For Quick Alerts
ALLOW NOTIFICATIONS  
For Daily Alerts

ಷೇರುಪೇಟೆಯಲ್ಲಿ ಗೌರಿ ಗಣೇಶ ಹಬ್ಬದ ರಿಯಾಯಿತಿ ಮಾರಾಟ: ಹೂಡಿಕೆಗೆ ಗಟ್ಟಿ ಕುಳಗಳು.

|

ಅಕ್ಟೊಬರ್ ತಿಂಗಳ ದೀಪಾವಳಿಯ ಸಂದರ್ಭದಲ್ಲಿ ಹೆಚ್ಚಿನ ಅಗ್ರಮಾನ್ಯ ಬ್ರಾಂಡೆಡ್ ಕಂಪನಿಗಳು ಭಾರಿ ರಿಯಾಯ್ತಿ ಮಾರಾಟಕ್ಕೊಳಪಟ್ಟಿದ್ದವು. ನಂತರದ ದಿನಗಳಲ್ಲಿ ಷೇರುಪೇಟೆಯು ಉತ್ತುಂಗಕ್ಕೇರಿ ಸೆನ್ಸೆಕ್ಸ್ 40 ಸಾವಿರದ ಗಡಿ ದಾಟಿ ಸರ್ವಕಾಲೀನ ದಾಖಲೆಯನ್ನು ನಿರ್ಮಿಸಿತು. ಅದರೊಂದಿಗೆ ಹೆಚ್ಚಿನ ಕಂಪನಿಗಳು ಸಹ ಗರಿಷ್ಠಮಟ್ಟದ ಏರಿಕೆಗೊಳಪಟ್ಟವು. ಆದರೂ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾದವು. ಈಗ ಗೌರಿ ಗಣೇಶ ಹಬ್ಬದ ಪ್ರಯುಕ್ತವೇನೋ ಎಂಬಂತೆ ಹೆಚ್ಚಿನ ಕುಸಿತಕಂಡಿರುವ ಅಗ್ರಮಾನ್ಯ ಕಂಪನಿಗಳ ಪಟ್ಟಿಯೊಂದಿದೆ. ಅಕ್ಟೊಬರ್ ತಿಂಗಳಿಂದಲೂ ಇದುವರೆಗೆ ಕುಸಿತದಲ್ಲಿವೆ ಎಂದರೆ ಅವು ನಿರಂತರವಾಗಿ ಇಳಿಕೆಯಲ್ಲಿವೆ ಎಂದರ್ಥವಲ್ಲ. ಇವು ಈ ಅವಧಿಯಲ್ಲಿ ಗರಿಷ್ಟ ಮಟ್ಟಕ್ಕೆ ತಲುಪಿ ನಂತರ ಕಾರಣಾಂತರಗಳಿಂದ ಕುಸಿತಕ್ಕೊಳಪಟ್ಟಿವೆ. ಇಲ್ಲಿ ಕೆಲವು ಕಂಪನಿಗಳ ವಿವರಗಳನ್ನು ಕೊಡಲಾಗಿದೆ. ಅವುಗಳ ಖರೀದಿಬಗ್ಗೆ ನೀವೇ ನಿರ್ಧರಿಸಿರಿ.

1. ಐ ಟಿ ಸಿ ಕಂಪನಿ
 

1. ಐ ಟಿ ಸಿ ಕಂಪನಿ

ಐ ಟಿ ಸಿ ಕಂಪನಿ ಷೇರಿನ ಬೆಲೆ ರೂ. 236 ರ ಸಮೀಪವಿದ್ದು, ಈ ಕಂಪನಿಯು ವೃತ್ತಿಪರರಿಂದ ಕಾರ್ಯನಿರ್ವಹಿಸಲ್ಪಡುತ್ತಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರೂ.322 ರ ಗರಿಷ್ಟ ತಲುಪಿದ ನಂತರ ಅಕ್ಟೊಬರ್ ತಿಂಗಳಲ್ಲಿ ರೂ.270 ರವರೆಗೂ ಕುಸಿಯಿತು. ಈ ವರ್ಷದ ಮೇ ತಿಂಗಳಲ್ಲಿ ರೂ.310 ರವರೆಗೂ ಚೇತರಿಕೆ ಕಂಡು ಸಧ್ಯ ರೂ.236 ರ ವಾರ್ಷಿಕ ಕನಿಷ್ಟದಲ್ಲಿದೆ. ಕಂಪನಿಯು ಪ್ರತಿ ಷೇರಿಗೆ ರೂ.5.75 ರ ಲಾಭಾಂಶವನ್ನು ಪ್ರಕಟಿಸಿದೆ.

2 . ಗೇಲ್ ಇಂಡಿಯಾ

2 . ಗೇಲ್ ಇಂಡಿಯಾ

ಗೇಲ್ ಇಂಡಿಯಾ ಸಾರ್ವಜನಿಕ ವಲಯದ ಬೃಹತ್ ಕಂಪನಿಯಾಗಿದ್ದು ಹಿಂದಿನ ವರ್ಷ ಇದೇ ಸಮಯದಲ್ಲಿ ರೂ. 197 ರಲ್ಲಿ ವಹಿವಾಟಾಗುತ್ತಿದ್ದಂತಹ ಕಂಪನಿ. ಈ ತಿಂಗಳ 23 ರಂದು ರೂ. 119.65 ಕ್ಕೆ ಕುಸಿದಿದೆ. ಇದು ವಾರ್ಷಿಕ ಕನಿಷ್ಠಮಟ್ಟವಾಗಿದೆ. ಆಗಸ್ಟ್ 2018 ರಲ್ಲಿ 197 ರಲ್ಲಿದ್ದ ಈ ಕಂಪನಿಯ ಷೇರಿನ ಬೆಲೆ ಫೆಬ್ರವರಿ 2019 ರಲ್ಲಿ ರೂ.155 ರವರೆಗೂ ಇಳಿಕೆ ಕಂಡಿದ್ದು, ಮೇ ಅಂತ್ಯದಲ್ಲಿ ರೂ.180 ಕ್ಕೆ ಪುಟಿದೆದ್ದು, ಜುಲೈ ತಿಂಗಳ ಬೋನಸ್ ನಂತರದಲ್ಲಿ ಕುಸಿದಿದೆ. ಜುಲೈ 2019 ರಲ್ಲಿ ಈ ಕಂಪನಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದೆ. 2018ರಲ್ಲೂ 1:3 ರ ಅನುಪಾತದ ಬೋನಸ್ ಷೇರು ವಿತರಿಸಿದೆ. ಹಿಂದಿನ ವರ್ಷ ಈ ಕಂಪನಿಯು ಪ್ರತಿ ಷೇರಿಗೆ ರೂ.8 ರಂತೆ ಲಾಭಾಂಶ ವಿತರಿಸಿದೆ.

3. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್
 

3. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಅತಿ ಹೆಚ್ಚು ಲಾಭಗಳಿಕೆ ಮಾಡಿಕೊಡುವ ಸಾರ್ವಜನಿಕ ವಲಯದ ಕಂಪನಿಯಾಗಿದೆ. ಈ ಕಂಪನಿ ಷೇರಿನ ಬೆಲೆ ಕಳೆದ ಅಕ್ಟೊಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಸಮಯದಲ್ಲಿ ಆಯಿಲ್ ಮಾರ್ಕೆಟಿಂಗ್ ಕಂಪನಿಗಳಿಗೆ ಪ್ರತಿ ಲೀಟರ್ ಗೆ ಒಂದು ರುಪಾಯಿಯ ಕಡಿತವನ್ನು ಆದೇಶಿಸಿದಾಗ ಈ ವಲಯದ ಕಂಪನಿಗಳ ಷೇರಿನ ಬೆಲೆಗಳು ತರಗೆಲೆಗಳಂತೆ ಉದುರಿದವು. ಆ ಸಂದರ್ಭದಲ್ಲಿ ರೂ.150. ಆದರೆ ಅಲ್ಲಿಂದ ಮತ್ತೆ ರೂ.150 ಕ್ಕೆ ಪುಟಿದೆದ್ದ ವೇಗ ಮಾತ್ರ ಕಲ್ಪನಾತೀತವಾದುದು. ಅಕ್ಟೊಬರ್ 5 ರಂದು ರೂ.105.65 ರ ಕನಿಷ್ಟದಲ್ಲಿದ್ದಂತಹ ಷೇರು ನವೆಂಬರ್ 2 ರಂದು ರೂ.150.95 ಕ್ಕೆ ತಲುಪಿತು. ಅಂದರೆ ಕೇವಲ ಒಂದೇ ತಿಂಗಳ ಅವಧಿಯಲ್ಲಿ ಈ ಪ್ರಮಾಣದ ಏರಿಕೆ ಗಮನಾರ್ಹವಾದುದು. ಹಿಂದಿನ ವರ್ಷ ಈ ಕಂಪನಿ ಪ್ರತಿ ಷೇರಿಗೆ ಒಟ್ಟು ರೂ.9.25 ರ ಲಾಭಾಂಶವನ್ನು ವಿತರಿಸಿದೆ.

4 . ಬಯೋಕಾನ್ ಲಿಮಿಟೆಡ್

4 . ಬಯೋಕಾನ್ ಲಿಮಿಟೆಡ್

ಬಯೋಕಾನ್ ಲಿಮಿಟೆಡ್ ಕಂಪನಿ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ರೂ.252 ರ ಸಮೀಪದಿಂದ ರೂ.211 ರವರೆಗೂ ಕುಸಿದು ಸಧ್ಯ ರೂ.224 ರ ಸಮೀಪವಿದೆ. ಏಪ್ರಿಲ್ 2019 ರಲ್ಲಿ ರೂ.320 ರ ಸಮೀಪವಿದ್ದಂತಹ ಈ ಷೇರು ರೂ.211 ರವರೆಗೂ ಕುಸಿಯುವುದಕ್ಕೆ ಪ್ರಭಲವಾದ ಆಂತರಿಕ ಕಾರಣಗಳು ಇರದಿದ್ದರೂ. ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯೇ ಈ ಭಾರಿ ಕುಸಿತಕ್ಕೆ ಕಾರಣವಾಗಿದೆ. ಈ ಕಂಪನಿ ಜೂನ್ ತಿಂಗಳಲ್ಲಿ 1:1 ರ ಅನುಪಾತದ ಬೋನಸ್ ಷೇರು ವಿತರಿಸಿದೆ. 2017 ರಲ್ಲಿ ಪ್ರತಿ ಒಂದು ಷೇರಿಗೆ ಎರಡು ಷೇರು ಬೋನಸ್ ವಿತರಿಸಿದ ಈ ಕಂಪನಿ ಬಯೋಟೆಕ್ ವಲಯದ ಪ್ರತಿಷ್ಠಿತ ಕಂಪನಿಯಾಗಿದೆ.

5. ಕರ್ನಾಟಕ ಬ್ಯಾಂಕ್ ಲಿಮಿಟೆಡ್

5. ಕರ್ನಾಟಕ ಬ್ಯಾಂಕ್ ಲಿಮಿಟೆಡ್

ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಷೇರಿನ ಬೆಲೆ ರೂ.75 ರ ಸಮೀಪವಿದೆ. ಈ ಷೇರಿನ ಬೆಲೆ ಕಳೆದ ಏಪ್ರಿಲ್ ತಿಂಗಳಲ್ಲಿ 141 ರ ವಾರ್ಷಿಕ ಗರಿಷ್ಟದಲ್ಲಿದ್ದು, ಕೇವಲ ನಾಲ್ಕೇ ತಿಂಗಳಲ್ಲಿ ರೂ.71.90 ರ ವಾರ್ಷಿಕ ಕನಿಷ್ಟಕ್ಕೆ ಕುಸಿದಿದೆ. ಈ ಕುಸಿತಕ್ಕೆ ಪೇಟೆಯ ನಿರುತ್ಸಾಹಿ ವಾತಾವರಣವಾಗಿದೆ. ಕಾರಣ ಜೂನ್ ತ್ರೈಮಾಸಿಕದಲ್ಲೂ ಈ ಬ್ಯಾಂಕ್ ಉತ್ತಮವಾದ ಸಾಧನೆಯನ್ನು ಪ್ರಕಟಿಸಿದೆ. ಪ್ರತಿ ಷೇರಿಗೆ ರೂ.3.50 ಯಂತೆ ಲಾಭಾಂಶ ವಿತರಿಸಿದ ಈ ಬ್ಯಾಂಕ್ ದಕ್ಷಿಣಭಾರತದ ಖಾಸಗಿ ವಲಯದ ಉತ್ತಮ ಸಂಸ್ಥೆಯಾಗಿದೆ.

6. ಎನ್ ಎಂ ಡಿ ಸಿ ಕಂಪನಿ

6. ಎನ್ ಎಂ ಡಿ ಸಿ ಕಂಪನಿ

ಎನ್ ಎಂ ಡಿ ಸಿ ಕಂಪನಿಯು ಸಾರ್ವಜನಿಕ ವಲಯದ ಕಂಪನಿಯಾಗಿದೆ. ಕೇಂದ್ರ ಸರ್ಕಾರವು ತನ್ನ ಬಂಡವಾಳ ಹಿಂತೆಗೆತ ಕಾರ್ಯಕ್ರಮದಡಿ ಹಿಂದಿನ ವರ್ಷ ಪ್ರತಿ ಷೇರಿಗೆ ರೂ.153.50 ರಂತೆ ಈ ಷೇರುಗಳನ್ನು ಮಾರಾಟಮಾಡಿದ್ದು, ತದನಂತರದಲ್ಲಿ ಷೇರಿನ ಬೆಲೆ ಇಳಿಮುಖವಾಗಿದೆ. ಕಂಪನಿಯ ಸಾಧನೆಯು ಉತ್ತಮವಾಗಿದ್ದರೂ ಸಹ ಷೇರಿನ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿಲ್ಲ. ಈ ಕಂಪನಿ ಷೇರಿನ ಬೆಲೆ ರೂ.74.80 ರ ವಾರ್ಷಿಕ ಕನಿಷ್ಟಕ್ಕೆ ಈ ತಿಂಗಳ 23 ನೇ ಶುಕ್ರವಾರ ತಲುಪಿತ್ತು. ಅಲ್ಲಿಂದ ಚೇತರಿಕೆ ಕಂಡು ರೂ.80 ರ ಸಮೀಪವಿದೆ. ಈ ಕಂಪನಿ ಪ್ರತಿ ಷೇರಿಗೆ ರೂ.5.52 ರ ಲಾಭಾಂಶ ವಿತರಿಸಿದೆ.

7. ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್

7. ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್

ಹೆಚ್ ಎ ಎಲ್ ಎಂಬ ನಾಮಾಂಕಿತದಲ್ಲಿ ಗುರುತಿಸಿಕೊಂಡಿರುವ ಈ ಕಂಪನಿಯ ಷೇರನ್ನು ಹಿಂದಿನ ವರ್ಷ ಕೇಂದ್ರಸರ್ಕಾರವು ಪ್ರತಿ ಷೇರಿಗೆ ರೂ.1,215 ರಂತೆ ತನ್ನ ಬಂಡವಾಳ ಹಿಂತೆಗೆತದ ಕಾರ್ಯಕ್ರಮದಡಿ ಮಾರಾಟಮಾಡಿತು. ಈ ಕಂಪನಿ ಬಗ್ಗೆ ತೇಲಿಬಂದಿರುವ ವೈವಿಧ್ಯಮಯ ರೀತಿಯ ಸುದ್ಧಿಗಳ ಕಾರಣ ಷೇರಿನ ಬೆಲೆ ನಿರಂತರವಾದ ಇಳಿಕೆ ಕಂಡುಕೊಂಡಿದೆ . ಈ ಕಂಪನಿ ಷೇರಿನ ಬೆಲೆ ಸಧ್ಯ ರೂ.644 ರ ಸಮೀಪವಿದ್ದು, ರೂ.603.25 ವಾರ್ಷಿಕ ಕನಿಷ್ಠ ಬೆಲೆಯಾಗಿದೆ. ಈ ಕಂಪನಿ ಪ್ರತಿ ಷೇರಿಗೆ ರೂ.19.80 ರ ಲಾಭಾಂಶವನ್ನು ವಿತರಿಸಿದೆ. ಆದರೆ ಒರಿಜಿನಲ್ ಅಲಾಟ್ ಮೆಂಟ್ ಪಡೆದವರಿಗೆ ಮಾತ್ರ ಹೆಚ್ಚಿನ ಹಾನಿಯುಂಟುಮಾಡಿದೆ. ಕೇಂದ್ರ ಸರ್ಕಾರ ಈಗಲೂ ಸುಮಾರು ಶೇ.89.97 ರಷ್ಟು ಭಾಗಿತ್ವ ಹೊಂದಿದ್ದು ಮುಂದಿನದಿನಗಳಲ್ಲಿ ಈ ಕಂಪನಿಯು ಬಂಡವಾಳ ಹಿಂತೆಗೆತದಡಿ ಮತ್ತೊಮ್ಮೆ ಓ ಎಫ್ ಎಸ್ ಮೂಲಕ ಪೇಟೆಗೆ ಬರಬಹುದಾಗಿದೆ.

8. ಮೈಂಡ್ ಟ್ರೀ

8. ಮೈಂಡ್ ಟ್ರೀ

ಮೈಂಡ್ ಟ್ರೀ ಕಂಪನಿಯು ಇತ್ತೀಚಿಗೆ ಲಾರ್ಸನ್ ಅಂಡ್ ಟೊಬ್ರೋ ಕಂಪನಿಯ ತೆಕ್ಕೆಗೆ ಸೇರಿಕೊಂಡಿದೆ. ಜೂನ್ ಅಂತ್ಯದವರೆಗೂ ಕಂಪನಿಯ ಷೇರಿನ ಬೆಲೆ ರೂ.980 ರಂತೆ ಬೈಬ್ಯಾಕ್ ಯೋಜನೆ ಜಾರಿಯಲ್ಲಿತ್ತು. ಆ ಸಮಯದವರೆಗೂ ಷೇರಿನ ಬೆಲೆಯು ಸ್ಥಿರತೆಯಲ್ಲಿತ್ತು. ಆದರೆ ಬೈಬ್ಯಾಕ್ ಯೋಜನೆ ಅವಧಿ ಮುಗಿದನಂತರ ಷೇರಿನ ಬೆಲೆಯೂ ರೂ.750 ರ ಸಮೀಪಕ್ಕೆ ಕುಸಿಯಿತು. ಜುಲೈ ತಿಂಗಳಲ್ಲಿ ರೂ.652 ರವರೆಗೂ ಇಳಿಕೆಕಂಡು ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿತು. ಸಧ್ಯ ಷೇರಿನ ಬೆಲೆಯೂ ರೂ.709 ರ ಸಮೀಪವಿದೆ. ಜುಲೈ ತಿಂಗಳಲ್ಲಿ ವಿಶೇಷ ಡಿವಿಡೆಂಡ್ ಸೇರಿ ರೂ.24 ರಂತೆ ಲಾಭಾಂಶ ವಿತರಿಸಿದೆ.

9. ವೇದಾಂತ ಲಿಮಿಟೆಡ್

9. ವೇದಾಂತ ಲಿಮಿಟೆಡ್

ಕಂಪನಿಯು ಕಳೆದ ಒಂದು ತಿಂಗಳಲ್ಲಿ ರೂ.175 ರ ಸಮೀಪದಿಂದ ರೂ.125.75 ರವರೆಗೂ ಕುಸಿದಿದೆ. ಸಧ್ಯ ರೂ.137.50 ಯಲ್ಲಿರುವ ಈ ಕಂಪನಿಯು ಕಳೆದ ತ್ರೈಮಾಸಿಕದಲ್ಲಿ ಹಾನಿ ಅನುಭವಿಸಿದೆ. ಅಂತರರಾಷ್ಟ್ರೀಯ ಪೇಟೆಗಳಲ್ಲಿ ಲೋಹ ವಲಯದ ದರಗಳು ಕುಸಿಯುತ್ತಿರುವುದು ಇದಕ್ಕೆ ಕಾರಣವಾಗಿದೆ. ಈ ಕಂಪನಿಯು ಸೆನ್ಸೆಕ್ಸ್ ನ ಅಂಗವಾಗಿದೆ. ಹಿಂದಿನವರ್ಷ ಪ್ರತಿ ಷೇರಿಗೆ ರೂ.18.85 ರ ಲಾಭಾಂಶ ವಿತರಿಸಿದೆ.

10. ಮಹಿಂದ್ರಾ ಅಂಡ್ ಮಹಿಂದ್ರಾ

10. ಮಹಿಂದ್ರಾ ಅಂಡ್ ಮಹಿಂದ್ರಾ

ಕಂಪನಿಯು ಹಿಂದಿನ ವರ್ಷದ ಆಗಸ್ಟ್ ಅಂತ್ಯದಲ್ಲಿ ರೂ.992 ರ ವಾರ್ಷಿಕ ಗರಿಷ್ಟದಲ್ಲಿದ್ದು ಈ ವರ್ಷ ಆಗಸ್ಟ್ ಮಧ್ಯಂತರದಲ್ಲಿ ರೂ.509.50 ಯ ವಾರ್ಷಿಕ ಕನಿಷ್ಟಕ್ಕೆ ಕುಸಿದಿದ್ದು ಸಧ್ಯ ರೂ.533 ರ ಸಮೀಪವಿದೆ. ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದ ಈ ಕಂಪನಿ ಹಿಂದಿನ ವರ್ಷದಲ್ಲಿ ಪ್ರತಿ ಷೇರಿಗೆ ರೂ.8.50 ಯಂತೆ ಲಾಭಾಂಶ ವಿತರಿಸಿದೆ.

ಹೊರನೋಟಕ್ಕೆ ಈ ಕಂಪನಿಗಳು ಹೂಡಿಕೆಗೆ ಆಕರ್ಷಣೀಯವೆನಿಸಿದರು ಪೇಟೆಯ ವಾತಾವರಣ ಮತ್ತು ಕಂಪೆನಿಗಳಲ್ಲಿನ ಬೆಳವಣಿಗೆಗಳನ್ನಾಧರಿಸಿ ನಿಮ್ಮ ಹೂಡಿಕೆ ಬಗ್ಗೆ ನಿರ್ಧರಿಸಿರಿ.

English summary

Gauri Ganesha Festive Discount Sale in Stock Market: Best Stocks for investment

Gauri Ganesha Festive Discount Sale in Stock Market: Best Stocks for investment
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more