ದೇಶದ ಎಲ್ಲ ಸಮಾನ್ಯ ನಾಗರಿಕರಂತೆ ಈ ಇಬ್ಬರೂ ನಾಯಕರ ವೈಯಕ್ತಿಕ ಹಣಕಾಸು ನಿರ್ವಹಣೆ ಮತ್ತು ಯೋಜನೆ ಹೇಗಿದೆ? ಕೊನೆ ಘಳಿಗೆಯ ಜೀವನದ ಭವಿಷ್ಯಕ್ಕಾಗಿ ಅವರು ಸಾಕಷ್ಟು ವಿಮೆ, ಬ್ಯಾಂಕ್ ಬ್ಯಾಲೆನ್ಸ್, ಆಸ್ತಿ, ವೈವಿಧ್ಯ ಹೂಡಿಕೆ ಹೊಂದಿದ್ದಾರೆಯೇ?
ಲೋಕಸಭಾ ಚುನಾವಣಾ ಫಲಿತಾಂಶ ನಿರೀಕ್ಷೆಯಲ್ಲಿರುವ ಬಿಜೆಪಿಯ ನರೇಂದ್ರ ಮೋದಿಯವರು ಹಾಗು ಕಾಂಗ್ರೆಸ್ ನ ರಾಹುಲ್ ಗಾಂಧಿಯವರು ಮುಂದಿನ ಸರ್ಕಾರ ರಚಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ. ಪ್ರಾದೇಶಿಕ ಪಕ್ಷಗಳ ಜೊತೆಗಿನ ಒಪ್ಪಂದ ಕೂಡ ಈ ಬಾರಿಯ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ತಜ್ಞರ ಪ್ರಕಾರ ಬಿಜೆಪಿ ಅಥವಾ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುವುದು ಕಷ್ಟವಾಗಿದ್ದು, ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.
ಅದೇನೆ ಇದ್ದರೂ ದೇಶದ ಎಲ್ಲ ಸಮಾನ್ಯ ನಾಗರಿಕರಂತೆ ಈ ಇಬ್ಬರೂ ನಾಯಕರ ವೈಯಕ್ತಿಕ ಹಣಕಾಸು ನಿರ್ವಹಣೆ ಮತ್ತು ಯೋಜನೆ ಹೇಗಿದೆ?
ಕೊನೆ ಘಳಿಗೆಯ ಜೀವನದ ಭವಿಷ್ಯಕ್ಕಾಗಿ ಅವರು ಸಾಕಷ್ಟು ವಿಮೆ, ಬ್ಯಾಂಕ್ ಬ್ಯಾಲೆನ್ಸ್, ಆಸ್ತಿ, ವೈವಿಧ್ಯ ಹೂಡಿಕೆ ಹೊಂದಿದ್ದಾರೆಯೇ? ಇವರಿಬ್ಬರ ವೈಯಕ್ತಿಕ ಹಣಕಾಸು ಯೋಜನೆಗಳು ಹೇಗಿವೆ? ಇಂತಹ ಪ್ರಶ್ನೆಗಳು ನಮ್ಮಲ್ಲಿ ಅನೇಕರಲ್ಲಿ ಉದ್ಭವವಾಗಿರುತ್ತವೆ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಾಗ/ನಾಮಪತ್ರ ಸಲ್ಲಿಸುವಾಗ ಪ್ರತಿಯೊಬ್ಬ ಅಭ್ಯರ್ಥಿಯೂ ಕಡ್ಡಾಯವಾಗಿ ತನ್ನ ಬಂಡವಾಳ, ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು. ಇದರ ಆಧಾರದ ಮೇಲೆ ಮನಿ ಕಂಟ್ರೋಲ್ (Moneycontrol) ಮೋದಿ ಹಾಗು ರಾಹುಲ್ ಗಾಂಧಿಯವರ ಆಸ್ತಿಪಾಸ್ತಿಗಳ ವಿವರಗಳ ಬಗ್ಗೆ ವಿಶ್ಲೇಷಿಸಿದೆ. ಈ ಇಬ್ಬರೂ ನಾಯಕರು ಹೊಂದಿರುವ ಬಂಡವಾಳ, ಆಸ್ತಿ ವಿವರಗಳಿಂದ ನಮಗೆ ಸಿಗುವ ಪಾಠಗಳೇನು ನೋಡೋಣ ಬನ್ನಿ..
ಮೋದಿ vs ರಾಹುಲ್: ಯಾರ ಸ್ಕೋರ್ ಉತ್ತಮವಾಗಿದೆ?
ನರೇಂದ್ರ ಮೋದಿ
ಹಣ, ಆಸ್ತಿಯ ವಿವರವನ್ನು ಮೊತ್ತ/ಮೌಲ್ಯ (ರೂಪಾಯಿಗಳಲ್ಲಿ) ನೀಡಲಾಗಿದೆ.
ನಗದು - 38,750
ನಗದು (ಉಳಿತಾಯ ಬ್ಯಾಂಕ್ ಖಾತೆ) - 4143
ಎಫ್ಡಿ (ಎಸ್ಬಿಐ) - 1,27,81,574
ಟ್ಯಾಕ್ಸ್ ಸೇವಿಂಗ್ ಬಾಂಡ್ (L&T) - 20000
ನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟ್ - 7,61,466
ಬಂಗಾರ - 1,13,800
ರಿಯಲ್ ಎಸ್ಟೇಟ್ - 1,10,00,000
ವಿಮೆ - 1,90,347
ರಾಹುಲ್ ಗಾಂಧಿ
ನಗದು - 11,33,693
ಎಫ್ಡಿ (hdfc) - 7,00,000
ಪಿಪಿಎಫ್ - 39,89,037
ಇಕ್ವಿಟಿ ಮತ್ತು ಇಕ್ವಿಟಿ ಮ್ಯೂಚುವಲ್ ಫಂಡ್ - 4,07,48,535
ಬಂಗಾರ - 2,91,367
ರಿಯಲ್ ಎಸ್ಟೇಟ್ - 10,08,18,284
ಡೆಬ್ಟ್ ಮ್ಯೂಚುವಲ್ ಫಂಡ್ - 1,11,96,147
ಲಾಂಗ್ ಟರ್ಮ್ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ
ನರೇಂದ್ರ ಮೋದಿಯವರು ಒಂದೇ ಒಂದು ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡಿಲ್ಲ. ರಾಹುಲ್ ಗಾಂಧಿಯವರ ಬಂಡವಾಳವು ಮ್ಯೂಚುಯಲ್ ಫಂಡ್ ಗಳಲ್ಲಿ ಗಮನಾರ್ಹ ಹೂಡಿಕೆ ಹೊಂದಿದೆ. ಸುಮಾರು ಶೇ. 70ರಷ್ಟು ಬಂಡವಾಳವನ್ನು ಇಕ್ವಿಟಿ ಮ್ಯೂಚುವಲ್ ಫಂಡ್ (ಎಂಎಫ್) ನಲ್ಲಿ ಹೂಡಿಕೆ ಮಾಡಿದ್ದಾರೆ. ರಾಹುಲ್ ಗಾಂಧಿಯವರ MF ಗಳ ಹೂಡಿಕೆಯು ರೂ. 5.17 ಕೋಟಿಗಳಷ್ಟಿದ್ದು, ಇದು 10 MF ಯೋಜನೆಗಳಲ್ಲಿ ವೈವಿಧ್ಯಮಯವಾಗಿದೆ. (ಎಂಟು ಇಕ್ವಿಟಿ ಮ್ಯೂಚುವಲ್ ಫಂಡ್ ಮತ್ತು 2 ಹೈಬ್ರಿಡ್ ಸ್ಕೀಮ್)
ದೀರ್ಘಾವಧಿಯಲ್ಲಿ ಉತ್ತಮ ಆದಾಯ ತರಬಲ್ಲ ವೈವಿಧ್ಯಮಯ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ.
ಮುಂಬೈ ಮೂಲದ ಯೋಜನಾ ಅಹೆಡ್ ವೆಲ್ತ್ ಅಡ್ವೈಸರ್ಸ್ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್ ಧವನ್ ಅವರ ಪ್ರಕಾರ, ಗಾಂಧಿಯವರ ಮ್ಯೂಚುವಲ್ ಫಂಡ್ ಯೋಜನೆಗಳ ಆಯ್ಕೆ ಉತ್ತಮವಾಗಿದೆ. "ಯೋಜನೆಗಳು ಉತ್ತಮವಾದರೂ ಬಹುಪಾಲು ಮಲ್ಟಿ ಕ್ಯಾಪ್ ಫಂಡ್. ಮಲ್ಟಿ ಕ್ಯಾಪ್ ಫಂಡ್ ಯೋಜನೆಗಳು ಮಾರುಕಟ್ಟೆಗಳು ಏರಿಳಿತಕ್ಕೆ ಒಳಗಾದಾಗಲೂ ಅದೇ ರೀತಿಯಲ್ಲಿ ವರ್ತಿಸುತ್ತವೆ ಎಂದು ಧವನ್ ಹೇಳುತ್ತಾರೆ.
ಆಸ್ತಿ ಹಂಚಿಕೆ
ರಾಹುಲ್ ಗಾಂಧಿ
ಉತ್ತಮ ಬಂಡವಾಳವನ್ನು (portfolio) ಹೊಂದಲು ಇದು ಮೊದಲ ಹಂತವಾಗಿದೆ. ಹೆಚ್ಚಿನ ಹಣಕಾಸು ಯೋಜಕರು, ಹೂಡಿಕೆದಾರರ ವಯಸ್ಸಿನ ಆಧಾರದ ಮೇಲೆ ಹಣವನ್ನು ಹೇಗೆ, ಎಲ್ಲಿ, ಹೂಡಿಕೆ ಮಾಡಬೇಕು ಎಂಬುದನ್ನು ತಿಳಿಸುತ್ತಾರೆ. ನೀವು ತೆಗೆದುಕೊಳ್ಳಬಹುದಾದ ರಿಸ್ಕ್ ಅವಲಂಭಿಸಿ ಇಕ್ವಿಟಿಗಳು ಮತ್ತು ವೈವಿಧ್ಯಮಯ ವಿಧಾನಗಳನ್ನು ಸೂಚಿಸುತ್ತಾರೆ.
ಅದರಂತೆ ರಾಹುಲ್ ಗಾಂಧಿಯವರು ಇಕ್ವಿಟಿಗಳಲ್ಲಿ ಶೇ. 70, ನಗದು ಶೇ. 27 ಮತ್ತು ಉಳಿದದ್ದನ್ನು ಚಿನ್ನ ಮತ್ತು ನಗದು ರೂಪದಲ್ಲಿ ಹೂಡಿಕೆ ಮಾಡಿದ್ದಾರೆ. ತಕ್ಷಣದ ಗುರಿಗಳನ್ನು ಹೊಂದಿಲ್ಲವಾದರಿಂದ ಅವರು ದೀರ್ಘಕಾಲದವರೆಗೆ ಹೂಡಿಕೆ ಮಾಡಿದ್ದಾರೆ ಎಂದು ಮುಂಬೈ ಮೂಲದ ಹಣಕಾಸು ಯೋಜಕ ಗೌರವ್ ಮಶ್ರುವಾಲಾ ಹೇಳುತ್ತಾರೆ.
ನರೇಂದ್ರ ಮೋದಿ
ಮತ್ತೊಂದೆಡೆ, ಮೋದಿಯವರು ಯಾವುದೇ ಷೇರುಗಳಲ್ಲಿ ಹೂಡಿಕೆ ಮಾಡಿಲ್ಲ. ಸಂಪೂರ್ಣ ಬಂಡವಾಳ ಶೇ. 99 ರಷ್ಟು ಡೆಬ್ಟ್ ಇನ್ಸ್ಟ್ರುಮೆಂಟ್ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಉಳಿದದ್ದನ್ನು ಚಿನ್ನದ (ನಾಲ್ಕು ಚಿನ್ನದ ಉಂಗುರಗಳು) ಮತ್ತು ಸಣ್ಣ ನಗದು ಭಾಗವನ್ನು ಹೊಂದಿದ್ದಾರೆ. ನರೇಂದ್ರ ಮೋದಿ ಸರ್ಕಾರದ ಪ್ರಮುಖ ಜನಕಲ್ಯಾಣ ಯೋಜನೆ
ತೆರಿಗೆ ಉಳಿತಾಯ ಹೂಡಿಕೆಗಳು
ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯವರು ತಮ್ಮ ತೆರಿಗೆ ಉಳಿತಾಯ ಹೂಡಿಕೆಗಳನ್ನು ಪ್ರತಿ ವರ್ಷವೂ ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಮೋದಿಯವರು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವನ್ನು ಆಯ್ಕೆ ಮಾಡಿಕೊಂಡಿದ್ದರೆ, ರಾಹುಲ್ ಗಾಂಧಿ ಎನ್.ಎಸ್.ಸಿ ಮತ್ತು ಪಿಪಿಎಫ್ ಆಯ್ಕೆ ಮಾಡಿಕೊಂಡಿದ್ದಾರೆ.
ಮೋದಿಯವರು ಎನ್ಎಸ್ಸಿ ಯಲ್ಲಿ ಕಳೆದ ಮೂರು ಪ್ರತಿ ಹಣಕಾಸು ವರ್ಷಗಳಲ್ಲಿ ರೂ. 1.50 ಲಕ್ಷ ಹೂಡಿಕೆ ಮಾಡಿದ್ದಾರೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ತೆರಿಗೆ ವಿನಾಯಿತಿ ಇರುತ್ತದೆ.
ರಾಹುಲ್ ಗಾಂಧಿಯವರು ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಬಹುಶಃ ತೆರಿಗೆ ಯೋಜನೆ ಹೂಡಿಕೆಗಳ ಭಾಗವಾಗಿ ಪಿಪಿಎಫ್ ನಲ್ಲಿ ಒಟ್ಟು ಮೌಲ್ಯ ರೂ. 39.89 ಲಕ್ಷಕ್ಕೆ ಹತ್ತಿರದಲ್ಲಿದೆ. ಇಕ್ವಿಟಿ-ಲಿಂಕ್ ಉಳಿತಾಯ ಯೋಜನೆಗಳೆಂದು ಜನಪ್ರಿಯವಾಗಿರುವ ತೆರಿಗೆ-ಉಳಿತಾಯ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಗಾಂಧಿ ಅಥವಾ ಮೋದಿ ಹೂಡಿಕೆ ಮಾಡಲಿಲ್ಲ.
ಚಿನ್ನದ ಮೇಲೆ ಕಡಿಮೆ ಹೂಡಿಕೆ
ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಹಣಕಾಸು ಆಸ್ತಿ ಮತ್ತು ಚಿನ್ನದ ಮೇಲೆ ಕಡಿಮೆ ಹೂಡಿಕೆ ಮಾಡಿದ್ದಾರೆ. ಚಿನ್ನದ ಮೇಲೆ ಕೇವಲ ಶೇ. 0.50ರಷ್ಟು ಹಣ ರಾಹುಲ್ ಗಾಂಧಿ ಹೂಡಿಕೆ ಮಾಡಿದ್ದರೆ, ಮೋದಿಯವರು ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಚಿನ್ನದ ಹೂಡಿ ಒಟ್ಟು ಬಂಡವಾಳದ ಶೇ. 0.83% ರಷ್ಟಿದೆ. ರಾಹುಲ್ ಗಾಂಧಿಯವರ ಅಫಿಡವಿಟ್ ಪ್ರಕಾರ, ಅವರ ಚಿನ್ನದ ಹೂಡಿಕೆ ಮೊತ್ತ ರೂ. 2.91 ಲಕ್ಷ.
ರಿಯಲ್ ಎಸ್ಟೇಟ್ ಹೋಲ್ಡಿಂಗ್ ಕಡಿಮೆಯಿರುವುದರಿಂದ ಮೋದಿಯವರ ಹಿಂದೆ ಇದ್ದಾರೆ. ಅವರ ಅಫಿಡವಿಟ್ ನಲ್ಲಿರುವಂತೆ ರಿಯಲ್ ಎಸ್ಟೇಟ್ ಗುಜರಾತ್ ಗಾಂಧಿನಗರದಲ್ಲಿ ಮಾತ್ರ ಇದೆ. 2002 ರಲ್ಲಿ ಖರೀದಿಸಿದ ಜಾಗದ ಮೊತ್ತ ಈಗ ರೂ. 1.10 ಕೋಟಿ ಮೌಲ್ಯ.
ಬ್ಯಾಂಕ್ ಎಫ್ಡಿಗೆ ಆದ್ಯತೆ
ಮೋದಿಯವರ ಅಫಿಡವಿಟ್ ಪ್ರಕಾರ ಒಟ್ಟು ರೂ. 1.37 ಕೋಟಿಗಳಲ್ಲಿ ರೂ. 1.27 ಕೋಟಿ ಎಫ್ಡಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದು ಕೂಡ ಕೇವಲ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ದಲ್ಲಿ ಹೂಡಿದ್ದಾರೆ.
ಈ ಏಕೈಕ ಹೂಡಿಕೆಯಿಂದ ಬಂದ ಆದಾಯ ಕೇವಲ ನಿವೃತ್ತಿಯ ವರ್ಷಗಳ ನಿರ್ವಹಣೆಗೆ ಸಾಕಾಗುತ್ತದೆ ಎಂದು ಆಶರ್ ಹೇಳುತ್ತಾರೆ.
ಕೊನೆ ಮಾತು
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications