಹೂಡಿಕೆದಾರ ರೂ. 1,11,14,111.26 (1.11 ಕೋಟಿ)ಪಡೆಯುತ್ತಾನೆ. ಅಂದರೆ ಹೂಡಿಕೆದಾರರು ಮ್ಯೂಚುವಲ್ ಫಂಡ್ ಸಿಪ್ ನಲ್ಲಿ ಪ್ರತಿತಿಂಗಳು 2000 ಹೂಡಿಕೆ ಮಾಡುತ್ತಾ ಹೋದರೆ ಮೂವತ್ತು ವರ್ಷಗಳ ಅವಧಿಗೆ ಕೋಟ್ಯಾಧಿಪತಿಯಾಗುತ್ತಾನೆ.

English summary

Invest Rs 66 every day and earn Rs 1.11 crore, Here are complete details

Mutual funds SIP return is around 14-16 per cent on investment for up to 30 years.
Story first published: Friday, April 26, 2019, 10:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X