For Quick Alerts
ALLOW NOTIFICATIONS  
For Daily Alerts

6 ರೂ ಹೂಡಿಕೆ ಮಾಡಿ 1 ಲಕ್ಷ ರೂ ಪಡೆಯುವುದು ಹೇಗೆ?

|

ಪ್ರಸ್ತುತ ಹೂಡಿಕೆಗೆ ಹಲವಾರು ದಾರಿಗಳು ಇದೆ. ಪ್ರಸ್ತುತ ನಾವು ಮ್ಯೂಚುವಲ್‌ ಫಂಡ್‌ನಿಂದ ಹಿಡಿದು ಬ್ಯಾಂಕ್‌ ಎಫ್‌ಡಿವರೆಗೆ ಉತ್ತಮ ರಿಟರ್ನ್ ಪಡೆಯುವ ಹೂಡಿಕೆಯನ್ನು ಮಾಡಬಹುದು. ಆದರೆ ನಾವು ನಮ್ಮ ಹೂಡಿಕೆ ಎಷ್ಟು ಸುರಕ್ಷಿತವಾಗಿದೆ ಎಂದು ನೋಡುವುದು ಕೂಡಾ ಮುಖ್ಯವಲ್ಲವೇ?

 

ನಾವು ಸುರಕ್ಷಿತ ಹೂಡಿಕೆಯ ಆಯ್ಕೆಯನ್ನು ಮಾಡುವುದಾದರೆ ಅದಕ್ಕೆ ಉತ್ತಮ ಆಯ್ಕೆ ಅಂಚೆ ಕಚೇರಿಗೆ ಹೂಡಿಕೆಯಾಗಿದೆ. ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದ್ದು ಅದರಲ್ಲಿ ಬಾಲ ಜೀವನ ಭಿಮಾ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯು ಮಕ್ಕಳಿಗಾಗಿ ಇರುವ ವಿಮಾ ಯೋಜನೆಯಾಗಿದೆ.

ಈ ಯೋಜನೆಯಲ್ಲಿ ಪೋಷಕರು ಪ್ರತಿ ದಿನ ಆರು ರೂಪಾಯಿಯಷ್ಟು ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಬಹುದು. ಮಗುವು ಏನಾದರೂ ಅಪಘಾತವಾಗಿ ಸಾವನ್ನಪ್ಪಿದರೆ ಈ ವಿಮಾ ಮೊತ್ತ 1 ಲಕ್ಷ ರೂಪಾಯಿ ಪೋಷಕರಿಗೆ ಲಭ್ಯವಾಗಲಿದೆ. ಈ ಹೂಡಿಕೆ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

 ಬಾಲ ಜೀವನ ಭಿಮಾ ಯೋಜನೆ ಪ್ರಯೋಜನ

ಬಾಲ ಜೀವನ ಭಿಮಾ ಯೋಜನೆ ಪ್ರಯೋಜನ

ಈ ಯೋಜನೆಯು ಪ್ರಮುಖವಾಗಿ ಮಕ್ಕಳು ನಿಧನವಾದರೆ ಕುಟುಂಬಕ್ಕೆ ಹಣಕಾಸು ಸುರಕ್ಷತೆಯನ್ನು ನೀಡುತ್ತದೆ. ಹಾಗೆಯೇ ದೈನಂದಿನ ಹೂಡಿಕೆ ಆಯ್ಕೆ ಪೋಷಕರ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು 1 ಲಕ್ಷ ರೂಪಾಯಿಯ ವಿಮೆಯಾಗಿದೆ. ಈ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಇತರೆ ಹಣಕಾಸು ಸಹಾಯಕ್ಕೆ ಬಳಕೆ ಮಾಡಬಹುದು. ಈ ಯೋಜನೆಯು ಹಣವನ್ನು ಉಳಿತಾಯ ಮಾಡಲು ಕೂಡಾ ಸಹಕಾರಿಯಾಗಿದೆ. ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆಗೆ ಸಹಾಯವಾಗಲಿದೆ. ಈ ಖಾತೆಯಲ್ಲಿ ನಿರಂತರ ಹೂಡಿಕೆ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ಉಳಿತಾಯವಾಗಲಿದೆ.

 ಈ ಯೋಜನೆಗೆ ಹೂಡಿಕೆ ಮಾಡುವುದು ಹೇಗೆ?

ಈ ಯೋಜನೆಗೆ ಹೂಡಿಕೆ ಮಾಡುವುದು ಹೇಗೆ?

ಬಾಲ ಜೀವನ ಭಿಮಾ ಯೋಜನೆಗೆ ಹೂಡಿಕೆ ಮಾಡಬೇಕಾದರೆ ಪೋಷಕರು ತಮ್ಮ ಸಮೀಪದ ಅಂಚೆ ಕಚೇರಿ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಅಲ್ಲಿ ನೀವು ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಫಾರ್ಮ್‌ನಲ್ಲಿ ಮಕ್ಕಳ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ಹೆಸರು, ವಿಳಾಸ, ವಯಸ್ಸು, ನಾಮಿನಿ ಮೊದಲಾದ ಮಾಹಿತಿಯನ್ನು ಭರ್ತಿ ಮಾಡಿಕೊಳ್ಳಿ. ಹಾಗೆಯೇ ಗುರುತು ಹಾಗೂ ವಿಳಾಸ ಪುರಾವೆಯನ್ನು ಕೂಡಾ ಹೊಂದಿರುತ್ತದೆ.

 ಯಾರು ಯೋಜನೆಗೆ ಹೂಡಿಕೆ ಮಾಡಬಹುದು?
 

ಯಾರು ಯೋಜನೆಗೆ ಹೂಡಿಕೆ ಮಾಡಬಹುದು?

ಬಾಲ ಜೀವನ್ ಭಿಮಾ ಯೋಜನೆಯಲ್ಲಿ 8ರಿಂದ 12 ವರ್ಷದವರು ಹೂಡಿಕೆ ಮಾಡಬಹುದು. ಅರ್ಜಿಯನ್ನು ಸಲ್ಲಿಕೆ ಮಾಡಿದಾಗ ಎಷ್ಟು ವಯಸ್ಸು ಮಕ್ಕಳಿಗೆ ಆಗಿರುತ್ತದೆಯೋ ಅದನ್ನು ಪರಿಗಣಿಸಲಾಗುತ್ತದೆ. ಈ ವಿಮೆಯು ಮಕ್ಕಳಿಗೆ 18 ವರ್ಷವಾಗುವವರೆಗೆ ಇರಲಿದೆ.

 ಯೋಜನೆಯನ್ನು ಉದಾಹರಣೆಯೊಂದಿಗೆ ನೋಡಿ

ಯೋಜನೆಯನ್ನು ಉದಾಹರಣೆಯೊಂದಿಗೆ ನೋಡಿ

ಬಾಲ ಜೀವನ ಭಿಮಾ ಯೋಜನೆಯಲ್ಲಿ ತಮ್ಮ 10 ವರ್ಷದ ಮಕ್ಕಳನ್ನು ಚಂದಾರರನ್ನಾಗಿಸ ಬಯಸಿದರೆ ನೀವು ಅಂಚೆ ಕಚೇರಿ ಕೇಂದ್ರಕ್ಕೆ ಮೊದಲ ಭೇಟಿ ನೀಡಬೇಕಾಗುತ್ತದೆ. ಅರ್ಜಿಯನ್ನು ಭರ್ತಿ ಮಾಡಿಕೊಳ್ಳಿ. ಪ್ರತಿ ದಿನ 6 ರೂಪಾಯಿಯನ್ನು ಹೂಡಿಕೆ ಮಾಡಬೇಕಾಗುತ್ತದೆ. 18 ವರ್ಷಕ್ಕೂ ಮುನ್ನ ಮಗು ನಿಧನವಾದರೆ ಕುಟುಂಬಸ್ಥರಿಗೆ 1 ಲಕ್ಷ ರೂಪಾಯಿ ಲಭ್ಯವಾಗಲಿದೆ. ಇಲ್ಲವಾದರೆ 18 ವರ್ಷದ ಬಳಿಕ ಮೊತ್ತವು ಶಿಕ್ಷಣಕ್ಕಾಗಿ ಲಭ್ಯವಾಗಲಿದೆ.

English summary

Bal Jeevan Bima: Invest Rs 6 Daily Post Office and Get Rs 1 lakh, Details in Kannada

Bal Jeevan Bima Yojana is a life insurance scheme for children offered by the Indian Post Office. Invest Rs 6 Daily Post Office and Get Rs 1 lakh, Details in Kannada.
Story first published: Sunday, December 25, 2022, 9:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X