For Quick Alerts
ALLOW NOTIFICATIONS  
For Daily Alerts

ಬಿಲ್‌ಗೇಟ್ಸ್‌ ಹಿಂದಿಕ್ಕಿ ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!

|

ಈ ಹಿಂದೆ ಉದ್ಯಮಿ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ತಕ್ತಿಯಾದ ಗೌತಮ್ ಅದಾನಿ ಈಗ ವಿಶ್ವದ ಶ್ರೀಮಂತ ವ್ಯಕ್ತಿಗಳೊಂದಿಗೂ ಸ್ಪರ್ಧಿಸಿದ್ದಾರೆ. ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ಅದಾನಿ ಗ್ರೂಪ್ಸ್‌ನ ಗೌತಮ್ ಅದಾನಿ ವಿಶ್ವದ ನಾಲ್ಕನೇ ಅತೀ ಶ್ರೀಮಂತ ವ್ಯಕ್ತಿ ಎಂಬ ಖ್ಯಾತಿಯನ್ನು ಪಡೆದಿದ್ದಾರೆ.

 

ಪೋರ್ಬ್‌ನ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ ಉದ್ಯಮಿ ಗೌತಮ್ ಅದಾನಿ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತ ವ್ತಕ್ತಿ ಎನಿಸಿಕೊಂಡಿದ್ದಾರೆ. 60 ವರ್ಷ ಪ್ರಾಯದ ಉದ್ಯಮಿ ಗೌತಮ್ ಅದಾನಿಯ ನಿವ್ವಳ ಆದಾಯ ಗುರುವಾರ 115.5 ಬಿಲಿಯನ್ ಡಾಲರ್‌ಗೆ ತಲುಪಿದೆ. ಬಿಲ್‌ಗೇಟ್ಸ್ ನಿವ್ವಳ ಆದಾಯ 104.6 ಬಿಲಿಯನ್ ಡಾಲರ್ ಆಗಿದೆ. 90 ಬಿಲಿಯನ್ ಡಾಲರ್ ಆದಾಯದೊಂದಿಗೆ ಮುಕೇಶ್ ಅಂಬಾನಿ ಹತ್ತನೇ ಸ್ಥಾನದಲ್ಲಿ ಇದ್ದಾರೆ.

ಇತ್ತೀಚೆಗೆ ಟ್ವಿಟ್ಟರ್ ಅನ್ನು ಖರೀದಿ ಮಾಡುವುದಾಗಿ ಹೇಳಿ ವಿವಾದಲ್ಲಿ ಸಿಲುಕಿಕೊಂಡ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್ 235.8 ಬಿಲಿಯನ್ ಡಾಲರ್ ಆದಾಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇದ್ದಾರೆ.

 ಶ್ರೀಮಂತ ವ್ಯಕ್ತಿ: ಬಿಲ್‌ಗೇಟ್ಸ್‌ ಹಿಂದಿಕ್ಕಿದ ಗೌತಮ್ ಅದಾನಿ

ಅಂಬಾನಿಯನ್ನು ಹಿಂದಿಕ್ಕಿ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ, ಗೌತಮ್ ಅದಾನಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಫೋರ್ಬ್ಸ್‌ನ ರಿಯಲ್-ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ, ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ್ ಅದಾನಿ ಶ್ರೀಮಂತ ಭಾರತೀಯರಾಗಿದ್ದಾರೆ.

ಇನ್ನು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ ವರದಿಯ ಬೆನ್ನಲ್ಲೇ ಈ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ತಜ್ಞರು, "ಕಳೆದ ಎರಡು ವರ್ಷದಲ್ಲಿ ಕೆಲವು ಅದಾನಿ ಗ್ರೂಪ್ಸ್ ಸ್ಟಾಕ್‌ಗಳು ಶೇಕಡ 600ರಷ್ಟು ಏರಿಕೆಯಾಗಿದೆ. 2070ರ ವೇಳೆಗೆ ಭಾರೀ ಏರಿಕೆಯಾಗಲಿದೆ. ಮೂರು ವರ್ಷದಲ್ಲಿ ಅದಾನಿ ಏಳು ವಿಮಾನ ನಿಲ್ದಾಣ ಹಾಗೂ ಅರ್ಧದಷ್ಟು ಭಾರತದ ವಾಯುಮಾರ್ಗವನ್ನು ತನ್ನ ವಶವನ್ನಾಗಿಸಿದ್ದಾರೆ," ಎಂದು ವಿವರಿಸಿದ್ದಾರೆ.

ಇಸ್ರೇಲ್‌ನಲ್ಲಿ ಅದಾನಿ ಸಂಸ್ಥೆಯ ಉದ್ಯಮ ಗಡೋಟ್ ಸಹಭಾಗಿತ್ವದಲ್ಲಿ ಇಸ್ರೇಲ್‌ನಲ್ಲಿ ಬಂದರಿನ ಖಾಸಗೀಕರಣದ ಟೆಂಡರ್ ಅನ್ನು ಅದಾನಿ ಸಂಸ್ಥೆ ಗೆದ್ದಿದೆ ಎಂದು ಗುರುವಾರ ಅದಾನಿ ಹೇಳಿದ್ದಾರೆ. ಇಸ್ರೇಲ್‌ನ ಮೂರು ಪ್ರಮುಖ ಅಂತಾರಾಷ್ಟ್ರೀಯ ಬಂದರುಗಳಲ್ಲಿ ಹೈಫಾ ಬಂದರು ದೊಡ್ಡದಾಗಿದೆ.

 

ಇನ್ನು ಮುಂಬರುವ 5ಜಿ ಹರಾಜಿಗೆ ಅದಾನಿ ಡೇಟಾ ನೆಟ್‌ವರ್ಕ್ ಲಿಮಿಟೆಡ್, ರಿಲಯನ್ಸ್ ಜಿಯೋ ಇನ್ಫೋಕಾಮ್, ವೊಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್‌ಟೆಲ್ ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದೆ. ಜುಲೈ 26 ರಂದು ಪ್ರಾರಂಭವಾಗಲಿರುವ ಸ್ಪೆಕ್ಟ್ರಮ್ ಹರಾಜು ಭಾರೀ ಪೈಪೋಟಿಯಲ್ಲಿ ನಡೆಯಲಿದೆ.

ಇನ್ನು ಕಳೆದ ತಿಂಗಳು ಅದಾನಿ ತಮ್ಮ 60ನೇ ಹುಟ್ಟುಹಬ್ಬವನ್ನು ಗುರುತಿಸಲು, ಅವರ ಕುಟುಂಬವು 60,000 ಕೋಟಿ ರೂಪಾಯಿಗಳನ್ನು ಸಾಮಾಜಿಕ ಕಾರಣಗಳಿಗಾಗಿ ದೇಣಿಗೆ ನೀಡುವುದಾಗಿ ಹೇಳಿಕೊಂಡಿದೆ.

English summary

Billionaire Gautam Adani Overtakes Bill Gates To Become 4th Richest Person In The World

Billionaire Gautam Adani Overtakes Bill Gates To Become 4th Richest Person In The World. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X