For Quick Alerts
ALLOW NOTIFICATIONS  
For Daily Alerts

ಈ ಬಿಸಿನೆಸ್ ಆರಂಭಿಸಿದರೆ ಪ್ರತಿ ತಿಂಗಳು 2 ಲಕ್ಷ ಆದಾಯ ಗ್ಯಾರಂಟಿ

ಬಳಸಿ ಬಿಸಾಡಬಹುದಾದ ಕಪ್ (disposel cup), ಪ್ಲೇಟ್, ಬಟ್ಟಲುಗಳಂತಹ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇರುವುದು ನಿಮಗೆ ತಿಳಿದಿದೆ. ನಿಮಗೆ

|

ಕಂಪನಿಗಳಲ್ಲಿ ಅಥವಾ ಇನ್ನೊಬ್ಬರ ಕೈಕೆಳಗೆ ದುಡಿಮೆ ಮಾಡಲು ತುಂಬಾ ಜನರು ಇಷ್ಟ ಪಡುವುದಿಲ್ಲ. ಕಂಪನಿಗಳು ನೀಡುವ ಸಂಬಳಕ್ಕೆ ಅವಲಂಬನೆಯಾಗದೇ ಸ್ವಂತ ಬಿಜಿನೆಸ್ ಅಥವಾ ಸ್ವಂತ ದುಡಿಮೆ ಮಾಡಲು ಇಷ್ಟ ಪಡುತ್ತಾರೆ. ಹಾಗಂತ ಸ್ವಂತ ಉದ್ಯಮ ಆರಂಭಿಸುವುದು ಸುಲಭದ ಕೆಲಸ ಕೂಡ ಅಲ್ಲ. ಸ್ವಂತ ಉದ್ಯಮ ಆರಂಭಿಸಿ ಒಳ್ಳೆ ಗಳಿಕೆ ಮಾಡಬೇಕೆಂದು ಬಯಸುವವರಿಗೆ ಇಲ್ಲೊಂದು ಉಪಯುಕ್ತ ಬಿಸಿನೆಸ್ ಸಲಹೆ ನೀಡಲಾಗಿದೆ.
ಬಳಸಿ ಬಿಸಾಡಬಹುದಾದ ಕಪ್ (disposel cup), ಪ್ಲೇಟ್, ಬಟ್ಟಲುಗಳಂತಹ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದ್ದು, ಈ ಬಿಸಿನೆಸ್ ಆರಂಭಿಸುವುದು ಹೇಗೆ ಎಂಬುದನ್ನು ನೋಡೋಣ..

2-3 ಲಕ್ಷ ಬಂಡವಾಳ

2-3 ಲಕ್ಷ ಬಂಡವಾಳ

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಿಸಾಡಬಹುದಾದ ಕಪ್, ಪೇಪರ್ ಪ್ಲೇಟ್‌ ನಂತಹ ಅಡುಗೆ ಉತ್ಪನ್ನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಉತ್ಪನ್ನಗಳನ್ನು ಸಣ್ಣ ಯಂತ್ರಗಳ ಮೂಲಕ ಮ್ಯಾನುಫ್ಯಾಕ್ಚರ್ ಮಾಡಬಹುದು. ಮಾರುಕಟ್ಟೆಯಲ್ಲಿ ಪೇಪರ್ ಕಪ್, ಪ್ಲೇಟ್ ತಯಾರಿಸುವ ಸ್ವಯಂಚಾಲಿತ ಯಂತ್ರದ ಬೆಲೆ ರೂ. 2-3 ಲಕ್ಷದವರೆಗಿದೆ. ಯಂತ್ರಗಳ ಖರೀದಿ ನಂತರ ನೀವು ಕಚ್ಚಾ ವಸ್ತುಗಳನ್ನು ಖರೀದಿಸಿ ಕಪ್, ಪ್ಲೇಟ್ ಉತ್ಪಾದನಾ ಕೆಲಸ ಆರಂಭಿಸಬಹುದು.

ಚಿಕ್ಕದಾಗಿ ಆರಂಭಿಸಿ

ಚಿಕ್ಕದಾಗಿ ಆರಂಭಿಸಿ

ಕಪ್, ಪ್ಲೇಟ್ ಉತ್ಪಾದನೆಯನ್ನು ಆರಂಭಿಸಿದ ನಂತರ ಮಾರ್ಕೆಟಿಂಗ್ ಕೂಡ ಉತ್ತಮವಾಗಿ ಮಾಡಬೇಕು. ಥರ್ಮಾಕೋಲ್ ಪ್ಲೇಟ್ ಅನ್ನು ಮಾದರಿಯಾಗಿ ಪರಿಗಣಿಸಿದರೆ, ಒಂದು ಕೆಜಿ ಕಚ್ಚಾ ವಸ್ತುವಿನಿಂದ 300 ಪ್ಲೇಟ್ ಗಳನ್ನು ತಯಾರಿಸಬಹುದಾಗಿದೆ. ಪ್ರತಿ ಒಂದು ಕೆಜಿ ಥರ್ಮಾಕೋಲ್ ಅಂದಾಜು ಬೆಲೆ ರೂ. 200-250 ವರೆಗೆ ಇದೆ.

ಪ್ರತಿ ತಿಂಗಳ ಆದಾಯ

ಪ್ರತಿ ತಿಂಗಳ ಆದಾಯ

ನೀವು ಒಂದು ದಿನದಲ್ಲಿ ಕನಿಷ್ಟ 1 ಸಾವಿರ ಪ್ಲೇಟ್ ಗಳನ್ನು ತಯಾರಿಸಿದರೆ ಪ್ರತಿ ತಿಂಗಳಿಗೆ ರೂ. 60-80 ಸಾವಿರ ಆದಾಯ ಗಳಿಸಬಹುದು. ನಿಮಗಾಗುವ ವೆಚ್ಚವನ್ನು ತೆಗೆದು ತಿಂಗಳಿಗೆ ಬರುವ ಲಾಭದ ಅಂದಾಜು ರೂ. 30000-50,000 ಆಗಬಹುದು. 100 ಪ್ಲೇಟ್‌ಗಳನ್ನು ರೂ. 200-300 ಕ್ಕೆ ಮಾರಾಟ ಮಾಡಬಹುದು. ಪ್ರತಿದಿನ ತಯಾರಿಸುವ ಪ್ಲೇಟ್ ಗಳ ಪ್ರಮಾಣ ಹೆಚ್ಚಿಸಿದರೆ ಪ್ರತಿ ತಿಂಗಳು ಗಳಿಸುವ ಆದಾಯ ಕೂಡ ಹೆಚ್ಚು. ಹೀಗಾಗಿ 50 ಸಾವಿರದಿಂದ 2 ಲಕ್ಷದವರೆಗೆ ಆದಾಯ ಗಳಿಸಬಹುದು.

ಥರ್ಮಾಕೋಲ್ ಪ್ಲೇಟ್ ಪ್ರಯೋಜನ

ಥರ್ಮಾಕೋಲ್ ಪ್ಲೇಟ್ ಪ್ರಯೋಜನ

ಥರ್ಮಾಕೋಲ್ ಉತ್ಪನ್ನವು ಬಹು ಪ್ರಯೋಜನವುಳ್ಳದಾಗಿದೆ. ಪಾಲಿಥಿಲೀನ್ ನಿಷೇಧದ ನಂತರ, ಥರ್ಮೋಕಾಲ್ ಮತ್ತು ಪೇಪರ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಥರ್ಮೋಕೂಲ್ ಕಪ್-ಪ್ಲೇಟ್ ತಯಾರಿಸುವ ಯಂತ್ರ ಖರೀದಿಸಲು 2-3 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ನಿಮ್ಮ ಮಾರ್ಕೆಟಿಂಗ್ ಸಾಮರ್ಥ್ಯದ ಪ್ರಕಾರ, ನೀವು ಮೊದಲು ಉತ್ಪನ್ನವನ್ನು ಮಾರಾಟ ಮಾಡಬಹುದಾದದ ಮಾರುಕಟ್ಟೆಯ ವ್ಯಾಪ್ತಿ ಆಧರಿಸಿನೀವು ಕಚ್ಚಾ ವಸ್ತುಗಳನ್ನು ಖರೀದಿಸಬಹುದು. ನಿಮ್ಮ ಮನೆಯಲ್ಲಿ ಅಥವಾ ಯಾವುದೇ ಅಂಗಡಿಯಲ್ಲಿ ವ್ಯವಹಾರವನ್ನು ಪ್ರಾರಂಭಿಸಬಹುದು.

ಮಾರ್ಕೆಟಿಂಗ್

ಮಾರ್ಕೆಟಿಂಗ್

ಥರ್ಮಾಕೋಲ್ ಜೊತೆಗೆ, ಪೇಪರ್ ಕಪ್ ಮತ್ತು ಬೌಲ್ ತಯಾರಿಸುವ ಯಂತ್ರಗಳು ರೂ. 3 ಲಕ್ಷದವರೆಗೆ ಖರೀಸಬಹುದು. ಮಾರುಕಟ್ಟೆಯಲ್ಲಿ ಕಾಫಿ ಮತ್ತು ತಂಪು ಪಾನೀಯಗಳಿಗಾಗಿ ಪೇಪರ್ ಕಪ್ ಮತ್ತು ಗ್ಲಾಸ್ ಗಳನ್ನು ಬಳಸಲಾಗುತ್ತದೆ. ಮಾರ್ಕೆಟಿಂಗ್ ವಿಸ್ತರಣೆಗಾಗಿ ನೀವು ರೆಸ್ಟೋರೆಂಟ್‌ಗಳು ಅಥವಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಜೊತೆಗೆ ಲೇಬಲ್‌ನೊಂದಿಗೆ ಉತ್ಪನ್ನಗಳನ್ನು ತಯಾರಿಸಿ ಪೂರೈಸಬಹುದು. ಈ ರೀತಿಯಾಗಿ ದೀರ್ಘಾವಧಿಯ ಮತ್ತು ಖಾತರಿಯ ಆದಾಯದ ಮೂಲವನ್ನು ವ್ಯವಸ್ಥಿತ ಮಾರುಕಟ್ಟೆ ಯೋಜನೆ ಮೂಲಕ ಸಿದ್ಧಪಡಿಸಬಹುದು.

ಸಾಲ ಸೌಲಭ್ಯ

ಸಾಲ ಸೌಲಭ್ಯ

ಸಾಲ ಸೌಲಭ್ಯ ಪೂರೈಸಲು ಸಾಕಷ್ಟು ಬ್ಯಾಂಕ್, ಹಣಕಾಸು ಸಂಸ್ಥೆಗಳು ಹಾಗು ಸರ್ಕಾರಗಳು ಮುಂದಾಗುತ್ತಿವೆ. ಹೀಗಾಗಿ ಬಂಡವಾಳ ಇಲ್ಲವೆಂದು ಕೊರಗುವ ಅಗತ್ಯವಿಲ್ಲ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದಡಿ ಸರ್ಕಾರವು ಶೇ. 90 ಸಾಲವನ್ನು ನೀಡುತ್ತದೆ. ಖಾದಿ ಗ್ರಾಮೋದ್ಯೋಗದಲ್ಲಿ ಡಿಸ್ಪೋಸಲ್ ಕೆಟರಿಂಗ್ ಉತ್ಪನ್ನಗಳ ಪಟ್ಟಿ ಮಾಡಲಾಗಿದೆ. ಈ ಎಲ್ಲಾ ಯೋಜನೆಗಳಲ್ಲಿ ವ್ಯಾಪಾರ ಮಾಡುವವರು ಶೇ. 90 ಸಾಲವನ್ನು ಪಡೆಯಬಹುದು. ಖಾದಿ ಗ್ರಾಮ ಕೈಗಾರಿಕೆಗಳು ಮತ್ತು ಇತರ ಹಲವು ಯೋಜನೆಗಳಲ್ಲಿ ಸಾಲದ ಮೊತ್ತಕ್ಕೆ ಪಾವತಿಸಬೇಕಾದ ಬಡ್ಡಿಗೆ ಸಹಾಯಧನವಿದೆ. ಈ ಯೋಜನೆಗೆ ಶೇ. 25ರಷ್ಟು ಸಬ್ಸಿಡಿ ನೀಡಲಾಗುತ್ತದೆ.

Read more: ಬಿಸಿನೆಸ್ ಐಡಿಯಾ-business ideas

English summary

Start disposable catering Business, Earn upto 2 lakh every month

Start disposable catering Business with government help and Earn upto 2 lakh every month.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X