For Quick Alerts
ALLOW NOTIFICATIONS  
For Daily Alerts

ಎಂಸಿಎಲ್‌ಆರ್ ಏರಿಸಿದ ಆಕ್ಸಿಸ್ ಬ್ಯಾಂಕ್, ಪರಿಣಾಮವೇನು?

|

ಆಕ್ಸಿಸ್ ಬ್ಯಾಂಕ್ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಬೇಸ್ಡ್ ಲೆಂಡಿಂಗ್ ರೇಟ್ (ಎಂಸಿಎಲ್‌ಆರ್) ಅನ್ನು 25 ಮೂಲಾಂಕ ಹೆಚ್ಚಳ ಮಾಡಿದೆ. ಎಲ್ಲ ಅವಧಿಯ ಸಾಲದ ಮೇಲಿನ ಎಂಸಿಎಲ್‌ಆರ್ ಅನ್ನು ಹೆಚ್ಚಳ ಮಾಡಲಾಗಿದೆ. ಅದು ಕೂಡ ಕೂಡಲೇ ಜಾರಿಗೆ ಬರುವಂತೆ ಈ ಪರಿಷ್ಕರಣೆ ಮಾಡಲಾಗಿದೆ. ಅಕ್ಟೋಬರ್ 18, 2022ರಂದು ಬ್ಯಾಂಕ್ ಈ ಪರಿಷ್ಕರಣೆಯ ಆದೇಶ ಹೊರಹಾಕಿದೆ.

 

ದೇಶದ ಮೂರನೇ ಅತೀ ದೊಡ್ಡ ಖಾಸಗಿ ಬ್ಯಾಂಕ್ ಆದ ಆಕ್ಸಿಸ್ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಒಂದು ವರ್ಷದ ಎಂಸಿಎಲ್‌ಆರ್ 25 ಮೂಲಾಂಕ ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ. ಇದರಿಂದಾಗಿ ಬೆಂಚ್ ಮಾರ್ಕ್ 8.35ರಷ್ಟು ಹೆಚ್ಚಳವಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸೆಪ್ಟೆಂಬರ್ 30ರಂದು ಸತತ ನಾಲ್ಕನೇ ಬಾರಿಗೆ ರೆಪೋ ದರವನ್ನು ಏರಿಕೆ ಮಾಡಿದೆ. 50 ಮೂಲಾಂಕ ಹೆಚ್ಚಳ ಮಾಡಿದ್ದು ರೆಪೋ ದರ 5.9ಕ್ಕೆ ಹೆಚ್ಚಳವಾಗಿದೆ. ಇದರ ಬೆನ್ನಲ್ಲೇ ಹಲವಾರು ಬ್ಯಾಂಕುಗಳು ಎಂಸಿಎಲ್‌ಆರ್ ಹಾಗೂ ಎಫ್‌ಡಿ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಈಗಾಗಲೇ ಆಕ್ಸಿಸ್ ಬ್ಯಾಂಕ್ ಎಫ್‌ಡಿ ಬಡ್ಡಿದರವನ್ನು ಏರಿಸಿದ್ದು ಈಗ ಎಂಸಿಎಲ್‌ಆರ್ ಅನ್ನು ಏರಿಸಿದೆ. ಈ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ ಮುಂದೆ ಓದಿ...

 ಎಂಸಿಎಲ್‌ಆರ್ ಏರಿಕೆಯಾದರೆ ಏನು ಪರಿಣಾಮ?

ಎಂಸಿಎಲ್‌ಆರ್ ಏರಿಕೆಯಾದರೆ ಏನು ಪರಿಣಾಮ?

ಈ ಹಿಂದೆ ಆಕ್ಸಿಸ್ ಬ್ಯಾಂಕ್ ಶೇಕಡ 8.10ರಷ್ಟು ಒಂದು ವರ್ಷದ ಅವಧಿಯ ಎಂಸಿಎಲ್‌ಆರ್ ಆಗಿತ್ತು. ಪ್ರಮುಖವಾಗಿ ವಾಹನ, ವೈಯಕ್ತಿಕ ಮತ್ತು ಗೃಹ ಸಾವಲನ್ನು ಪಡೆಯುವವರಿಗೆ ಬಡ್ಡಿದರವನ್ನು ಎಂಸಿಎಲ್‌ಆರ್ ಆಧಾರದಲ್ಲಿ ನಿಗದಿ ಮಾಡಲಾಗುತ್ತದೆ. ಎಂಸಿಎಲ್‌ಆರ್ ಏರಿಕೆಯಾದರೆ ಸಾಲದ ಬಡ್ಡಿದರವು ಕೂಡಾ ಹೆಚ್ಚಾಗುತ್ತದೆ. ಈಗಾಗಲೇ ಹಲವು ಬಾರಿ ಸಾಲದ ಬಡ್ಡಿದರ ಏರಿಕೆಯಿಂದಾಗಿ ಕೈ ಸುಟ್ಟುಕೊಂಡಿರುವ ಜನರಿಗೆ ಇದು ಮತ್ತಷ್ಟು ಹೊರೆಯಾಗಲಿದೆ. ರೆಪೋ ಆಧಾರಿತ ಸಾಲದ ಬಡ್ಡಿದರ ಹಾಗೂ ಎಂಸಿಎಲ್‌ಆರ್ ಏರಿಕೆ ಮಾಡಿರುವುದರಿಂದಾಗಿ ಸಾಲವು ದುಬಾರಿಯಾಗಲಿದೆ. ಅಕ್ಟೋಬರ್ 1, 2019 ರಿಂದ, ಎಲ್ಲಾ ಬ್ಯಾಂಕ್‌ಗಳು ಆರ್‌ಬಿಐ ರೆಪೋ ದರ ಅಥವಾ ಟ್ರೆಷರಿ ಬಿಲ್ ಯೀಲ್ಡ್‌ನಂತಹ ಬಾಹ್ಯ ಮಾನದಂಡಕ್ಕೆ ಲಿಂಕ್ ಮಾಡಲಾದ ಬಡ್ಡಿದರವನ್ನು ಪಾಲನೆ ಮಾಡಲು ಆರಂಭ ಮಾಡಿದೆ.

 ನೂತನ ಬಡ್ಡಿದರ ಎಷ್ಟಿದೆ ನೋಡಿ

ನೂತನ ಬಡ್ಡಿದರ ಎಷ್ಟಿದೆ ನೋಡಿ

ಇನ್ನು ರಾತ್ರಿಯಿಂದ ಒಂದು-ಮೂರು ಮತ್ತು ಆರು ತಿಂಗಳವರೆಗಿನ ಇತರ ಅವಧಿಗಳಲ್ಲಿ, ಶೇಕಡ 0.25ರಷ್ಟು ಹೆಚ್ಚಾಗಿ ಶೇಕಡ 8.15 -8.30ರಷ್ಟು ಆಗಿದೆ. ಇನ್ನು ಎರಡು ವರ್ಷದ ಎಂಸಿಎಲ್‌ಆರ್ ಶೇಕಡ 8.45 ಆಗಿದೆ. ಮೂರು ವರ್ಷದ ಎಂಸಿಎಲ್‌ಆರ್ ಶೇಕಡ 8.50ರಷ್ಟಾಗಿದೆ. ಈ ಪರಿಷ್ಕೃತ ದರವು ಹೊಸ ದರ ನಿಗದಿಯಾಗುವವರೆಗೂ ಜಾರಿಯಲ್ಲಿರುತ್ತದೆ ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ.

 ಎಂಸಿಎಲ್‌ಆರ್ ಏರಿಸಿದ ಹಲವು ಬ್ಯಾಂಕ್‌ಗಳು
 

ಎಂಸಿಎಲ್‌ಆರ್ ಏರಿಸಿದ ಹಲವು ಬ್ಯಾಂಕ್‌ಗಳು

ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಫೆಡರಲ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ತನ್ನ ಎಂಸಿಎಲ್‌ಆರ್ ಅನ್ನು ಹೆಚ್ಚಳ ಮಾಡಿದೆ. ಇನ್ನು ಎಂಸಿಎಲ್‌ಆರ್ ಮಾತ್ರವಲ್ಲದೇ ಬಾಹ್ಯ ಬೆಂಚ್‌ಮಾರ್ಕ್ ಅನ್ನು ಕೂಡಾ ಬ್ಯಾಂಕ್‌ಗಳು ಏರಿಕೆ ಮಾಡಿದೆ. ಆರ್‌ಬಿಐ ರೆಪೋ ದರ ಏರಿಕೆ ಮಾಡಿದರ ಪರಿಣಾಮ ಇದಾಗಿದೆ. ಮೇ ತಿಂಗಳಿನಿಂದ ಈವರೆಗೆ ಆರ್‌ಬಿಐ ಒಟ್ಟಾಗಿ 190 ಮೂಲಾಂಕ ರೆಪೋ ದರ ಹೆಚ್ಚಿಸಿದೆ.

English summary

Axis Bank Hikes MCLR Rates By 25 BPS, Home Loan, Car Loan EMIs to Increase

Axis Bank Hikes MCLR Rates on October 18 By 25 BPS, Home Loan, Car Loan EMIs to Increase; Check Here.
Story first published: Wednesday, October 19, 2022, 13:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X