For Quick Alerts
ALLOW NOTIFICATIONS  
For Daily Alerts

ಕಡಿಮೆ ಬೆಲೆಗೆ ಗೋಧಿ ಹಿಟ್ಟು ಲಭ್ಯ, ದರ ಇಲ್ಲಿ ಪರಿಶೀಲಿಸಿ

|

ಇತ್ತೀಚೆಗೆ ಗೋಧಿ ಹಿಟ್ಟಿನ ಬೆಲೆಯು ಭಾರೀ ಏರಿಕೆಯಾಗಿದೆ. ಅದಕ್ಕಾಗಿ ಸರ್ಕಾರವು ಕೆಲವೊಂದು ಕ್ರಮಗಳನ್ನು ಕೂಡಾ ಕೈಗೊಂಡಿದೆ. ಸಂಗ್ರಹಿಸಿಟ್ಟಿದ್ದ ಗೋಧಿ ಮಾರಾಟಕ್ಕೆ ಸರ್ಕಾರ ಇತ್ತೀಚೆಗೆ ನಿರ್ಧಾರ ಮಾಡಿದೆ. ಈ ನಡುವೆ ಭಾರತ್ ಆಟಾ ತನ್ನ ಗೋಧಿ ಹಿಟ್ಟಿನ ಬೆಲೆಯನ್ನು ಇಳಿಸಿದೆ. ಕೇಂದ್ರಿಯಾ ಭಂಡಾರ, ನ್ಯಾಷನಲ್ ಅಗ್ರಿಕಲ್ಚರ್ ಕಾಪೋರೇಟಿವ್ ಮಾರ್ಕೆಂಟಿಗ್ ಫೆಡರೇಷನ್ ಆಫ್ ಇಂಡಿಯಾ (ಎನ್‌ಎಎಫ್‌ಇಡಿ) ಮತ್ತು ನ್ಯಾಷನಲ್ ಕಾಪೋರೇಟಿವ್ ಕನ್ಸ್ಯೂಮರ್ಸ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್‌ (ಎನ್‌ಸಿಸಿಎಫ್‌) ಪ್ರತಿ ಕೆಜಿಗೆ 29.50 ರೂಪಾಯಿಗೆ ಮಾರಾಟ ಮಾಡುತ್ತಿದೆ.

 

ಗೋಧಿ ಹಿಟ್ಟಿನ ಬೆಲೆ ಏರಿಕೆಯಿಂದಾಗಿ ಸಮಸ್ಯೆ ಅನುಭವಿಸುತ್ತಿರುವ ಜನರಿಗೆ ರಿಲೀಫ್ ನೀಡುವ ಕಾರ್ಯವನ್ನು ಭಾರತ ಸರ್ಕಾರವು ಮಾಡುತ್ತಿದೆ. ಭಾರತ್ ಆಟಾ ಅಥವಾ ಬೇರೆ ಹೆಸರಿನಲ್ಲಿ 29.50 ರೂಪಾಯಿಗೆ ಗೋಧಿ ಹಿಟ್ಟನ್ನು ಮಾರಾಟ ಮಾಡುವ ನಿರ್ಧಾರವನ್ನು ಕೇಂದ್ರಿಯಾ ಭಂಡಾರ, ಎನ್‌ಎಎಫ್‌ಇಡಿ, ಎನ್‌ಸಿಸಿಎಫ್‌ ಮಾಡಿದೆ.

 

ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?

ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಬೇರೆ ಬೇರೆ ಸಂಸ್ಥೆಯ ಪ್ರತಿನಿಧಿಗಳು, ಫುಡ್ ಕಾಪೋರೇಷನ್ ಆಫ್ ಇಂಡಿಯಾ, ಕೇಂದ್ರಿಯಾ ಭಂಡಾರ, ನ್ಯಾಷನಲ್ ಅಗ್ರಿಕಲ್ಚರ್ ಕಾಪೋರೇಟಿವ್ ಮಾರ್ಕೆಂಟಿಗ್ ಫೆಡರೇಷನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಕಾಪೋರೇಟಿವ್ ಕನ್ಸ್ಯೂಮರ್ಸ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್‌ ಸಭೆಯಲ್ಲಿ ಭಾಗಿಯಾಗಿತ್ತು. ಫ್ರೀ ಮಾರ್ಕೆಟ್ ಸೇಲ್ ಯೋಜನೆ (ಒಎಂಎಸ್‌ಎಸ್) ಬೆಳವಣಿಗೆಯನ್ನು ಚರ್ಚೆ ಮಾಡಲಾಗಿದೆ.

 ಕಡಿಮೆ ಬೆಲೆಗೆ ಗೋಧಿ ಹಿಟ್ಟು ಲಭ್ಯ, ದರ ಇಲ್ಲಿ ಪರಿಶೀಲಿಸಿ

ಬೆಲೆ ನಿಯಂತ್ರಣಕ್ಕೆ ಸರ್ಕಾರದ ಕ್ರಮಗಳು

ಒಎಂಎಸ್‌ಎಸ್ ಅಡಿಯಲ್ಲಿ ಸ್ಟಾಕ್‌ನಿಂದ ಮೂರು ಮಿಲಿಯನ್ ಟನ್ ಗೋಧಿಯನ್ನು ಇ-ಹರಾಜು ಇಲ್ಲದೆ ಈ ಸಂಸ್ಥೆಗಳಿಗೆ ನೀಡಲಾಗುತ್ತದೆ. ತಲಾ ಒಂದು ಲಕ್ಷ ಟನ್‌ಗಳನ್ನು ಕೇಂದ್ರೀಯ ಭಂಡಾರ, ಎನ್‌ಎಎಫ್‌ಇಡಿ ಮತ್ತು 50,000 ಟನ್‌ಗಳನ್ನು ಎನ್‌ಸಿಸಿಎಫ್‌ಗೆ ಹಂಚಿಕೆ ಮಾಡಲಾಗುತ್ತದೆ. ಈ ಗೋಧಿಯನ್ನು ಹಿಟ್ಟಾಗಿಸಿ ಪ್ರತಿ ಕೆಜಿಗೆ 29.50 ರೂ.ಗೆ ನಿಗದಿತ ಬೆಲೆಗೆ ಮಾರಾಟ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 38 ರೂಪಾಯಿ ಆಗಿದೆ. ಆದರೆ ಈ ಬೆಲೆಗಿಂತ ಕಡಿಮೆ ಬೆಲೆಗೆ ಗೋಧಿ ಹಿಟ್ಟು ಲಭ್ಯವಾಗುವ ಕಾರಣ ಜನರಿಗೆ ಸಹಾಯವಾಗಲಿದೆ.

ಜೂನ್‌ ವೇಳೆಗೆ ದೇಶದಲ್ಲಿ ಆರ್ಥಿಕ ಹಿಂಜರಿತ ಎಂದ ಕೇಂದ್ರ ಸಚಿವ, ಪಾಕ್‌, ಶ್ರೀಲಂಕಾ ಸ್ಥಿತಿ ನೆನಪಿಸಿಕೊಳ್ಳಿ!ಜೂನ್‌ ವೇಳೆಗೆ ದೇಶದಲ್ಲಿ ಆರ್ಥಿಕ ಹಿಂಜರಿತ ಎಂದ ಕೇಂದ್ರ ಸಚಿವ, ಪಾಕ್‌, ಶ್ರೀಲಂಕಾ ಸ್ಥಿತಿ ನೆನಪಿಸಿಕೊಳ್ಳಿ!

ಭಾರತದ ದೇಶೀಯ ಉತ್ಪಾದನೆ ಕುಸಿಯುತ್ತಿದ್ದು, ಇದರಿಂದ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗಿದೆ. ಹಿಟ್ಟಿನ ಬೆಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಕಡಿಮೆ ಬೆಲೆಗೆ ಜನರಿಗೆ ಗೋಧಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ಕ್ರಮಕೈಗೊಂಡಿದೆ. ಈ ನಿರ್ಧಾರದಿಂದಾಗಿ ಬೆಲೆ ಏರಿಕೆಯಿಂದಾಗಿ ಉಂಟಾಗುವ ಆರ್ಥಿಕ ಒತ್ತಡವನ್ನು ಕಡಿಮೆ ಆಗಲಿದೆ. ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸುವ ಸರ್ಕಾರದ ಪ್ರಯತ್ನಗಳು ಜನರಿಗೆ ಸಹಾಯಕವಾಗಲಿದೆ.

English summary

Bharat Atta now available at reduced price, Check Wheat Price

Bharat Atta now available at reduced price: Kendriya Bhandar sells flour for Rs 29.50/kg, NAFED and NCCF to follow.
Story first published: Friday, February 3, 2023, 12:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X