For Quick Alerts
ALLOW NOTIFICATIONS  
For Daily Alerts

5-10 ವರ್ಷಗಳ ಅವಧಿಗೆ 5 ಸಾವಿರ ಹೂಡಿಕೆ ಮಾಡಿ ಕೋಟಿ ಗಳಿಸಿ..

ಮ್ಯೂಚುವಲ್ ಫಂಡ್‌ಗಳಲ್ಲಿ ಕೇವಲ 5 ಸಾವಿರ ಅದೂ ಒಂದು ಬಾರಿ ಮಾತ್ರ ಹೂಡಿಕೆ ಮಾಡುವುದು ಅಂದರೆ ಅದು ತೀರಾ ಚಿಕ್ಕ ಮೊತ್ತವೇ ಆಗಿದೆ. ಆದಾಗ್ಯೂ ವೈವಿಧ್ಯತೆಯಿಂದ ಹೂಡಿಕೆ ಮಾಡಿದಲ್ಲಿ 5 ಸಾವಿರ ರೂಪಾಯಿಗಳಿಂದ ಒಳ್ಳೆಯ ಒಳ್ಳೆಯ ಆದಾಯ ಗಳಿಸಬಹುದು.

|

ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹಣ ತೊಡಗಿಸುವುದು ಹಾಗೂ ಅದರಿಂದ ಸೂಕ್ತ ಆದಾಯ ಪಡೆಯುವುದು ಎಲ್ಲರಿಗೂ ಸಾಧ್ಯವಾಗುವ ಸಂಗತಿಯಲ್ಲ. ಷೇರು ಮಾರುಕಟ್ಟೆ ಪ್ರವೇಶಿಸಬೇಕಾದರೆ ಅದರ ಬಗ್ಗೆ ಆಳವಾದ ಜ್ಞಾನ ಇರಬೇಕಾಗುತ್ತದೆ ಹಾಗೂ ಮಾರುಕಟ್ಟೆಯ ಬಗ್ಗೆ ಸಂಪೂರ್ಣ ಅಭ್ಯಾಸ ಸಹ ನಡೆಸಬೇಕಾಗುತ್ತದೆ. ಇದರ ಜೊತೆಗೆ ಒಂದಿಷ್ಟು ಅದೃಷ್ಟವೂ ಇದ್ದರೆ ಮಾತ್ರ ಇಲ್ಲಿ ಏನಾದರೂ ಸಾಧಿಸಬಹುದು.
ಹಾಗಂತ ನೀವು ಷೇರು ಮಾರುಕಟ್ಟೆಯಲ್ಲಿ ನಿಮ್ಮ ಹಣವನ್ನು ತೊಡಗಿಸಬಾರದು ಅಥವಾ ತೊಡಗಿಸಲು ಸಾಧ್ಯವಿಲ್ಲ ಎಂದರ್ಥವಲ್ಲ. ಷೇರು ಮಾರುಕಟ್ಟೆಯ ಬಗ್ಗೆ ತೀರಾ ತಲೆಕೆಡಿಸಿಕೊಳ್ಳದೆಯೂ ನಿಮ್ಮ ಬೆವರಿನ ದುಡ್ಡನ್ನು ತೊಡಗಿಸಿ ಲಾಭದಾಯಕವಾದ ಪ್ರತಿಫಲ ಪಡೆಯಲು ಸಾಧ್ಯವಿದೆ. ಇದು ಮ್ಯೂಚುವಲ್ ಫಂಡಗಳಿಂದ ಸಾಧ್ಯ. ಹೌದು.. ಮ್ಯೂಚುವಲ್ ಫಂಡಗಳಲ್ಲಿ ಹೂಡಿಕೆ ಮಾಡಿ ಈಗ ನೀವೂ ಆದಾಯ ಗಳಿಸಬಹುದು. ಅದು ಹೇಗೆಂದು ಈ ಲೇಖನದಲ್ಲಿ ನೋಡೋಣ ಬನ್ನಿ..

5 ಸಾವಿರ ಹೂಡಿಕೆ ಮಾಡಿ ಲಾಭ ಗಳಿಕೆ

5 ಸಾವಿರ ಹೂಡಿಕೆ ಮಾಡಿ ಲಾಭ ಗಳಿಕೆ

ಮ್ಯೂಚುವಲ್ ಫಂಡ್‌ಗಳಲ್ಲಿ ಕೇವಲ 5 ಸಾವಿರ ಅದೂ ಒಂದು ಬಾರಿ ಮಾತ್ರ ಹೂಡಿಕೆ ಮಾಡುವುದು ಅಂದರೆ ಅದು ತೀರಾ ಚಿಕ್ಕ ಮೊತ್ತವೇ ಆಗಿದೆ. ಆದಾಗ್ಯೂ ವೈವಿಧ್ಯತೆಯಿಂದ ಹೂಡಿಕೆ ಮಾಡಿದಲ್ಲಿ 5 ರಿಂದ 10 ವರ್ಷಗಳ ಅವಧಿಯಲ್ಲಿ 5 ಸಾವಿರ ರೂಪಾಯಿಗಳಿಂದ ಒಳ್ಳೆಯ ಆದಾಯ ಗಳಿಸಬಹುದು ಎನ್ನುತ್ತಾರೆ ಹಣಕಾಸು ತಜ್ಞರು. ಅದರಲ್ಲೂ ಪ್ರತಿ ತಿಂಗಳಲ್ಲಿ 5 ಸಾವಿರ ಮೊತ್ತವನ್ನು ನಿಯಮಿತವಾಗಿ ಹೂಡಿಕೆ ಮಾಡುತ್ತಾ ಹೋದಲ್ಲಿ ಕೇಲವೆ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗಬಹುದು. ತಿಂಗಳಿಗೆ ಕೇವಲ 1000 ತೊಡಗಿಸಿ ರೂ. 1.5 ಕೋಟಿ ಪಡೆದುಕೊಳ್ಳಿ..

ಮ್ಯೂಚುವಲ್ ಫಂಡ್ ಯಾವಾಗಲೂ ಬೆಸ್ಟ್

ಮ್ಯೂಚುವಲ್ ಫಂಡ್ ಯಾವಾಗಲೂ ಬೆಸ್ಟ್

ಇಕ್ವಿಟಿಗಳಲ್ಲಿ ಹೂಡಿಕೆ ಮಾಡಿ ಉತ್ತಮ ಆದಾಯ ಪಡೆಯಲು ಮ್ಯೂಚುವಲ್ ಫಂಡ್ ಅತ್ಯುತ್ತಮ ಮಾರ್ಗವಾಗಿವೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಇಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳಿದ್ದು ನಿಮಗೆ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಮಾರುಕಟ್ಟೆ ಬಂಡವಾಳ, ಸೆಕ್ಟರ್, ಇಎಲ್‌ಎಸ್‌ಎಸ್, ಗ್ಲೋಬಲ್ ಫಂಡ್ಸ್, ಹೈಬ್ರಿಡ್ ಫಂಡ್ಸ್, ಇಕ್ವಿಟಿ ಡೈವರ್ಸಿಫೈಡ್ ಹೀಗೆ ವಿಭಿನ್ನ ಹೂಡಿಕೆಗಳನ್ನು ಆಧರಿಸಿದ ಇಕ್ವಿಟಿ ಮ್ಯೂಚುವಲ್ ಫಂಡ್‌ಗಳು ಲಭ್ಯವಿವೆ. ಹಣಕಾಸು ತಜ್ಞರ ಮಾರ್ಗದರ್ಶನ ಪಡೆದು ಹೂಡಿಕೆದಾರರು ತಮಗೆ ಸರಿಹೊಂದುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಪೋಕಸ್ಡ್ ಮಲ್ಟಿ ಕ್ಯಾಪ್ ಫಂಡ್

ಪೋಕಸ್ಡ್ ಮಲ್ಟಿ ಕ್ಯಾಪ್ ಫಂಡ್

ವೈವಿದ್ಯ ಮ್ಯೂಚುವಲ್ ಫಂಡಗಳಿಗಿಂತ ಫೋಕಸ್ಡ್ ಮಲ್ಟಿ ಕ್ಯಾಪ್ ಫಂಡ್‌ಗಳು ಯಾವಾಗಲೂ ಹೆಚ್ಚಿನ ಆದಾಯ ನೀಡಿವೆ. ಹೀಗಾಗಿ ಅಧಿಕ ಆದಾಯ ಬಯಸುವವರು ಫೋಕಸ್ಡ್ ಮಲ್ಟಿ ಕ್ಯಾಪ್ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಹಣಕಾಸು ತಜ್ಞರೊಬ್ಬರು ನೀಡುವ ಸಲಹೆಯ ಪ್ರಕಾರ- "ಸಾಮಾನ್ಯವಾಗಿ 5 ಸಾವಿರ ರೂ.ಗಳಷ್ಟು ಸಣ್ಣ ಮೊತ್ತವನ್ನು ತೊಡಗಿಸಬಯಸುವ ಹೂಡಿಕೆದಾರ ಯಾವಾಗಲೂ ಸ್ಮಾಲ್ ಕ್ಯಾಪ್ ಫಂಡ್‌ಗಳಲ್ಲೇ ಹೂಡಿಕೆ ಮಾಡಲು ಬಯಸುತ್ತಾನೆ. ಆದರೆ ಉತ್ತಮ ಆದಾಯ ಪಡೆಯಬೇಕಾದರೆ ಮಲ್ಟಿ ಕ್ಯಾಪ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಇದರಿಂದ ವಿಭಿನ್ನ ರೀತಿಯ ಬಂಡವಾಳ ಕ್ಷೇತ್ರಗಳಿಂದ ಆದಾಯ ಪಡೆಯಲು ಸಾಧ್ಯವಾಗುತ್ತದೆ" ಎನ್ನುತ್ತಾರೆ. ತಿಂಗಳಿಗೆ 5000 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೇ ಓದಿ..

ಕಳೆದ 10 ವರ್ಷಗಳ ಅವಧಿಯಲ್ಲಿ ಸ್ಮಾಲ್ ಕ್ಯಾಪ್ ಫಂಡ್‌ಗಳು

ಕಳೆದ 10 ವರ್ಷಗಳ ಅವಧಿಯಲ್ಲಿ ಸ್ಮಾಲ್ ಕ್ಯಾಪ್ ಫಂಡ್‌ಗಳು

ಮಲ್ಟಿ ಕ್ಯಾಪ್ ಫಂಡ್‌ಗಳಿಗಿಂತ ಹೆಚ್ಚು ಏರಿಳಿತ ಪ್ರದರ್ಶಿಸಿವೆ. ಆದರೂ ಇವೆರಡೂ ಫಂಡ್‌ಗಳು ಬಹುತೇಕ ಒಂದೇ ರೀತಿಯ ಆದಾಯ ನೀಡಿವೆ. ಹೀಗಾಗಿ ಕಡಿಮೆ ರಿಸ್ಕ್ ಇರುವ ವಾರ್ಷಿಕ ಶೇ. 15 ರಿಂದ 20 ರಷ್ಟು ಪ್ರತಿಫಲ ನೀಡುವ ಇದೇ ರೀತಿಯ ಫಂಡ್‌ಗಳಲ್ಲಿ ತೊಡಗಿಸುವುದು ಒಳ್ಳೆಯದು ಎಂಬುದು ಓರ್ವ ಹಣಕಾಸು ತಜ್ಞರ ಅಭಿಮತವಾಗಿದೆ.

ಲಾರ್ಜ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಫಂಡ್ಸ್

ಲಾರ್ಜ್ ಕ್ಯಾಪ್ ಹಾಗೂ ಮಿಡ್ ಕ್ಯಾಪ್ ಫಂಡ್ಸ್

ಆಪ್ಟಿಮಾ ಮನೀ ಮ್ಯಾನೇಜರ್ ಸಂಸ್ಥೆಯ ಎಂಡಿ ಪಂಕಜ ಮಥಪಾಲ ಅವರು ಹೇಳುವ ಪ್ರಕಾರ- "5 ಸಾವಿರ ರೂಪಾಯಿ ಹೂಡಿಕೆ ಮಾಡಬಯಸುವ ಹೂಡಿಕೆದಾರರು ಲಾರ್ಜ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಹೀಗೆ ಎರಡು ರೀತಿಗಳಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಹೂಡಿಕೆಯಲ್ಲಿ ವೈವಿಧ್ಯತೆ ಇರುತ್ತದೆ. ಲಾರ್ಜ್ ಕ್ಯಾಪ್ ಸ್ಥಿರತೆ ನೀಡಿದರೆ ಸ್ಮಾಲ್ ಕ್ಯಾಪ್‌ಗಳು ಹೆಚ್ಚು ಆದಾಯ ನೀಡಬಲ್ಲವು. ಆದಾಗ್ಯೂ 10 ವರ್ಷಕ್ಕೂ ಮೀರಿ ಹೂಡಿಕೆ ಮಾಡುವುದಾದಲ್ಲಿ ಸ್ಮಾಲ್ ಕ್ಯಾಪ್‌ಗಳತ್ತ ಗಮನಹರಿಸಬಹುದು."

ತೀರಾ ಹೆಚ್ಚು ಬಗೆಯ ಫಂಡ್‌ಗಳ ಆಯ್ಕೆ ಬೇಡ

ತೀರಾ ಹೆಚ್ಚು ಬಗೆಯ ಫಂಡ್‌ಗಳ ಆಯ್ಕೆ ಬೇಡ

"ಹೂಡಿಕೆಯ ಅವಧಿ ಕೇವಲ 5 ರಿಂದ 10 ವರ್ಷಗಳಾಗಿದ್ದಲ್ಲಿ ಹೆಚ್ಚಿನ ಬಗೆಯ ಫಂಡ್‌ಗಳಲ್ಲಿ ಹೂಡಿಕೆ ಬೇಡ. ಆರಂಭದಲ್ಲಿ ತೀರಾ ರಿಸ್ಕ್ ಇರುವ ಸ್ಮಾಲ್ ಕ್ಯಾಪ್ ಫಂಡ್‌ಗಳಿಂದ ದೂರವಿರುವುದು ಒಳಿತು.
ವಾಸ್ತವದಲ್ಲಿ ಆದಾಯದ ಪ್ರಮಾಣ ಹೆಚ್ಚಿಸಲು ಹೂಡಿಕೆದಾರರು ತ್ರೈಮಾಸಿಕ ಅಥವಾ ವಾರ್ಷಿಕವಾಗಿ ತಮ್ಮ ಹೂಡಿಕೆಯನ್ನು ಹೆಚ್ಚಿಸುತ್ತ ಹೋಗಬೇಕು. ಒಟ್ಟಾರೆಯಾಗಿ ಉತ್ತಮ ಆದಾಯ ಪಡೆಯಲು ಹಾಗೂ ಹೂಡಿಕೆಯ ಮೌಲ್ಯ ವರ್ಧಿಸಲು ಕ್ರಮವಾಗಿ ಹೂಡಿಕೆಯ ಮೊತ್ತವನ್ನು ಹೆಚ್ಚಿಸಬೇಕು" ಎಂಬುದು ಮಥಪಾಲ ಅವರ ಅಭಿಪ್ರಾಯವಾಗಿದೆ. ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ..

ಕ್ರಮವಾಗಿ ಹೂಡಿಕೆ ಹೆಚ್ಚಿಸುತ್ತ ಹೋಗುವುದು

ಕ್ರಮವಾಗಿ ಹೂಡಿಕೆ ಹೆಚ್ಚಿಸುತ್ತ ಹೋಗುವುದು

ಹೂಡಿಕೆದಾರರು ತಮ್ಮ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಶೇ. 5 ರಿಂದ 10 ರಷ್ಟು ಹೂಡಿಕೆಯನ್ನು ಹೆಚ್ಚಿಸಬೇಕು. ಇದರಿಂದ ಕಡಿಮೆ ಅವಧಿಯಲ್ಲಿ ಒಳ್ಳೆಯ ಆದಾಯ ಪಡೆಯಬಹುದು. ಮ್ಯೂಚುವಲ್ ಫಂಡ್‌ಗಳಲ್ಲಿ ಒಂದೇ ಬಾರಿಗೆ ಹೂಡಿಕೆ ಮಾಡುವುದಕ್ಕಿಂತ 5 ವರ್ಷಗಳ ಅವಧಿಯಲ್ಲಿ ಕ್ರಮವಾಗಿ ಹೂಡಿಕೆ ಹೆಚ್ಚಿಸುತ್ತ ಹೋಗುವುದರಿಂದ ನಿಮ್ಮ ಹಣಕಾಸು ಗುರಿಯನ್ನು ಬೇಗನೆ ತಲುಪಬಹುದು ಎಂದು ಮಥಪಾಲ ಹೇಳುತ್ತಾರೆ.

English summary

Investment Rs. 5,000 for 5-to-10 years? Check out profitable option

Mutual Funds are always a good option to seek maximum returns from equity. However, there are various kinds of equity mutual funds available in the market to chose from.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X