For Quick Alerts
ALLOW NOTIFICATIONS  
For Daily Alerts

ಅಪನಗದೀಕರಣಕ್ಕೆ 6 ವರ್ಷ, ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ!

|

ಕೇಂದ್ರ ಸರ್ಕಾರವು ಐನ್ನೂರು ರೂಪಾಯಿ ಹಾಗೂ ಒಂದು ಸಾವಿರ ರೂಪಾಯಿಯ ನೋಟುಗಳನ್ನು ದೇಶದಲ್ಲಿ ಅಮಾನ್ಯೀಕರಣ ಮಾಡಿ ನಿನ್ನೆಗೆ 6 ವರ್ಷಗಳು ಆಗಿದೆ. 2016 ರ ನವೆಂಬರ್‌ 8 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ 500 ರೂಪಾಯಿ ಹಾಗೂ 1,000 ರೂಪಾಯಿಯ ನೋಟುಗಳನ್ನು ದೇಶದಲ್ಲಿ ಇನ್ನು ಮುಂದೆ ಬರೀ ಪೇಪರ್ ಹಾಳೆ ಎಂದು ಘೋಷಣೆ ಮಾಡಿದ್ದಾರೆ.

 

ಈ ನೋಟು ಅಪನಗದೀಕರಣ ನಡೆದು ಆರು ವರ್ಷಗಳು ಆಗಿದೆ. ಆದರೆ ಇಂದಿಗೂ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್‌ಗಳು ಕೊನೆಯಾಗಿಲ್ಲ. ಅದರಲ್ಲೂ ಮುಖ್ಯವಾಗಿ, ಮಾಧ್ಯಮದ ಪ್ರಶ್ನೆಗೆ ಬಾಯಿಗೆ ಬಂದಂತೆ ಬೈದು ತನ್ನ ಸಿಟ್ಟನ್ನು ತೋರಿಸಿದ್ದ ವ್ಯಕ್ತಿಯಂತು ಪ್ರತಿ ವರ್ಷ ಟ್ರೋಲ್‌ಗೆ ಒಳಪಡುತ್ತಿದ್ದಾನೆ.

 

Demonetization: ಅಪನಗದೀಕರಣಕ್ಕೆ 6 ವರ್ಷ, ಬದಲಾವಣೆ ಏನಾಗಿದೆ?Demonetization: ಅಪನಗದೀಕರಣಕ್ಕೆ 6 ವರ್ಷ, ಬದಲಾವಣೆ ಏನಾಗಿದೆ?

ಕೇಂದ್ರ ಸರ್ಕಾರವು ಪ್ರಮುಖವಾಗಿ, ಕಪ್ಪು ಹಣವನ್ನು ತಡೆಗಟ್ಟಲು, ನಕಲಿ ನೋಟುಗಳ ಚಲಾವಣೆ ತಪ್ಪಿಸಲು ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡುವ ಉದ್ದೇಶದಿಂದ ಈ ನೋಟು ಅಪನಗದೀಕರಣ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಇದರಿಂದಾಗಿ ಉಂಟಾದ ಆರ್ಥಿಕ ಪ್ರಭಾವದ ಬಗ್ಗೆ ಒಂದೆಡೆ ಟ್ವಿಟ್ಟರ್‌ನಂತಹ ಸಾಮಾಜಿಕ ಮಾಧ್ಯಮದಲ್ಲಿ ಗಂಭೀರವಾದ ಚರ್ಚೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ನೆಟ್ಟಿಗರು ಟ್ರೋಲ್, ಮೀಮ್ಸ್ ಅನ್ನು ಹಂಚಿಕೊಂಡು ಅಪಹಾಸ್ಯ ಮಾಡುತ್ತಿದ್ದಾರೆ. ಹಾಗಾದರೆ ಈ ದಿನ ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೇಗೆ, ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಅಪನಗದೀಕರಣಕ್ಕೆ 6 ವರ್ಷ, ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ!

ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೇಗೆ?

ಕೆಲವು ಜನರು ನೋಟಿನ ಅಪನಗದೀಕರಣ ದೇಶದಲ್ಲಿ ಸರ್ಕಾರ ತೆಗೆದುಕೊಂಡ ಉತ್ತಮ ನಿರ್ಧಾರ ಎಂದು ಹೇಳಿದರೆ, ಇನ್ನು ಕೆಲವರು ನೋಟು ಅಪನಗದೀಕರಣ ಭಾರತದ ಇತಿಹಾಸದಲ್ಲೇ ಸರ್ಕಾರದ ಅತೀ ಕೆಟ್ಟ ನಿರ್ಧಾರ ಎಂದಿದ್ದಾರೆ. ಇನ್ನು ಕೆಲವು ಹಳೆಯ ವಿಡಿಯೋ, ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!

ಪ್ರಮುಖವಾಗಿ ಕೆಲವು ಜನರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರದ ಒಂದು ನಿರ್ಧಾರದಿಂದಾಗಿ ಜನರ ಜೀವನ ದುಸ್ಥಿತಿಗೆ ತಲುಪಿತು. ಬಡ ಜನರ ಬೀದಿಗೆ ಬೀಳುವಂತೆ ಆಯಿತು ಎಂದು ಹೇಳಿಕೊಂಡಿದ್ದಾರೆ. ಆದರೆ ಇನ್ನು ಕೆಲವರು ಅಪನಗದೀಕರಣದಿಂದಾಗಿ ಡಿಜಿಟಲ್ ವಹಿವಾಟು ಹೆಚ್ಚಾಗಿದೆ ಎಂದಿದ್ದಾರೆ.

ಇನ್ನು ನೋಟಿನಲ್ಲಿ ಚಿಪ್ ಇದೆ ಎಂದು ಮಾಡಲಾದ ಸುದ್ದಿಯನ್ನು ಕೂಡಾ ಟ್ರೋಲ್ ಮಾಡಲಾಗುತ್ತಿದೆ. ಕೆಲವರು ಬ್ಯಾಂಕ್‌ನ ಹೊರಗೆ ಜನರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ನಿಮಗೆ ಈಗಲೂ ನೆನಪಿನಲ್ಲಿ ಇರಬಹುದು ಎಂದು ಹೇಳಿದ್ದಾರೆ.

 ಅಪನಗದೀಕರಣಕ್ಕೆ 6 ವರ್ಷ, ಸಾಮಾಜಿಕ ಜಾಲತಾಣದಲ್ಲಿ ಕಂಡಿದ್ದು ಹೀಗೆ!

ಚಿಪ್ಪು ಡೇ ಬಗ್ಗೆ ನಿಮಗೆ ಗೊತ್ತಾ..!?

ಇನ್ನು 500 ಹಾಗೂ ಒಂದು ಸಾವಿರ ರೂಪಾಯಿಯ ಹಳೆಯ ನೋಟು ಬ್ಯಾನ್ ಆದ ಬಳಿಕ ಜಾರಿಗೆ ತರಲಾದ 2000 ರೂಪಾಯಿಯ ಹೊಸ ನೋಟಿನಲ್ಲಿ ಚಿಪ್ ಇದೆ ಎಂದು ಸುದ್ದಿ ಮಾಡಲಾಗಿತ್ತು. ಇದನ್ನು ಕೂಡಾ ಜನರು ಅಪಹಾಸ್ಯ ಮಾಡುತ್ತಿದ್ದಾರೆ. ಮೇರೆ ಪ್ಯಾರೆ ದೋಸ್ತೋ ಆಜ್ ತಾರೀಖ್ ನವೆಂಬರ್ 8, ನಿಮ್ಮೆಲ್ಲರಿಗೂ ಚಿಪ್ಪು ಜಯಂತಿಯ ಶುಭಾಶಯಗಳು ಎಂಬ ಮೀಮ್ಸ್‌ಗಳು ಹರಿದಾಡುತ್ತಿದೆ.

English summary

6 Years Of Demonetization: Here's Demonitization Day Memes

6 Years Of Demonetization: Six years ago, on this day, November 8, the Government of India announced the demonetisation. Here's Demonitization Day Memes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X