For Quick Alerts
ALLOW NOTIFICATIONS  
For Daily Alerts

ವಿವಾಹದ ಬಳಿಕ ಪ್ಯಾ‌ನ್ ಕಾರ್ಡ್‌ನಲ್ಲಿ ಈ ಬದಲಾವಣೆ ಮಾಡಿಕೊಳ್ಳಿ

|

ಪರ್ಮನೆಂಟ್‌ ಅಕೌಂಟ್‌ ನಂಬರ್‌ ಕಾರ್ಡ್ (ಪ್ಯಾನ್‌) ಹತ್ತು ಅಂಕಿಗಳ ಮುಖ್ಯವಾದ ದಾಖಲೆಳಲ್ಲಿ ಒಂದಾಗಿದೆ. ಆದಾಯ ತೆರಿಗೆ ಇಲಾಖೆ ನೀಡುವ ಈ ಪ್ಯಾನ್‌ ನಮ್ಮ ಬ್ಯಾಂಕಿನ ಅಥವಾ ಬೇರೆ ಯಾವುದೇ ಆರ್ಥಿಕ ವಹಿವಾಟಿಗೆ ಮುಖ್ಯವಾಗಿದೆ. ಇದು ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಪ್ಯಾನ್‌ ಕಾರ್ಡ್ ಅನ್ನು ನಮ್ಮ ಐಡಿ ಪುರಾವೆಯಾಗಿ ಬಳಸಲಾಗುತ್ತದೆ.

ನೀವು ಈಗಾಗಲೇ ಪ್ಯಾನ್‌ ಮಾಡಿದ್ದರೆ, ಮದುವೆಯಾದ ಬಳಿಕ ನಿಮ್ಮ ಉಪನಾಮ ಹಾಗೂ ವಿಳಾಸವನ್ನು ಬದಲಾವಣೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ. ನೀವು ಒಂದು ವೇಳೆ ಯಾವುದೇ ಬದಲಾವಣೆಗಳನ್ನು ಮಾಡಿಕೊಳ್ಳದಿದ್ದರೆ, ಮುಂದೆ ನಿಮಗೆ ತೊಂದರೆ ಉಂಟಾಗಬಹುದು.

ಎಂಸಿಎಲ್‌ಆರ್‌: ಕೆನರಾ ಬ್ಯಾಂಕ್‌ ಗ್ರಾಹಕರೇ ಗಮನಿಸಿ..ಎಂಸಿಎಲ್‌ಆರ್‌: ಕೆನರಾ ಬ್ಯಾಂಕ್‌ ಗ್ರಾಹಕರೇ ಗಮನಿಸಿ..

ಹಾಗಾದರೆ ನೀವು ವಿವಾಹವಾದ ಬಳಿಕ ಪ್ಯಾ‌ನ್ ಕಾರ್ಡ್‌ನಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳು ಯಾವುದು?, ನಿಮ್ಮ ಉಪನಾಮ ಹಾಗೂ ವಿಳಾಸವನ್ನು ಪ್ಯಾನ್‌ನಲ್ಲಿ ಹೇಗೆ ಬದಲಾವಣೆ ಮಾಡಿಕೊಳ್ಳುವುದು ಎಂದು ತಿಳಿಯಲು ಮುಂದೆ ಓದಿ.

ವಿವಾಹದ ಬಳಿಕ ಪ್ಯಾ‌ನ್ ಕಾರ್ಡ್‌ನಲ್ಲಿ ಈ ಬದಲಾವಣೆ ಮಾಡಿಕೊಳ್ಳಿ

ಪ್ಯಾನ್‌ನಲ್ಲಿ ಉಪನಾಮ, ವಿಳಾಸ ಬದಲಾವಣೆ ಮಾಡುವುದು ಹೇಗೆ?

* ಮೊದಲು ನೀವು https://www.onlineservices.nsdl.com/paam/endUserRegisterContact.html ಲಿಂಕ್‌ ಅನ್ನು ತೆರೆಯಿರಿ
* ಬಳಿಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿಕೊಳ್ಳಿ
* ಅರ್ಜಿ ನಮೂನೆ ಭರ್ತಿ ಮಾಡುವ ಸಂದರ್ಭದಲ್ಲಿ ಅಕ್ಷರಗಳನ್ನು ಸರಿಯಾಗಿ ನಮೂದಿಸಿ
* ಅದನ್ನು ಬಳಿಕ ಸಲ್ಲಿಕೆ ಮಾಡಿ
* ಬಳಿಕ ನಿಮ್ಮ ಹೆಸರು ಇರುವ ಮುಂಭಾಗದಲ್ಲಿರುವ ಆಯ್ಕೆಯನ್ನು ಕ್ಲಿಕ್‌ ಮಾಡಿ
* ನಿಮ್ಮ ಪ್ಯಾನ್‌ ಅನ್ನು ನಮೂದಿಸಿ
* ನಮೂನೆಯಲ್ಲಿ ನೀಡಿದ ಮಾಹಿತಿ ಪರಿಶೀಲನೆ ಮಾಡಿ
* ಪರಿಶೀಲನೆಗಾಗಿ ನೀವು 'ವ್ಯಾಲಿಡೇಟ್' ಆಯ್ಕೆಯನ್ನು ಕ್ಲಿಕ್ ಮಾಡಬೇಕು
* ಬಳಿಕ submit ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ

 ಗಮನಿಸಿ: ಗೂಗಲ್‌ನಲ್ಲಿ ಈ ವಿಚಾರಗಳನ್ನು ಸರ್ಚ್ ಮಾಡುವಾಗ ಎಚ್ಚರ ಗಮನಿಸಿ: ಗೂಗಲ್‌ನಲ್ಲಿ ಈ ವಿಚಾರಗಳನ್ನು ಸರ್ಚ್ ಮಾಡುವಾಗ ಎಚ್ಚರ

ಫಾರ್ಮ್ ಅನ್ನು ನೀವು ಭರ್ತಿ ಮಾಡಿದ ಬಳಿಕ ಪಾವತಿಯನ್ನು ಮಾಡಬೇಕಾಗುತ್ತದೆ. ನೀವು ಆನ್‌ಲೈನ್ ನೆಟ್‌ ಬ್ಯಾಂಕಿಂಗ್ ಮೂಲಕ ಅಥವಾ ನಿಮ್ಮ ಡೆಬಿಟ್‌, ಕ್ರೆಡಿಟ್‌ ಅಥವಾ ಕ್ಯಾಷ್‌ ಕಾರ್ಡ್ ಮೂಲಕ ಈ ಪಾವತಿಯನ್ನು ಮಾಡಬೇಕಾಗುತ್ತದೆ. ನಿಮ್ಮ ವಿಳಾಸ ಭಾರತದ್ದು ಆದರೆ, 110 ರೂಪಾಯಿ ಸಲ್ಲಿಕೆ ಮಾಡಬೇಕಾಗುತ್ತದೆ. ವಿದೇಶದ ವಿಳಾಸವಾದರೆ 1020 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಪಾವತಿಯನ್ನು ಮಾಡಿದ ಬಳಿಕ ಪ್ಯಾನ್‌ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಿ, ಭರ್ತಿ ಮಾಡಿಕೊಳ್ಳಬೇಕು. ಇದರ ಬಳಿ ನೀವು ಫಾರ್ಮ್‌ನ ನಕಲನ್ನು ಪ್ರಿಂಟ್‌ ಔಟ್‌ ತೆಗೆದು, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಅರ್ಜಿಯನ್ನು ಎನ್‌ಎಸ್‌ಡಿಎಲ್‌ ವಿಳಾಸಕ್ಕೆ ಕಳುಹಿಸಬೇಕು.

English summary

After marriage, make these necessary changes in the PAN card

After marriage, make these necessary changes in the PAN card.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X