For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಕೆಲಸದ ಅವಧಿ 30 ನಿಮಿಷ ವಿಸ್ತರಿಸಲು ಯೂನಿಯನ್ ಹೇಳುವುದೇಕೆ?

|

ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಭಾರತದ ಬ್ಯಾಂಕ್ ಅಸೊಸೀಯೇಷನ್‌ಗೆ ಬ್ಯಾಂಕ್ ಸಂಬಂಧಿತ ಕಾರ್ಯಗಳಲ್ಲಿ ಮಾಡಬಹುದಾದ ಬದಲಾವಣೆಗಳ ಸಲಹಾ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಬ್ಯಾಂಕ್‌ನ ಕೆಲಸದ ಅವಧಿಯನ್ನು 30 ನಿಮಿಷಗಳ ಕಾಲ ವಿಸ್ತರಣೆ ಮಾಡುವುದನ್ನು ಕೂಡಾ ಉಲ್ಲೇಖ ಮಾಡಲಾಗಿದೆ.

ಬ್ಯಾಂಕ್ ಯೂನಿಯನ್ ಬ್ಯಾಂಕ್‌ನ ಕೆಲಸದ ಅವಧಿಯನ್ನು ಪ್ರತಿ ದಿನ 30 ನಿಮಿಷಗಳ ಕಾಲ ವಿಸ್ತರಣೆ ಮಾಡಬಹುದು ಎಂದು ಹೇಳಿದೆ. ಬೆಳಗ್ಗೆಯೇ 30 ನಿಮಿಷ ಬೇಗನೇ ಬ್ಯಾಂಕ್ ಕೆಲಸ ಆರಂಭ ಮಾಡಬಹುದು ಎಂದು ಹೇಳಿದೆ. ಹಾಗೆಯೇ ಗ್ರಾಹಕರ ಸೇವೆಯ ಅವಧಿಯನ್ನು ಕೂಡಾ 30 ನಿಮಿಷ ವಿಸ್ತರಣೆ ಮಾಡಬಹುದು ಎಂದು ತಿಳಿಸಿದೆ.

Bank Holidays in October 2022: ಅಕ್ಟೋಬರ್‌ನಲ್ಲಿ 21 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿBank Holidays in October 2022: ಅಕ್ಟೋಬರ್‌ನಲ್ಲಿ 21 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿ

ಬ್ಯಾಂಕ್ ಯೂನಿಯನ್‌ ಹೇಳಿರುವ ವಿಸ್ತೃತ ಕೆಲಸದ ಅವಧಿಯು ಬೆಳಗ್ಗೆ 9:15ರಿಂದ 4:45 ಆಗಿದೆ. ಪ್ರಸ್ತುತ ಬ್ಯಾಂಕ್ ಕೆಲಸದ ಅವಧಿ 9:45ರಿಂದ 4:45 ಆಗಿದೆ. ಇನ್ನು ಹಣಕಾಸು ವಹಿವಾಟು ನಡೆಸುವ ಅವಧಿಯನ್ನು 9:30ರಿಂದ ಮಧ್ಯಾಹ್ನ 1:30ವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ 3:30ವರೆಗೆ ಬದಲಾವಣೆ ಮಾಡಬಹುದು ಎಂದು ಕೂಡಾ ಹೇಳಿದೆ. ಹಾಗೆಯೇ ಉಳಿದ ಕೆಲಸದ ಅವಧಿಯನ್ನು 3:30ರಿಂದ 4:45ರವರೆಗೆ ನಡೆಸಬಹುದು ಎಂದು ಹೇಳಿದೆ. ಆದರೆ ಈ ಬದಲಾವಣೆಗೆ ಬ್ಯಾಂಕ್ ಯೂನಿಯನ್ ಸಲಹೆ ನೀಡುತ್ತಿರುವುದು ಏಕಾಗಿ? ಇಲ್ಲಿದೆ ವಿವರ ಮುಂದೆ ಓದಿ...

 ಬ್ಯಾಂಕ್ ಕೆಲಸದ ಅವಧಿ 30 ನಿಮಿಷ ವಿಸ್ತರಿಸಿ: ಯೂನಿಯನ್

ಈ ಕೆಲಸದ ಅವಧಿ ಬದಲಾವಣೆ ಸಲಹೆ ಯಾಕಾಗಿ?

ಪ್ರಮುಖವಾಗಿ ಬ್ಯಾಂಕ್‌ನ ಕೆಲಸದ ದಿನವನ್ನು ಕಡಿತ ಮಾಡುವ ನಿಟ್ಟಿನಲ್ಲಿ ಈ ಬದಲಾವಣೆಯನ್ನು ಮಾಡಲು ಬ್ಯಾಂಕ್ ಯೂನಿಯನ್ ಸಲಹೆ ನೀಡುತ್ತಿದೆ. ಪ್ರಸ್ತುತ ಬ್ಯಾಂಕ್‌ಗಳು ವಾರದಲ್ಲಿ ಆರು ದಿನಗಳ ಕಾಲ ಕಾರ್ಯ ನಿರ್ವಹಣೆ ಮಾಡುತ್ತದೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಬರುವ ವಾರಗಳಲ್ಲಿ ಮಾತ್ರ ಬ್ಯಾಂಕ್ 5 ದಿನ ಕಾರ್ಯ ನಿರ್ವಹಣೆ ಮಾಡುತ್ತದೆ.

Bank Holidays in September 2022: ಸೆಪ್ಟೆಂಬರ್‌ನಲ್ಲಿ 13 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿBank Holidays in September 2022: ಸೆಪ್ಟೆಂಬರ್‌ನಲ್ಲಿ 13 ದಿನ ಬ್ಯಾಂಕ್‌ ರಜೆ, ಇಲ್ಲಿದೆ ಪಟ್ಟಿ

ಆದರೆ ಬ್ಯಾಂಕ್‌ನ ಕೆಲಸದ ಅವಧಿಯನ್ನು ಪ್ರತಿ ದಿನ 30 ನಿಮಿಷಗಳ ಕಾಲ ವಿಸ್ತರಣೆ ಮಾಡುವ ಮೂಲಕ ಕೆಲಸದ ದಿನವನ್ನು ಆರರಿಂದ 5ಕ್ಕೆ ಇಳಿಕೆ ಮಾಡಬಹುದು ಎಂಬುವುದು ಬ್ಯಾಂಕ್ ಯೂನಿಯನ್‌ನ ಸಲಹೆಯಾಗಿದೆ ಎಂದು ಎಐಬಿಇಎಯ ಪ್ರಧಾನ ಕಾರ್ಯದರ್ಶಿ ಸಿಎಚ್‌ ವೆಂಕಟಚಲಂ ತಿಳಿಸಿದ್ದಾರೆ. ಈ ಕೆಲಸದ ಅವಧಿಯನ್ನು ಕಳೆದ ವರ್ಷ ವಿಮಾ ಸಂಸ್ಥೆ ಎಲ್‌ಐಸಿ ಪಾಲಿಸಲು ಆರಂಭ ಮಾಡಿದೆ.

ಈ ಮೂಲಕ ತಿಂಗಳ ರಜೆಯ ದಿನದಲ್ಲಿ ಇನ್ನು ಎರಡು ರಜೆ ದಿನವನ್ನು ಸೇರ್ಪಡೆ ಮಾಡಲು ಸಾಧ್ಯವಾಗಲಿದೆ ಎಂಬುವುದು ಯೂನಿಯನ್‌ನ ಕಣ್ಣೋಟವಾಗಿದೆ. ಇನ್ನು ಆರ್‌ಬಿಐ ಈ ಸಲಹೆಯನ್ನು ಒಪ್ಪಬಹುದು ಎಂದು ಭರವಸೆಯನ್ನು ಕೂಡಾ ಯೂನಿಯನ್ ಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ಸಂದರ್ಭದಲ್ಲಿ ವಾರದಲ್ಲಿ 5 ದಿನ ಮಾತ್ರ ಕೆಲಸದ ಅವಧಿ ಇರಬೇಕು ಎಂದು ಬ್ಯಾಂಕ್ ಯೂನಿಯನ್ ಮನವಿ ಮಾಡಿತ್ತು. ಆದರೆ ಐಬಿಎ ಈ ಮನವಿಯನ್ನು ತಿರಸ್ಕರಿಸಿ ಬದಲಾಗಿ ಉದ್ಯೋಗಿಗಳಿಗೆ ಗರಿಷ್ಠ ಶೇಕಡ 19ರಷ್ಟು ಏರಿಕೆ ಮಾಡಿದೆ. ಪ್ರಸ್ತುತ ಎಲ್ಲ ಭಾನುವಾರ ಹಾಗೂ ಎರಡನೇ, ನಾಲ್ಕನೇ ಶನಿವಾರ ಬ್ಯಾಂಕ್‌ಗಳಿಗೆ ವಾರದ ರಜೆಯಾಗಿದೆ.

English summary

Bank Unions Suggested to Increase Working Hour by 30 Minutes, Here's Why

The Bank union suggested extending the current working hours by 30 minutes each day and starting them 30 minutes earlier.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X