For Quick Alerts
ALLOW NOTIFICATIONS  
For Daily Alerts

ಈ ತಿಂಗಳ ಸಂಬಳ ಬಂತಾ? ಹೀಗೆ ಮಾಡಿ..

ಪ್ರಥಮ ಬಾರಿ ಪಡೆಯುವ ಸಂಬಳ ಸದಾ ನೆನಪಿನಲ್ಲಿರುವಂಥದ್ದು! ಕೆಲಸಕ್ಕೆ ಸೇರಿ ಪ್ರಥಮ ಸಂಬಳ ಪಡೆದಾಗ ಆಗುವ ಖುಷಿಯನ್ನು ವರ್ಣಿಸಲು ಪದಗಳೇ ಸಿಗಲ್ಲ. ಪ್ರತಿಯೊಬ್ಬರೂ ತಮ್ಮದೇ ಯೋಜನೆಯಂತೆ ಮೊದಲ ಸಂಬಳವನ್ನು ವಿನಿಯೋಗಿಸುತ್ತಾರೆ.

|

ಪ್ರಥಮ ಬಾರಿ ಪಡೆಯುವ ಸಂಬಳ ಸದಾ ನೆನಪಿನಲ್ಲಿರುವಂಥದ್ದು! ಕೆಲಸಕ್ಕೆ ಸೇರಿ ಪ್ರಥಮ ಸಂಬಳ ಪಡೆದಾಗ ಆಗುವ ಖುಷಿಯನ್ನು ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮದೇ ಯೋಜನೆಯಂತೆ ಮೊದಲ ಸಂಬಳವನ್ನು ವಿನಿಯೋಗಿಸುತ್ತಾರೆ. ಪ್ರತಿ ತಿಂಗಳು ಸಂಬಳ ಪಡೆದಾಗ ಕೂಡ ಯಾವ ರೀತಿಯ ಯೋಜನೆ ರೂಪಿಸಬೇಕು, ಹೇಗೆಲ್ಲಾ ಬಳಸಬೇಕು ಅನ್ನುವುದು ಕೂಡ ತುಂಬಾ ಮುಖ್ಯ.
ಇದು ಎಲ್ಲರಿಗೂ ಆರ್ಥಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಮಿಗಿಲಾಗಿ ನಿಮ್ಮ ಸ್ವಾಭಿಮಾನ ಮತ್ತು ವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ಸಾಮಾನ್ಯವಾಗಿ ಮೊದಲ ಬಾರಿ ಇಲ್ಲವೇ ಪ್ರತಿ ತಿಂಗಳು ಸಂಬಳ ಪಡೆದಾಗ ಮಾಡುವ ಕೆಲಸವೆಂದರೆ ನಿಮಗೆ ಅಥವಾ ಪೋಷಕರಿಗೆ ಗಿಫ್ಟ್ ಕೊಡುವುದು. ಇಲ್ಲವೇ ಸ್ನೇಹಿತರಿಗೆ ಪಾರ್ಟಿ ಕೊಡುತ್ತೇವೆ.
ನಿಮ್ಮ ಮೊದಲ ಸಂಬಳ ಇಲ್ಲವೇ ಪ್ರತಿ ತಿಂಗಳು ಸಂಬಳ ಪಡೆದಾಗ ನಿಮ್ಮ ಹಣಕಾಸು ಭದ್ರತೆ ಮತ್ತು ಭವಿಷ್ಯತ್ತಿನ ಬಗ್ಗೆ ವಿಚಾರ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಮನೆ, ಕಾರು, ಬೈಕ್ ಮತ್ತು ಇನ್ನೂ ಹೆಚ್ಚು ಮಾಲೀಕತ್ವದ ಕನಸುಗಳಿಗೆ ಅಡಿಪಾಯ ಹಾಕಲು ಇದು ಸೂಕ್ತ ಸಮಯ. ಹೀಗಾಗಿ ಜೀವನಕ್ಕೆ ಭದ್ರ ಬುನಾದಿ ಹಾಕಲು ಇಂತಹ ಪ್ರಾಥಮಿಕ ನಿರ್ಧಾರಗಳನ್ನು ಕೈಗೊಂಡು ಹಂತಹಂತವಾಗಿ ಕನಸಿನ ಮೆಟ್ಟಿಲುಗಳನ್ನು ಏರುತ್ತಾ ಸಾಗಬೇಕು.
ಪ್ರತಿ ಬಾರಿ ಸಂಬಳ ಪಡೆದಾಗ ಏನು ಮಾಡಬೇಕು, ಹೇಗೆ ಉಳಿತಾಯ ಮಾಡಬೇಕು, ಇಲ್ಲವೇ ಎಲ್ಲಿ ಹೂಡಿಕೆ ಮಾಡಬೇಕು ಇತ್ಯಾದಿ ಗೊಂದಲ ಇರುತ್ತದೆ. ಅದಕ್ಕಾಗಿ ಇಲ್ಲಿ ಕೆಲ ಪ್ರಮುಖ ಅಂಶಗಳನ್ನು ನೀಡಲಾಗಿದ್ದು, ಇವುಗಳನ್ನು ತಪ್ಪದೆ ಪಾಲಿಸಿದರೆ ಸುಂದರ, ಸುಸ್ಥಿರ, ಸುಕ್ಷೇಮ ಜೀವನ ನಿಮ್ಮದಾಗುತ್ತದೆ. ಅಂತಹ ಪ್ರಮುಖ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ ಬನ್ನಿ ನೋಡಿ...

ಉಳಿತಾಯ ಹವ್ಯಾಸ ಮುಖ್ಯ

ಉಳಿತಾಯ ಹವ್ಯಾಸ ಮುಖ್ಯ

ಉದ್ಯೋಗಿಗಳು ಪ್ರತಿ ಬಾರಿ ಪಡೆಯುವ ಸಂಬಳ ಅಮೂಲ್ಯವಾದದ್ದು ಎಂಬುದನ್ನು ಮರೀಬಾರ್ದು. ಅದರಲ್ಲೂ ಹೆಚ್ಚಿನವರು ಮೊದಲ ಬಾರಿ ಪಡೆಯುವ ಸಂಬಳವನ್ನು ಮನರಂಜನೆ, ಪಾರ್ಟಿಗಳಿಗಾಗಿ ಖರ್ಚು ಮಾಡುತ್ತಾರೆ. ಅನಗತ್ಯ ಖರೀದಿ, ಶಾಪಿಂಗ್, ಹೋಟೆಲ್ ಗಳು ನಿಮ್ಮ ಸಂಬಳವನ್ನು ನುಂಗಿ ಹಾಕುತ್ತವೆ. ಆದರೆ ಇದೇ ನಿಮ್ಮ ಹವ್ಯಾಸವಾಗಿ ಪರಿವರ್ತನೆ ಆಗಬಾರದು ಎಂಬುದನ್ನು ನೆನಪಿಡಬೇಕು. ಮುಂದಿನ ಭವಿಷ್ಯಕ್ಕಾಗಿ ಉಳಿತಾಯವನ್ನು ಪ್ರಾರಂಭಿಸಬೇಕು. ಹೀಗಾಗಿ ಪ್ರತಿತಿಂಗಳು ಉಳಿತಾಯ ಮಾಡಲು ಗುರಿಯನ್ನು ನಿಗದಿಪಡಿಸಿ. (Pay yourself before you pay others by saving.)

ಬಜೆಟ್ ಇರಲಿ

ಬಜೆಟ್ ಇರಲಿ

ಸಂಬಳ ಪಡೆದಾಗ ಬಜೆಟ್ ಪ್ಲಾನ್ ರೂಪಿಸುವುದು ಮರಿಯಲೇಬೇಡಿ. ಪ್ರತಿ ತಿಂಗಳು ಬಜೆಟ್ ರೂಪಿಸಿ. ಸಾಧ್ಯವಾದರೆ ಪ್ರತಿನಿತ್ಯ, ಪ್ರತಿ ವಾರ, ತಿಂಗಳಿಗೆ ಅನುಸಾರವಾಗಿ ಖರ್ಚುವೆಚ್ಚದ ಯಾದಿಯನ್ನು ಸಿದ್ದಪಡಿಸಿ. ನಿಮ್ಮ ವೈಯಕ್ತಿಕ ಹಣಕಾಸು ಪರಿಸ್ಥಿತಿ ತಿಳಿಯಲು ಪ್ರತಿ ತಿಂಗಳ ನಿಮ್ಮ ಆದಾಯವನ್ನು ಲೆಕ್ಕ ಹಾಕಿಕೊಳ್ಳಿ. ಅದರಲ್ಲಿ ನಿಮ್ಮ ಹಣ ಯಾವುದಕ್ಕೆ ಎಷ್ಟು ಖರ್ಚಾಗುತ್ತದೆ ಉದಾ: ಬಾಡಿಗೆ, ಪ್ರಯಾಣ ವೆಚ್ಚ, ಆಹಾರ ವೆಚ್ಚ, ಮನರಂಜನೆ ಮತ್ತು ಗೃಹ ನಿರ್ಮಾಣ, ಬಟ್ಟೆ ಮತ್ತು ಇನ್ನಿತರ ಉಪಯುಕ್ತತೆ) ಎಂಬುದನ್ನು ತಿಳಿದುಕೊಳ್ಳಬೇಕು. ಇದು ನಿಮ್ಮ ಆದಾಯ ಮತ್ತು ಖರ್ಚುವೆಚ್ಚಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತವೆ. ದೈನಂದಿನ ಹಣಕಾಸು ಯೋಜನೆಗಾಗಿ ಕಾಗದ, ಎಕ್ಸೆಲ್ ಸೀಟ್ ಅಥವಾ ಗೂಗಲ್ ಡಾಕ್ಸ್ ಬಳಸಬಹುದು. ಬಜೆಟ್ ಪ್ಲಾನ್ ನಂತರ ನಿಮ್ಮ ವೆಚ್ಚವನ್ನು ಟ್ರ್ಯಾಕ್ ಮಾಡಿ ಆದಾಯಕ್ಕಿಂತ ಹೆಚ್ಚಿನ ವೆಚ್ಚಕ್ಕೆ ಅವಕಾಶ ಕೊಡದೆ ಖರ್ಚುವೆಚ್ಚ ನಿರ್ವಹಿಸಿ.

ವಿಮೆ ಮಾಡಿಸಿ

ವಿಮೆ ಮಾಡಿಸಿ

ಪ್ರಿತಿಯೊಬ್ಬರೂ ಮೊದಲಿಗೆ ತಮ್ಮ ಬಗ್ಗೆ ಕೇರ್ ತೆಗೆದುಕೊಳ್ಳಬೇಕಾಗುತ್ತದೆ. ಉದ್ಯೋಗದ ನಂತರ ಮೊದಲು ಟರ್ಮ್ ಲೈಫ್ ಇನ್ಸೂರೆನ್ಸ್ ಪಾಲಿಸಿ ಖರೀದಿಸಲು ಮರೆಯಬೇಡಿ. ನಮ್ಮಲ್ಲಿ ಹಲವರಿಗೆ ವಿಮೆ ಪಾಲಿಸಿಗಳ ಬಗ್ಗೆ ನಂಬಿಕೆ ಇರುವುದಿಲ್ಲ. ಹೀಗಾಗಿ ಮುಂದಿನ ಭವಿಷ್ಯದ ತುರ್ತು ಪರಿಸ್ಥಿತಿಯ ಬಗ್ಗೆ ಸಿದ್ದತೆ ಮಾಡಿಕೊಂಡಿರುವುದಿಲ್ಲ. ಸೂಕ್ತವಾದ ವಿಮೆಯನ್ನು ಆಯ್ಕೆ ಮಾಡಿದರೆ ನಿಮ್ಮ ಕುಟುಂಬ ಹಾಗೂ ಆಸ್ತಿಯನ್ನು ಆರ್ಥಿಕವಾಗಿ ಸುರಕ್ಷಿತನನ್ನಾಗಿಸುತ್ತಿರಿ. ಜೀವನದಲ್ಲಿ ಏನೋ ಒಂದು ಅವಘಡ ಸಂಭವಿಸಿ ಆರ್ಥಿಕ ಪರಿಸ್ಥಿತಿ ಎದುರಿಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಿಗಾಗಿ ಈಗಿನಿಂದಲೇ ಸರಿಯಾದ ಹಣಕಾಸು(ವಿಮೆ/ಪಾಲಿಸಿ) ಯೋಜನೆ ಪ್ರಾರಂಭಿಸಿ.

ಎಫ್ಡಿ ಆರ್ಡಿ, ಮ್ಯೂಚುವಲ್ ಫಂಡ್, ಇಕ್ವಿಟಿಗಳಲ್ಲಿ ಹೂಡಿಕೆ ಮಾಡಿ

ಎಫ್ಡಿ ಆರ್ಡಿ, ಮ್ಯೂಚುವಲ್ ಫಂಡ್, ಇಕ್ವಿಟಿಗಳಲ್ಲಿ ಹೂಡಿಕೆ ಮಾಡಿ

ಹೂಡಿಕೆ ಮತ್ತಯ ಉಳಿತಾಯ ಬಹುಮುಖ್ಯವಾದ ವಿಚಾರ. ಖರ್ಚು ಮಾಡುವ ಮುನ್ನವೇ ಬಂದ ಸಂಬಳ ಅಥವಾ ಆದಾಯದಲ್ಲಿ ಒಂದಿಷ್ಟು ಪ್ರಮಾಣದ ಹಣವನ್ನು ಪ್ರತಿ ತಿಂಗಳು ಉಳಿತಾಯ ಮಾಡಲೇಬೇಕು ಎಂದು ನಿರ್ಧರಿಸಿ ಅದಕ್ಕೆ ಬದ್ದರಾಗಿರಿ. ಇದನ್ನು ಸಂಬಳ ಬರುತ್ತಿದ್ದಂತೆಯೇ FD (ಸ್ಥಿರ ಠೇವಣಿ) ಅಥವಾ ಆರ್ಡಿ (RD), ಇಕ್ವಿಟಿ, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ. ಕೆಲ ದಿನಗಳು ಕಳೆದ ನಂತರ ನೀವೂ ಹೆಚ್ಚಿನ ಮೊತ್ತ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಸಿಪ್(SIP)ಗಳಲ್ಲಿ ಹೂಡಿಕೆ ಮಾಡುವುದು ಭವಿಷ್ಯತ್ತಿಗೆ ತುಂಬಾ ಲಾಭದಾಯಕ ಎಂಬುದನ್ನು ನೆನಪಿಡಿ.

ನಿವೃತ್ತಿ ಬಗ್ಗೆ ಗಮನವಿರಲಿ

ನಿವೃತ್ತಿ ಬಗ್ಗೆ ಗಮನವಿರಲಿ

ಆರಂಭದಿಂದಲೇ ನಿವೃತ್ತಿ ಜೀವನಕ್ಕಾಗಿ ಉಳಿತಾಯ ಮಾಡಲು ಆರಂಭಿಸಿದಿರೆಂದರೆ ಹೆಚ್ಚು ಲಾಭ ಪಡೆಯುವಿರಿ. ಅದಕ್ಕಾಗಿ ಯಾವ ಹಣಕಾಸು ಮೂಲ ನಿಮ್ಮ ನಿವೃತ್ತಿ ಜೀವನಕ್ಕೆ ಸಹಾಯಕ ಆಗಬಲ್ಲದು ಎಂಬುದನ್ನು ತಿಳಿದುಕೊಳ್ಳಿ. ಪಿಎಫ್, ಮೂಲ ಉಳಿತಾಯ ಖಾತೆಗಳು, ಠೇವಣಿ ಪತ್ರಗಳು, ಸರ್ಕಾರದ ಪಿಂಚಣಿ ಯೋಜನೆಗಳು, ಮ್ಯೂಚುವಲ್ ಫಂಡ್, ಸ್ಟಾಕ್, ​​ಬಾಂಡ್ಸ್ ಮತ್ತು ಇನ್ನಿತರ ಉಳಿತಾಯ ಆಯ್ಕೆಗಳು ಈ ಬುಟ್ಟಿಗೆ ಬರುತ್ತವೆ. ಇದರ ಕುರಿತಾದ ನಮ್ಮ ಜ್ಞಾನವನ್ನು ಹೆಚ್ಚಿಸಿ ಅಗತ್ಯತೆಗೆ ಅನುಗುಣವಾಗಿ ಹಣಕಾಸು ಯೋಜನೆ ರೂಪಿಸಿಕೊಳ್ಳಬೇಕು.

ಕಡಿಮೆ ಆದಾಯ - ಹೆಚ್ಚು ಖರ್ಚು ಆಗದಿರಲಿ

ಕಡಿಮೆ ಆದಾಯ - ಹೆಚ್ಚು ಖರ್ಚು ಆಗದಿರಲಿ

ತುಂಬಾ ಜನರಲ್ಲಿ ಮೂಲ ಸಮಸ್ಯೆಯೇ ಇದು. ಹೆಚ್ಚಿನ ಜನರು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುತ್ತಾರೆ ಎಂದೇ ಹೇಳಬೇಕು. ಇದನ್ನರಿತು ನಮ್ಮ ತಿಂಗಳ ಆದಾಯವನ್ನು ತಲೆಯಲ್ಲಿಟ್ಟು ಅದಕ್ಕನುಗುಣವಾಗಿ ಯೋಜನೆ ರೂಪಿಸಬೇಕು. ಇಲ್ಲದಿದ್ದರೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುತ್ತಿದ್ದರೆ ಅದು ಕಿಸೆಗೆ ಬಿದ್ದಿರುವ ದೊಡ್ಡ ತೂತು ಎಂದೇ ಹೇಳಬೇಕಾಗುತ್ತದೆ. ಇದು ಅತ್ಯಂತ ಕೆಟ್ಟ ಅಭಿರುಚಿ.

ಮೋಜು-ಮಸ್ತಿಯಿಂದ ಕಡಿಮೆಯಿರಲಿ

ಮೋಜು-ಮಸ್ತಿಯಿಂದ ಕಡಿಮೆಯಿರಲಿ

ಮೋಜು-ಮಸ್ತಿ, ಕುಡಿತ, ಜೂಜು ಬೇಡವೇ ಬೇಡ ಎಂದು ಹೇಳುವುದು ಕಷ್ಟ. ಆದರೆ ಮೋಜು-ಮಸ್ತಿ, ಕುಡಿತ, ಜೂಜು, ವಿಪರೀತ ಪಾರ್ಟಿಗಳು ಹಾಗೂ ಆಗಾಗ್ಗೆ ತಿನ್ನುವ ಚಪಲದಿಂದಾಗಿ ಒಂದೇಡೆ ಭವಿಷ್ಯದ ಹಣಕಾಸಿನ ಮೇಲೆ, ಪ್ರಸ್ತುತ ಆರ್ಥಿಕ ಸ್ಥಿರತೆ ಮೇಲೆ ಜೊತೆಗೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇಂತ ವಿಚಾರಗಳ ಮೇಲೆ ನಿಯಂತ್ರಣ ಇದ್ದರೆ ಕ್ಷೇಮಕರ.

ತುರ್ತು ನಿಧಿ ಇರಲಿ

ತುರ್ತು ನಿಧಿ ಇರಲಿ

ಮುಖ್ಯವಾಗಿ ಪ್ರತಿಯೊಬ್ಬರೂ ಗಮನವಹಿಸಿಬೇಕಾದ ವಿಚಾರವೆಂದರೆ ತುರ್ತು ನಿಧಿ. ಏಕೆಂದರೆ ಎಲ್ಲರಿಗೂ ಜೀವನದಲ್ಲಿ ಒಂದಿಲ್ಲೊಂದು ಹಂತದಲ್ಲಿ ತುರ್ತು ಸನ್ನಿವೇಷಗಳು, ಕಷ್ಟ-ಕಾರ್ಪಣ್ಯಗಳು, ಅಪಘಾತಗಳು, ಪ್ರಾಕೃತಿಕ ವಿಕೋಪಗಳು ಎದುರಾಗುತ್ತವೆ. ಇವು ಹೇಳಿ ಕೇಳಿ ಬರುವಂತವುಗಳಲ್ಲ! ಹೀಗಾಗಿ ಪೂರ್ವ ಯೋಜಿತವಾಗಿ ತುರ್ತು ನಿಧಿಯನ್ನು ಇಡುವುದು ಉತ್ತಮ ಹವ್ಯಾಸ. ಇದು ಕಷ್ಟಕಾಲದ ಆಪತ್ ಬಾಂಧವನಾಗಿ ಕೆಲಸ ಮಾಡುತ್ತದೆ.

ಸಾಲ ತೀರಿಸಿ

ಸಾಲ ತೀರಿಸಿ

ಕ್ರೆಡಿಟ್ ಕಾರ್ಡ್‌ ಮತ್ತು ಅಡಮಾನಗಳಂತಹ ಬಾಕಿ ಇರುವ ಸಾಲದ ಮೇಲಿನ ಬಡ್ಡಿ ನಿಮ್ಮ ವೈಯಕ್ತಿಕ ಹಣಕಾಸನ್ನು ಕುಂಠಿತಗೊಳಿಸುತ್ತದೆ. ಸಾಧ್ಯವಾದಷ್ಟು ಬೇಗ ಅವುಗಳನ್ನು ತೀರಿಸಿ. ಹೂಡಿಕೆ ಮಾಡಲು ಅಥವಾ ವ್ಯವಹಾರವನ್ನು ಪ್ರಾರಂಭಿಸಲು ನೀವು ಹಣವನ್ನು ಎರವಲು ಪಡೆದಿದ್ದರೆ, ನೀವು ಆದಾಯವನ್ನು ಗಳಿಸಲು ಪ್ರಾರಂಭಿಸಿದ ಕೂಡಲೇ ಸಾಲವನ್ನು ತೀರಿಸಿಯೇ ಮುನ್ನಡೆಯಿರಿ. ನಿಗದಿತ ಅವಧಿಯಲ್ಲಿ ನೀವು ಎಷ್ಟು ಬಡ್ಡಿಯನ್ನು ಪಾವತಿಸಬೇಕೆಂದು ನಿರೀಕ್ಷಿಸಲು ಹೂಡಿಕೆ ಸಾಲ ಮರುಪಾವತಿ ಕ್ಯಾಲ್ಕುಲೇಟರ್ ಬಳಸಿ.

ವೇತನ ಪಡೆಯುವ ಉದ್ಯೋಗಿಗಳಿಗೆ ಸಿಹಿಸುದ್ದಿ! ಈ 10 ಪ್ರಯೋಜನಗಳನ್ನು ನಿಮ್ಮದಾಗಿಸಿವೇತನ ಪಡೆಯುವ ಉದ್ಯೋಗಿಗಳಿಗೆ ಸಿಹಿಸುದ್ದಿ! ಈ 10 ಪ್ರಯೋಜನಗಳನ್ನು ನಿಮ್ಮದಾಗಿಸಿ

 

Read more about: salary investments savings money
English summary

Got your Salary? should do these things..

It's that time of the month when you get your salary. You are now probably figuring out all the bills you have to take care of and all the expenses you need to plan for.
Story first published: Tuesday, October 1, 2019, 10:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X