For Quick Alerts
ALLOW NOTIFICATIONS  
For Daily Alerts

ಕಡಿಮೆ ಬಂಡವಾಳದಲ್ಲಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಆರಂಭಿಸಲು 25 ಐಡಿಯಾ

|

ಸ್ವಂತ ಉದ್ಯಮ ಆರಂಭಿಸಿ, ತಾನೊಬ್ಬ ಯಶಸ್ವಿ ಮಾಲೀಕನಾಗಿ ಯಾರ ಹಂಗಿಲ್ಲದೇ ಸ್ವತಂತ್ರ ಜೀವಿಯಾಗಿ ಬದುಕುಲು ತುಂಬಾ ಜನ ಇಷ್ಟ ಪಡ್ತಾರೆ! ಆದರೆ ಕಂಡ ಕನಸುಗಳನ್ನು ಎಲ್ಲರೂ ಸಾಕಾರಗೊಳಿಸುವಲ್ಲಿ ಎಡವುತ್ತಾರೆ. ಬಂಡವಾಳದ ಸಮಸ್ಯೆಯಿಂದ ಕನಸನ್ನು ಅರ್ಧಕ್ಕೆ ಕೈ ಚೆಲ್ಲುತ್ತಾರೆ.

ಕೈಯಲ್ಲಿ ಸಾಕಷ್ಟು ಬಂಡವಾಳ ಹಾಗೂ ಇನ್ನಿತರ ಅವಶ್ಯಕ ಮೂಲಭೂತ ಸೌಲಭ್ಯಗಳು ಇದ್ದಾಗ ಹೊಸ ವ್ಯಾಪಾರ ವಹಿವಾಟು ಆರಂಭಿಸುವುದು ಕಷ್ಟವೇನಲ್ಲ. ಆದಾಗ್ಯೂ ದೇಶದ ಬಹುತೇಕ ಬೃಹತ್ ವ್ಯಾಪಾರ ಸಂಸ್ಥೆಗಳು ಹಾಗೂ ಉದ್ದಿಮೆಗಳು ಒಂದು ಕಾಲದಲ್ಲಿ ಚಿಕ್ಕ ಪ್ರಮಾಣದಲ್ಲಿ ಆರಂಭಗೊಂಡು ನಂತರ ಕಾಲಾವಧಿಯಲ್ಲಿ ಬೃಹತ್ ಉದ್ಯಮಗಳಾಗಿ ಬೆಳೆದು ನಿಂತಿದ್ದು ಗಮನಿಸಬೇಕಾದ ಸಂಗತಿ.

ಅದೇನೇ ಇದ್ದರೂ ಒಮ್ಮೆಲೇ ದೊಡ್ಡಮಟ್ಟದ ಉದ್ಯಮ ಆರಂಭಿಸಬೇಕಾದರೆ ಅಷ್ಟೇ ದೊಡ್ಡ ಮೊತ್ತದ ಬಂಡವಾಳ ಬೇಕಾಗುತ್ತದೆ ಎಂಬುದು ಕೂಡ ಸತ್ಯ. ಪರಿಸ್ಥಿತಿ ಹೀಗಿರುವಾಗ ಆರಂಭದಲ್ಲಿ ಚಿಕ್ಕ ಬಂಡವಾಳದೊಂದಿಗೆ ವ್ಯಾಪಾರ-ವಹಿವಾಟು ಆರಂಭಿಸುವುದೇ ಜಾಣತನ.

 

ಸಣ್ಣ ಪ್ರಮಾಣದ ವ್ಯಾಪಾರ ವಹಿವಾಟು ಅಥವಾ ಕೈಗಾರಿಕೆ ಆರಂಭಿಸಲು 1 ಲಕ್ಷ ರೂಪಾಯಿ ಅಥವಾ ಅದಕ್ಕೂ ಕಡಿಮೆ ಮೊತ್ತದ ಬಂಡವಾಳ ಸಾಕು. ಸಣ್ಣ ಕೈಗಾರಿಕೆಗಳ ಮೂಲಕ ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಸಹ ಇದೆ. ಸಣ್ಣ ಕೈಗಾರಿಕೆಗಳ ಉತ್ಪನ್ನಗಳು ಉತ್ತಮ ಗುಣಮಟ್ಟ ಹೊಂದಿರುವುದು ಹಾಗೂ ಅವುಗಳ ಬೆಲೆ ಕಡಿಮೆಯಾಗಿರುವುದರಿಂದ ಸಹಜವಾಗಿ ಇವುಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ.

ಸಣ್ಣ ಪ್ರಮಾಣದಲ್ಲಿ ಕೈಗಾರಿಕೆ ಆರಂಭಿಸಲು ಯಾವೆಲ್ಲ ಕ್ಷೇತ್ರಗಳು ಸೂಕ್ತ ಎಂಬ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಅಲ್ಪ ಬಂಡವಾಳದಲ್ಲಿ ಆರಂಭಿಸಬಹುದಾದ 25 ಅತ್ಯುತ್ತಮ ಕೈಗಾರಿಕೆಗಳ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ. ನೀವೂ ಓದಿ ತಿಳಿದುಕೊಳ್ಳಿ.

1. ಹರ್ಬಲ್ ಹೇರ್ ಆಯಿಲ್ ತಯಾರಿಕೆ

1. ಹರ್ಬಲ್ ಹೇರ್ ಆಯಿಲ್ ತಯಾರಿಕೆ

ತಲೆಗೂದಲು ಉದುರುವಿಕೆ ಹಾಗೂ ಇನ್ನಿತರ ಕೂದಲು ಸಂಬಂಧಿ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸುತ್ತೇವೆ ಎಂದು ಹೇಳಿಕೊಳ್ಳುವ ಸಾವಿರಾರು ಹರ್ಬಲ್ ಹೇರ್ ಆಯಿಲ್ ಈಗಾಗಲೇ ಮಾರುಕಟ್ಟೆಯಲ್ಲಿವೆ. ಆದರೆ ಈ ಸಾವಿರಾರು ಉತ್ಪನ್ನಗಳಲ್ಲಿ ಯಾವುದು ನಿಜವಾಗಿ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯದೆ ಗ್ರಾಹಕರು ಗೊಂದಲಕ್ಕೀಡಾಗುತ್ತಿದ್ದಾರೆ. ಈ ಮಧ್ಯೆ ಹಲವಾರು ಸಾಂಪ್ರದಾಯಿಕ ಹಾಗೂ ಆಯುರ್ವೇದ ಮೂಲದ ವಿಧಾನಗಳ ಮೂಲಕ ತಲೆ ಕೂದಲು ಉದುರುವಿಕೆಯನ್ನು ತಡೆಗಟ್ಟುವ ಬಗ್ಗೆ ಪ್ರಮುಖ ಕೈಗಾರಿಕಾ ಕಂಪನಿಗಳು ಅಷ್ಟೊಂದು ಗಮನಹರಿಸಿಲ್ಲ. ಇಂಥ ಅವಕಾಶಗಳ ಬಗ್ಗೆ ತಿಳಿದುಕೊಂಡು ಲಾಭದಾಯಕವಾದ ಹರ್ಬಲ್ ಹೇರ್ ಆಯಿಲ್ ಉದ್ದಿಮೆ ಆರಂಭಿಸಬಹುದು

2. ಹಪ್ಪಳ ಹಾಗೂ ಸಾಬುದಾಣಿಯ ಕುರುಕಲು ತಿಂಡಿಗಳು

2. ಹಪ್ಪಳ ಹಾಗೂ ಸಾಬುದಾಣಿಯ ಕುರುಕಲು ತಿಂಡಿಗಳು

ಹಪ್ಪಳ ಹಾಗೂ ಸಾಬುದಾಣಿಯಿಂದ ಮಾಡಿದ ತಿಂಡಿಗಳಿಗೆ ವರ್ಷದುದ್ದಕ್ಕೂ ಬೇಡಿಕೆ ಇರುತ್ತದೆ. ಇವನ್ನು ತಯಾರಿಸುವುದು ಕೂಡ ಬಹಳ ಸುಲಭವಾಗಿದೆ. ಈ ಉದ್ಯಮಕ್ಕೆ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ಕೂಡ ಅಗತ್ಯವಿಲ್ಲ. ಕುರುಕಲು ತಿಂಡಿ ತಯಾರಿಸಲು ಬೇಕಾದ ನೈಪುಣ್ಯತೆ ಹಾಗೂ ತಯಾರಿಕೆಗೆ ಬೇಕಾದ ಸಾಮಗ್ರಿಗಳಾದ ಗ್ಯಾಸ್ ಒಲೆ, ಪಾತ್ರೆ ಪರಿಕರಗಳು ಇದ್ರೆ ಸಾಕು. ಇವುಗಳ ತಯಾರಿಕೆಗೆ ಬೇಕಾದ ಹಿಟ್ಟು ಹಾಗೂ ಧಾನ್ಯಗಳೊಂದಿಗೆ ಇವನ್ನು ಪ್ಯಾಕ್ ಮಾಡಲು ಒಂದಿಷ್ಟು ಫುಡ್ ಗ್ರೇಡ್ ಪ್ಲಾಸ್ಟಿಕ್ ಹಾಳೆಗಳನ್ನು ತಂದೆ ಇಟ್ಟುಕೊಳ್ಳಬೇಕಾಗುತ್ತದೆ

3. ಸುವಾಸನೆ ಭರಿತ ಸಾಬೂನು ತಯಾರಿಕೆ
 

3. ಸುವಾಸನೆ ಭರಿತ ಸಾಬೂನು ತಯಾರಿಕೆ

ಭಾರತ ದೇಶವು ಹಲವಾರು ವಿಶಿಷ್ಟ ಗಿಡಮೂಲಿಕೆಗಳು ಬೆಳೆಯುವ ತವರೂರಾಗಿದೆ. ಔಷಧೀಯ ಗುಣಗಳನ್ನು ಹೊಂದಿರುವ ಈ ಮೂಲಿಕೆಗಳು ಚರ್ಮದ ಆರೋಗ್ಯಕ್ಕೆ ಸಹ ಅತ್ಯಂತ ಉಪಯುಕ್ತವಾಗಿವೆ. ಬಹುತೇಕ ಭಾರತೀಯರು ಪ್ರತಿದಿನ ಬೆಳಗ್ಗೆ ಸ್ವಚ್ಛವಾಗಿ ಸ್ನಾನ ಮಾಡಿ ಉಲ್ಲಾಸ ಹಾಗೂ ತಾಜಾತನ ಪಡೆಯಲು ಬಯಸುತ್ತಾರೆ. ಹೀಗಿರುವಾಗ ಇಂಥದೊಂದು ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ಗಿಡಮೂಲಿಕೆಗಳಿಂದ ಮಾಡಿದ ಸುವಾಸಿತ ಹಾಗೂ ಔಷಧೀಯ ಗುಣಗಳ ಸ್ನಾನದ ಸಾಬೂನು ತಯಾರಿಕೆಯ ಕೈಗಾರಿಕೆ ಆರಂಭಿಸಲು ಯತ್ನಿಸಬಹುದು

4. ಚಾಕಲೇಟ್ ಉದ್ಯಮ

4. ಚಾಕಲೇಟ್ ಉದ್ಯಮ

ಚಾಕಲೇಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ! ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಒಂದಿಲ್ಲೊಂದು ರೀತಿಯ ಚಾಕಲೇಟ್ ಇಷ್ಟ. ನಿಜಹೇಳಬೇಕೆಂದರೆ ಚಾಕಲೇಟ್ ತಯಾರಿಸುವುದು ತಯಾರಿಸುವುದು ತೀರಾ ಕಷ್ಟದ ವಿಷಯವೇನಲ್ಲ. ಚಾಕಲೇಟ್ ಮಾರುಕಟ್ಟೆ ಈಗಾಗಲೇ ಬಹಳ ವಿಸ್ತಾರವಾಗಿದೆ ಎಂಬುದು ತಿಳಿದ ವಿಷಯವೇ ಆಗಿದೆ. ಆದರೆ ಜನ ಮಾತ್ರ ಆಗಾಗ ಹೊಸ ಫ್ಲೇವರ್ನ ಚಾಕಲೇಟ್ ಬಯಸುವುದರಿಂದ ಈ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ನಿಮ್ಮ ಕಲ್ಪನಾಶಕ್ತಿ ಹಾಗೂ ವಿಶಿಷ್ಟ ಆಲೋಚನಾ ಲಹರಿಯನ್ನು ಬಳಸಿ ಬೇರೆ ರೀತಿಯ ಚಾಕಲೇಟ್ ಚಾಕಲೇಟ್ ತಯಾರಿಸಬಹುದು. ಬರ್ತಡೇ, ಹಬ್ಬ-ಹರಿದಿನ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಚಾಕಲೇಟಿಗೆ ಮಹತ್ವದ ಸ್ಥಾನವಿದೆ. ಇದನ್ನೆಲ್ಲ ಸೂಕ್ತವಾಗಿ ಅರಿತುಕೊಂಡು ಚಾಕಲೇಟ್ ಉದ್ಯಮ ಆರಂಭಿಸಿದರೆ ಲಾಭ ಮಾಡಬಹುದು.

5. ಕುಕ್ಕೀಸ್ ಹಾಗೂ ಬಿಸ್ಕೆಟ್ ತಯಾರಿಕೆ

5. ಕುಕ್ಕೀಸ್ ಹಾಗೂ ಬಿಸ್ಕೆಟ್ ತಯಾರಿಕೆ

ಕುಕ್ಕೀಸ್ ಹಾಗೂ ಬಿಸ್ಕೆಟ್ ತಯಾರಿಸುವ ಸಣ್ಣ ಕೈಗಾರಿಕೆ ನಿಜವಾಗಿಯೂ ಆಕರ್ಷಕವಾಗಿದೆ. ದೊಡ್ಡ ಕಂಪನಿಗಳ ಕುಕ್ಕೀಸ್ ಹಾಗೂ ಬಿಸ್ಕೆಟ್ಗಳ ರುಚಿಯನ್ನು ಈಗಾಗಲೇ ನೋಡಿರುವ ಗ್ರಾಹಕರು ಹೊಸ ರುಚಿಯ ಕುಕ್ಕೀಸ್ ಹಾಗೂ ಬಿಸ್ಕೆಟ್ಗಳನ್ನು ಸವಿಯಲು ಬಯಸುತ್ತಾರೆ. ಆದರೆ ಆದರೆ ದೊಡ್ಡ ಕಂಪನಿಗಳ ಉತ್ಪನ್ನಗಳ ಮುಂದೆ ಸ್ಪರ್ಧೆ ಮಾಡಲಾಗದೆ ಹಲವಾರು ಬೇಕರಿಯವರು ಸ್ವಂತ ಬಿಸ್ಕೆಟ್ ತಯಾರಿಸುವುದನ್ನು ಬಿಟ್ಟುಬಿಟ್ಟಿದ್ದಾರೆ. ಇಂಥದೊಂದು ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು.

6. ಬೆಣ್ಣೆ, ತುಪ್ಪ ಹಾಗೂ ಪನೀರ್ ಮಾರಾಟ

6. ಬೆಣ್ಣೆ, ತುಪ್ಪ ಹಾಗೂ ಪನೀರ್ ಮಾರಾಟ

ಇತ್ತೀಚಿನ ದಿನಗಳಲ್ಲಿ ದೊಡ್ಡ ಕಂಪನಿಗಳ ಪ್ಯಾಕ್ ಮಾಡಿದ ಬ್ರ್ಯಾಂಡೆಡ್ ಬಟರ್ ಅನ್ನೇ ಬಹುತೇಕರು ಬಳಸುತ್ತಿದ್ದಾರೆ. ಆದರೆ ಉಪ್ಪು ಬೆರೆಸಿದ ಈ ಬಟರ್ ಬಹುತೇಕರಿಗೆ ಇಷ್ಟವಾಗುವುದಿಲ್ಲ ಎಂಬುದು ಕೂಡ ಸತ್ಯ. ಮನೆಯಲ್ಲಿ ಮಜ್ಜಿಗೆ ಕಡೆದು ತಯಾರಿಸಿದ ತಾಜಾ ಬೆಣ್ಣೆಯೇ ಇಂದಿಗೂ ಅನೇಕರಿಗೆ ಇಷ್ಟ. ಹೀಗೆ ಮಜ್ಜಿಗೆಯಿಂದ ಮಾಡಿದ ಬೆಣ್ಣೆ ಆರೋಗ್ಯಕ್ಕೂ ಹಿತಕರ. ಈ ಅವಕಾಶವನ್ನು ಬಳಸಿಕೊಂಡು ಮನೆಯಲ್ಲೇ ತಯಾರಿಸಿದ ಬೆಣ್ಣೆ, ತುಪ್ಪ ಹಾಗೂ ಪನ್ನೀರ್ ಮಾರಾಟದ ಮಳಿಗೆ ಆರಂಭಿಸಬಹುದು.

7. ಗಂಧದಕಡ್ಡಿ ಹಾಗೂ ಅಗರಬತ್ತಿ ತಯಾರಿಕೆ

7. ಗಂಧದಕಡ್ಡಿ ಹಾಗೂ ಅಗರಬತ್ತಿ ತಯಾರಿಕೆ

ಕಳೆದ ಹಲವಾರು ದಶಕಗಳಿಂದ ಕರ್ನಾಟಕವು ಗಂಧದಕಡ್ಡಿ ಹಾಗೂ ಅಗರಬತ್ತಿ ತಯಾರಿಕೆಗೆ ಹೆಸರುವಾಸಿಯಾಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಸಾವಿರಾರು ಅಗರಬತ್ತಿ ತಯಾರಿಕಾ ಕಂಪನಿಗಳಿವೆ. ಗಂಧದಕಡ್ಡಿ ಹಾಗೂ ಅಗರಬತ್ತಿ ತಯಾರಿಕೆಗೆ ಬೇಕಾದ ಸಾಮಗ್ರಿಗಳು ಕರ್ನಾಟಕದಲ್ಲಿ ಯಥೇಚ್ಛವಾಗಿ ಸಿಗುವುದರಿಂದಲೇ ಈ ಉದ್ಯಮ ರಾಜ್ಯದಲ್ಲಿ ಹುಲುಸಾಗಿ ಬೆಳೆದಿದೆ. ಈ ಕ್ಷೇತ್ರದಲ್ಲಿ ಹೊಸ ಉದ್ಯಮ ಆರಂಭಿಸಲು ಪ್ರಯತ್ನಿಸುವುದರಲ್ಲಿ ತಪ್ಪೇನೂ ಇಲ್ಲ.

8. ಕ್ಯಾಂಡಲ್ ಹಾಗೂ ಮೇಣದ ವಸ್ತುಗಳ ತಯಾರಿಕೆ

8. ಕ್ಯಾಂಡಲ್ ಹಾಗೂ ಮೇಣದ ವಸ್ತುಗಳ ತಯಾರಿಕೆ

ಈಗಲೂ ದೇಶದ ಹಲವಾರು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿರುವುದರಿಂದ ಬೆಳಕಿಗಾಗಿ ಕ್ಯಾಂಡಲ್ಗಳ ಬೇಡಿಕೆ ಸಾಕಷ್ಟಿದೆ. ಸಣ್ಣ ಆಕಾರದಿಂದ ಹಿಡಿದು ದೊಡ್ಡ ಗಾತ್ರದ ಕ್ಯಾಂಡಲ್ಗಳಿಗೆ ಉತ್ತಮ ಮಾರುಕಟ್ಟೆ ಇದೆ. ಕ್ಯಾಂಡಲ್ ತಯಾರಿಸಲು ಈಗ ಸುಲಭ ಸಾಧನಗಳು ಲಭ್ಯವಿರುವುದರಿಂದ ಈ ಉದ್ಯಮ ಆರಂಭಿಸುವುದು ಕಷ್ಟವೇನೂ ಇಲ್ಲ.

9. ಕ್ಯಾಂಡಿ ಹಾಗೂ ಪೆಪ್ಪರಮಿಂಟ್ ತಯಾರಿಕೆ

9. ಕ್ಯಾಂಡಿ ಹಾಗೂ ಪೆಪ್ಪರಮಿಂಟ್ ತಯಾರಿಕೆ

ಈಗಲೂ ಭಾರತದಲ್ಲಿ ಕ್ಯಾಂಡಿ ಹಾಗೂ ಹಾಗೂ ಪೆಪ್ಪರಮಿಂಟ್ ತಯಾರಿಕೆ ಸಣ್ಣ ಕೈಗಾರಿಕೆಗಳ ಮಟ್ಟದಲ್ಲಿಯೇ ಇದೆ. ಪೆಪ್ಪರ್ಮಿಂಟ್ ಹಾಗೂ ಇತರ ಸಕ್ಕರೆ ಲೇಪಿತ ಕ್ಯಾಂಡಿಗಳನ್ನು ತಯಾರಿಸಲು ಸುಸಜ್ಜಿತ ಉಪಕರಣಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಮನೆಯಲ್ಲಿಯೇ ಸಣ್ಣ ಜಾಗದಲ್ಲಿ ಈ ಉದ್ಯಮವನ್ನು ಆರಂಭಿಸಬಹುದು.

10. ಸೋಡಾ ಹಾಗೂ ಫ್ಲೇವರ್ಡ್ ಡ್ರಿಂಕ್ಸ್

10. ಸೋಡಾ ಹಾಗೂ ಫ್ಲೇವರ್ಡ್ ಡ್ರಿಂಕ್ಸ್

ವಿವಿಧ ರೀತಿಯ ಹಾಗೂ ವಿಭಿನ್ನ ರುಚಿಯ ಸೋಡಾ ಹಾಗೂ ಫ್ಲೇವರ್ಡ್ ಡ್ರಿಂಕ್ಸ್ಗಳನ್ನು ನೋಡಬೇಕೆಂದರೆ ನೀವು ಒಂದು ಸಲ ಗೋವಾ ರಾಜ್ಯಕ್ಕೆ ಭೇಟಿ ನೀಡಬೇಕು. ಕೇವಲ ಐದು ರೂಪಾಯಿಗೆ ಗ್ಲಾಸ್ ಆರೆಂಜ್ ಅಥವಾ ಲೆಮನ್ ಅಥವಾ ಸ್ಟ್ರಾಬೆರಿ ಜ್ಯೂಸ್ ಇಲ್ಲಿ ಖರೀದಿಸಬಹುದು. ವಿಶಿಷ್ಟ ರುಚಿಯ ಜ್ಯೂಸುಗಳು ಕೇವಲ 10 ರೂಪಾಯಿಗೆ ಲಭ್ಯ. ಆದರೆ ಪ್ರಖ್ಯಾತ ಕಂಪನಿಯ ಸೋಡಾಗೆ 10 ರೂಪಾಯಿ ಅಥವಾ ಅದಕ್ಕೂ ಹೆಚ್ಚು ಬೆಲೆಯಾಗುತ್ತದೆ. ಅದೇ ರೀತಿ ಬ್ರ್ಯಾಂಡೆಡ್ ಫ್ಲೇವರ್ಡ್ ಡ್ರಿಂಕ್ಸ್ಗೆ 15 ರಿಂದ 20 ರೂಪಾಯಿ ಬೆಲೆ ಇದೆ. ಈ ಅವಕಾಶವನ್ನು ಬಳಸಿಕೊಂಡಲ್ಲಿ ಕಡಿಮೆ ಬೆಲೆಯ ಸೋಡಾ ಹಾಗೂ ಫ್ಲೇವರ್ಡ್ ಡ್ರಿಂಕ್ಸ್ ಮಾರಾಟ ಮಳಿಗೆ ಆರಂಭಿಸಬಹುದು.

11. ಹಣ್ಣಿನ ಪಲ್ಪ್ ತಯಾರಿಸುವುದು

11. ಹಣ್ಣಿನ ಪಲ್ಪ್ ತಯಾರಿಸುವುದು

ಪ್ರತಿವರ್ಷ ನಮ್ಮ ದೇಶದಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಹಣ್ಣುಗಳು ಕೊಳೆತು ನಾಶವಾಗುತ್ತವೆ. ಹೆಚ್ಚು ಪ್ರಮಾಣದಲ್ಲಿ ಹಣ್ಣುಗಳು ಬೆಳೆದಾಗ ಅವನ್ನು ಸಂಗ್ರಹಿಸಲು ಸ್ಟೋರೇಜ್ ಸೌಲಭ್ಯ ಇಲ್ಲದೇ ಇರುವುದರಿಂದ ಅವು ಹಾಳಾಗುತ್ತವೆ. ಆದರೆ ಆಯಾ ಸೀಸನ್ಗಳಲ್ಲಿ ಬೆಳೆಯುವ ಹಣ್ಣುಗಳನ್ನು ಕಡಿಮೆ ಬೆಲೆಗೆ ಕೊಂಡು ಅವುಗಳ ಪಲ್ಪ್ ತಯಾರಿಸಿ ಸಂಸ್ಕರಣೆ ಮಾಡಿ ಇಟ್ಟಲ್ಲಿ ನಂತರದ ದಿನಗಳಲ್ಲಿ ಅದನ್ನು ಉತ್ತಮ ಬೆಲೆಗೆ ಮಾರಬಹುದು.

12. ತರಕಾರಿ ಹಾಗೂ ಸೊಪ್ಪುಗಳ ಸಂಸ್ಕರಣೆ

12. ತರಕಾರಿ ಹಾಗೂ ಸೊಪ್ಪುಗಳ ಸಂಸ್ಕರಣೆ

ನಮ್ಮ ದೇಶದಲ್ಲಿ ಹಣ್ಣುಗಳು ಮಾತ್ರವಲ್ಲದೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ತರಕಾರಿ ಹಾಗೂ ಸೊಪ್ಪುಗಳು ಸಹ ಪ್ರತಿವರ್ಷ ಕೊಳೆತು ಹಾಳಾಗುತ್ತವೆ. ಕೆಲ ಸೀಸನ್ಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸೊಪ್ಪು ಹಾಗೂ ತರಕಾರಿ ಉತ್ಪಾದಿಸಲಾಗುತ್ತದೆ. ಆದರೆ ಇದಕ್ಕೆ ಸೂಕ್ತ ಮಾರುಕಟ್ಟೆ ಸಿಗದೆ ಎಲ್ಲವೂ ಹಾಳಾಗಿ ಹೋಗುತ್ತವೆ. ಇಂಥ ಸಂದರ್ಭದಲ್ಲಿ ಅವನ್ನು ನಿರ್ಜಲೀಕರಣಗೊಳಿಸಿ ಸಂಸ್ಕರಿಸಿದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಬೆಲೆಗೆ ಅವನ್ನು ಮಾರಬಹುದು. ಉದಾರಣೆಗೆ ಒಣಗಿಸಿದ ಟೊಮ್ಯಾಟೊ, ನಿರ್ಜಲೀಕರಣಗೊಳಿಸಿದ ಈರುಳ್ಳಿ, ಹಸಿರು ಬಟಾಣಿ, ಬೀನ್ಸ್ ಮುಂತಾದವುಗಳಿಗೆ ಉತ್ತಮ ಮಾರುಕಟ್ಟೆ ಇದೆ. ಅಲ್ಲದೆ ಈ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ಸಹ ಸಾಕಷ್ಟು ಆದಾಯ ಪಡೆಯುವ ಅವಕಾಶಗಳಿವೆ.

13. ನಿತ್ಯಬಳಕೆಯ ರೊಟ್ಟಿ ಚಪಾತಿ ತಯಾರಿಸುವುದು

13. ನಿತ್ಯಬಳಕೆಯ ರೊಟ್ಟಿ ಚಪಾತಿ ತಯಾರಿಸುವುದು

ಇಂದಿನ ಆಧುನಿಕ ಜಗತ್ತಿನಲ್ಲಿ ಏಕವ್ಯಕ್ತಿ ಅಥವಾ ಇಬ್ಬರೇ ಇರುವ ಕುಟುಂಬಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಚಿಕ್ಕ ಚಿಕ್ಕ ಕೋಣೆಗಳಲ್ಲಿ ವಾಸಿಸುವವರಿಗೆ ಅಲ್ಲಿ ಆಹಾರ ತಯಾರಿಸಲು ಸಾಧ್ಯವಾಗುವುದಿಲ್ಲ. ಇಂಥ ಜನನಿಬಿಡ ವಸತಿ ಪ್ರದೇಶಗಳಲ್ಲಿ ಬಿಸಿ ರೊಟ್ಟಿ ಹಾಗೂ ಚಪಾತಿ ಮಾರುವ ಅಂಗಡಿ ಆರಂಭಿಸಬಹುದು.

14. ಕಾಗದದ ಬ್ಯಾಗ್ ಹಾಗೂ ಪ್ಯಾಕೆಟ್ ತಯಾರಿಕೆ

14. ಕಾಗದದ ಬ್ಯಾಗ್ ಹಾಗೂ ಪ್ಯಾಕೆಟ್ ತಯಾರಿಕೆ

ಬಳಸಿದ ವಸ್ತುಗಳನ್ನು ರಿಸೈಕಲ್ ಮಾಡಿ ಮರುಬಳಕೆಗೆ ಅನುವಾಗುವಂತೆ ಮಾಡುವುದು ಇಂದಿನ ತುರ್ತು ಅನಿವಾರ್ಯತೆಯಾಗಿದೆ. ನೈಸರ್ಗಿಕ ಸಂಪತ್ತಿನ ಸದ್ಬಳಕೆ ಹಾಗೂ ಅದನ್ನು ಸಂರಕ್ಷಿಸಲು ವಸ್ತುಗಳ ರಿಸೈಕ್ಲಿಂಗ್ ಮಾಡಲೇಬೇಕು. ಇದರ ಜೊತೆಗೆ ಆದಷ್ಟೂ ಪ್ಲಾಸ್ಟಿಕ್ ಬ್ಯಾಗ್ ಹಾಗೂ ಇನ್ನಿತರ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕಿದೆ. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ಕ್ರಮಗಳಿಂದ ಈಗ ಮಾರುಕಟ್ಟೆಯಲ್ಲಿ ಕಾಗದದ ಬ್ಯಾಗ್ಗಳಿಗೆ ಭಾರಿ ಬೇಡಿಕೆ ಉಂಟಾಗುತ್ತಿದೆ. ಇಂಥದೊಂದು ಉತ್ತಮ ಅವಕಾಶ ಬಳಸಿಕೊಂಡು ಕಾಗದದ ಬ್ಯಾಗ್ ಹಾಗೂ ಪ್ಯಾಕೆಟ್ ತಯಾರಿಕೆಯ ಉದ್ಯಮ ಆರಂಭಿಸಬಹುದು.

15. ವೇಷಭೂಷಣ ಹಾಗೂ ಅಗ್ಗದ ಆಭರಣ ತಯಾರಿಕೆ

15. ವೇಷಭೂಷಣ ಹಾಗೂ ಅಗ್ಗದ ಆಭರಣ ತಯಾರಿಕೆ

ಫ್ಯಾಷನ್ ಜಗತ್ತಿನಲ್ಲಿ ವಿಶಿಷ್ಟ ಉಡುಪುಗಳಿಗೆ ಹಾಗೂ ಅಸಲಿಯಂತೆ ಕಾಣುವ ಅಗ್ಗದ ಆಭರಣಗಳಿಗೆ ಯಾವಾಗಲೂ ಬೇಡಿಕೆ ಇದೆ. ಈಗಂತೂ ಎಲ್ಲರೂ ಸುಂದರವಾಗಿ ಕಾಣಲು ಬಯಸುವುದರಿಂದ ಈ ಕ್ಷೇತ್ರದಲ್ಲಿ ಅವಕಾಶಗಳು ಇದ್ದೇ ಇವೆ. ಇದರ ಬಗ್ಗೆ ಸೂಕ್ತವಾಗಿ ಅಧ್ಯಯನ ಮಾಡಿದಲ್ಲಿ ಹೊಸ ಉದ್ಯಮವೊಂದಕ್ಕೆ ಮುನ್ನುಡಿ ಬರೆಯುವುದು ಕಷ್ಟವೇನಲ್ಲ.

16. ಬಳಸಿ ಎಸೆಯುವ ಕಪ್, ಪ್ಲೇಟ್ ತಯಾರಿಕೆ

16. ಬಳಸಿ ಎಸೆಯುವ ಕಪ್, ಪ್ಲೇಟ್ ತಯಾರಿಕೆ

ಪಾರ್ಟಿಗಳು ಅಥವಾ ಪಿಕ್ನಿಕ್ ಗಳಲ್ಲಿ ಪ್ಲಾಸ್ಟಿಕ್ನಿಂದ ತಯಾರಿಸಿದ ಕಪ್, ಪ್ಲೇಟ್, ಚಮಚೆಗಳನ್ನು ಎಲ್ಲರೂ ಬಳಸಲು ಇಷ್ಟಪಡುತ್ತಾರೆ. ಸ್ಟೀಲ್ ತಟ್ಟೆಗಳನ್ನು ಬಳಸುವುದು ಹಾಗೂ ನಂತರ ಅವನ್ನು ತೊಳೆಯುತ್ತ ಕೂರುವುದು ಯಾರಿಗೂ ಬೇಡವಾದ ಸಂಗತಿಯಾಗಿದೆ. ಈ ಒಂದು ಅವಕಾಶವನ್ನು ಬಳಸಿಕೊಂಡು ಫುಡ್ ಗ್ರೇಡ್ ಪ್ಲಾಸ್ಟಿಕ್ ಅಥವಾ ಅಡಿಕೆ ಹಾಳೆಯ ಕಪ್, ಪ್ಲೇಟ್ ಹಾಗೂ ಇನ್ನಿತರ ವಸ್ತುಗಳನ್ನು ತಯಾರಿಸಿ ಲಾಭ ಕಂಡುಕೊಳ್ಳಬಹುದು.

17. ಕಾಂಕ್ರೀಟ್ ಬ್ಲಾಕ್ ತಯಾರಿಕೆ

17. ಕಾಂಕ್ರೀಟ್ ಬ್ಲಾಕ್ ತಯಾರಿಕೆ

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಭಾರತ ಅದ್ಭುತ ಪ್ರಗತಿಯನ್ನು ಸಾಧಿಸುತ್ತಿದೆ. ವಾಸಿಸುವ ಮನೆಗಳಿಂದ ಹಿಡಿದು ಬೃಹತ್ ಕೈಗಾರಿಕಾ ಕಟ್ಟಡಗಳವರೆಗೆ ನಿರ್ಮಾಣ ಕ್ಷೇತ್ರ ಬೆಳೆಯುತ್ತಲೇ ಸಾಗುತ್ತಿದೆ. ಈಗ ಇಂಥ ನಿರ್ಮಾಣ ಕಾಮಗಾರಿಗಳಲ್ಲಿ ಮುಂಚೆ ಬಳಸಲಾಗುತ್ತಿದ್ದ ಕೆಂಪು ಇಟ್ಟಿಗೆಗಳ ಬದಲಾಗಿ ಕಾಂಕ್ರೀಟ್ ಬ್ಲಾಕ್ ಗಳನ್ನು ಬಳಸಲಾಗುತ್ತಿದೆ. ಈ ಒಂದು ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಕಾಂಕ್ರೀಟ್ ಬ್ಲಾಕ್ ಉದ್ಯಮ ಆರಂಭಿಸಬಹುದು.

18. ಹೆಂಚು/ಟೈಲ್ಸ್ ತಯಾರಿಕೆ

18. ಹೆಂಚು/ಟೈಲ್ಸ್ ತಯಾರಿಕೆ

ಕೆಂಪು ಬಣ್ಣದ ಮಂಗಳೂರು ಹೆಂಚುಗಳನ್ನು ನಾವೆಲ್ಲ ನೋಡಿಯೇ ಇದ್ದೇವೆ. ಈಗ ಈ ಹೆಂಚುಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ದೊರಕುತ್ತಿದೆ. ಆದರೆ ಇವುಗಳನ್ನು ಮಂಗಳೂರಿನಲ್ಲಿ ಮಾತ್ರ ತಯಾರಿಸಲಾಗುತ್ತದೆ ಎಂದು ನೀವು ತಿಳಿದುಕೊಂಡಿದ್ದಲ್ಲಿ ಅದು ತಪ್ಪು. ಅಲ್ಲಿ ಸಿಗುವ ಮಣ್ಣು ಹಾಗೂ ಇತರ ಕಚ್ಚಾ ವಸ್ತುಗಳಿಂದ ಇವನ್ನು ತಯಾರಿಸುವುದು ನಿಜವಾದರೂ, ಈಗ ಇವನ್ನು ರಾಜ್ಯದ ಅನೇಕ ಭಾಗಗಳಲ್ಲಿ ತಯಾರಿಸಲಾಗುತ್ತಿದೆ. ಈ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಮಂಗಳೂರು ಹೆಂಚು ತಯಾರಿಕೆ ಉದ್ಯಮ ಆರಂಭಿಸಬಹುದು.

19. ಕೈಚೀಲ, ಪರ್ಸ್ ತಯಾರಿಕೆ

19. ಕೈಚೀಲ, ಪರ್ಸ್ ತಯಾರಿಕೆ

ಕೈಚೀಲ, ಪರ್ಸ್ ಹಾಗೂ ಇನ್ನಿತರ ಚೀಲಗಳು ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಪರ್ಸ್ ಹಾಗೂ ಕೈಚೀಲ ಇಲ್ಲದೆ ಮನೆಯಿಂದ ಹೊರ ಹೋಗುವವರು ಯಾರೂ ಇಲ್ಲ ಎಂದೇ ಹೇಳಬಹುದು. ವಿಶಿಷ್ಟ ಆಧುನಿಕ ಶೈಲಿಯ ಕೈಚೀಲಗಳು ಹಾಗೂ ಪರ್ಸ್ಗಳಿಗೆ ಸಾಕಷ್ಟು ಬೇಡಿಕೆ ಇದೆ. ಖ್ಯಾತ ಡಿಸೈನರ್ ಗಳು ತಯಾರಿಸುವ ಇಂಥ ಸಾಮಗ್ರಿಗಳು ತೀರಾ ದುಬಾರಿ ಬೆಲೆಯಲ್ಲಿ ಮಾರಲ್ಪಡುತ್ತವೆ. ಈ ಒಂದು ಅವಕಾಶವನ್ನು ಬಳಸಿಕೊಂಡಲ್ಲಿ ಹೊಸ ಉದ್ಯಮವನ್ನು ನೀವೂ ಆರಂಭಿಸಬಹುದು.

20. ಬೆಡ್ ಶೀಟ್ ಹಾಗೂ ಬ್ಲಾಂಕೆಟ್ ತಯಾರಿಕೆ

20. ಬೆಡ್ ಶೀಟ್ ಹಾಗೂ ಬ್ಲಾಂಕೆಟ್ ತಯಾರಿಕೆ

ದೇಶದ ಕೆಲ ಊರುಗಳು ಬೆಡ್ ಶೀಟ್ ಹಾಗೂ ಬ್ಲಾಂಕೆಟ್ ತಯಾರಿಕೆಗೆ ಹೆಸರುವಾಸಿಯಾಗಿವೆ. ಮಹಾರಾಷ್ಟ್ರದ ಸೊಲ್ಲಾಪುರ, ಕರ್ನಾಟಕದ ದಾವಣಗೆರೆ ಹೀಗೆ ಕೆಲ ಊರುಗಳು ಈ ಉದ್ಯಮಕ್ಕೆ ಹೆಸರುವಾಸಿಯಾಗಿವೆ. ಕಳೆದ ಹಲವಾರು ದಶಕಗಳಿಂದ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಈ ಊರುಗಳಲ್ಲಿ ತಯಾರಿಸಲಾಗುತ್ತ ಬರಲಾಗುತ್ತಿದೆ. ಅಂದರೆ ಉತ್ತಮ ಗುಣಮಟ್ಟದ ಬ್ಲಾಂಕೆಟ್ ಹಾಗೂ ಬೆಡ್ ಶೀಟ್ ಗಳಿಗೆ ಬೇಡಿಕೆ ಯಾವಾಗಲೂ ಇದೆ ಎಂತಲೇ ಅರ್ಥ. ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರೆ ಹೊಸ ಉದ್ಯಮ ಆರಂಭಿಸಬಹುದು.

21. ಟೇಬಲ್ ಕ್ಲಾಥ್ ಹಾಗೂ ಟೇಬಲ್ ಮ್ಯಾಟ್

21. ಟೇಬಲ್ ಕ್ಲಾಥ್ ಹಾಗೂ ಟೇಬಲ್ ಮ್ಯಾಟ್

ಬಟ್ಟೆಯ ಟೇಬಲ್ ಕ್ಲಾಥ್ ಹಾಗೂ ಟೇಬಲ್ ಮ್ಯಾಟ್ ಗಳು ಇತ್ತೀಚೆಗೆ ಕಣ್ಮರೆಯಾಗುತ್ತಿವೆ. ಇದರ ಬದಲಾಗಿ ಪ್ಲಾಸ್ಟಿಕ್ ಟೇಬಲ್ ಕ್ಲಾಥ್ ಹಾಗೂ ಮ್ಯಾಟ್ಗಳ ಬಳಕೆ ಹೆಚ್ಚಾಗುತ್ತಿದೆ. ಇವನ್ನು ತೊಳೆಯುವುದು ಹಾಗೂ ಮತ್ತೆ ಬಳಸುವುದು ಸುಲಭವಾಗಿದ್ದರಿಂದ ಇವಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದೆ.

22. ವಾಹನಗಳ ಅಕ್ಸೆಸರೀಸ್ ತಯಾರಿಕೆ

22. ವಾಹನಗಳ ಅಕ್ಸೆಸರೀಸ್ ತಯಾರಿಕೆ

ವಾಹನಗಳ ಅಕ್ಸೇಸರೀಸ್ ಎಂದರೆ ಕೇವಲ ಅಟೊಮೊಬೈಲ್ ಬಿಡಿಭಾಗಗಳು ಮಾತ್ರವಲ್ಲ. ಸ್ಟೀಯರಿಂಗ್ ವೀಲ್ ಕವರ್, ಸೀಟ್ ಕವರ್, ಬೈಕ್ ಟ್ಯಾಂಕ್ ಕವರ್ ಹೀಗೆ ಇನ್ನೂ ಹಲವಾರು ಸಾಮಗ್ರಿಗಳನ್ನು ಬಳಸಲಾಗುತ್ತದೆ. ವಾಹನೋದ್ಯಮ ಸತತ ಬೆಳವಣಿಗೆ ಹೊಂದುತ್ತಿರುವ ಕ್ಷೇತ್ರವಾಗಿರುವುದರಿಂದ ಈ ವಸ್ತುಗಳಿಗೆ ಬೇಡಿಕೆ ಇದ್ದೇ ಇರುತ್ತದೆ.

23. ಮಸಾಲೆ ಪದಾರ್ಥ ತಯಾರಿಕೆ

23. ಮಸಾಲೆ ಪದಾರ್ಥ ತಯಾರಿಕೆ

ಮಸಾಲೆ ಹಾಗೂ ಸಾಂಬಾರು ಪದಾರ್ಥಗಳಿಗೆ ಭಾರತ ಜಗತ್ತಿನಲ್ಲೇ ಹೆಸರುವಾಸಿಯಾಗಿದೆ. ಈಗ ಪ್ಯಾಕ್ ಮಾಡಿದ ವಿವಿಧ ರುಚಿಯ ಮಸಾಲೆ ಹಾಗೂ ಸಾಂಬಾರು ಪದಾರ್ಥಗಳಿಗೆ ದೇಶದಲ್ಲಿ ಸಾಕಷ್ಟು ಬೇಡಿಕೆ ಇದೆ. ಈಗಾಗಲೇ ದೊಡ್ಡ ಕಂಪನಿಗಳು ಈ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರೂ ಆಯಾ ಪ್ರದೇಶದ ನಿಜವಾದ ಟೇಸ್ಟ್ ಕೊಡಲು ಇವಕ್ಕೆ ಸಾಧ್ಯವಾಗಿಲ್ಲ. ಈ ಒಂದು ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳಬಹುದು.

24. ವೈದ್ಯಕೀಯ ಬಳಕೆಯ ವಸ್ತುಗಳು

24. ವೈದ್ಯಕೀಯ ಬಳಕೆಯ ವಸ್ತುಗಳು

ಸರ್ಜಿಕಲ್ ಗ್ಲೋಗಳು, ಸರ್ಜಿಕಲ್ ಕಾಟನ್ ಸೇರಿದಂತೆ ಇನ್ನೂ ಹಲವಾರು ವೈದ್ಯಕೀಯ ಉಪ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ಎಲ್ಲ ವಸ್ತುಗಳು ಸಣ್ಣ ಕೈಗಾರಿಕೆಗಳಿಂದಲೇ ಪೂರೈಸಲ್ಪಡುತ್ತವೆ. ಆಹಾರ ಹಾಗೂ ಔಷಧ ನಿಯಂತ್ರಕ ಪ್ರಾಧಿಕಾರಗಳಿಂದ ಅವಶ್ಯಕ ಪ್ರಮಾಣ ಪತ್ರ ಪಡೆದುಕೊಂಡಲ್ಲಿ ಇಂಥದೊಂದು ಉದ್ಯಮವನ್ನು ಆರಂಭಿಸಬಹುದಾಗಿದೆ.

25. ಅಲ್ಯೂಮಿನಿಯಂ ಹಾಗೂ ಫೈಬರ್ ಗ್ಲಾಸ್ ಬಾಗಿಲು, ಕಿಟಕಿ ತಯಾರಿಕೆ

25. ಅಲ್ಯೂಮಿನಿಯಂ ಹಾಗೂ ಫೈಬರ್ ಗ್ಲಾಸ್ ಬಾಗಿಲು, ಕಿಟಕಿ ತಯಾರಿಕೆ

ಇತ್ತೀಚಿನ ದಿನಗಳಲ್ಲಿ ಕಟ್ಟಿಗೆ ತೀರಾ ದುಬಾರಿಯಾಗಿರುವುದರಿಂದ ಮನೆ ಕಟ್ಟುವಾಗ ಅಲ್ಯೂಮಿನಿಯಂ ಹಾಗೂ ಫೈಬರ್ ಗ್ಲಾಸ್ ಕಿಟಕಿ ಬಾಗಿಲುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನು ಬಚ್ಚಲು ಮನೆಗಳಿಗೆ ನೀರು ನಿರೋಧಕವಾದ ಈ ಕಿಟಕಿ, ಬಾಗಿಲುಗಳನ್ನೇ ಬಳಸಲು ಎಲ್ಲರೂ ಇಷ್ಟಪಡುತ್ತಾರೆ. ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡು ಅಲ್ಯೂಮಿನಿಯಂ ಹಾಗೂ ಫೈಬರ್ ಗ್ಲಾಸ್ ಬಾಗಿಲು ಹಾಗೂ ಕಿಟಕಿ ತಯಾರಿಸುವ ಉದ್ದಿಮೆ ಆರಂಭಿಸಬಹುದು.

English summary

25 Idea to Start Manufacturing Business in Low Capital

Indeed, products made by small scale industries are in greater demand since product quality is often higher and prices rather competitive.
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more