For Quick Alerts
ALLOW NOTIFICATIONS  
For Daily Alerts

ಪ್ರತಿ ತಿಂಗಳು 10000 ಹೂಡಿಕೆ ಮಾಡಲು ಯಾವ ಮ್ಯೂಚುವಲ್ ಫಂಡ್ ಉತ್ತಮ?

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹೂಡಿಕೆದಾರರು ಮ್ಯೂಚುವಲ್ ಫಂಡ್ ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಮ್ಯೂಚುವಲ್ ಫಂಡ್ ಸಿಪ್ ಗಳಲ್ಲಿ ಹೂಡಿಕೆ ಮಾಡಲು ಬಯಸುವವರು ಸೂಕ್ತ ಸಲಹೆ ಮಾರ್ಗದರ್ಶನ ಪಡೆಯಲು ಬಯಸುತ್ತಾರೆ.

|

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹೂಡಿಕೆದಾರರು ಮ್ಯೂಚುವಲ್ ಫಂಡ್ ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಮ್ಯೂಚುವಲ್ ಫಂಡ್ ಸಿಪ್ ಗಳಲ್ಲಿ ಹೂಡಿಕೆ ಮಾಡಲು ಬಯಸುವವರು ಸೂಕ್ತ ಸಲಹೆ ಮಾರ್ಗದರ್ಶನ ಪಡೆಯಲು ಬಯಸುತ್ತಾರೆ. ಕೆಲವರು ಬಂಡವಾಳ, ಷೇರುಪೇಟೆ ಸಲಹೆಗಾರರು ಅಥವಾ ತಜ್ಞರಿಂದ ಮಾರ್ಗದರ್ಶನ ಪಡೆಯುತ್ತಾರೆ.
ಇಲ್ಲಿ ಹೂಡಿಕೆದಾರರೊಬ್ಬರು ಹತ್ತು ವರ್ಷಗಳ ಅವಧಿಗೆ ತಾವು ಹೂಡಿಕೆ ಮಾಡುತ್ತಿರುವ ಮ್ಯೂಚುವಲ್ ಫಂಡ್ ಗಳ ಮಾಹಿತಿ ನೀಡಿದ್ದು, ಇದಕ್ಕಿಂತ ಉತ್ತಮವಾಗಿರುವ ಹೂಡಿಕೆ ವಿಧಾನಗಳಿಗಾಗಿ ಸಲಹೆ ಕೇಳಿದ್ದಾರೆ. ಬನ್ನಿ ನೋಡೋಣ..

ಪ್ರತಿ ತಿಂಗಳು 10000 ಹೂಡಿಕೆ

ಪ್ರತಿ ತಿಂಗಳು 10000 ಹೂಡಿಕೆ

ನನಗೆ 26 ವರ್ಷ. ಪ್ರಸ್ತುತ, ನಾನು ಈ ಕೆಳಗಿನ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇನೆ:
ಮಿರೇ ಅಸೆಟ್ ಟ್ಯಾಕ್ಸ್ ಸೇವರ್ ಫಂಡ್: ರೂ. 5,000 ಆಕ್ಸಿಸ್ ಫೋಕಸ್ಡ್ 25 ಫಂಡ್: ರೂ. 4,000
ಆಕ್ಸಿಸ್ ಬ್ಲೂಚಿಪ್ ಫಂಡ್: ರೂ. 2,000
ಕೊಟಕ್ ಸ್ಟ್ಯಾಂಡರ್ಡ್ ಮಲ್ಟಿಕ್ಯಾಪ್ ಫಂಡ್: ರೂ. 4,000
ನಾನು ಕೆಲವು ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ತಿಂಗಳಿಗೆ ರೂ. 10,000 ಹೆಚ್ಚುವರಿ ಹೂಡಿಕೆ ಮಾಡಲು ಬಯಸುತ್ತೇನೆ. ಕೆಲವು ಯೋಜನೆಗಳನ್ನು ಸೂಚಿಸಿ.

ತಜ್ಞರ ಪ್ರತಿಕ್ರಿಯೆ

ತಜ್ಞರ ಪ್ರತಿಕ್ರಿಯೆ

ಪಿಎಕ್ಸ್‌ಜಿ ಕನ್ಸಲ್ಟೆಂಟ್ಸ್ (PxG Consultants) ನಿರ್ದೇಶಕ ಗೌರವ್ ಮೊಂಗಾ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ:
ನೀವು ಉತ್ತಮ ಫಂಡ್ ಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಿ. ನಿಮ್ಮ ಯೋಜನೆಗಳು ಎರಡು ಪ್ರಮುಖ ಇಕ್ವಿಟಿ ಫಂಡ್ ವಿಭಾಗಗಳನ್ನು ಒಳಗೊಂಡಿವೆ: ಲಾರ್ಜ್ ಕ್ಯಾಪ್ ಮತ್ತು ಮಲ್ಟಿ ಕ್ಯಾಪ್.
ನಿಮ್ಮ ಪೋರ್ಟ್ಫೋಲಿಯೊಗೆ ಹೆಚ್ಚಿನ ಯೋಜನೆಗಳನ್ನು ಸೇರಿಸಬೇಡಿ. ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ನಿಮ್ಮ SIP ಗಳನ್ನು ಹೆಚ್ಚಿಸಿ. ನಿಮ್ಮ ಹೂಡಿಕೆಯ ಅವಧಿ 10 ವರ್ಷಗಳು ಆಗಿರುವುದರಿಂದ, ನೀವು ಮಿಡ್ ಕ್ಯಾಪ್-ಆಧಾರಿತ ಫಂಡ್ ಗಳನ್ನು ಸೇರಿಸಬಹುದು. ಇದು ನಿಮ್ಮ ಪೋರ್ಟ್ಫೋಲಿಯೊಗೆ ಹೆಚ್ಚಿನ ವೈವಿಧ್ಯತೆಯನ್ನು ಸೇರಿಸುತ್ತದೆ.

ಹೂಡಿಕೆ ಸಲಹೆ

ಹೂಡಿಕೆ ಸಲಹೆ

ಪಿಎಕ್ಸ್‌ಜಿ ಕನ್ಸಲ್ಟೆಂಟ್ಸ್ (PxG Consultants) ನಿರ್ದೇಶಕ ಗೌರವ್ ಮೊಂಗಾ ಅವರು ಸೂಚಿಸಿರುವ ಹೂಡಿಕೆ ಕ್ರಮಗಳು ಹೀಗಿವೆ:
ಆಕ್ಸಿಸ್ ಫೋಕಸ್ಡ್ 25 ಫಂಡ್
ಆಕ್ಸಿಸ್ ಬ್ಲೂಚಿಪ್ ಫಂಡ್
ಕೊಟಾಕ್ ಸ್ಟ್ಯಾಂಡರ್ಡ್ ಮಲ್ಟಿಕ್ಯಾಪ್ ಫಂಡ್ ಗಳಲ್ಲಿ ಸಿಪ್ ನ್ನು ತಲಾ ರೂ. 2,000 ಗಳಿಂದ ಹೆಚ್ಚಿಸಿ. ಎರಡನೆಯದಾಗಿ, ಫ್ರಾಂಕ್ಲಿನ್ ಇಂಡಿಯಾ ಪ್ರಿಮಾ ಫಂಡ್ ಅಥವಾ ಎಲ್ ಅಂಡ್ ಟಿ ಮಿಡ್‌ಕ್ಯಾಪ್ ಫಂಡ್‌ನಲ್ಲಿ ರೂ. 4,000 ಸಿಪ್ ಪ್ರಾರಂಭಿಸಿ.

English summary

Mutual funds to invest Rs 10,000 per month for 10 years?

You are investing in good funds. Your schemes cover two important equity fund categories: large cap and multi cap. Do not add too many schemes to your portfolio. Increase your SIPs in the existing schemes.
Story first published: Friday, September 6, 2019, 11:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X