For Quick Alerts
ALLOW NOTIFICATIONS  
For Daily Alerts

ವಾಹನ ಸ್ಕ್ರಾಪಿಂಗ್ ಕೇಂದ್ರ ಸ್ಥಾಪಿಸಿ ಕೈತುಂಬಾ ಹಣ ಗಳಿಸಿ

|

ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಸ್ವಂತ ಉದ್ಯೋಗ ನಡೆಸಲು ಬಯಸುವವರಿಗೆ ಸುವರ್ಣಾಕಾಶ ನೀಡಿದೆ! ಸಾರಿಗೆ ಸಚಿವಾಲಯ ಅಧಿಕೃತ ವಾಹನ ಸ್ಕ್ರಾಪಿಂಗ್ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲು ಕರಡು ಮಾರ್ಗಸೂಚಿ ಹೊರಡಿಸಿದೆ. ಈ ನಿಯಮ ಭಾರತದಲ್ಲಿ ಉದ್ಯಮವನ್ನು ಕಾನೂನುಬದ್ದಗೊಳಿಸಲು ಸಹಾಯಕವಾಗಲಿದೆ.

 

ವಾಹನಗಳ ನೋಂದಣಿ ರದ್ದು

ವಾಹನಗಳ ನೋಂದಣಿ ರದ್ದು

ಸ್ಕ್ರಾಪಿಂಗ್ ಕೇಂದ್ರಕ್ಕೆ ಬಂದ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ. ಇದಕ್ಕಾಗಿ ಜನರು ಆರ್‌ಟಿಒಗೆ ಅಲೆಯಬೇಕಾಗಿಲ್ಲ. ಸ್ಕ್ರಾಪಿಂಗ್ ಕೇಂದ್ರಗಳ ಮೂಲಕ ವಾಹನ ಮಾಲೀಕರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.

ಕೇಂದ್ರ ಸ್ಥಾಪನೆ ನಿಯಮ

ಕೇಂದ್ರ ಸ್ಥಾಪನೆ ನಿಯಮ

ಸ್ಕ್ರಾಪಿಂಗ್ ಕೇಂದ್ರ ಸ್ಥಾಪನೆಗೆ ಸಾಕಷ್ಟು ಮೂಲಸೌಕರ್ಯವನ್ನು ಹೊಂದಿರಬೇಕಾಗುತ್ತದೆ. ಜಿಎಸ್ಟಿ ನೋಂದಣಿ, ಪ್ಯಾನ್ ಇತ್ಯಾದಿ ದಾಖಲೆಗಳನ್ನು ಹೊಂದಿರಬೇಕು. ಜೊತೆಗೆ ಪ್ರವಾಸೋದ್ಯಮ ಸೇರಿದಂತೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪಡೆದಿರಬೇಕು. ಈ ಕೇಂದ್ರಕ್ಕಾಗಿ 4000 ಚದರ ಮೀಟರ್‌ನಿಂದ 8000 ಚದರ ಮೀಟರ್ ಸ್ಥಳ ಇರಬೇಕು.
ಈ ಸೌಲಭ್ಯಗಳನ್ನು ಪೂರೈಸುವ ಘಟಕಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊರಡಿಸಿದ ಮಾರ್ಗಸೂಚಿಗಳಲ್ಲಿ ನಿರ್ದಿಷ್ಟಪಡಿಸಿದ ಕೇಂದ್ರಗಳನ್ನು ಸಂಗ್ರಹಿಸುವ ಮತ್ತು ಕಿತ್ತುಹಾಕುವ ಕನಿಷ್ಠ ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಬೇಕು.

ಸ್ಕ್ರಾಪಿಂಗ್ ನಿಯಮ
 

ಸ್ಕ್ರಾಪಿಂಗ್ ನಿಯಮ

ಸರಿಯಾದ ನೋಂದಣಿಯನ್ನು ಹೊಂದಿರದ ವಾಹನಗಳಿಗೆ ಮಾರ್ಗಸೂಚಿಗಳು ಅನ್ವಯವಾಗುತ್ತವೆ. ಮಾಲೀಕರು ತಮ್ಮ ವಾಹನಗಳನ್ನು ಸ್ವಯಂಪ್ರೇರಣೆಯಿಂದ ಸ್ಕ್ರ್ಯಾಪ್ ಮಾಡಬಹುದು. ಯಾವುದೇ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಅಧಿಕಾರಿಗಳು ವಶಪಡಿಸಿಕೊಂಡ ವಾಹನಗಳನ್ನು ಸ್ಕ್ರ್ಯಾಪ್ ಮಾಡಬೇಕು. ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳ ಮಾಲೀಕರು ಕಾರ್ಮಿಕ ಕಾಯ್ದೆಗಳು, ಕನಿಷ್ಠ ವೇತನ ಕಾಯ್ದೆ, ನೌಕರರ ಭವಿಷ್ಯ ನಿಧಿ ಕಾಯ್ದೆ ಮತ್ತು ಕಾರ್ಮಿಕರ ಪರಿಹಾರ ಕಾಯ್ದೆ ಮುಂತಾದ ಇತರ ಕಾಯ್ದೆಗಳು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು.

Read more about: money investments business ideas
English summary

vehicle scrapping Unit: Draft norms issued for setting up vehicle scrapping facility

The transport ministry has issued draft guidelines for setting up authorised vehicle scrapping facilities.
Story first published: Thursday, October 17, 2019, 13:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X