For Quick Alerts
ALLOW NOTIFICATIONS  
For Daily Alerts

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಡಿಎ ಸೂತ್ರ, ಏನು ಬದಲಾವಣೆ?

|

ಈ ವರ್ಷದ ಎರಡನೇ ತುಟ್ಟಿಭತ್ಯೆ ಪರಿಷ್ಕರಣೆಗಾಗಿ ಕಾಯಲಾಗುತ್ತಿದೆ. ಈ ನಡುವೆ ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಹಾಕಲಾಗುವ ಸೂತ್ರದಲ್ಲಿ ಬದಲಾವಣೆ ಮಾಡಿದೆ. ಈ ಬದಲಾವಣೆ ಏನು, ಇದು ಕೇಂದ್ರ ಸರ್ಕಾರಿ ನೌಕರರ ಸಂಬಳದ ಮೇಲೆ ಏನು ಪ್ರಭಾವ ಉಂಟು ಮಾಡುತ್ತದೆ ಎಂಬುವುದನ್ನು ನಾವು ಇಲ್ಲಿ ವಿವರಿಸಿದ್ದೇವೆ.

ಕೇಂದ್ರ ಸರ್ಕಾರಿ ನೌಕರರಿಗೆ ಇರುವ ಡಿಎ ಹಾಗೂ ಪಿಂಚಣಿದಾರರಿಗೆ ಇರುವ ಡಿಆರ್‌ ಅನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಪರಿಷ್ಕರಿಸಿದ ನಂತರ ಹೊಸ ಮೂಲ ವರ್ಷದೊಂದಿಗೆ ಲೆಕ್ಕ ಹಾಕಲಾಗುವುದಿಲ್ಲ ಎಂದು ವರದಿ ಉಲ್ಲೇಖ ಮಾಡಿದೆ. ಹಣದುಬ್ಬರವನ್ನು ಗಮನದಲ್ಲಿರಿಸಿಕೊಂಡು ಮೂಲ ವರ್ಷವನ್ನು ಸಮಯಕ್ಕೆ ಅನುಗುಣವಾಗಿ ಬದಲಾವಣೆ ಮಾಡಲಾಗುತ್ತದೆ.

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಸಾಧ್ಯತೆಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ಸಾಧ್ಯತೆ

ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಹಾಕಲಾಗುವ ಸೂತ್ರದಲ್ಲಿ ವರ್ಷವನ್ನು ಬದಲಾವಣೆ ಮಾಡಿದಾಗ ಇದು ಕೇಂದ್ರ ಸರ್ಕಾರದ ಉದ್ಯೋಗಿಗಳ ವೇತನದ ಮೇಲೆ ಪರಿಣಾಮ ಉಂಟು ಮಾಡಲಿದೆ. ಅವರ ವೇತನ ಮಾದರಿಯ ಮೇಲೆಯೂ ಪರಿಣಾಮ ಉಂಟಾಗಲಿದೆ. ವೇತನದ ಮೇಲೆ ಏನು ಪರಿಣಾಮ ಉಂಟಾಗಲಿದೆ, ಡಿಎ ಲೆಕ್ಕಾಚಾರ ಸೂತ್ರದಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿದೆ ಎಂಬುವುದನ್ನು ತಿಳಿಯೋಣ ಮುಂದೆ ಓದಿ....

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಡಿಎ ಸೂತ್ರ, ಏನು ಬದಲಾವಣೆ?

ಯಾಕಾಗಿ ಡಿಎ ಲೆಕ್ಕಾಚಾರ ಸೂತ್ರದಲ್ಲಿ ಬದಲಾವಣೆ?

ಡಿಎ ಲೆಕ್ಕಾಚಾರಕ್ಕೆ ಮೂಲ ವರ್ಷವನ್ನು ಕೇಂದ್ರ ಸಚಿವಾಲಯವು 2016ಕ್ಕೆ ಬದಲಾವಣೆ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೇಂದ್ರ ಸರ್ಕಾರವು ಹೊಸ ವೇತನ ದರ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಳೆಯ ಸೂತ್ರದಲ್ಲಿ ಮೂಲ ವರ್ಷವು 1963-65 ಆಗಿತ್ತು. ಆದರೆ ಹೊಸ ಸೂತ್ರದಲ್ಲಿ ಮೂಲ ವರ್ಷವು 2016=100 ಆಗಿರಲಿದೆ.

ಗುಡ್‌ನ್ಯೂಸ್‌: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆಗುಡ್‌ನ್ಯೂಸ್‌: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಏರಿಕೆ

ನ್ಯಾಷನಲ್ ಸ್ಟಾಟಿಸ್ಟಿಕಲ್ ಕಮಿಷನ್ (ಎನ್‌ಎಸ್‌ಇ) ಈ ಮೂಲ ವರ್ಷದಲ್ಲಿ ಬದಲಾವಣೆಯನ್ನು ಮಾಡಿದೆ. 1963-65ರಿಂದ 2016ಕ್ಕೆ ಬದಲಾವಣೆ ಮಾಡಲಾಗಿದೆ. ವೇತನ ದರ ಸೂಚ್ಯಂಕದ ದಕ್ಷತೆಯನ್ನು ಹೆಚ್ಚಿಸಲು ಈ ನಿರ್ಧಾರವನ್ನು ಮಾಡಲಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್‌ಒ) ಶಿಫಾರಸಿನ ಮೇರೆಗೆ ಈ ಬದಲಾವಣೆಯನ್ನು ತರಲಾಗಿದೆ.

ಡಿಎ ಲೆಕ್ಕಾಚಾರದ ಹೊಸ ಸೂತ್ರ ಯಾವುದು?

7 ನೇ ವೇತನ ಆಯೋಗದ ನಿಯಮಗಳ ಪ್ರಕಾರ ಉದ್ಯೋಗಿಯ ಮೂಲ ವೇತನದ ಆಧಾರದಲ್ಲಿ ಡಿಎ ಮೊತ್ತವನ್ನು ಪ್ರಸ್ತುತ ದರದ ಅಂಶವಾಗಿ ಲೆಕ್ಕಹಾಕಲಾಗುತ್ತದೆ. ಪ್ರಸ್ತುತ ಶೇಕಡಾ 12 ರ ದರದ ಪ್ರಕಾರ, ಈ ಲೆಕ್ಕಾಚಾರವು ಈ ಕೆಳಗಿನಂತಿದೆ.

(ಮೂಲ ವೇತನ x 12)/ 100
(Basic Pay x 12)/ 100

ಡಿಎ ಶೇಕಡ=12 ತಿಂಗಳ ಸಿಪಿಐ ಸರಾಸರಿ (Consumer Price Index) - 115.76

ಇದರ ಉತ್ತರವನ್ನು 115.76ರಿಂದ ಭಾಗಾಕಾರ ಹಾಗೂ 100ರಿಂದ ಗುಣಾಕಾರ ಮಾಡಲಾಗುತ್ತದೆ.

ಈ ನಡುವೆ ಕೇಂದ್ರ ಸರ್ಕಾರಿ ನೌಕರರು ಶೇಕಡ 4ರಷ್ಟು ಡಿಎ ಹೆಚ್ಚಳ ನಿರೀಕ್ಷೆಯಲ್ಲಿ ಇದ್ದಾರೆ. ಇದರಿಂದಾಗಿ ಡಿಎ ಶೇಕಡ 38ಕ್ಕೆ ಏರಿಕೆಯಾಗಲಿದೆ.

English summary

7th Pay Commission: New DA Formula for Central Employees, Details Here

7th Pay Commission latest update: New DA formula for central employees; check what changes, impact on salary.
Story first published: Saturday, August 13, 2022, 16:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X