For Quick Alerts
ALLOW NOTIFICATIONS  
For Daily Alerts

ಕೊರೊನಾ ನಂತರದ ಜೀವನ ವೈಯಕ್ತಿಕ ಆರ್ಥಿಕ ಸಲಹೆಗಾರ ವೃತ್ತಿಯತ್ತ, ಯಾಕೆ?

|

ಕೊರೊನಾ ವೈರಸ್‌ ಸೋಂಕಿನ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಹಲವಾರು ದೇಶಗಳಲ್ಲಿ ಲಾಕ್‌ಡೌನ್‌ ಮಾಡಲಾಗಿತ್ತು. ಇದು ಹಲವಾರು ಸಣ್ಣ, ಮಧ್ಯಮ ಕಾರ್ಖಾನೆಗಳಿಗೆ ಭಾರೀ ಆರ್ಥಿಕ ನಷ್ಟವನ್ನು ಉಂಟು ಮಾಡಿದೆ. ಹಾಗೆಯೇ ಓರ್ವನ ಒಡೆತನದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಅಂಗಡಿ ಮುಗ್ಗಟ್ಟುಗಳಿಗೂ ತೀವ್ರ ತೊಂದರೆಯನ್ನು ಉಂಟು ಮಾಡಿದೆ.

ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಮಾಡಲಾದ ಲಾಕ್‌ಡೌನ್‌ನಿಂದಾಗಿ ಹಲವಾರು ಮಂದಿ ತನ್ನ ಉದ್ಯೋಗವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಮ್ಮ ದೈನಂದಿನ ಖರ್ಚಿಗಾಗಿ ತಮ್ಮ ಉಳಿತಾಯದ ಮೇಲೆ ಅವಲಭಿತರಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ಇನ್ನು ಯಾರು ತಮ್ಮ ಉದ್ಯೋಗವನ್ನು ಕಳೆದುಕೊಂಡಿಲ್ಲವೋ ಅವರು ಭಾರೀ ವೇತನ ಕಡಿತದಿಂದಾಗಿ ಕಂಗೆಟ್ಟಿದ್ದಾರೆ. ಆದರೆ ಕಾರ್ಖಾನೆಗಳು ಪ್ರಸ್ತುತ ಪರಿಸ್ಥಿತಿಗೆ ತಕ್ಕಂತೆ ತಮ್ಮ ವ್ಯವಹಾರವನ್ನು ಹೊಂದಿಸಿಕೊಳ್ಳಲು ಆರಂಭ ಮಾಡಿದ ನಂತರ ಉತ್ತಮ ಬೆಳವಣಿಗೆಯು ಕಾಣಿಸಿಕೊಂಡಿದೆ. ಸರಿಯಾದ ಹಣಕಾಸು ಶಿಕ್ಷಣ, ಹಣಕಾಸು ನಿರ್ವಹಣೆಯ ಜ್ಞಾನದ ಮೂಲಕ ಹಲವಾರು ಕಾರ್ಖಾನೆಗಳು ಈ ಕೋವಿಡ್‌ ಪರಿಸ್ಥಿತಿಯಲ್ಲೂ ಅಧಿಕ ನಷ್ಟವಾಗದಂತೆ ನೋಡಿಕೊಂಡಿದೆ ಎಂದು ಮಾಧ್ಯಮಗಳ ವರದಿಗಳು ಹೇಳುತ್ತದೆ.

ದುಂದುವೆಚ್ಚಕ್ಕೆ ಬ್ರೇಕ್‌ ಹಾಕುವುದು ಹೇಗೆ?, ಇಲ್ಲಿದೆ ಟಿಪ್ಸ್‌ದುಂದುವೆಚ್ಚಕ್ಕೆ ಬ್ರೇಕ್‌ ಹಾಕುವುದು ಹೇಗೆ?, ಇಲ್ಲಿದೆ ಟಿಪ್ಸ್‌

ಈ ನಡುವೆ ಜನರು ತಮ್ಮ ಮುಂದಿನ ಜೀವನದ ಬಗ್ಗೆ ಈಗಲೇ ಯೋಚನೆ ಮಾಡಲು ಆರಂಭ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಹೂಡಿಕೆ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ವೃತ್ತಿಪರ ಸಲಹೆಗಾರರತ್ತ ಧಾವಿಸಿದ್ದಾರೆ. ಜನರು ಈಗ ತಮ್ಮ ಹಣವನ್ನು ಯಾವ ರೀತಿ ನಿರ್ವಹಣೆ ಮಾಡಬೇಕು, ಎಲ್ಲಿ ಎಷ್ಟು ಖರ್ಚು ಮಾಡಬೇಕು, ಯಾವುದರಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ತಜ್ಞೆ ಬಳಿ ಮಾಹಿತಿಯನ್ನು ಕೇಳುತ್ತಿದ್ದಾರೆ. ಮನೆಯಲ್ಲೇ ಕೆಲಸ ಮಾಡುತ್ತಿದ್ದ ಜನರು ಹಣವನ್ನು ಹೇಗೆ ಸರಿದೂಗಿಸಿಕೊಂಡು ಹೋಗಬೇಕು ಎಂಬ ಬಗ್ಗೆ ಇನ್ನಷ್ಟು ಆಳವಾಗಿ ಯೋಚಿಸಲು ಆರಂಭಿಸಿದ್ದಾರೆ. ಇನ್ನು ಈ ನಡುವೆ ಹಲವಾರು ಮಂದಿ ತಮ್ಮ ವೃತ್ತಿ ಜೀವನದಲ್ಲಿ ಹಣಕಾಸು ಆಸಕ್ತಿಯನ್ನು ಬೆಳೆಸಿಕೊಡು, ತಮ್ಮ ವೃತ್ತಿ ಜೀವನದಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ಅಥವಾ ವಿಶೇಷ ಕೋರ್ಸ್‌ಗಳನ್ನು ಮಾಡಿ ಇನ್ನಷ್ಟು ತಮ್ಮ ವೃತ್ತಿಯಲ್ಲಿ ಪರಿಣತಿ ಹೊಂದುವ ಪ್ರಯತ್ನವನ್ನು ಮಾಡಿದ್ದಾರೆ. ಹಾಗಾದರೆ ಈ ಕೋವಿಡ್‌ ನಂತರದಲ್ಲಿ ವೃತ್ತಿ ಜೀವನದಲ್ಲಿ ಆದ ಬದಲಾವಣೆ ಏನು?, ಆರ್ಥಿಕ ಸಲಹೆಗಾರರು ಯಾರು ಎಂದು ತಿಳಿಯಲು ಮುಂದೆ ಓದಿ.

 ಯಾರಿದು ವೈಯಕ್ತಿಕ ಆರ್ಥಿಕ ಸಲಹೆಗಾರ, ಆರ್ಥಿಕ ಯೋಜಕ?

ಯಾರಿದು ವೈಯಕ್ತಿಕ ಆರ್ಥಿಕ ಸಲಹೆಗಾರ, ಆರ್ಥಿಕ ಯೋಜಕ?

ಹಣವನ್ನು ಉಳಿತಾಯ ಮಾಡುವ ಬಗ್ಗೆ ಹಾಗೂ ಹಣವನ್ನು ಸರಿಯಾದ ಕಡೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಅಗತ್ಯ ಸಲಹೆಗಳನ್ನು ನೀಡುವ ವ್ಯಕ್ತಿಯನ್ನು ಆರ್ಥಿಕ ಸಲಹೆಗಾರ ಅಥವಾ ಆರ್ಥಿಕ ಯೋಜಕ ಎಂದು ಕರೆಯುತ್ತೇವೆ. ಭವಿಷ್ಯದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ಆರ್ಥಿಕ ಸಂಕಷ್ಟ ಬಾರದಿರುವಂತೆ ಈಗಲೇ ಹಣಕಾಸನ್ನು ನಿರ್ವಹಣೆ ಮಾಡಲು ಈ ಆರ್ಥಿಕ ಸಲಹೆಗಾರರು ಸಹಾಯ ಮಾಡುತ್ತಾರೆ. ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಗುರಿಯನ್ನು ತಲುಪಲು ಹಾಗೂ ಪ್ರತಿಯೊಬ್ಬ ವ್ಯಕ್ತಿಯು ಆರ್ಥಿಕ ಜ್ಞಾನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವ ಕಾರ್ಯವನ್ನು ಈ ಹಣಕಾಸು ತಜ್ಞರುಗಳು ಮಾಡುತ್ತಾರೆ. ಈ ಹಣಕಾಸು ಸಲಹೆಗಾರರು ಬರೀ ಹೂಡಿಕೆಯ ವಿಚಾರದಲ್ಲಿ ಮಾತ್ರವಲ್ಲ ಉಳಿತಾಯ, ಬಜೆಟ್‌, ವಿಮೆ ಹಾಗೂ ತೆರಿಗೆಯ ವಿಚಾರದಲ್ಲಿಯೂ ಅಗತ್ಯ ಸಲಹೆಯನ್ನು ನೀಡುತ್ತಾರೆ.

ವೈಯಕ್ತಿಕ ಹಣಕಾಸು ಸಲಹೆಗಾರರು, ವ್ಯಕ್ತಿಯು ಹಣಕಾಸು ಅಪಾಯವನ್ನು ತಿಳಿದುಕೊಳ್ಳಲು, ಹಣಕಾಸು ಅಪಾಯವನ್ನು ಕಡಿಮೆ ಮಾಡಲು, ಹಾಗೆಯೇ ಯಾವುದೇ ತೀವ್ರ ಹಣಕಾಸು ಅಪಾಯವನ್ನು ತಪ್ಪಿಸಲು ಸಹಾಯ ಮಾಡುತ್ತಾರೆ. ಸಾಮಾನ್ಯವಾಗಿ ವೈಯಕ್ತಿಕ ಹಣಕಾಸು ಸಲಹೆಗಾರರು, ಉಳಿತಾಯ, ಬಜೆಟ್‌, ವಿಮೆ ಹಾಗೂ ತೆರಿಗೆಯ ಹೀಗೆ ಎಲ್ಲಾ ವಿಚಾರದಲ್ಲೂ ಸಲಹೆಯನ್ನು ನೀಡುತ್ತಾರೆ. ಇನ್ನು ಕೆಲವು ಮಂದಿ ಸಲಹೆಗಾರರು ಬರೀ ಕೆಲವೊಂದು ವಿಭಾಗದಲ್ಲಿ ಪರಿಣಿತರಾಗಿರುತ್ತಾರೆ. ಅಂದರೆ ಕೆಲವು ಆರ್ಥಿಕ ಸಲಹೆಗಾರರಿಗೆ ಸಾಲವನ್ನು ಹೇಗೆ ನಿಭಾಯಿಸುವುದು ಎಂಬ ಬಗ್ಗೆ ಮಾತ್ರ ಮಾಹಿತಿ ಇರುತ್ತದೆ, ನಿವೃತ್ತಿ ಜೀವನದ ಬಗ್ಗೆ ಮಾಹಿತಿ, ಹೂಡಿಕೆಯ ಬಗ್ಗೆ ಮಾಹಿತಿ, ವಿಮೆ ಬಗ್ಗೆ ಮಾಹಿತಿ, ಹೀಗೆ ಬೇರೆ ಬೇರೆ ಮಾಹಿತಿಯನ್ನು ನೀಡುತ್ತಾರೆ.

 ಪ್ರತಿಭೆಯ ನಡುವಿನ ಅಂತರ

ಪ್ರತಿಭೆಯ ನಡುವಿನ ಅಂತರ

ಇನ್ನು ಈ ಕೊರೊನಾ ಸಂದರ್ಭದಲ್ಲಿ ಉಂಟಾದ ಸಂಪತ್ತು ನಿರ್ವಹಣೆಯ ಬಗ್ಗೆಗಿನ ಜಾಗೃತಿಯು ಆರ್ಥಿಕ ಸಲಹೆಗಾರರ ಹಾಗೂ ಆರ್ಥಿಕ ನಿರ್ವಹಣೆಗಾರರ ಬೇಡಿಕೆಯನ್ನು ಹೆಚ್ಚಿಸಿದೆ. ಭಾರತವು ದೊಡ್ಡ ಪ್ರತಿಭೆಯ ಅಂತರವನ್ನು ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಒಂದು ಸುದ್ದಿಯ ಪ್ರಕಾರ, ಹಣಕಾಸು ಯೋಜನೆ ಗುಣಮಟ್ಟ ಮಂಡಳಿ (ಎಫ್‌ಪಿಎಸ್‌ಬಿ) ಲಿಮಿಟೆಡ್‌ನ ಭಾರತೀಯ ಸಂಪರ್ಕ ಕಚೇರಿಯ ದೇಶದ ಮುಖ್ಯಸ್ಥ ರಾಜೇಶ ಕೃಷ್ಣಮೂರ್ತಿ, "ಭಾರತವು ಸುಮಾರು ಬಿಲಿಯನ್‌ಗಟ್ಟಲೆ ಜನಸಂಖ್ಯೆಯನ್ನು ಹೊಂದಿದೆ. ಆದರೆ ಭಾರತದಲ್ಲಿ ಬರೀ ಸುಮಾರು 2000 ಮಾತ್ರ ಪ್ರಮಾಣೀಕೃತ ಆರ್ಥಿಕ ಸಲಹೆಗಾರ ತಜ್ಞರು ಇದ್ದಾರೆ," ಎಂದು ತಿಳಿಸಿದ್ದಾರೆ. ಭಾರತದಲ್ಲಿ ಫಿನ್‌ಟೆಕ್ ಕಂಪನಿಗಳು ಇದೆ. ಆ ಕಂಪನಿಗಳು ಹಣಕಾಸಿನ ಮಾರ್ಗದರ್ಶನ ಮತ್ತು ಸುಳಿವುಗಳನ್ನು ಭಾರತದ ಹಿಂದುಳಿದ ವರ್ಗಕ್ಕೆ ನೀಡುತ್ತದೆ. ಇತರೆ ಉದ್ಯೋಗಿಗಳಿಗೆ ಹೋಲಿಕೆ ಮಾಡಿದರೆ ಕಾರ್ಮಿಕರಿಗೆ ಕಡಿಮೆ ಉಳಿತಾಯ ಇರುತ್ತದೆ. ಆದರೆ ಹಣಕಾಸು ನಿರ್ವಹಣೆಯನ್ನು ಮಾಡುತ್ತಾರೆ. ಅದಕ್ಕಾಗಿ ನಿಯೋ-ಬ್ಯಾಂಕ್ ನಿರ್ದಿಷ್ಟ ವಿಭಾಗಕ್ಕೆ ಸೇವೆಯನ್ನು ಸಲ್ಲಿಸುವ ಕಾರ್ಯವನ್ನು ಮಾಡುತ್ತದೆ.

ನಿಮ್ಮ ಖರ್ಚನ್ನು ಸರಿಯಾಗಿ ನಿರ್ವಹಿಸಲು ಹಣಕಾಸಿನ ಸಾಕ್ಷರತೆ ಹೇಗೆ ಸಹಕಾರಿ?ನಿಮ್ಮ ಖರ್ಚನ್ನು ಸರಿಯಾಗಿ ನಿರ್ವಹಿಸಲು ಹಣಕಾಸಿನ ಸಾಕ್ಷರತೆ ಹೇಗೆ ಸಹಕಾರಿ?

 ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳ ಬೆಳವಣಿಗೆ

ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳ ಬೆಳವಣಿಗೆ

ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಸಂಪತ್ತಿನ ನಿರ್ವಹಣೆಯನ್ನು ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಈ ಫಿನ್‌ಕೆಟ್‌ ಸಂಸ್ಥೆಗಳು ಸಾಮಾನ್ಯ ಆರ್ಥಿಕ ಸಲಹೆಯನ್ನು ನೀಡುತ್ತದೆ. ಈ ಪ್ಲಾಟ್‌ಫಾರ್ಮ್‌ಗಳು ಬಹಳ ಕಡಿಮೆ ಮೊತ್ತದಿಂದ ಆರಂಭಿಸಿ, ಯಾರೂ ಬೇಕಾದರೂ ಹೂಡಿಕೆ ಮಾಡಲು ಆರಂಭಿಸುವ ವಿಶಾಲ ಅವಕಾಶವನ್ನು ಸೃಷ್ಟಿ ಮಾಡಿದೆ. ದರ ಜೊತೆಗೆ, ಅವರು ಹೂಡಿಕೆದಾರರಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ಸೇವೆಯನ್ನು ನೀಡುತ್ತಾರೆ. ಇದರಿಂದಾಗಿ ಭಾರತವು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಫಿನ್‌ಟೆಕ್ ಮಾರುಕಟ್ಟೆಗಳನ್ನು ಹೊಂದಿದ್ದು, ಜಾಗತಿಕವಾಗಿ ಅತಿ ಹೆಚ್ಚು ಅಡಾಪ್ಷನ್‌ ರೇಟ್‌ ಅನ್ನು ಹೊಂದಿದೆ. ಪ್ರಸ್ತುತ ಭಾರತದಲ್ಲಿ ಫಿನ್‌ಕೆಟ್‌ ಮಾರುಕಟ್ಟೆಯಲ್ಲಿ ದರವು 31 ಬಿಲಿಯನ್‌ ಡಾಲರ್‌ ಆಗಿದ್ದು 2025 ರ ವೇಳೆಗೆ 84 ಬಿಲಿಯನ್‌ ಡಾಲರ್‌ ಆಗುವ ನಿರೀಕ್ಷೆಯಿದೆ. ಈ ಮೂಲಕ ಶೇಕಡ 22 ರಷ್ಟು ಬೆಳವಣಿಗೆ ಆಗುವ ನಿರೀಕ್ಷೆಯಿದೆ. ಇನ್ನು ಈ 2,100 ಗೂ ಅಧಿಕವಿರುವ ಫಿನ್‌ಟೆಕ್‌ಗಳ ಪೈಕಿ ಶೇಕಡ 67 ರಷ್ಟು ಕಳೆದ ಐದು ವರ್ಷದಲ್ಲೇ ಆರಂಭವಾಗಿದೆ. ಇನ್ನು ಈ ಪೈಕಿ ಹಲವಾರು ಫಿನ್‌ಕೆಟ್‌ ಕಂಪನಿಗಳು ಸ್ಟರ್ಟ್ ಅಪ್‌ಗಳಾದ ಕಾರಣ ಈ ಹೊಸ ಮಾಡರ್ನ್ ಯುಗದಲ್ಲಿ ಡಿಜಿಟಲೀಕರಣಕ್ಕೆ ಒಗ್ಗಿಕೊಂಡಿದೆ.

 ವೈಯಕ್ತಿಕ ಹಣಕಾಸು ಸಲಹೆಗಾರರಾಗಲು ಕೋರ್ಸ್‌ಗಳು, ಪ್ರಮಾಣಪತ್ರಗಳು ಅತ್ಯಗತ್ಯ

ವೈಯಕ್ತಿಕ ಹಣಕಾಸು ಸಲಹೆಗಾರರಾಗಲು ಕೋರ್ಸ್‌ಗಳು, ಪ್ರಮಾಣಪತ್ರಗಳು ಅತ್ಯಗತ್ಯ

ಇನ್ನು ಈ ವೈಯಕ್ತಿಕ ಆರ್ಥಿಕ ಸಲಹೆಗಾರರು ಆಗಬೇಕಾದರೆ ಜನರು ಕೋರ್ಸ್‌ಗಳನ್ನು ನಡೆಸುವುದು ಅತ್ಯಗತ್ಯವಾಗಿದೆ. ಆರ್ಥಿಕ ವಿಚಾರದಲ್ಲಿ ಪದವಿಯನ್ನು ಹೊಂದಿರಬೇಕಾಗಿದೆ. ಹಾಗೆಯೇ ಪ್ರಮಾಣ ಪತ್ರವನ್ನು ಕೂಡಾ ಹೊಂದಿರಬೇಕು. ಹಣಕಾಸು, ವ್ಯಾಪಾರ, ಲೆಕ್ಕಪತ್ರ, ಗಣಿತ ಅಥವಾ ಅರ್ಥಶಾಸ್ತ್ರ ಮೊದಲಾದ ವಿಚಾರದಲ್ಲಿ ಪದವಿಯನ್ನು ಪಡೆದಿರಬೇಕಾಗುತ್ತದೆ. ಹಾಗೆಯೇ ಪ್ರಮಾಣೀಕೃತ ಹಣಕಾಸು ಯೋಜಕ ಅಥವಾ ಸಲಹೆಗಾರ (ಸಿಎಫ್‌ಪಿ) ಎಂದು ಹಣಕಾಸು ಯೋಜನೆ ಗುಣಮಟ್ಟ ಮಂಡಳಿಯ ಪ್ರಮಾಣ ಪತ್ರವನ್ನು ಹೊಂದಿರಬೇಕು. ಐಆರ್‌ಡುಇಎ ಮತ್ತು ಸೆಬಿ ನಂತಹ ಅನೇಕ ವೃತ್ತಿಪರ ಹಣಕಾಸು ಸಂಸ್ಥೆಗಳು ಸಿಎಫ್‌ಪಿ ಪ್ರಮಾಣಪತ್ರವನ್ನು ಹೊಂದಿರುವ ವೃತ್ತಿಪರರಿಂದ ಆರ್ಥಿಕ ಮಾರ್ಗದರ್ಶನ ಪಡೆಯಲು ಜನರನ್ನು ಪ್ರೋತ್ಸಾಹಿಸುತ್ತವೆ. ಹಣಕಾಸು ನಿರ್ವಹಣೆಯಲ್ಲಿನ ವಿಶೇಷತೆಯು ಹೆಚ್ಚುವರಿ ಅನುಕೂಲವಾಗಬಹುದು ಮತ್ತು ಭಾರತದಲ್ಲಿ ಹೆಚ್ಚಿನ ಸಂಬಳದ ಉದ್ಯೋಗಗಳನ್ನು ಆಕರ್ಷಿಸಬಹುದು.

ಕೋವಿಡ್‌ ಲಸಿಕೆಯಿಂದಾಗಿ ಕಾರ್ಯ ನಿರ್ವಹಿಸುತ್ತಿದೆ ಈ ಸಂಸ್ಥೆಗಳ ಸ್ಟಾಕ್‌ಗಳು!ಕೋವಿಡ್‌ ಲಸಿಕೆಯಿಂದಾಗಿ ಕಾರ್ಯ ನಿರ್ವಹಿಸುತ್ತಿದೆ ಈ ಸಂಸ್ಥೆಗಳ ಸ್ಟಾಕ್‌ಗಳು!

 ಜನರಲ್ಲಿರುವ ವೃತ್ತಿ ನಿರೀಕ್ಷೆಗಳು

ಜನರಲ್ಲಿರುವ ವೃತ್ತಿ ನಿರೀಕ್ಷೆಗಳು

ಸರ್ಟಿಫೈಡ್ ಫೈನಾನ್ಶಿಯಲ್ ಪ್ಲಾನರ್ (ಸಿಎಫ್‌ಪಿ) ಆಗಿ ವೈಯಕ್ತಿಕ ಹಣಕಾಸು ವೃತ್ತಿಜೀವನವು ವ್ಯಾಪಕ ಶ್ರೇಣಿಯ ಉದ್ಯೋಗಾವಕಾಶಗಳನ್ನು ಹೊಂದಿದೆ, ಅವುಗಳೆಂದರೆ:

* ವಿಮೆ ಕಂಪನಿಗಳು: ವಿಮೆ ಕಂಪನಿಗಳಲ್ಲಿ ಹಣಕಾಸು ಸಲಹೆಗಾರರು ಗ್ರಾಹಕರಿಗೆ ಸರಿಯಾದ ವಿಮಾ ಪಾಲಿಸಿಯನ್ನು ಶಿಫಾರಸು ಮಾಡುವ ಕಾರ್ಯವನ್ನು ಮಾಡುತ್ತಾರೆ. ಈ ಉದ್ಯೋದ ಹೊಂದಿರುವವರು ದೀರ್ಘಾವಧಿಯ ಗುರಿಯನ್ನು ಪೂರೈಸಲು ಸಹಾಯ ಮಾಡಲು ಸಿದ್ಧರಾಗಿರುತ್ತಾರೆ.
* ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು: ಬ್ಯಾಂಕುಗಳಲ್ಲಿನ ಹಣಕಾಸು ಸಲಹೆಗಾರರು ತಮ್ಮಲ್ಲಿರುವ ವಿವಿಧ ಹೂಡಿಕೆ ಯೋಜನೆಗಳ ಬಗ್ಗೆ ಜನರಿಗೆ ಸಲಹೆ ನೀಡುತ್ತಾರೆ. ಹಾಗೆಯೇ ಯಾವ ವ್ಯಕ್ತಿಗೆ ಯಾವ ಹೂಡಿಕೆ ಸೂಕ್ತ ಎಂದು ಸೂಚನೆ ನೀಡುತ್ತಾರೆ.
* ಹೂಡಿಕೆ ಸಂಸ್ಥೆಗಳು: ಹೂಡಿಕೆ ಸಂಸ್ಥೆಯಲ್ಲಿನ ಹಣಕಾಸು ಸಲಹೆಗಾರರು ತಮ್ಮ ಕ್ಲೈಂಟ್‌ನ ಎಲ್ಲಾ ಹಣಕಾಸು ಸಾಮರ್ಥ್ಯದ ಬಗ್ಗೆ ವಿಶ್ಲೇಷಣೆ ಮಾಡುತ್ತಾರೆ. ಹಾಗೆಯೇ ಯಾವ ಸಂದರ್ಭದಲ್ಲಿ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ನಿರ್ಧಾರ ಮಾಡಲು ಸಹಾಯ ಮಾಡುತ್ತಾರೆ.
* ಸಂಪತ್ತು ನಿರ್ವಹಣಾ ಸಂಸ್ಥೆಗಳು: ಜನರಿಗೆ ಹಣಕಾಸು ಹೂಡಿಕೆ ಬಗ್ಗೆ ಸಲಹೆ ನೀಡುವ ಸಂಸ್ಥೆಗಳು ಮಾತ್ರವಲ್ಲದೇ ಸಂಪತ್ತನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುವುದರ ಬಗ್ಗೆಯೂ ನಿಖರವಾದ ಸಲಹೆಯನ್ನು ನೀಡುತ್ತದೆ. ಈ ಸಲಹೆಗಾರರು ಗ್ರಾಹಕರ ಪ್ರಸ್ತುತ ಸಂಪತ್ತನ್ನು ಹೆಚ್ಚಿಸಲು ಯೋಜನೆಗಳು ಮತ್ತು ತಂತ್ರಗಳನ್ನು ರಚಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಈ ಸಂಸ್ಥೆಗಳು ಖಾಸಗಿ ಸಂಪತ್ತು ನಿರ್ವಹಣೆ, ಸಾಲ ನೀಡಿಕೆ ಮತ್ತು ನಗದು ನಿರ್ವಹಣೆಯಿಂದ ಹೂಡಿಕೆ ಪರಿಹಾರಗಳವರೆಗೆ ಎಲ್ಲಾ ಸಲಹೆಯನ್ನು ನೀಡುತ್ತಾರೆ.

 

English summary

A career in personal finance in the post-pandemic world, Explained in Kannada

A career in personal finance in the post-pandemic world, Explained in Kannada. Read on.
Story first published: Tuesday, September 14, 2021, 19:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X