For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲೇ ಅತಿ ಹೆಚ್ಚು ವೇತನ ಪಾವತಿಸುವ ಟಾಪ್ 10 ದೇಶಗಳು

ಸಾಮಾನ್ಯವಾಗಿ ನಾವು ಕೆಲಸಕ್ಕೆ ಸೇರುವ ಮುನ್ನ ಕಂಪನಿಗಳು ನೀಡುವ ಸಂಬಳದ ಬಗ್ಗೆ ತಿಳಿದುಕೊಳ್ಳುತ್ತೇವೆ. ಇತ್ತೀಚಿನ ಜೀವನ ಶೈಲಿಯಲ್ಲಿ ಉತ್ತಮ ವೇತನ ಪಡೆಯುವುದು ಕೂಡ ಒಂದು ಗುರಿಯಾಗಿದೆ ಎಂದರೆ ತಪ್ಪಾಗಲಾರದು.

|

ಸಾಮಾನ್ಯವಾಗಿ ನಾವು ಕೆಲಸಕ್ಕೆ ಸೇರುವ ಮುನ್ನ ಕಂಪನಿಗಳು ನೀಡುವ ಸಂಬಳದ ಬಗ್ಗೆ ತಿಳಿದುಕೊಳ್ಳುತ್ತೇವೆ. ಇತ್ತೀಚಿನ ಜೀವನ ಶೈಲಿಯಲ್ಲಿ ಉತ್ತಮ ವೇತನ ಪಡೆಯುವುದು ಕೂಡ ಒಂದು ಗುರಿಯಾಗಿದೆ ಎಂದರೆ ತಪ್ಪಾಗಲಾರದು. ಉತ್ತಮ ವೇತನ ಪ್ಯಾಕೇಜ್ ಒದಗಿಸುವ ಅನೇಕ ಕಂಪನಿಗಳು ಭಾರತದಲ್ಲಿವೆ. ಆದರೆ ಕಾರ್ಮಿಕರಿಗೆ ಅತಿ ಹೆಚ್ಚು ವೇತನ ಪಾವತಿಸುವ ಟಾಪ್​ 10 ದೇಶಗಳ ಪಟ್ಟಿಯಲ್ಲಿ ಭಾರತ ಇಲ್ಲ. ಇದಕ್ಕಾಗಿ ನಮ್ಮಲ್ಲಿನ ಪ್ರತಿಭಾವಂತರು ವಿದೇಶದಲ್ಲಿ ಉದ್ಯೋಗ ಹುಡುಕುತ್ತಾ ಹೋಗುತ್ತಾರೆ. ವಿಶ್ವದಲ್ಲಿ ಅತಿ ಹೆಚ್ಚು ವೇತನ ಪಾವತಿಸುವ ಟಾಪ್ 10 ದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಬನ್ನಿ ನೋಡೋಣ..

ಸ್ವಿಟ್ಜರ್ಲೆಂಡ್

ಸ್ವಿಟ್ಜರ್ಲೆಂಡ್

ನೀವು ಬೇರೆ ದೇಶದಲ್ಲಿ ಕೆಲಸ ಮಾಡಲು ಬಯಸಿದರೆ, ಸ್ವಿಟ್ಜರ್ಲೆಂಡ್ ಆಯ್ಕೆ ಮಾಡಿಕೊಳ್ಳಬೇಕು. ಇದು ವಿಶ್ವದಲ್ಲೇ ಅತಿ ಹೆಚ್ಚು ಸಂಬಳವನ್ನು ನೀಡುತ್ತದೆ. ಇದರ ಸೇವಾ ವೃತ್ತಿಪರರು ವರ್ಷಕ್ಕೆ ಸರಾಸರಿ 92,625 ಡಾಲರ್ ವೇತನ ಪಡೆಯುತ್ತಾರೆ. ನಿರ್ವಹಣಾ ಉದ್ಯೋಗಿಗಳು ವರ್ಷಕ್ಕೆ 431,603 ಡಾಲರ್ ವೇತನ ಪಡೆಯುತ್ತಾರೆ. ಪರಿಣಾಮಕಾರಿ ವೈಯಕ್ತಿಕ ಆದಾಯ ತೆರಿಗೆ ದರವು ಕೇವಲ 10.91% ಆಗಿದೆ.

ಯುಎಸ್ಎ

ಯುಎಸ್ಎ

2 ನೇ ಸ್ಥಾನದಲ್ಲಿ ಯುಎಸ್ಎ ಇದೆ. ದೇಶವು ತನ್ನ ಉತ್ತಮ ಗ್ರಾಹಕ ಸೇವೆಗೆ ಹೆಸರುವಾಸಿಯಾಗಿದ್ದು, ಸೇವಾ ವೃತ್ತಿಪರರು ಖಂಡಿತವಾಗಿಯೂ ಉತ್ತಮ ಸಂಭಾವನೆ ಪಡೆಯುತ್ತಾರೆ. ಸರಾಸರಿ 60,717 ಡಾಲರ್, ನಿರ್ವಹಣಾ ಮಟ್ಟದ ಸಿಬ್ಬಂದಿ ಸರಾಸರಿ 382,189 ಡಾಲರ್ ಪಡೆಯುತ್ತಾರೆ.
ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕವು ಕಾರ್ಮಿಕರಿಗೆ ಅತಿ ಹೆಚ್ಚಿನ ವೇತನ ನೀಡುತ್ತದೆ. ಯುಎಸ್​ನಲ್ಲಿ 60700 ಡಾಲರ್​ ಸರಾಸರಿಯಲ್ಲಿ ವೇತನ ದೊರಕುತ್ತದೆ.

ಲಕ್ಸೆಂಬರ್ಗ್

ಲಕ್ಸೆಂಬರ್ಗ್

ಲಕ್ಸೆಂಬರ್ಗ್ ವಿಶ್ವದ ಅತ್ಯಂತ ಚಿಕ್ಕ ದೇಶಗಳಲ್ಲಿ ಒಂದಾಗಿರಬಹುದು. ಆದರೆ ಇದು ಹೆಚ್ಚಿನ ಸಂಬಳವನ್ನು ನೀಡುವುದರಲ್ಲಿ ಮುಂದಿದೆ. ಇದರ ಸೇವಾ ವೃತ್ತಿಪರರು ಸರಾಸರಿ ಒಟ್ಟು ವಾರ್ಷಿಕ ಆದಾಯ 58,425 ಡಾಲರ್ ಹೊಂದಿದ್ದರೆ, ನಿರ್ವಹಣಾ ಉದ್ಯೋಗಿಗಳು ಸರಾಸರಿ 246,477 ಡಾಲರ್ ಗಳಿಸುತ್ತಾರೆ. ಈ ದೇಶವನ್ನು ಯುರೋಪಿನ ಆರ್ಥಿಕ ಕೇಂದ್ರವೆಂದು ಕೂಡ ಕರೆಯಲಾಗುತ್ತದೆ.

ಹಾಂಗ್ ಕಾಂಗ್

ಹಾಂಗ್ ಕಾಂಗ್

ಇದು ಈಗ ಚೀನಾದ ಭಾಗವಾಗಿರಬಹುದು. ಆದರೆ ಹಾಂಗ್ ಕಾಂಗ್‌ನ ದೇಶ ನೀಡುವ ಸಂಬಳವು ತುಂಬಾ ಹೆಚ್ಚಾಗಿದೆ. ಇದರ ಸೇವಾ ವೃತ್ತಿಪರರು ಸರಾಸರಿ ಒಟ್ಟು ವಾರ್ಷಿಕ ಆದಾಯ 45,050 ಡಾಲರ್ ಹೊಂದಿದ್ದರೆ, ನಿರ್ವಹಣಾ ಕಾರ್ಮಿಕರು ಸರಾಸರಿ 265,336 ಡಾಲರ್ ವೇತನ ಪಡೆಯುತ್ತಾರೆ.

ಜಪಾನ್

ಜಪಾನ್

ಜಪಾನ್ ಕಷ್ಟಪಟ್ಟು ದುಡಿಯುವ ರಾಷ್ಟ್ರವೆಂದು ಹೆಸರುವಾಸಿಯಾಗಿದೆ. ಆದರೆ ಎಲ್ಲಾ ಸಮರ್ಪಣೆ ಅಕ್ಷರಶಃ ಫಲ ನೀಡುತ್ತದೆ ಎಂದು ತೋರುತ್ತದೆ. ದೇಶದ ಸೇವಾ ವೃತ್ತಿಪರರು ಸರಾಸರಿ ಆದಾಯ 48,177 ಡಾಲರ್ ಹೊಂದಿದ್ದಾರೆ. ಇದರ ನಿರ್ವಹಣಾ ಮಟ್ಟದ ಕಾರ್ಮಿಕರು ಸರಾಸರಿ 238,248 ಡಾಲರ್ ಗಳಿಸುತ್ತಾರೆ

ಜರ್ಮನಿ

ಜರ್ಮನಿ

ಜರ್ಮನಿಯ ಕಂಪನಿಗಳು ಉದ್ಯೋಗ ತರಬೇತಿಗೆ ಹೆಚ್ಚಿನ ಆದ್ಯತೆ ನೀಡುತ್ತವೆ ಎಂದು ಐಎಂಡಿ ವರದಿ ಮಾಡಿದೆ. ಇದು ಕಂಪನಿಗಳಲ್ಲಿ ಕಾರ್ಮಿಕರ ಪ್ರೇರಣೆ ಏಕೆ ಹೆಚ್ಚಾಗಿದೆ ಎಂಬುದನ್ನು ವಿವರಿಸುತ್ತದೆ. ಇದಕ್ಕೆ ಸಂಬಳವೂ ಸಹ ಒಂದು ಪ್ರಮುಖ ಕಾರಣವಾಗಿದೆ. ಸೇವಾ ವೃತ್ತಿಪರರು 42,280 ಡಾಲರ್ ಗಳಿಸಿದರೆ, ನಿರ್ವಹಣಾ ಉದ್ಯೋಗಿಗಳು 289,253 ಡಾಲರ್ ಪಡೆಯುತ್ತಾರೆ. ಯುರೋಪ್​ನ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಜರ್ಮನಿಯಲ್ಲಿ ವಾರ್ಷಿಕ ಸರಾಸರಿ ವೇತನ 42,280 ಡಾಲರ್ ನೀಡಲಾಗುತ್ತದೆ.

ಡೆನ್ಮಾರ್ಕ್

ಡೆನ್ಮಾರ್ಕ್

ಸ್ಕ್ಯಾಂಡಿನೇವಿಯನ್ ಮತ್ತು ನಾರ್ಡಿಕ್ ದೇಶಗಳು ಹೆಚ್ಚು ಸಂಭಾವನೆ ಪಡೆಯುವ ದೇಶಗಳಲ್ಲಿ ಉತ್ತಮವಾಗಿ ಪ್ರತಿನಿಧಿಸುತ್ತವೆ. ಡೆನ್ಮಾರ್ಕ್ 29.84% ರಷ್ಟು ಹೆಚ್ಚು ವೈಯಕ್ತಿಕ ಆದಾಯ ತೆರಿಗೆ ದರವನ್ನು ಹೊಂದಿದೆ. ಸೇವಾ ವೃತ್ತಿಪರರು 59,093 ಡಾಲರ್ ಗಳಿಸಿದರೆ, ನಿರ್ವಹಣಾ ಮಟ್ಟದ ವೃತ್ತಿಪರರು ಸರಾಸರಿ 208,038 ಡಾಲರ್ ಗಳಿಸುತ್ತಾರೆ.

ಆಸ್ಟ್ರಿಯಾ

ಆಸ್ಟ್ರಿಯಾ

ಆಸ್ಟ್ರಿಯಾವು ಪ್ರತಿಭೆಗಳನ್ನು ಆಕರ್ಷಿಸುವ ದೇಶವಾಗಿದೆ. ಇಲ್ಲಿ ಸೇವಾ ವೃತ್ತಿಪರರು ಸರಾಸರಿ ಒಟ್ಟು ವಾರ್ಷಿಕ ಆದಾಯ 40,720 ಡಾಲರ್, ನಿರ್ವಹಣಾ ಉದ್ಯೋಗಿಗಳು ಸರಾಸರಿ 266,124 ಡಾಲರ್ ಗಳಿಸುತ್ತಾರೆ.

ಯುಕೆ

ಯುಕೆ

ಯುಕೆ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ದೇಶಗಳಲ್ಲಿದೆ. ಇಲ್ಲಿ ಸೇವಾ ವೃತ್ತಿಪರರು ಸರಾಸರಿ 45,691 ಡಾಲರ್ (£ 33,957) ಗಳಿಸುತ್ತಾರೆ. ನಿರ್ವಹಣಾ ವಲಯ ಸರಾಸರಿ 230,721 (£ 171,469) ಗಳಿಸುತ್ತಾರೆ

ಸ್ವೀಡನ್

ಸ್ವೀಡನ್

ಐಎಂಡಿ ವರದಿಯು, ಸ್ವೀಡನ್‌ ಕಂಪನಿಗಳಲ್ಲಿ ಕಾರ್ಮಿಕರ ಪ್ರೇರಣೆ ಹೆಚ್ಚಾಗಿದ್ದು ಪ್ರತಿಭೆಗಳನ್ನು ಆಕರ್ಷಿಸಿ ಉಳಿಸಿಕೊಳ್ಳುವುದು ಕಂಪೆನಿಗಳಿಗೂ ಆದ್ಯತೆಯಾಗಿದೆ ಎಂದು ಹೇಳಿದೆ. ಪ್ರತಿಭೆಗೆ ತಕ್ಕಂತೆ ಉತ್ತಮ ವೇತನ ಪಾವತಿಸುತ್ತಾರೆ. ಇಲ್ಲಿ ಸೇವಾ ವೃತ್ತಿಪರರು ಸರಾಸರಿ 47,831 (£ 35,547) ಡಾಲರ್ ಗಳಿಸಿದರೆ, ನಿರ್ವಹಣಾ ವಲಯ 216,928 ಗಳಿಸುತ್ತಾರೆ.

 

 

Read more about: salary usa money
English summary

Top 10 countries where people get Highest salary

Top 10 countries where people get Highest salary
Story first published: Friday, October 11, 2019, 11:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X