For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆ ಬಾಗಿಲಿಗೆ ಆಧಾರ್ ಸೇವೆ: ಇಲ್ಲಿದೆ ವಿವರ

|

ಆಧಾರ್ ಕಾರ್ಡ್ ಹೊಂದಿರುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಜನರಿಗೆ ಮನೆ ಬಾಗಿಲಿಗೆ ಆಧಾರ್ ಸೇವೆಯನ್ನು ನೀಡಲು ಆರಂಭ ಮಾಡಿದೆ. ಅಂದರೆ ಇನ್ಮುಂದೆ ನೀವು ಮನೆಯಲ್ಲಿ ಇದ್ದು ಆಧಾರ್ ಸೇವೆ ಪಡೆಯಬಹುದು.

 

ನೀವು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡದೆಯೇ ಆಧಾರ್ ಕಾರ್ಡ್ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ನಿಮಗೆ ಬಂದ ಪತ್ರವನ್ನು ನಿಮ್ಮ ಮನೆಗೆ ತಲುಪಿಸುವ ಅಂಚೆ ಕಚೇರಿ ಸಿಬ್ಬಂದಿಗಳೇ ನಿಮಗೆ ಆಧಾರ್ ಕಾರ್ಡ್ ಸೇವೆಯನ್ನು ನೀಡಲಿದ್ದಾರೆ.

 

ಆಧಾರ್-ಪ್ಯಾನ್ ಲಿಂಕ್‌ ಮಾಡಲು ದಂಡ ಹೇಗೆ ಪಾವತಿಸುವುದು?ಆಧಾರ್-ಪ್ಯಾನ್ ಲಿಂಕ್‌ ಮಾಡಲು ದಂಡ ಹೇಗೆ ಪಾವತಿಸುವುದು?

ಇದಕ್ಕಾಗಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಸುಮಾರು 48,000 ಅಂಚೆ ಕಚೇರಿ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆ ಬಾಗಲಿಗೆ ಹೋಗಿ ಸೇವೆ ಸಲ್ಲಿಸಲು ಕೂಡಾ ಈ ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ನಿಮ್ಮ ಮನೆ ಬಾಗಿಲಿಗೆ ಆಧಾರ್ ಸೇವೆ: ಇಲ್ಲಿದೆ ವಿವರ

ಯಾವೆಲ್ಲಾ ಸೇವೆ ಲಭ್ಯವಾಗಲಿದೆ?

ಆಧಾರ್ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡುವುದು, ನಿಮ್ಮ ಮಾಹಿತಿಯನ್ನು ಅಪ್‌ಡೇಟ್ ಮಾಡುವುದು, ಮಕ್ಕಳ ಆಧಾರ್ ದಾಖಲೆಯನ್ನು ಅಪ್‌ಡೇಟ್ ಮಾಡುವ ಕಾರ್ಯವನ್ನು ಅಂಚೆ ಕಚೇರಿ ಸಿಬ್ಬಂದಿಗಳು ನಿಮ್ಮ ಮನೆ ಬಾಗಲಿಗೆ ಬಂದು ಮಾಡಲಿದ್ದಾರೆ.

ಯುಐಡಿಎಐ ಪೋಸ್ಟ್ ಆಫೀಸ್ ಸಿಬ್ಬಂದಿಗಳಿಗೆ ಡೆಸ್ಕಾಪ್ ಅಥವಾ ಲಾಪ್‌ಟಾಪ್‌ ಅನ್ನು ಒದಗಿಸಲಿದೆ. ಇದರಲ್ಲಿ ಆಧಾರ್ ಕಿಟ್ ಇರಲಿದ್ದು, ಪೋಸ್ಟ್ ಆಫೀಸ್ ಸಿಬ್ಬಂದಿಗಳು ನಿಮ್ಮ ಮನೆ ಬಾಗಲಿಗೆ ಬಂದು ನಿಮ್ಮ ಆಧಾರ್ ಅಪ್‌ಡೇಟ್ ಮಾಡಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸುಮಾರು 13,000 ಬ್ಯಾಂಕಿಂಗ್ ಸಿಬ್ಬಂದಿಗಳಿಂದ ಕೂಡಾ ಸೇವೆಯನ್ನು ಪಡೆಯಲು ಚಿಂತನೆ ನಡೆಸುತ್ತಿದೆ.

ಇನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) 755 ಜಿಲ್ಲೆಗಳಲ್ಲಿ ಆಧಾರ್ ಸೇವಾ ಕೇಂದ್ರವನ್ನು ಆರಂಭ ಮಾಡುವ ಚಿಂತನೆಯನ್ನು ಕೂಡಾ ನಡೆಸಿದೆ. ಆಧಾರ್ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತಿದೆಯೇ ಹಾಗೂ ಐಪಿಪಿಬಿ ಪೋಸ್ಟ್‌ಮ್ಯಾನ್‌ ಮತ್ತು ಬ್ಯಾಂಕಿಂಗ್ ಸಿಬ್ಬಂದಿಗಳೇ ಈ ಕಾರ್ಯವನ್ನು ಮಾಡುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಸೇವಾ ಕೇಂದ್ರವನ್ನು ಆರಂಭ ಮಾಡಲು ಯುಐಡಿಎಐ ಮುಂದಾಗಿದೆ. ಪ್ರಸ್ತುತ ದೇಶದಲ್ಲಿ ಒಟ್ಟು 88 ಯುಐಡಿಎಐ ಸೇವಾ ಕೇಂದ್ರಗಳು ಸುಮಾರು 72 ನಗರಗಳಲ್ಲಿ ಇದೆ. ಎಲ್ಲಾ ಪ್ರದೇಶಗಳಲ್ಲಿ ಕೂಡಾ ಆಧಾರ್ ಸೇವೆಯನ್ನು ನೀಡುವುದು ಇದರ ಗುರಿಯಾಗಿದೆ.

English summary

Aadhaar Services at Your Doorstep, Here's Details

Soon you will receive Aadhaar services at your doorstep, know how.
Story first published: Thursday, June 9, 2022, 18:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X