For Quick Alerts
ALLOW NOTIFICATIONS  
For Daily Alerts

ಮೇ 16ರಂದು ಬ್ಯಾಂಕ್ ರಜೆ ಇರಲಿದೆಯೇ? ಇಲ್ಲಿದೆ ರಜೆ ಇರುವ ರಾಜ್ಯಗಳ ಪಟ್ಟಿ

|

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಜಾ ಕ್ಯಾಲೆಂಡರ್ ಪ್ರಕಾರ ಈ ವಾರ ಎರಡನೇ ಶನಿವಾರ, ಭಾನುವಾರ ಮತ್ತು ಸೋಮವಾರದಂದು ಸತತ ಮೂರು ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದರೆ ಬುದ್ಧ ಪೂರ್ಣಿಮಾ ಮೇ 16 ರಂದು ಸೋಮವಾರ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ತ್ರಿಪುರಾ, ಬೇಲಾಪುರ್, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ, ಜಮ್ಮು, ಉತ್ತರ ಪ್ರದೇಶ, ಮಹಾರಾಷ್ಟ್ರ, ನವದೆಹಲಿ, ಉತ್ತರ ಪ್ರದೇಶ, ಬಂಗಾಳ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

Bank Holidays in May 2022: ಮೇನಲ್ಲಿ ಎಷ್ಟು ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿBank Holidays in May 2022: ಮೇನಲ್ಲಿ ಎಷ್ಟು ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿ

ಸಾಮಾನ್ಯವಾಗಿ ತಿಂಗಳಿಗೆ ಪ್ರತಿ ಭಾನುವಾರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದಾಗ್ಯೂ, ಅವು ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ತೆರೆದಿರುತ್ತವೆ. ಅಂದರೆ ಎರಡನೇ ಮತ್ತು ನಾಲ್ಕನೇ ಶನಿವಾರಗಳು ರಜಾದಿನಗಳಾಗಿವೆ.

ಮೇ 16ರಂದು ಬ್ಯಾಂಕ್ ರಜೆ ಇರಲಿದೆಯೇ? ರಜೆ ಇರುವ ರಾಜ್ಯಗಳ ಪಟ್ಟಿ

ಆರ್‌ಬಿಐ ಪ್ರತಿ ತಿಂಗಳು ಬ್ಯಾಂಕ್ ರಜೆ ವಿವರಗಳನ್ನು ಪ್ರಸಾರ ಮಾಡುತ್ತದೆ. ಮೇ ತಿಂಗಳಲ್ಲಿ, ರಜಾದಿನಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಎಂದು ವರ್ಗೀಕರಣ ಮಾಡಲಾಗಿದೆ.

ಈ ತಿಂಗಳು, ನೆಗೋಶಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ನಾಲ್ಕು ರಜಾದಿನಗಳಿವೆ. ಒಟ್ಟು 11 ರಜಾದಿನಗಳಲ್ಲಿ, ಬ್ಯಾಂಕುಗಳು ಈಗಾಗಲೇ ಮೇ 1 (ಭಾನುವಾರ), ಮೇ 2 (ಈದ್-ಯುಐ-ಫಿತ್ರಾ), ಮೇ 3 (ಭಗವಾನ್ ಶ್ರೀ ಪರಶುರಾಮ ಜಯಂತಿ/ರಂಜಾನ್-ಈದ್ (ಈದ್-ಯುಐ-ಫಿತರ್)/ 5 ರಜಾದಿನಗಳನ್ನು ಬಳಸಿಕೊಂಡಿವೆ.

ಬಸವ ಜಯಂತಿ/ಅಕ್ಷಯ ತೃತೀಯ), ಮೇ 8 (ಭಾನುವಾರ), ಮತ್ತು ಮೇ 9 (ರವೀಂದ್ರನಾಥ ಟ್ಯಾಗೋರ್ ಅವರ ಜನ್ಮದಿನ) ರಂದು ರಜೆ ಇದ್ದವು. ಈಗ ಬ್ಯಾಂಕುಗಳು ಮೇ 22 ರಂದು (ಭಾನುವಾರ), ಮತ್ತು ಮೇ 28 ರಿಂದ ಮೇ 29 ರವರೆಗೆ ನಾಲ್ಕನೇ ವಾರಾಂತ್ಯದಲ್ಲಿ ಮುಚ್ಚಲ್ಪಡುತ್ತವೆ.

English summary

Bank holiday on May 16? Here's List of states where banks will remain shut

Bank holiday on May 16? Here's List of states where banks will remain shut on Monday.
Story first published: Saturday, May 14, 2022, 14:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X