For Quick Alerts
ALLOW NOTIFICATIONS  
For Daily Alerts

ವೇತನ ಪಡೆಯುವ ಉದ್ಯೋಗಿಗಳೇ ಈ 10 ಪ್ರಯೋಜನಗಳನ್ನು ನಿಮ್ಮದಾಗಿಸಿ

ಉದ್ಯೋಗಂ ಪುರುಷ ಲಕ್ಷಣಂ ಎನ್ನುವುದು ಹಳೆಯ ಮಾತು. ಆದರೆ ಪ್ರಸ್ತುತ ಡಿಜಿಟಲ್ ಯುಗದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಉದ್ಯೋಗ ಮಾಡುವವರಾಗಿದ್ದಾರೆ. ಈಗಿನ ಕಾಲದಲ್ಲಿ ದುಡಿಯುವ ಜನರಲ್ಲಿ ಗಂಡು ಹೆಣ್ಣು ಎಂಬ ಯಾವುದೇ ಭೇಧವಿಲ್ಲ.

|

ಉದ್ಯೋಗಂ ಪುರುಷ ಲಕ್ಷಣಂ ಎನ್ನುವುದು ಹಳೆಯ ಮಾತು. ಆದರೆ ಪ್ರಸ್ತುತ ಡಿಜಿಟಲ್ ಯುಗದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಉದ್ಯೋಗ ಮಾಡುವವರಾಗಿದ್ದಾರೆ. ಈಗಿನ ಕಾಲದಲ್ಲಿ ದುಡಿಯುವ ಜನರಲ್ಲಿ ಗಂಡು ಹೆಣ್ಣು ಎಂಬ ಯಾವುದೇ ಭೇಧವಿಲ್ಲ. ಕೆಲಸ ಎಂಬ ವಿಷಯ ಬಂದರೆ ಇಬ್ಬರೂ ಸಮಾನರೇ. ಇಬ್ಬರ ಗುರಿಯೂ ಒಂದೇ. ಕಷ್ಟ ಪಟ್ಟು ದುಡಿದು ಬದುಕು ಕಟ್ಟಿಕೊಳ್ಳಬೇಕು. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದರೆ ಪಡಬಾರದ ಪಾಡು ಪಡಬೇಕು. ಕಷ್ಟ ಪಟ್ಟು ಯಾವುದಾದರೂ ಒಂದು ಕಂಪನಿಯಲ್ಲಿ ಒಂದು ಕೆಲಸ ಪಡೆದುಕೊಂಡು ಬೆಳಗ್ಗಿನಿಂದ ಸಂಜೆಯವರೆಗೂ ದುಡಿದು ನಿಟ್ಟುಸಿರು ಬಿಟ್ಟು ಸುಸ್ತಾಗಿ ಮನೆಗೆ ನಡೆಯುವುದು ಪ್ರತಿದಿನ ಸರ್ವೇಸಾಮಾನ್ಯ. ಇಷ್ಟಾದರೂ ನಾವು ದುಡಿದದ್ದು ಎಲ್ಲವೂ ನಮಗೇ ದಕ್ಕುವುದಿಲ್ಲ ಎಂಬ ದೊಡ್ಡವರ ಮಾತಿನಂತೆ ಬಂದ ಅಷ್ಟೋ ಇಷ್ಟೋ ಸಂಬಳದಲ್ಲಿ ಮನೆಯ ಖರ್ಚು ನಿಭಾಯಿಸುವುದರ ಜೊತೆಗೆ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ನಿಗದಿ ಪಡಿಸಿದ ಸ್ವಲ್ಪ ಹಣ ಕಟ್ಟಲೇಬೇಕು. ಯಾರೇ ಆದರೂ ನಿಜಕ್ಕೂ ಈ ವಿಷಯದಲ್ಲಿ ಸ್ವಲ್ಪ ಧೀರ್ಘವಾಗಿ ಯೋಚನೆ ಮಾಡುತ್ತಾರೆ. ತೆರಿಗೆ ರೂಪದಲ್ಲಿ ನಮ್ಮಿಂದ ಹೋಗುತ್ತಿರುವ ಇಷ್ಟೊಂದು ಹಣ ಉಳಿತಾಯವಾಗಿದ್ದರೆ ಚೆನ್ನಾಗಿರುತ್ತಿತ್ತು, ನಮ್ಮ ಜೀವನಕ್ಕೆ ಎಷ್ಟೆಲ್ಲಾ ಅನುಕೂಲಕರವಾಗಿರುತ್ತಿತ್ತು ಎಂದುಕೊಳ್ಳುತ್ತಾರೆ.
ಇನ್ನು ಆ ಚಿಂತೆ ನಿಮಗೆ ಬೇಡ. ನಿಮ್ಮ ಸಂಬಳದ ಹಲವಾರು ಮಜಲುಗಳಿಂದಲೇ ಕಟ್ಟುವ ತೆರಿಗೆ ಕಡಿಮೆ ಮಾಡಿಕೊಳ್ಳುವಂತಹ ಉಪಾಯಗಳನ್ನು ನಾವು ಹೇಳುತ್ತೇವೆ. ಇವುಗಳಲ್ಲಿ ಕೆಲವೊಂದು ಸಂಪೂರ್ಣವಾಗಿ ತೆರಿಗೆ ವ್ಯಾಪ್ತಿಗೆ ಒಳಪಟ್ಟರೆ ಇನ್ನು ಕೆಲವು ಭಾಗಶಃ ತೆರಿಗೆ ವ್ಯಾಪ್ತಿಗೆ ಬರುತ್ತವೆ. ಇನ್ನು ಕೆಲವಂತೂ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದಿರುತ್ತವೆ.
ಹಾಗಿದ್ದರೆ ಒಬ್ಬ ಕಷ್ಟ ಪಟ್ಟು ದುಡಿಯುವ ಕಾರ್ಮಿಕನನ್ನು ತೆರಿಗೆಯ ಸುಳಿಗೆ ಸಿಲುಕಿಸದಂತೆ ಕಾಪಾಡುವ ಆ 10 ಬಗೆಗಳನ್ನು ಈಗ ಒಂದೊಂದಾಗಿ ನೋಡೋಣ ಬನ್ನಿ..

1. ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್)

1. ಕಾರ್ಮಿಕರ ಭವಿಷ್ಯ ನಿಧಿ (ಇಪಿಎಫ್)

ಸಾಮಾನ್ಯವಾಗಿ ಇಪಿಎಫ್ ಕಾಯ್ದೆಯ ಪ್ರಕಾರ ಪ್ರತಿಯೊಬ್ಬ ನೌಕರ ತನ್ನ ಮೂಲ ವೇತನ ಮತ್ತು ತನ್ನ ಡಿಎ ಒಟ್ಟು ಶೇ. 12 ರಷ್ಟು ಹಣವನ್ನು ತನ್ನ ಇಪಿಎಫ್ ಅಕೌಂಟ್ ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಅದಕ್ಕೆ ಪ್ರತಿಯಾಗಿ ಕಂಪನಿಯ ಮಾಲೀಕರು ಕೂಡ ಅಷ್ಟೇ ಹಣವನ್ನು ತಮ್ಮ ಕಾರ್ಮಿಕರ ಈ ಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಕಾರ್ಮಿಕರ ಸಂಬಳದಿಂದ ಇಪಿಎಫ್ ನಲ್ಲಿ ಹೂಡಿಕೆಗೊಳ್ಳುವ ಹಣಕ್ಕೆ ಸುಮಾರು ರೂ. 1.5 ಲಕ್ಷದವರೆಗೂ ತೆರಿಗೆ ವಿನಾಯಿತಿ ಇರುತ್ತದೆ. ಈ ಕಡಿತವನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಈಗಾಗಲೇ ಒದಗಿಸಲಾಗಿದೆ. ಕೆಲವು ಷರತ್ತುಗಳಿಗೆ ಅನುಗುಣವಾಗಿ ಇಪಿಎಫ್ ನ ಹಣದ ಮೇಲೆ ಬರುವ ಬಡ್ಡಿಯ ಹಣಕ್ಕೂ ತೆರಿಗೆ ವಿನಾಯಿತಿ ಇರುತ್ತದೆ.

2. ಪ್ರಯಾಣ ಭತ್ಯೆ (ಎಲ್ಟಿಎ)

2. ಪ್ರಯಾಣ ಭತ್ಯೆ (ಎಲ್ಟಿಎ)

ಭಾರತದ ಯಾವುದೇ ಸ್ಥಳಕ್ಕೆ ಕುಟುಂಬದೊಂದಿಗೆ ಪ್ರಯಾಣಿಸಲು ಆಗುವ ಪ್ರಯಾಣ ವೆಚ್ಚಗಳನ್ನು ಪೂರೈಸಲು ಉದ್ಯೋಗದಾತರು ಉದ್ಯೋಗಿಗಳಿಗೆ ಪ್ರಯಾಣ ಭತ್ಯೆ (ಎಲ್ಟಿಎ) ಒದಗಿಸುತ್ತಾರೆ. ಅಂದರೆ ಕಂಪನಿಯ ಮಾಲೀಕರು ಕುಟುಂಬದ ಜೊತೆಗೂಡಿ ಪ್ರವಾಸಕ್ಕೆ ಹೋಗುವ ತನ್ನ ಉದ್ಯೋಗಿಗಳಿಗೆ ಲೀವ್ ಟ್ರಾವೆಲ್ ಅಲ್ಲೋವನ್ಸ್ (ಎಲ್ಟಿಎ) ಎಂಬ ಸವಲತ್ತನ್ನು ಒದಗಿಸಿರುತ್ತಾರೆ. ಇದರ ಪ್ರಕಾರ ಪ್ರಯಾಣಕ್ಕೆ ತಗುಲುವ ವೆಚ್ಚವನ್ನು ಪೂರೈಸಿಕೊಳ್ಳಲು ಕಾರ್ಮಿಕರಿಗೆ ಮಾಲೀಕರಿಂದ ಸಹಾಯ ಆಗುತ್ತದೆ. ಕ್ಲಿಯರ್ ಟ್ಯಾಕ್ಸ್ ನ ಸಿಇಓ ಅರ್ಚಿತ್ ಗುಪ್ತ ರವರು ಹೇಳುವ ಪ್ರಕಾರ ಪ್ರಯಾಣ ಭತ್ಯೆ ಕ್ಲೇಮ್ ಮಾಡಿಕೊಳ್ಳಲು ಕೆಲವು ನಿಯಮಾವಳಿಗಳಿವೆ. ಅವುಗಳೆಂದರೆ ಕಾರ್ಮಿಕರು ತಮ್ಮ ಕುಟುಂಬದ ಜೊತೆ ಭಾರತದ ಯಾವುದಾದರೂ ಸ್ಥಳಗಳಿಗೆ ಹೋದರೂ, ಅವುಗಳಲ್ಲಿ ಯಾವ ಸ್ಥಳಕ್ಕೆ ಕಡಿಮೆ ಅಂತರವಿರುತ್ತದೆಯೋ ಆ ಸ್ಥಳಕ್ಕೆ ತಗುಲುವ ಪ್ರಯಾಣ ವೆಚ್ಚವನ್ನು ತಾವು ಪ್ರಯಾಣಿಸಿದ ರೈಲು, ವಿಮಾನ ಅಥವಾ ಇನ್ನಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪಡೆದ ಪ್ರಯಾಣದ ವೆಚ್ಚದ ಚೀಟಿಯನ್ನು ತೋರಿಸಿ ಪ್ರಯಾಣ ಭತ್ಯೆಯ ರೂಪದಲ್ಲಿ ವಾಪಸ್ ಪಡೆದುಕೊಳ್ಳಬಹುದು. ಈ ಸವಲತ್ತನ್ನು 4 ವರ್ಷಗಳಲ್ಲಿ ಕಾರ್ಮಿಕರು ತಮ್ಮ ಕುಟುಂಬದ ಜೊತೆ ಕೈಗೊಳ್ಳುವ 2 ಪ್ರವಾಸಗಳಿಗೆ ಸುಲಭವಾಗಿ ಪಡೆಯಬಹುದು. ಸದ್ಯದಲ್ಲಿ ನಡೆಯುತ್ತಿರುವ ಕ್ಯಾಲೆಂಡರ್ ಬ್ಲಾಕ್ 2018 ರಿಂದ 2021 ಎಂದು ಅರ್ಚಿತ್ ಗುಪ್ತಾರವರು ಹೇಳಿರುತ್ತಾರೆ .

3. ಮನೆ ಬಾಡಿಗೆ ಭತ್ಯೆ (ಎಚ್ಆರ್ಎ)

3. ಮನೆ ಬಾಡಿಗೆ ಭತ್ಯೆ (ಎಚ್ಆರ್ಎ)

ಸಂಬಳದ ಈ ಅಂಶವು ನೌಕರನು ವಾಸಿಸುವ ಮನೆಗೆ ಪಾವತಿಸುವ ಬಾಡಿಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ. ಈ ಸವಲತ್ತನ್ನು ಪಡೆಯಲು ನೌಕರನ ಸಂಬಳದ ಒಂದು ಭಾಗವಾಗಬೇಕಿರುವುದು ಅತ್ಯಗತ್ಯ. ಕೆಲವು ಮಿತಿಗಳು, ನಿಯಮಗಳು ಮತ್ತು ಷರತ್ತುಗಳಿಗೆ ಅನ್ವಯಗೊಂಡಂತೆ ಮನೆ ಬಾಡಿಗೆ ಭತ್ಯೆಯನ್ನು ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಬಹುದು. ಈ ಕೆಳಗಿನ ಮೊತ್ತಗಳು ತೆರಿಗೆ ವಿನಾಯಿತಿಯ ವ್ಯಾಪ್ತಿಗೆ ಒಳಪಟ್ಟಿರುತ್ತವೆ.
ಎಚ್ ಆರ್ ಎ ಸ್ವೀಕರಿಸಿರುವುದಕ್ಕೆ ಸಂಬಂಧಪಟ್ಟಂತೆ, ಸಂಬಳ ಮತ್ತು ಡಿಎ ಒಟ್ಟು ಶೇ. 10 ರಷ್ಟು ಅಧಿಕ ಬಾಡಿಗೆ ಪಾವತಿಯಾಗಿದ್ದರೆ, ಒಬ್ಬ ಉದ್ಯೋಗಿಯು ವಾಸಿಸುವ ಬಾಡಿಗೆ ಮನೆ ಮೆಟ್ರೋ ಸಿಟಿ ( ಮುಂಬೈ , ಕೊಲ್ಕತ್ತಾ , ದೆಹಲಿ , ಚೆನ್ನೈ) ಯಲ್ಲಿದ್ದರೆ ಸಂಬಳದ ಮತ್ತು ಡಿಎಯ ಶೇ. 50 ರಷ್ಟು ಮತ್ತು ಅವನು ವಾಸಿಸುವ ಬಾಡಿಗೆ ಮನೆ ಮೆಟ್ರೋ ಸಿಟಿ ಎಂದು ಪರಿಗಣಿಸಲ್ಪಡದೆ ಇರುವ ನಗರಗಳಲ್ಲಿದ್ದರೆ ಸಂಬಳದ ಮತ್ತು ಡಿಎಯ ಶೇ. 40 ರಷ್ಟು ಹಣವನ್ನು ತೆರಿಗೆ ವಿನಾಯಿತಿ ಎಂದು ತಮ್ಮ ರಿಟರ್ನ್ಸ್ ಫೈಲ್ ಮಾಡಬೇಕಾದರೆ ಘೋಷಿಸಿಕೊಳ್ಳಬಹುದು.

4. ಆಹಾರ ಭತ್ಯೆ

4. ಆಹಾರ ಭತ್ಯೆ

ಈ ಸವಲತ್ತನ್ನು ಮಾಲೀಕರು ತಮ್ಮ ಕಾರ್ಮಿಕರಿಗೆ ಅವರು ಆಫೀಸ್ ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಪ್ರಿಪೇಡ್ ಫುಡ್ ಕೂಪನ್ ಅಥವಾ ಫುಡ್ ವೋಚರ್ ನ ರೂಪದಲ್ಲಿ ಕೊಡಬಹುದು. ಉದಾಹರಣೆಗೆ ಪ್ರತಿ ಊಟಕ್ಕೆ ನೀಡುವ ಕೂಪನ್ ವರ್ಗಾವಣೆ ರಹಿತವಾಗಿದ್ದು, ಪ್ರತಿ ಊಟಕ್ಕೆ ಸಂಬಂಧಿಸಿದಂತೆ ರೂ. 50ವರೆಗೆ ತೆರಿಗೆ ವಿನಾಯಿತಿಗೆ ಒಳಪಡುತ್ತದೆ. ಪ್ರತಿ ತಿಂಗಳು ರಜಾ ದಿನಗಳನ್ನು ಹೊರತುಪಡಿಸಿ 22 ದಿನಗಳು ಕೆಲಸದ ದಿನಗಳೆಂದು ಪರಿಗಣಿಸಲ್ಪಟ್ಟರೆ ಒಂದು ದಿನಕ್ಕೆ 2 ಊಟ ಲೆಕ್ಕ ಹಾಕಿದರೂ ವಾರ್ಷಿಕವಾಗಿ ರೂ. 26400 ನ್ನು ತೆರಿಗೆ ವಿನಾಯಿತಿಗೆ ಒಳಪಡುವ ಮೊತ್ತವೆಂದು ಕಾರ್ಮಿಕರು ಘೋಷಿಸಿಕೊಳ್ಳಬಹುದು ಎಂಬುದು ಗುಪ್ತ ರವರ ಅಭಿಪ್ರಾಯ.

5. ಕಾರು ನಿರ್ವಹಣಾ ಭತ್ಯೆ

5. ಕಾರು ನಿರ್ವಹಣಾ ಭತ್ಯೆ

ಹೋಮಿ ಮಿಸ್ಟಿ , ಪಾರ್ಟ್ನರ್ ಮತ್ತು ಡೆಲೊಯ್ಟ್ಟೆ ಇಂಡಿಯಾ ರವರು ಹೇಳುವ ಪ್ರಕಾರ ಕಾರುಗಳ ನಿರ್ವಹಣಾ ವೆಚ್ಚದ ಮರುಪಾವತಿ ಕೂಡ ತೆರಿಗೆಯಿಂದ ವಿನಾಯಿತಿಗೆ ಒಳಪಡುತ್ತದೆ. ಕಂಪನಿಯಲ್ಲಿ ದುಡಿಯುವ ನೌಕರ ಕಾರನ್ನು ತಾನು ತನ್ನ ಸ್ವಂತ ಕೆಲಸಕ್ಕೆ ಮತ್ತು ಕಂಪನಿಯ ಕೆಲಸಕ್ಕೆ ಬಳಸಿದರೆ, ಕೆಲವೊಂದು ಮಿತಿಗಳ ಒಳಗೆ ಅಂದರೆ ಕಾರು ತನ್ನ ಸ್ವಂತದ್ದೋ ಅಥವಾ ಕಂಪನಿ ಮಾಲೀಕರದ್ದೋ ಎಂಬುದರ ಆಧಾರವಾಗಿ ಕಾರು ನಿರ್ವಹಣಾ ಮೊತ್ತದ ಮರುಪಾವತಿ ತೆರಿಗೆಯಿಂದ ವಿನಾಯಿತಿಗೆ ಒಳಪಡುತ್ತದೆ.
ಇದನ್ನು ಬಿಡಿಸಿ ಹೇಳಬೇಕೆಂದರೆ ಕಾರನ್ನು ಕಂಪನಿಯ ಮಾಲೀಕರು ಸ್ವಂತವಾಗಿ ತೆಗೆದುಕೊಂಡಿದ್ದರೆ ಅಥವಾ ಕಾಂಟ್ರಾಕ್ಟ್ ನ ಮೇಲೆ ಬೇರೆಯವರಿಂದ ಗುತ್ತಿಗೆಗೆ ಪಡೆದಿದ್ದರೆ ಯಾವ ನೌಕರ ಅಂತಹ ಕಾರನ್ನು ತಿಂಗಳು ಪೂರ್ತಿ ಓಡಿಸುತ್ತಾನೋ ಆತ ಒಂದು ತಿಂಗಳಿಗೆ ರೂ. 2700 ಮೇಲೆ ತೆರಿಗೆಯನ್ನು (ಕಾರಿನ ಎಂಜಿನ್ ಸಾಮರ್ಥ್ಯ 1600 ಸಿಸಿ ವರೆಗಿದ್ದರೆ) ಅಥವಾ ರೂ. 3300ಗಳ ಮೇಲೆ ತೆರಿಗೆಯನ್ನು (ಕಾರಿನ ಎಂಜಿನ್ ಸಾಮರ್ಥ್ಯ 1600 ಸಿಸಿ ಮೇಲಿದ್ದರೆ) ಗುತ್ತಿಗೆ ಬಾಡಿಗೆ, ಚಾಲಕರ ಸಂಬಳ, ನಿರ್ವಹಣಾ ವೆಚ್ಚಗಳು ಮತ್ತು ಇಂಧನದ ಒಟ್ಟು ಮೊತ್ತಕ್ಕೆ ಸಂಬಂಧಿಸಿದಂತೆ ಕಂಪನಿಯ ಮಾಲೀಕರಿಗೆ ಕೊಡಬೇಕಾಗುತ್ತದೆ.
ಇನ್ನು ಕಂಪನಿಯ ಉದ್ಯೋಗಿ ತನ್ನ ಸ್ವಂತ ಕಾರನ್ನು ಹೊಂದಿದ್ದರೆ ಮೇಲೆ ಹೇಳಿದ ಹಾಗೆ ಮಾಲೀಕರಿಂದ ಭರಿಸಲ್ಪಡುವ ಮತ್ತು ಮರುಪಾವತಿ ಮಾಡಲ್ಪಡುವ ಚಾಲಕರ ಸಂಬಳ, ಕಾರು ನಿರ್ವಹಣಾ ವೆಚ್ಚಗಳು ಮತ್ತು ಇಂಧನ ವೆಚ್ಚಗಳಿಗೆ ಸಂಬಂಧಿಸಿದಂತೆ 2700 ರೂಪಾಯಿಗಳು ಮತ್ತು 3300 ರೂಪಾಯಿಗಳು (ಕಾರಿನ ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ) ಆತನಿಗೆ ವಿನಾಯಿತಿ ಸಿಗುತ್ತದೆ.

6. ಮಕ್ಕಳ ಶಿಕ್ಷಣ ಭತ್ಯೆ

6. ಮಕ್ಕಳ ಶಿಕ್ಷಣ ಭತ್ಯೆ

ಕಂಪನಿಯ ಮಾಲೀಕರು ಕಂಪನಿಯ ಉದ್ಯೋಗಿಗೆ ಮಕ್ಕಳ ಶಿಕ್ಷಣ ಭತ್ಯೆಯ ರೂಪದಲ್ಲಿ ಪ್ರತಿ ತಿಂಗಳು ಕೊಡುವ ರೂ. 100 ಅಂದರೆ ವಾರ್ಷಿಕವಾಗಿ ರೂ. 1200 ಉದ್ಯೋಗಿಗೆ ತೆರಿಗೆಗೆ ಒಳಪಡುವ ಆದಾಯದಿಂದ ವಿನಾಯಿತಿ ಸಿಗುತ್ತದೆ. ಈ ಸವಲತ್ತು ಉದ್ಯೋಗಿಯ 2 ಮಕ್ಕಳಿಗೆ ಮೀಸಲಾಗಿರುತ್ತದೆ. ಇಷ್ಟೇ ಅಲ್ಲದೆ ಉದ್ಯೋಗಿಯೂ ತನ್ನ ಮಕ್ಕಳ ಟ್ಯೂಷನ್ ಫೀಸ್ ಅನ್ನು ಕೂಡ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದಾಗಿದೆ.

7. ಹಾಸ್ಟೆಲ್ ಖರ್ಚು ನಿರ್ವಹಣಾ ಭತ್ಯೆ

7. ಹಾಸ್ಟೆಲ್ ಖರ್ಚು ನಿರ್ವಹಣಾ ಭತ್ಯೆ

ಇದೂ ಸಹ ಕಂಪನಿಯ ಉದ್ಯೋಗಿಯ ಎರಡು ಮಕ್ಕಳಿಗೆ ಮೀಸಲಾಗಿರುತ್ತದೆ. ಕಂಪನಿಯಲ್ಲಿ ದುಡಿಯುವ ನೌಕರ ತನ್ನ ಮಕ್ಕಳನ್ನು ಹಾಸ್ಟೆಲ್ ನಲ್ಲಿ ಸೇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದರೆ, ಕಂಪನಿಯ ಮಾಲೀಕರು ತನ್ನ ಉದ್ಯೋಗಿಗೆ ಒಂದು ಮಗುವಿಗೆ ತಿಂಗಳಿಗೆ ತಲಾ 300 ರೂಗಳಂತೆ ವರ್ಷಕ್ಕೆ 3600 ರೂಪಾಯಿಗಳನ್ನು ಹಾಸ್ಟೆಲ್ ಖರ್ಚು ಭತ್ಯೆ ರೂಪದಲ್ಲಿ ಕೊಡುವ ಮೊತ್ತವನ್ನು ಉದ್ಯೋಗಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದು.

8. ಫೋನ್ ಬಿಲ್ ಮರುಪಾವತಿ

8. ಫೋನ್ ಬಿಲ್ ಮರುಪಾವತಿ

ಫೋನ್ ಬಿಲ್ ಮರುಪಾವತಿಯ ಸವಲತ್ತು ಲ್ಯಾಂಡ್ಲೈನ್ ಮತ್ತು ಮೊಬೈಲ್ ಬಿಲ್ ಎಂಬ ಎರಡೂ ರೀತಿಯ ಬಿಲ್ ಮರುಪಾವತಿಗೆ ಸಿಗುತ್ತದೆ. ಕೆಲವೊಂದು ಕಂಪನಿಗಳು ತಮ್ಮ ನಿರ್ದಿಷ್ಟ ಉದ್ಯೋಗಿಗಳಿಗೆ ಈ ಸವಲತ್ತನ್ನು ಒದಗಿಸಿವೆ. ಇದರಲ್ಲಿ ಅವರು ಬಳಸುವ ಟೆಲಿಫೋನ್ ನ ಜೊತೆಗೆ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕದ ವೆಚ್ಚಗಳು ಕೂಡ ಒಳಗೊಂಡಿವೆ.
ಕಂಪನಿಯ ಮಾಲೀಕರು ತಮ್ಮ ನಿರ್ದಿಷ್ಟ ಉದ್ಯೋಗಿಯು ಬಳಸುವ ಮೇಲಿನ ಸವಲತ್ತುಗಳಿಗೆ ಪಾವತಿ ಮಾಡುವ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ ಮತ್ತು ಕಾನೂನಿನಲ್ಲಿ ಇದಕ್ಕೆ ಯಾವುದೇ ಮಿತಿ ಇಲ್ಲದಿದ್ದರೂ ಆ ನಿರ್ಧಿಷ್ಟ ಉದ್ಯೋಗಿಯ ಸಂಬಳ ಹುದ್ದೆಗನುಗುಣವಾಗಿ ವೆಚ್ಚಗಳು ಸಮಂಜಸವಾಗಿರಬೇಕು.

9. ಸಮವಸ್ತ್ರ ಭತ್ಯೆ

9. ಸಮವಸ್ತ್ರ ಭತ್ಯೆ

ಇದು ಕಂಪನಿಯ ಮಾಲೀಕರು ಕಂಪನಿಯ ಉದ್ಯೋಗಿಗೆ ತಮ್ಮ ಕಂಪನಿಯ ಕೆಲಸಕ್ಕೆ ಆತನು ಖರೀದಿ ಮಾಡುವ ಅಥವಾ ನಿರ್ವಹಣೆ ಮಾಡುವ ಸಮವಸ್ತ್ರದ ಭತ್ಯೆ ಆಗಿರುತ್ತದೆ. ಇದಕ್ಕೂ ಸಹ ತೆರಿಗೆ ವಿನಾಯಿತಿ ಇರುತ್ತದೆ.

10. ಗಿಫ್ಟ್ ವೋಚರ್

10. ಗಿಫ್ಟ್ ವೋಚರ್

ಗುಪ್ತಾರವರು ಹೇಳುವ ಪ್ರಕಾರ, ಕಂಪನಿಯ ಉದ್ಯೋಗಿಗೆ ಆಗಾಗ ಕಂಪನಿಯಿಂದ ಕೊಡುವ ಗಿಫ್ಟ್ ವೋಚರ್ ಗಳು ಅಥವಾ ಕೂಪನ್ ಗಳು ಒಂದು ವರ್ಷಕ್ಕೆ ರೂ. 5000 ಮೀರಿರುವುದಿಲ್ಲ ಮತ್ತು ಕಂಪನಿಯ ನೌಕರನಿಗೆ ಅವುಗಳು ತೆರಿಗೆ ರಹಿತವಾಗಿರುತ್ತವೆ.

ಕೊನೆ ಮಾತು

ಕೊನೆ ಮಾತು

ಗುಪ್ತಾ ರವರು ಇನ್ನೂ ಮುಂದುವರಿದು ಹೀಗೆ ಹೇಳುತ್ತಾರೆ, ಒಬ್ಬ ಉದ್ಯೋಗಿಯ ಸಂಬಳ ಹೇಗಿರಬೇಕೆಂದರೆ ಅದು ಆತನ ತಿಂಗಳ ಖರ್ಚುಗಳನ್ನು ಪೂರೈಸುವುದಲ್ಲದೆ ತನ್ನ ಭವಿಷ್ಯದ ಧೀರ್ಘಕಾಲದ ಹಣಕಾಸಿನ ಗುರಿ ಮತ್ತು ಕನಸುಗಳಿಗೆ ಸಾಕಾರವಾಗಿರಬೇಕು. ಆದ್ದರಿಂದ ಒಬ್ಬೊಬ್ಬ ಉದ್ಯೋಗಿಯೂ ತನ್ನ ಮಾಲೀಕ ತನಗೆ ಕೊಡುತ್ತಿರುವ ದುಡಿಮೆಯ ಫಲ ನಿಜಕ್ಕೂ ತನಗೆ ತನ್ನ ಕನಸುಗಳನ್ನು ನೆರವೇರಿಸುವಲ್ಲಿ ಸಹಕಾರಿಯೇ ಎಂದು ಅಳೆದು ತೂಗುವತ್ತ ಯೋಚಿಸಬೇಕು ಮತ್ತು ಅದರಂತೆಯೇ ತನ್ನ ದುಡಿಮೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಪಡಬೇಕು.

ನೋಡಿದಿರಲ್ಲ! ಈ ಮಲೆ ಉಲ್ಲೇಖಿಸಿರುವ ವಿಧಾನಗಳು ಹೇಗೆ ನಿಮಗೆ ವಸತಿ, ಊಟ, ಟೆಲಿಫೋನ್ ವೆಚ್ಚ ಹೀಗೆ ಬಹುತೇಕ ಎಲ್ಲಾ ರೀತಿಯಲ್ಲೂ ತೆರಿಗೆ ವಿನಾಯಿತಿಗೆ ಅನುಕೂಲಕರವಾಗಿವೆ. ಇವುಗಳನ್ನು ಸಾಧ್ಯವಾದಷ್ಟು ಅನುಸರಿಸಿ ಮತ್ತು ತೆರಿಗೆಯಿಂದ ಆದಷ್ಟು ಹಣ ಉಳಿಸಿ ನಿಮ್ಮ ಸ್ವಂತ ಬಾಳನ್ನು ಬೆಳಕಾಗಿಸಿಕೊಳ್ಳಿ.

ನಿಮ್ಮ ಮಗು 18ರ ಒಳಗೆ ಕೋಟ್ಯಾಧಿಪತಿಯಾಗಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.. ನಿಮ್ಮ ಮಗು 18ರ ಒಳಗೆ ಕೋಟ್ಯಾಧಿಪತಿಯಾಗಬೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ..

Read more about: income tax taxes tax savings salary epf
English summary

10 salary components that can help employees

Your salary structure consists of several components which can help you reduce your tax burden. While some of these components are fully or partially taxable, some may be fully exempt from tax.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X