For Quick Alerts
ALLOW NOTIFICATIONS  
For Daily Alerts

ಆ ಶ್ರೀಮಂತನ ಆಸ್ತಿಯಲ್ಲಿ ಒಂದೇ ದಿನ ಏರಿಕೆಯಾಯಿತು 56,240 ಕೋಟಿ ರು.

|

ಷೇರುಪೇಟೆ ಏರಿಕೆ ಪರಿಣಾಮವಾಗಿ ಫ್ರೆಂಚ್ ಸಿರಿವಂತ ಬರ್ನಾರ್ಡ್ ಅರ್ನಾಲ್ಟ್ ಸೋಮವಾರ ಹೊಸ ದಾಖಲೆಗೆ ಸೇರ್ಪಡೆ ಆದರು. ನೂರು ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯನ್ನು ಹೊಂದಿರುವವರ ಪಟ್ಟಿಯಲ್ಲಿ ಕಾಣಿಸಿಕೊಂಡರು. ಜೆಫ್ ಬೆಜೋಸ್, ಬಿಲ್ ಗೇಟ್ಸ್, ಮಾರ್ಕ್ ಝುಕರ್ ಬರ್ಗ್, ಎಲಾನ್ ಮಸ್ಕ್ ಇವರ ಜತೆಗೆ ಅರ್ನಾಲ್ಟ್ ಕೂಡ ಸೇರಿಕೊಂಡರು.

ಇದೇ ಮೊದಲ ಬಾರಿಗೆ ಐವರು ನೂರು ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ನಿತ್ಯದ ಸಂಪತ್ತಿನ ಶ್ರೇಯಾಂಕದ ಪಟ್ಟಿಯಲ್ಲಿನ ಮಾಹಿತಿ ಇದು. ಒಟ್ಟಾರೆ ಈ ಸಮೂಹವು ಒಂದೇ ದಿನದಲ್ಲಿ ಸೇರ್ಪಡೆ ಮಾಡಿದ ಸಂಪತ್ತಿನ ಮೊತ್ತ ಆರು ಸಾವಿರದ ಎಂಟು ನೂರು ಕೋಟಿ ಅಮೆರಿಕನ್ ಡಾಲರ್.

ಕಡಿಮೆ ಶ್ರಮದಲ್ಲಿ ಹೆಚ್ಚು ಶ್ರೀಮಂತರಾಗಲು 5 ಮಾರ್ಗಗಳುಕಡಿಮೆ ಶ್ರಮದಲ್ಲಿ ಹೆಚ್ಚು ಶ್ರೀಮಂತರಾಗಲು 5 ಮಾರ್ಗಗಳು

2020ನೇ ಇಸವಿ ಜಗತ್ತಿನ ಶ್ರೀಮಂತರ ಪಾಲಿಗೆ ಮರೆಯಲಾಗದ ವರ್ಷ. ಬ್ಲೂಮ್ ಬರ್ಗ್ ಸೂಚ್ಯಂಕದಲ್ಲಿನ ಐನೂರು ಶ್ರೀಮಂತರು ಜನವರಿಯಿಂದ ಈಚೆಗೆ ಇಲ್ಲಿಯ ತನಕ $ 1.2 ಲಕ್ಷ ಕೋಟಿ ಹೆಚ್ಚಿಸಿಕೊಂಡಿದ್ದಾರೆ. ಷೇರು ಮಾರುಕಟ್ಟೆ ಹೆಚ್ಚಳದಿಂದ, ನಗದು ಪ್ರಮಾಣ ಹಾಗೂ ಮತ್ತಿತರ ಕಾರಣಗಳಿಂದಲೇ ಬಂದದ್ದು ಇಪ್ಪತ್ತೊಂದು ಪರ್ಸೆಂಟ್ ಇದೆ.

ಆ ಶ್ರೀಮಂತನ ಆಸ್ತಿಯಲ್ಲಿ ಒಂದೇ ದಿನ ಏರಿಕೆಯಾಯಿತು 56,240 ಕೋಟಿ ರು.

ಸೋಮವಾರದಂದು ಅತಿ ದೊಡ್ಡ ಮಟ್ಟದಲ್ಲಿ ಸಂಪತ್ತಿನ ಏರಿಕೆ ಕಂಡವರು ಸ್ಪಾನಿಷ್ ರೀಟೇಲ್ ಉದ್ಯಮಿ ಅಮಾನ್ಸಿಯೋ ಒರ್ಟೆಗಾ. ಝರಾಸ್ ಪೇರೆಂಟ್ ಇಂಡಿಟೆಕ್ಸ್ ಎಸ್ ಎ ಸ್ಥಾಪಕ ಆತ. ಅವರ ನಿವ್ವಳ ಆಸ್ತಿ ಮೌಲ್ಯ 760 ಕೋಟಿ ಅಮೆರಿಕನ್ ಡಾಲರ್ ಹೆಚ್ಚಳವಾಗಿದೆ. ಒಂದು ಕಾಲಕ್ಕೆ ಒರ್ಟೆಗಾ ವಿಶ್ವದ ಎರಡನೇ ಶ್ರೀಮಂತರಾಗಿದ್ದರು. ಕೊರೊನಾ ಪೆಟ್ಟಿನಿಂದ ಆಸ್ತಿಯಲ್ಲಿ ಇಳಿಕೆ ಆಗಿತ್ತು. ಈ ಇಡೀ ವರ್ಷ ಕಳೆದುಕೊಂಡ ಅರ್ಧದಷ್ಟನ್ನು ಸೋಮವಾರ ಒಂದೇ ದಿನ ಗಳಿಸಿದ್ದಾರೆ.

ಹಾಗಂತ ಎಲ್ಲ ಶ್ರೀಮಂತರ ಆಸ್ತಿ ಏರಿಕೆ ಕಂಡಿಲ್ಲ ಜೂಮ್ ವಿಡಿಯೋ ಕಮ್ಯುನಿಕೇಷನ್ ಇಂಕ್ ನ ಸಿಇಒ ಎರಿಕ್ ಯುವಾನ್ ನಿವ್ವಳ ಆಸ್ತಿ ಇಪ್ಪ ಪರ್ಸೆಂಟ್ ಅಥವಾ 510 ಕೋಟಿ ಅಮೆರಿಕನ್ ಡಾಲರ್ ಇಳಿಕೆ ಆಗಿದೆ.

English summary

Bernard Arnault Wealth Increased By 56240 Crore In A Day

Bernard Arnault become centibillionaire on Monday, after surge on stock market.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X