For Quick Alerts
ALLOW NOTIFICATIONS  
For Daily Alerts

7ನೇ ವೇತನ ಆಯೋಗ: ಹಬ್ಬದ ವೇಳೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ?

|

ನವರಾತ್ರಿ, ದೀಪಾವಳಿ ಹಬ್ಬ ಇನ್ನು ಕೆಲವೇ ವಾರಗಳಲ್ಲಿ ಬರಲಿದೆ. ಈ ಸಂದರ್ಭದಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಲಭಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ರೈಲಿನಲ್ಲಿ ಓಡಾಟ ನಡೆಸುವ ಕೇಂದ್ರ ಸರ್ಕಾರಿ ನೌಕರರಿಗೂ ಪ್ರಯಾಣ ಭತ್ತೆ ಸಂಬಂಧಿಸಿದ ಸಿಹಿಸುದ್ದಿಯೂ ಇದೆ. ಇನ್ನು ಕೇಂದ್ರ ಸರ್ಕಾರಿ ನೌಕರರು ಈಗಾಗಲೇ ತುಟ್ಟಿಭತ್ಯೆ (ಡಿಎ) ಹೆಚ್ಚಳಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಹಬ್ಬದ ಸಂದರ್ಭದಲ್ಲಿ ಕೇಂದ್ರ ನೌಕರರಿಗೆ ಡಿಎ ಗಿಫ್ಟ್ ಆಗಿ ಲಭಿಸುವ ಸಾಧ್ಯತೆ ಇದೆ.

ತುಟ್ಟಿಭತ್ಯೆ (ಡಿಎ) ಈಗಾಗಲೇ ಏರಿಕೆಯಾಗಬೇಕಾಗಿತ್ತು. ನಡುವೆ ಡಿಎ ಹೆಚ್ಚಳ ಮಾಡಲಾಗಿದೆ ಎಂಬ ವದಂತಿ, ನಕಲಿ ಸುತ್ತೋಲೆಗಳು ಕೂಡಾ ಹರಡಿದ್ದು ಇದೆ. ಆದರೆ ಇವೆಲ್ಲದರ ನಡುವೆ ಕೇಂದ್ರ ಸರ್ಕಾರಿ ನೌಕರರು ಡಿಎ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ನವರಾತ್ರಿ, ದೀಪಾವಳಿ ವೇಳೆಗೆ ನೌಕರರಿಗೆ ಗಿಫ್ಟ್ ಆಗಿ ಡಿಎ ಏರಿಕೆಯಾಗಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ.

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಡಿಎ ಸೂತ್ರ, ಏನು ಬದಲಾವಣೆ?ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಡಿಎ ಸೂತ್ರ, ಏನು ಬದಲಾವಣೆ?

ವರದಿಗಳ ಪ್ರಕಾರ ಈ ಬಾರಿ ಸುಮಾರು ಶೇಕಡ 4ರಷ್ಟು ಡಿಎ ಏರಿಕೆ ಮಾಡಬಹುದು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 34ರಷ್ಟು ಡಿಎ ಲಭ್ಯವಾಗುತ್ತಿದೆ. ತಜ್ಞರ ಅಂದಾಜಿನಂತೆ ಶೇಕಡ 4ರಷ್ಟು ಡಿಎ ಹೆಚ್ಚಳವಾದರೆ ಡಿಎ ಶೇಕಡ 38ಕ್ಕೆ ಏರಿಕೆಯಾಗಲಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಡಿಎ ಹೆಚ್ಚಳದ ಬಗ್ಗೆ ತಜ್ಞರು ಹೇಳುವುದೇನು?

ಡಿಎ ಹೆಚ್ಚಳದ ಬಗ್ಗೆ ತಜ್ಞರು ಹೇಳುವುದೇನು?

ಈ ನಡುವೆ ಆಗಸ್ಟ್‌ನಲ್ಲಿ ರಿಟೇಲ್ ಹಣದುಬ್ಬರವು ಹೆಚ್ಚಳವಾಗಿದೆ. ಸತತ ಮೂರು ತಿಂಗಳುಗಳ ಕಾಲ ಇಳಿಕೆಯಾಗಿದ್ದ ಹಣದುಬ್ಬರವು ಆಗಸ್ಟ್‌ನಲ್ಲಿ ಹೆಚ್ಚಳವಾಗಿದೆ. ಆಗಸ್ಟ್‌ನಲ್ಲಿ ಹಣದುಬ್ಬರ ಏರಿಕೆ ಸಾಧ್ಯತೆ ಇದೆ ಎಂದು ಡೇಟಾ ಬಿಡುಗಡೆಗೂ ಮುನ್ನವೇ ತಜ್ಞರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ನಡುವೆ ಡಿಎ ಹೆಚ್ಚಳ ಆಗಲಿದೆಯೇ ಎಂಬ ಸುದ್ದಿಯಾಗುತ್ತಿದೆ. ಇನ್ನು ಸುಮಾರು ಶೇಕಡ 4ರಷ್ಟು ಡಿಎ ಏರಿಕೆಯಾಗಬಹುದು ಎಂಬ ಸುದ್ದಿಯೂ ಕೂಡಾ ಇದೆ.

 2022ರ ಎರಡನೇ ಡಿಎ ಏರಿಕೆ

2022ರ ಎರಡನೇ ಡಿಎ ಏರಿಕೆ

ಈ ವರ್ಷದ ಏಪ್ರಿಲ್‌ನಲ್ಲಿ ಎಐಸಿಪಿಐ ಡೇಟಾ 1.7 ಅಂಕ ಹೆಚ್ಚಳವಾಗಿ 127.7ಕ್ಕೆ ತಲುಪಿದೆ. ಬಳಿಕ ಮೇ ತಿಂಗಳಿನಲ್ಲಿ 1.3 ಅಂಕ ಹೆಚ್ಚಳವಾಗಿ 129ಕ್ಕೆ ತಲುಪಿದೆ. ಇನ್ನು ಜೂನ್‌ನಲ್ಲಿ 129.2 ಅಂಕಕ್ಕೆ ಏರಿದ್ದರೆ ಜುಲೈನಲ್ಲಿ 129.9 ಅಂಕಕ್ಕೆ ತಲುಪಿದೆ. ಈ ತಿಂಗಳಿನಲ್ಲಿ ಡಿಎ ಏರಿಕೆ ಘೋಷಣೆ ಮಾಡುವ ಸಾಧ್ಯತೆ ಇದೆ. ಇದು ಈ ವರ್ಷದ ಎರಡನೇ ಡಿಎ ಏರಿಕೆಯಾಗಲಿದೆ. ಕಳೆದ ಬಾರಿ ಮಾರ್ಚ್‌ನಲ್ಲಿ ಡಿಎ ಏರಿಕೆ ಮಾಡಲಾಗಿದೆ.

 ಕೋವಿಡ್‌ ವೇಳೆ ತಡೆದಿಟ್ಟ ಡಿಎ ಲಭ್ಯ?

ಕೋವಿಡ್‌ ವೇಳೆ ತಡೆದಿಟ್ಟ ಡಿಎ ಲಭ್ಯ?

ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕವು ತೀವ್ರ ಅಧಿಕವಾದ ಸಂದರ್ಭದಲ್ಲಿ ಡಿಎ ಅನ್ನು ತಡೆ ಹಿಡಿಯಲಾಗಿದೆ. ಈ ತಡೆ ಹಿಡಿದ ಡಿಎ ಅನ್ನು ಈ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ನಿರೀಕ್ಷೆ ಇದೆ. ಈ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಬಾಕಿ ಇರುವ ಡಿಎ ಅನ್ನು ಪಾವತಿ ಮಾಡಬಹುದು ಎಂದು ಕೇಂದ್ರ ಸರ್ಕಾರಿ ನೌಕರರ ನಿರೀಕ್ಷೆಯಾಗಿದೆ.

English summary

7th Pay Commission: Good News for Central Government Employees Ahead of Festivals

7th Pay Commission latest update: Good News for Central Government Employees Ahead of Festivals. Here's details in kannada
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X