For Quick Alerts
ALLOW NOTIFICATIONS  
For Daily Alerts

ಶೀಘ್ರದಲ್ಲಿ ಬರಲಿರುವ 8 ‘ಐಪಿಒ’ ಸೇವೆಗಳ ಪೂರ್ಣ ಮಾಹಿತಿ

By ಶಾರ್ವರಿ
|

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಎಂದರೆ ವಿವಿಧ ಬಗೆಯ ಷೇರುಗಳನ್ನು ನೀಡುವ ಕಂಪೆನಿಯನ್ನು ಸಾರ್ವಜನಿಕ ಕಂಪೆನಿಯಾಗಿ ಪರಿವರ್ತಿಸುವ ಪ್ರಕ್ರಿಯೆಯಾಗಿದೆ. ಐಪಿಒ ಸಾರ್ವಜನಿಕರಿಗೆ ಷೇರುಗಳನ್ನು ನೀಡುವುದರಿಂದ ಕಂಪನಿಯು ಬಂಡವಾಳವನ್ನು ಸಂಗ್ರಹಿಸಲು ಮತ್ತು ಸಾಮಾನ್ಯ ಜನರಿಗೆ ಆ ಹೂಡಿಕೆಯ ಮೇಲೆ ಆದಾಯವನ್ನು ಗಳಿಸಲು ಅವಕಾಶ ಮಾಡಿಕೊಡುತ್ತದೆ.

ಇಂದು ಐಪಿಒ ಕ್ರೇಜ್ ಹೆಚ್ಚಿದಂತೆ ಅದರಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ತ್ವರಿತಗತಿಯಲ್ಲಿ ಹಣ ಸಂಪಾದಿಸಬಹುದು ಎಂಬುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಐಪಿಒ 500 ಷೇರು ಬೇಕೆಂದು ಹಾಕಿದರೆ ಐದೋ ಅಥವಾ ಹತ್ತೋ ನಮಗೆ ಅಲರ್ಟ್ ಆಗುತ್ತದೆ. ಇದರ ಬೇಡಿಕೆ ಹೆಚ್ಚಳಕ್ಕೆ ಈ ಅಂಕಿ-ಅಂಶವೇ ಸಾಕ್ಷಿ. ಒಟ್ಟಿಗೆ 50 ಸಾವಿರ ಷೇರನ್ನು ಯಾರೋ ಒಬ್ಬ ತೆಗೆದುಕೊಳ್ಳದೆ 500 ಷೇರನ್ನು 10 ಜನ ತೆಗೆದುಕೊಂಡರೆ ಅದನ್ನು 'ಐಪಿಒ ಷೇರು' ಎಂದು ಕರೆಯುತ್ತಾರೆ. ಐಪಿಒ ಹೂಡಿಕೆಗೆ ಕಳೆದ ವರ್ಷದಷ್ಟೇ ಈ ವರ್ಷವೂ ಬೇಡಿಕೆ ಮುಂದುವರಿಯಲಿದ್ದು, ಪ್ರಮುಖ ಪೋರ್ಟಲ್ ಟ್ರ್ಯಾಕಿಂಗ್ ವರದಿ ಪ್ರಕಾರ ಯಾವೆಲ್ಲಾ ಕಂಪನಿ ಷೇರು ಪಡೆಯಲು ಅವಕಾಶ ನೀಡಿದೆ ಎಂಬ ಮಾಹಿತಿ ಕೆಳಕಂಡಂತೆ ಇದೆ.

1. ಅದಾನಿ ವಿಲ್ಮಾರ್

1. ಅದಾನಿ ವಿಲ್ಮಾರ್

ಅದಾನಿ ವಿಲ್ಮಾರ್ ಷೇರು ಈಗಾಗಲೇ ಪಟ್ಟಿಯಲ್ಲಿ ಸೇರಿಲ್ಲದ(Unlisted) ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಿದ್ದು, ಪ್ರತಿ ಷೇರಿಗೆ 140 ರೂ.ಗಳನ್ನು ನೀಡಲಾಗುತ್ತಿದೆ. ಹಾಗಾಗಿ ಭಾರತದಲ್ಲಿರುವ ಎಫ್ಎಂಸಿಜಿ ಕಂಪೆನಿಯು ಅಡುಗೆ ಉತ್ಪನ್ನಗಳನ್ನು ನೀಡುತ್ತಿದೆ. ಭಾರತೀಯ ಷೇರುಗಳಲ್ಲಿ ಪಟ್ಟಿ ಮಾಡಲಾದ 7ನೇ ಕಂಪೆನಿ ಅದಾನಿ ವಿಲ್ಮಾರ್. ಇದು 727.65 ಕೋಟಿ ರೂ.ಗಳ ಎಫ್ ವೈ21 ನಿವ್ವಳ ಲಾಭವನ್ನು ಹೊಂದಿದೆ. ಹಾಗಾಗಿ ಶೇ.35 ಕೋಟಾವನ್ನು ಚಿಲ್ಲರೆ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿದೆ. ಆದರೆ, ಇದರ ಮಾತೃ ಸಂಸ್ಥೆಯಾದ ಅದಾನಿ ಎಂಟರ್ಪ್ರೈಸಸ್ ಮಾಲೀಕತ್ವ ಹೊಂದಿರುವವರಿಗೆ ಮಾತ್ರ ಇದರ ಷೇರುದಾರರ ಕೋಟಾ ಇರುತ್ತದೆ.

ಇಎಸ್‌ಡಿಸಿ

ಇಎಸ್‌ಡಿಸಿ

2. ಇಎಸ್‌ಡಿಸಿ (ಎಕ್ಸುಬರೆಂಟ್ ಸಪೋರ್ಟ್ ಫಾರ್ ಡೇಟಾ ಸರ್ವೀಸ್)

ತಂತ್ರಾಂಶ:

ಇಎಸ್‌ಡಿಸಿಯು ತಾಂತ್ರಿಕ ಸೇವೆಗಳ ಸಂಸ್ಥೆಯಾಗಿದ್ದು, ಇದು ಪಿಇ ಸಂಸ್ಥೆಯ ಬೆಂಬಲದೊಂದಿಗೆ ಸಮಾನ ಷೇರು ನೀಡಲು ಯೋಚಿಸಿದೆ. ಇದಕ್ಕೆ ಸುಮಾರು 322 ಕೋಟಿ ರೂ.ನಷ್ಟು ಬಂಡವಾಳವಿದ್ದರೆ (ಒಎಫ್ಎಸ್) ಅದಕ್ಕೆ 21,525,000 ಸಮಾನ ಷೇರು ಆಗಿರಬೇಕಿರುತ್ತದೆ. ಆದ್ದರಿಂದಲೇ ಇಎಸ್‌ಡಿಸಿಯು ಆದ್ಯತೆಯ ತಾಂತ್ರಿಕ ಸೇವಾ ಪೂರೈಕೆದಾರ ಎಂದು ಹೆಸರಿಸಲಾಗಿದೆ.
***
ಗೋ ಆರಂಭಿಕ ಸಾರ್ವಜನಿಕ ಕೊಡುಗೆ
3. ಗೋ ಫಸ್ಟ್‌:
ಈ ಹಿಂದೆ ಗೋ' ಏರ್' ಎಂದು ಉಲ್ಲೇಖಿಸಲಾದ ಗೋ- ಫಸ್ಟ್' ಸಂಸ್ಥೆಯು ಆರಂಭಿಕ ಸಾರ್ವಜನಿಕ ಕೊಡುಗೆಯ ಮೂಲಕ 3,600 ಕೋಟಿ ರೂ.ಗಳನ್ನು ಸಂಗ್ರಹಿಸಲು ಘೋಷಿಸಿದೆ. ಈ ನಡುವೆ ದುರ್ಬಲ ಹೂಡಿಕೆದಾರರ ನಡುವೆ ಕಂಪೆನಿಯು ತನ್ನ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಮುಂದಾಗಿದೆ. ಎಫ್ ವೈ-20ರ ಒಂಬತ್ತು ತಿಂಗಳಲ್ಲಿ ಗೋ-ಫಸ್ಟ್' ಕಂಪೆನಿಯು 470 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ. ಆದ್ದರಿಂದ ತನ್ನ ಬಾಕಿ ಇರುವ ಸಾಲವನ್ನು ತೀರಿಸುವ ಸಲುವಾಗಿ ಹೂಡಿಕೆದಾರರಿಂದ ಹಣವನ್ನು ಹೆಚ್ಚಾಗಿ ಸಂಗ್ರಹಿಸುತ್ತಿದೆ.

4. ವಿಎಲ್‌ಸಿಸಿ:

4. ವಿಎಲ್‌ಸಿಸಿ:

ಚರ್ಮ ಹಾಗೂ ವೈಯಕ್ತಿಕ ಕಾಳಜಿಯ ಉತ್ಪನ್ನಗಳನ್ನು ನೀಡುವ ಸೌಂದರ್ಯ ವರ್ಧಕ ವಿಭಾಗದ ಕಂಪೆನಿಯು 3000 ಮಿಲಿಯನ್ ಆರಂಭಿಕ ಸಾರ್ವಜನಿಕ ಕೊಡುಗೆಯೊಂದಿಗೆ ಬರುತ್ತಿದೆ. ಈ ಆದಾಯ ವಿವಿಧ ಅಭಿವೃದ್ಧಿ ಕಾರ್ಪೋರೇಟ್ ಉದ್ದೇಶಗಳನ್ನು ನಿರ್ಮಿಸುವ ಸಲುವಾಗಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಭಾರತದ ವಿಎಲ್‌ಸಿಸಿ ಪ್ರದೇಶದಲ್ಲಿನ ಜಿಸಿಸಿ ವೆಲ್‌ನೆಸ್ ಕ್ಲಿನಿಕ್‌ಗಳ ಸೆಟ್‌ಗಾಗಿ, ಭಾರತದಲ್ಲಿನ ಜಿಸಿಸಿ ಸಂಸ್ಥೆಗಳ ಬ್ರ್ಯಾಂಡ್ ಅಭಿವೃದ್ಧಿಪಡಿಸಲು ಸಾಲದ ಹೂಡಿಕೆಗಾಗಿ ಹಾಗೂ ಡಿಜಿಟಲ್ ಮೂಲ ಹಾಗೂ ಇತರ ಕಾರ್ಪೋರೇಟ್ ಉದ್ದೇಶಗಳನ್ನು ಈಡೇರಿಸುವ ಉದ್ದೇಶದಿಂದ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ.

5. ಸ್ಕ್ಯಾನ್ರೆ(Skanray) ತಂತ್ರಜ್ಞಾನಗಳು:
ಹೈ ಫ್ರೀಕ್ವೆನ್ಸಿ ಎಕ್ಸ್-ರೇ ಇಮೇಜಿಂಗ್ ಸಿಸ್ಟಮ್ಸ್, ನಿರ್ಣಾಯಕ ಆರೈಕೆ (ಕ್ರಿಟಿಕಲ್ ಕೇರ್), ಡೆಂಟಲ್ ಕೇರ್ (ಹಲ್ಲಿನ ಹಾರೈಕೆ), ಪ್ರೈಮರಿ ಹೆಲ್ತ್ ಕೇರ್ (ಪ್ರಾಥಮಿಕ ಆರೋಗ್ಯ ರಕ್ಷಣೆ) ಹಾಗೂ ಟೆಲಿಮೆಡಿಸಿನ್ (ತ್ವರಿತ ಔಷಧ) ಸಾಧನಗಳಲ್ಲಿ ಪರಿಣತಿ ಹೊಂದಿರುವ ಪ್ರಮುಖ ಅಂತಾರಾಷ್ಟ್ರೀಯ ಆರೋಗ್ಯ ತಂತ್ರಜ್ಞಾನ ಕಂಪನಿಯೇ ಸ್ಕ್ಯಾನ್ ರೇ. ಇತ್ತೀಚಿನ ವರದಿಯ ಪ್ರಕಾರ ಕಂಪೆನಿಯ ಆಡಳಿತವು ಹಿಂದಿಗಿಂತಲೂ ಈಗ ಗಣನೀಯವಾಗಿ ಲಾಭದ ಹಾದಿಯನ್ನು ಕಂಡಿದೆ ಎನ್ನಲಾಗಿದೆ. ಅಭಿವೃದ್ಧಿಶೀಲ ಕಂಪೆನಿಗಳ ಸಾಲಿನಲ್ಲಿ ನಿಲ್ಲುವ ಸ್ಕ್ಯಾನ್ರೇ 2021ನೇ ಸಾಲಿನ 9 ತಿಂಗಳಿನಲ್ಲಿ ಕಂಪೆನಿಯು 175 ಕೋಟಿ ರೂ.ಗಳ ಲಾಭವನ್ನು ಕಂಡಿದೆ ಎಂದು ಅಂದಾಜಿಸಲಾಗಿದೆ.

ಮಿಶ್ರಲೋಹಗಳ ಅತಿದೊಡ್ಡ ಉತ್ಪಾದಕಾ ಸಂಸ್ಥೆ
6. ಸಿಎಂಆರ್ ಗ್ರೀನ್ ತಂತ್ರಜ್ಞಾನಗಳು

ಭಾರತದಲ್ಲಿ ಅಲ್ಯೂಮಿನಿಯಂ ಮತ್ತು ಝಿಂಕ್ ಡೈ-ಕಾಸ್ಟಿಂಗ್ ಮಿಶ್ರಲೋಹಗಳ ಅತಿದೊಡ್ಡ ಉತ್ಪಾದಕಾ ಸಂಸ್ಥೆಯಾಗಿರುವ ಸಿಎಂಆರ್ (ಸೆಂಟ್ರೋ ಮೆಡಿಕೋ ರಿಫಾರ್ಮಾ) ವಾರ್ಷಿಕ ಸುಮಾರು 310,700 ಎಂ.ಟಿ. ಗಿಂತಲೂ ಅಧಿಕವಾದ ಸಾಮರ್ಥ್ಯವುಳ್ಳದ್ದಾಗಿದೆ. ಆರಂಭದಿಂದಲೂ ಆಧುನಿಕ ತಂತ್ರಜ್ಞಾನ ಹಾಗೂ ನಿರಂತರ ಸುಧಾರಣೆಗಳನ್ನು ಅನುಸರಿಸುವ ಮೂಲಕ ತನ್ನ ಸಾಮರ್ಥ್ಯದ ವೇಗವನ್ನು ಕಾಯ್ದುಕೊಂಡಿದೆ. ಹೂಡಿಕೆದಾರರು ಹಾಗೂ ಪ್ರವರ್ತಕರಿಂದ 300 ಕೋಟಿ ರೂ. ಬಂಡವಾಳ ಹೂಡಿಕೆಯಾದರೆ, 3.34 ಕೋಟಿ ರೂ. ಸಮಾನ ಷೇರು ನೀಡಲಾಗುತ್ತದೆ. ಜೊತೆಗೆ ಹೊಸ ಸಂಚಿಕೆಯಿಂದ ಬರುವ ಆದಾಯವನ್ನು ಸಾಲದ ಪಾವತಿ ಹಾಗೂ ಸಾಮಾನು ಕಾರ್ಪೋರೇಟ್ ಉದ್ದೇಶಗಳಿಗಾಗಿ ಬಳಕೆ ಮಾಡಲಾಗುತ್ತಿದೆ.

7. ಪ್ರೌಡೆಂಟ್ ಅಡ್ವೈಸರಿ:

2000ನೇ ಸಾಲಿನಲ್ಲಿ ಪ್ರಾರಂಭವಾದ ಪ್ರೌಡೆಂಟ್ ಅಡ್ವೈಸರಿ ಕಂಪೆನಿಯು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದೆ. ಸ್ಥಾಪಿತವಾದಾಗಿನಿಂದಲೂ ಕಂಪೆನಿಯು ಮ್ಯೂಚ್ಯುಯಲ್ ಫಂಡ್‌ಗಳು, ವಿಮೆ, ಸಮಾನ ಷೇರು, ಬಾಂಡ್‌ಗಳು, ಪಿಎಂಎಸ್- ಎಐಎಫ್, ಸ್ಥಿರ ಆದಾಯದ ಉತ್ಪನ್ನಗಳು, ಆಸ್ತಿಗಳು ಮತ್ತು ಸಾಲದ ಉತ್ಪನ್ನಗಳಂತಹ ಸೇವೆ ಹಾಗೂ ಹಣಕಾಸು ಸೇವೆಗಳನ್ನು ನೀಡುವ ಮೂಲಕ ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿಕೊಂಡಿದೆ. ಷೇರುದಾರು ಹಾಗೂ ಪ್ರವರ್ತಕರಿಂದ 8.55 ಮಿಲಿಯನ್ ನಷ್ಟು ಷೇರು ಹಾಗಾಗಿ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಒಪಿ) ಮಾರಾಟ ಕೊಡುಗೆಯಾಗಿದೆ. ವ್ಯಾಗ್ನರ್, ಎಂಬ ಟಿ.ಎ.ಅಸೋಸಿಯೇಟ್ಸ್‌ನ ವಾಹನ - ಕಂಪನಿಯನ್ನು ಬೆಂಬಲಿಸುವ ಪಿಇ ಸಂಸ್ಥೆಯು 8.28 ಮಿಲಿಯನ್ ಷೇರುಗಳನ್ನು ಮಾರಾಟ ಮಾಡುತ್ತದೆ ಮತ್ತು ಶಿರಿಶ್ ಪಟೇಲ್ ಎಂಬುವರೂ 2.68 ಲಕ್ಷ ಷೇರುಗಳಷ್ಟು ಉತ್ಪನ್ನವನ್ನು ಮಾರಾಟ ಮಾಡಿದ್ದಾರೆ. ಆದಾಗ್ಯೂ ವಾಗ್ನದ್‌ನ ಶೇ.39.91% ಪಾಲನ್ನು ಹೊಂದಿದ್ದು, ಪಟೇಲ್ ಈಗ ಸಂಸ್ಥೆಯ 3.15% ಅನ್ನು ಹೊಂದಿದ್ದಾರೆ.

8. ಟ್ರಾಕ್ಸ್‌ನ ತಂತ್ರಜ್ಞಾನಗಳು

8. ಟ್ರಾಕ್ಸ್‌ನ ತಂತ್ರಜ್ಞಾನಗಳು

ಜಗತ್ತಿನಾದ್ಯಂತ 850ಕ್ಕೂ ಅಧಿಕ ಹೂಡಿಕೆದಾರರು ಮತ್ತು ಕಾರ್ಪೋರೇಟ್‌ಗಳನ್ನು ಹೊಂದಿರುವ ಟ್ರಾಕ್ಸ್‌ನ ತಂತ್ರಜ್ಞಾನ ಕಂಪೆನಿಯು ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿಯ ಘಟಕವನ್ನು ಒಳಗೊಂಡಿದೆ. ಅಲ್ಲದೆ ಈ ಸಂಸ್ಥೆಯು ಸರ್ಕಾರಿ ಸಂಸ್ಥೆಗಳಿಗೆ ಆಯ್ಕೆಯ ಸಂಶೋಧನಾ ಪಾಲುದಾರವೂ ಆಗಿದೆ. ಕಂಪನಿಯ ಪ್ರಮುಖ ಕೊಡುಗೆಗಳು ಮಾರುಕಟ್ಟೆಯಲ್ಲಿ ಕ್ರಿಯಾಶೀಲವಾಗಿಯೇ ಇವೆ. ಆದರೂ ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯು ಸುಮಾರು 5 ಕೋಟಿ ರೂ. ನಷ್ಟವನ್ನು ಅನುಭವಿಸಿದೆ.

ಸಂಸ್ಥೆ ಹೆಸರುIPO ಗಾತ್ರOFS

ಅದಾನಿ ವಿಲ್ಮಾರ್4500 ಕೋಟಿ ರು--
ಇಎಸ್‌ಡಿಸಿ322 ಕೋಟಿ ರು ಈಕ್ವಿಟಿ ವಿಮೆ ಜೊತೆಗೆ OFS--
ಗೋ ಏರ್3600 ಕೋಟಿ ರು--
ವಿಎಲ್‌ಸಿಸಿ300 ಕೋಟಿ ರು ಈಕ್ವಿಟಿ ವಿಮೆ ಜೊತೆಗೆ OFS--
ಸ್ಕ್ಯಾನ್ರೆ ಟೆಕ್400 ಕೋಟಿ ರು14,106,347 ಷೇರುಗಳ OFS
ಸಿಎಂಆರ್ ಗ್ರೀನ್300 ಕೋಟಿ ರು3.34 ಕೋಟಿ ರು
ಪ್ರೌಡೆಂಟ್ ಅಡ್ವೈಸರಿ---ಸಂಪೂರ್ಣ OFS

English summary

Upcoming IPOs in India 2022: 8 IPOs That Will Open Shortly

These IPOs will hit the primary markets as per a leading portal tracking IPOs in particular.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X