For Quick Alerts
ALLOW NOTIFICATIONS  
For Daily Alerts

ಆತ್ಮನಿರ್ಭರ್ ಭಾರತ್ ರೋಜ್‌ಗಾರ್ ಯೋಜನೆ ನೋಂದಣಿ ಅಂತಿಮ ದಿನ ವಿಸ್ತರಣೆ: ಇಲ್ಲಿದೆ ವಿವರ

|

ಆತ್ಮನಿರ್ಭರ್ ಭಾರತ್ ರೋಜ್​ಗಾರ್ ಯೋಜನೆ (ABRY) ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವ ಅಂತಿಮ ದಿನಾಂಕವನ್ನು ಮಾರ್ಚ್ 31, 2022ರ ವರೆಗೆ ವಿಸ್ತರಣೆ ಮಾಡಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.

 

ಆತ್ಮನಿರ್ಭರ್ ಭಾರತ್ ರೋಜ್​ಗಾರ್ ಯೋಜನೆ (ಎಬಿಆರ್‌ವೈ) ಅಡಿಯಲ್ಲಿ ನೋಂದಣಿ ದಿನಾಂಕವನ್ನು ಮಾರ್ಚ್ 31, 2022 ರವರೆಗೆ ವಿಸ್ತರಿಸುವುದಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಘೋಷಣೆ ಮಾಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಇಪಿಎಫ್‌ಒ "#ABRY ಅಡಿಯಲ್ಲಿ ನೋಂದಣಿ ಸೌಲಭ್ಯವನ್ನು 31.03.2022 ರವರೆಗೆ ವಿಸ್ತರಿಸಲಾಗಿದೆ," ಎಂದು ಹೇಳಿದೆ.

 

ಚಿನ್ನದ ಬೆಲೆ ಇಳಿಕೆ: ಜನವರಿ 11ರ ದರ ತಿಳಿದುಕೊಳ್ಳಿಚಿನ್ನದ ಬೆಲೆ ಇಳಿಕೆ: ಜನವರಿ 11ರ ದರ ತಿಳಿದುಕೊಳ್ಳಿ

ಈ ಯೋಜನೆಯನ್ನು ಉದ್ಯೋಗದಾತರನ್ನು ಪ್ರೋತ್ಸಾಹಿಸುವ, ಬೆಂಬಲಿಸುವ ನಿಟ್ಟಿನಲ್ಲಿ, ಅಧಿಕ ಜನರನ್ನು ನೇಮಕ ಮಾಡಿಕೊಳ್ಳಲು ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಪ್ರಾರಂಭ ಮಾಡಲಾಗಿದೆ. ವಿಶೇಷವಾಗಿ ಕೊರೊನಾ ವೈರಸ್‌ ಸೋಂಕು ಸಾಂಕ್ರಾಮಿಕದ ಸಂದರ್ಭದಲ್ಲಿ ಉದ್ಯೋಗದಾತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನೆಯು ಹೆಚ್ಚು ಜನಪ್ರಿಯವಾಗಿದೆ.

 ಆತ್ಮನಿರ್ಭರ್ ಭಾರತ್ ರೋಜ್‌ಗಾರ್ ಯೋಜನೆ ನೋಂದಣಿ ಅಂತಿಮ ದಿನ ವಿಸ್ತರಣೆ

ಆತ್ಮನಿರ್ಭರ್ ಭಾರತ್ ರೋಜ್​ಗಾರ್ ಯೋಜನೆ ಬಗ್ಗೆ ಮಾಹಿತಿ

ಉದ್ಯೋಗದಾತರಿಗೆ ಹಣಕಾಸಿನ ನೆರವು ನೀಡಲು 2020 ರಲ್ಲಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯು ಉದ್ಯೋಗದಾತರನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳಲು ಉದ್ಯೋಗದಾತರಿಗೆ ಪ್ರೋತ್ಸಾಹ ನೀಡುತ್ತದೆ. 15,000 ರೂ.ಗಿಂತ ಕಡಿಮೆ ಅಥವಾ ಮಾಸಿಕ ವೇತನದೊಂದಿಗೆ ಸಂಘಟಿತ ವಲಯದಲ್ಲಿ ಹೆಚ್ಚಿನ ಜನರನ್ನು ನೇಮಿಸಿಕೊಳ್ಳಲು ಈ ಯೋಜನೆಯು ಉದ್ಯೋಗದಾತರನ್ನು ಉತ್ತೇಜಿಸುತ್ತದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದು ಈ ಜನರನ್ನು ನೇಮಿಸಿಕೊಳ್ಳಲು ಈ ಯೋಜನೆ ಪ್ರೋತ್ಸಾಹ ನೀಡುತ್ತದೆ. ಕೇಂದ್ರ ಸಚಿವ ಸಂಪುಟವು ಇದರ ನೋಂದಣಿಯ ಕೊನೆಯ ದಿನಾಂಕವನ್ನು ಜೂನ್ 30, 2021 ರಿಂದ ಮಾರ್ಚ್ 31, 2022 ರವರೆಗೆ ಒಂಬತ್ತು ತಿಂಗಳ ಅವಧಿಗೆ ವಿಸ್ತರಿಸಿದೆ.

EPFO ​​ನೊಂದಿಗೆ ನೋಂದಾಯಿಸಲಾದ ಅರ್ಹ ಸಂಸ್ಥೆಗಳ ಉದ್ಯೋಗದಾತರು ಮತ್ತು ಹೊಸ ಉದ್ಯೋಗಿಗಳು ಈ ಪ್ರೋತ್ಸಾಹವನ್ನು ಪಡೆಯುತ್ತಾರೆ. ಹೊಸ ಉದ್ಯೋಗಿಗಳು ನೋಂದಣಿ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರೋತ್ಸಾಹವನ್ನು ಪಡೆಯುತ್ತಾರೆ. ಪಾವತಿಯ ರೂಪದಲ್ಲಿ ಪ್ರೋತ್ಸಾಹವನ್ನು ನೀಡಲಾಗುತ್ತದೆ. ನಿಗದಿತ ಕನಿಷ್ಠ ಸಂಖ್ಯೆಯ ಹೊಸ ಉದ್ಯೋಗಿಗಳನ್ನು ಸೇರಿಸಿದರೆ ಪ್ರೋತ್ಸಾಹ ಪಡೆಯಲು ಸಂಸ್ಥೆಯು ಅರ್ಹರಾಗಿರುತ್ತದೆ. ರೂ. 15000 ಕ್ಕಿಂತ ಕಡಿಮೆ ಮಾಸಿಕ ವೇತನದೊಂದಿಗೆ ಸೇರುವ ಹೊಸ ಉದ್ಯೋಗಿಗಳು ನೋಂದಣಿ ದಿನಾಂಕದಿಂದ 24 ತಿಂಗಳ ವೇತನವರೆಗೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

 ಜ.11: ಪೆಟ್ರೋಲ್, ಡೀಸೆಲ್ ದರದಲ್ಲಿ ಸ್ಥಿರತೆ, ಪ್ರಮುಖ ನಗರಗಳಲ್ಲಿ ಬೆಲೆಯೆಷ್ಟು? ಜ.11: ಪೆಟ್ರೋಲ್, ಡೀಸೆಲ್ ದರದಲ್ಲಿ ಸ್ಥಿರತೆ, ಪ್ರಮುಖ ನಗರಗಳಲ್ಲಿ ಬೆಲೆಯೆಷ್ಟು?

ABRY ಯೋಜನೆ ABRY ಅಡಿಯಲ್ಲಿ, 1,000 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಉದ್ಯೋಗಿಗಳು ಮತ್ತು ಉದ್ಯೋಗದಾತರ ಪಾಲು, ಅಂದರೆ ವೇತನದ ಶೇ 24ರಷ್ಟು (ತಲಾ ಶೇ 12ರಷ್ಟು ವೇತನ) ಸರ್ಕಾರ ಪಾವತಿಸುತ್ತದೆ. ಒಂದು ವೇಳೆ ಸಾವಿರಕ್ಕೂ ಅಧಿಕ ಉದ್ಯೋಗಿಗಳು ಇದ್ದರೆ ಶೇಕಡ 12ರಷ್ಟು ನೌಕರರ ಕೊಡುಗೆಯನ್ನು ಸರ್ಕಾರವು ಪಾವತಿಸುತ್ತಿದೆ ಎಂದು ಸದನಕ್ಕೆ ತಿಳಿಸಲಾಗಿತ್ತು. 4, ಡಿಸೆಂಬರ್ 2021ರಂತೆ 39.73 ಲಕ್ಷ ಹೊಸ ಉದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಲಾಗಿದೆ. ಇನ್ನು 2612.10 ಕೋಟಿ ರೂಪಾಯಿ ಪ್ರಯೋಜನಗಳನ್ನು ಅವರ ಖಾತೆಗಳಿಗೆ ಮುಂಗಡವಾಗಿ ಜಮೆ ಮಾಡಲಾಗಿದೆ.

ವಿಸ್ತರಣೆ ಬಗ್ಗೆ ಹಣಕಾಸು ಸಚಿವೆ ಮಾಹಿತಿ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ನಡುವೆ 'ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ' ನಿರ್ಮಾಣಕ್ಕಾಗಿ ಈ ಹಿಂದಿನ ಯೋಜನೆಯನ್ನು 2022ರ ಮಾರ್ಚ್ 31ರವರೆಗೂ ವಿಸ್ತರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದರು.

English summary

Atmanirbhar Bharat Rojgar Yojana Registration Extended Till March 31, 2022: Here's Details

Atmanirbhar Bharat Rojgar Yojana Registration Extended Till March 31, 2022: Here's Details .
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X