For Quick Alerts
ALLOW NOTIFICATIONS  
For Daily Alerts

ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿ: ಅದಾನಿ 3ನೇ ಸ್ಥಾನ, ಅಂಬಾನಿ ಔಟ್!

|

ಬ್ಲೂಬರ್ಗ್‌ನ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಈ ಹಿಂದೆ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಗೌತಮ್ ಅದಾನಿ ವಿಶ್ವದ ಶ್ರೀಮಂತ ವ್ಯಕ್ತಿಗಳಾದ ಫ್ರಾನ್ಸ್‌ನ ಜೆಫ್ ಬೆಜೊಸ್‌ ಹಾಗೂ ಬರ್ನಾರ್ಡ್ ಅರ್ನಾಲ್ಟ್‌ರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿದ್ದರು. ಬ್ಲೂಬರ್ಗ್ ಪಟ್ಟಿಯಲ್ಲಿ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದ್ದರು. ಆದರೆ ಮತ್ತೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.

ಮೊದಲ ಸ್ಥಾನವನ್ನು ಟೆಸ್ಲಾ ಮುಖ್ಯಸ್ಥ ಎಲನ್ ಮಸ್ಕ್ ಕಾಪಿಟ್ಟುಕೊಂಡಿದ್ದಾರೆ. ಇನ್ನು ಗೌತಮ್ ಅದಾನಿಯನ್ನು ಕೆಳಕ್ಕೆ ಎಳೆದು, ಅಮೆಜಾನ್ ಸ್ಥಾಪಕ ಜೆಫ್ ಬೆಜೊಸ್‌ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಸೋಮವಾರ ಈಕ್ವಿಟಿ ಮಾರುಕಟ್ಟೆಯಲ್ಲಿ ಅದಾನಿ ಸಂಸ್ಥೆ ಕುಸಿತ ಕಂಡ ಬೆನ್ನಲ್ಲೇ ಅದಾನಿ ಶ್ರೀಮಂತರ ಪಟ್ಟಿಯಲ್ಲಿ ಕೆಳಕ್ಕೆ ಇಳಿದಿದ್ದಾರೆ. ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದಲೇ ಹೊರಗುಳಿದಿದ್ದಾರೆ.

Gautam Adani : ಬೆಜೊಸ್‌, ಅರ್ನಾಲ್ಟ್‌ರನ್ನು ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!Gautam Adani : ಬೆಜೊಸ್‌, ಅರ್ನಾಲ್ಟ್‌ರನ್ನು ಹಿಂದಿಕ್ಕಿ ವಿಶ್ವದ 2ನೇ ಶ್ರೀಮಂತ ವ್ಯಕ್ತಿಯಾದ ಗೌತಮ್ ಅದಾನಿ!

ಗೌತಮ್ ಅದಾನಿ ಸಂಸ್ಥೆಯ ಷೇರುಗಳು ಸೋಮವಾರ ಕುಸಿತವಾಗಿದೆ. ಅದಾನಿಯ ನಿವ್ವಳ ಆದಾಯದಲ್ಲಿ 6.91 ಬಿಲಿಯನ್ ಡಾಲರ್ ನಷ್ಟವಾಗಿದ್ದು, ಆದಾಯ 135 ಬಿಲಿಯನ್ ಡಾಲರ್‌ಗೆ ಕುಸಿದಿದೆ. ಈ ನಡುವೆ ಜೆಫ್ ಬೆಜೊಸ್‌ ನಿವ್ವಳ ಆದಾಯವು 138 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಅದಾನಿಯನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಟ್ಟಿಯ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

 ಟಾಪ್ 10 ಪಟ್ಟಿಯಿಂದ ಅಂಬಾನಿ ಔಟ್

ಟಾಪ್ 10 ಪಟ್ಟಿಯಿಂದ ಅಂಬಾನಿ ಔಟ್

ಸೋಮವಾರ ಷೇರು ಮಾರುಕಟ್ಟೆ ಕುಸಿತದಿಂದಾಗಿ ಭಾರೀ ನಷ್ಟ ಉಂಟಾಗಿದೆ. ಈ ಬೆನ್ನಲ್ಲೇ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದಲೇ ಹೊರಕ್ಕೆ ಉಳಿದಿದ್ದಾರೆ. ಮುಕೇಶ್ ಅಂಬಾನಿ ನಿವ್ವಳ ಆದಾಯವು 82.4 ಬಿಲಿಯನ್ ಡಾಲರ್‌ಗೆ ಇಳಿದಿದ್ದು, ವಿಶ್ವದ ಶ್ರೀಮಂತ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಇಳಿದಿದ್ದಾರೆ. ಈ ಹಿಂದೆ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಗೌತಮ್ ಅದಾನಿ ಏಷ್ಯಾದ ಶ್ರಿಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದಾರೆ. ಈಗ ಮುಕೇಶ್ ಅಂಬಾನಿ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದಲೂ ಹೊರಕ್ಕುಳಿದಿದ್ದಾರೆ.

ಅದಾನಿ ಪೋರ್ಟ್ಸ್ ಷೇರು ಸಾರ್ವಕಾಲಿಕ ಏರಿಕೆ, ಹೂಡಿಕೆದಾರರ ಸಂಪತ್ತು 3 ಪಟ್ಟು ಜಿಗಿತಅದಾನಿ ಪೋರ್ಟ್ಸ್ ಷೇರು ಸಾರ್ವಕಾಲಿಕ ಏರಿಕೆ, ಹೂಡಿಕೆದಾರರ ಸಂಪತ್ತು 3 ಪಟ್ಟು ಜಿಗಿತ

 ಈ ಹಿಂದೆ ಎರಡನೇ ಸ್ಥಾನಕ್ಕೆ ಏರಿದ್ದ ಅದಾನಿ

ಈ ಹಿಂದೆ ಎರಡನೇ ಸ್ಥಾನಕ್ಕೆ ಏರಿದ್ದ ಅದಾನಿ

ಈ ಹಿಂದೆ ಗೌತಮ್ ಅದಾನಿ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದರು. ಕಳೆದ ಒಂದು ತಿಂಗಳ ಹಿಂದೆ ಮೈಕ್ರೋಸಾಫ್ಟ್‌ನ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತೀ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದ ಅದಾನಿ ಗ್ರೂಪ್ಸ್‌ನ ಗೌತಮ್ ಅದಾನಿ ಈಗ ವಿಶ್ವದ 2ನೇ ಅತೀ ಶ್ರೀಮಂತ ವ್ಯಕ್ತಿ ಎಂಬ ಪಟ್ಟಕ್ಕೆ ಏರಿದ್ದರು. ಈ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ ಏಷ್ಯಾದ ಹಾಗೂ ಭಾರತದ ಮೊದಲ ವ್ಯಕ್ತಿ ಎಂಬ ಕೀರ್ತಿಯನ್ನು ಗಳಿಸಿದ್ದಾರೆ. ಬ್ಲೂಬರ್ಗ್ ಪ್ರಕಾರ ಈ ವರ್ಷ ಅದಾನಿ ಆದಾಯಕ್ಕೆ 58.5 ಬಿಲಿಯನ್ ಡಾಲರ್ ಸೇರ್ಪಡೆಯಾಗಲಿದೆ. ಈ ನಡುವೆ ಎಲಾನ್ ಮಸ್ಕ್ ಆದಾಯ 25.1 ಬಿಲಿಯನ್ ಡಾಲರ್ ಹಾಗೂ ಜೆಫ್ ಬೆಜೊಸ್‌ ನಿವ್ವಳ ಆದಾಯ 54.3 ಬಿಲಿಯನ್ ಡಾಲರ್‌ ಇಳಿಕೆಯಾಗಿದೆ.

 14 ಶ್ರೀಮಂತರಲ್ಲಿ ಅದಾನಿ ಸಂಪತ್ತು ಮಾತ್ರ ವೃದ್ಧಿ!

14 ಶ್ರೀಮಂತರಲ್ಲಿ ಅದಾನಿ ಸಂಪತ್ತು ಮಾತ್ರ ವೃದ್ಧಿ!

ವಿಶ್ವದ ಟಾಪ್ 14 ಶ್ರೀಮಂತರ ಪೈಕಿ ಭಾರತದ ಉದ್ಯಮಿ ಗೌತಮ್ ಅದಾನಿ ಸಂಪತ್ತು ಮಾತ್ರ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗಿದೆ ಹಾಗೂ ವೃದ್ಧಿಯಾಗುತ್ತಿದೆ. ಇನ್ನುಳಿದ ಶ್ರೀಮಂತರೆಲ್ಲರ ಆದಾಯವು ಇಳಿಕೆಯಾಗುತ್ತಲೇ ಇದೆ. ಹುರುನ್ ಶ್ರೀಮಂತ ಭಾರತೀಯರ ಪಟ್ಟಿ 2022ರಲ್ಲಿ ಗೌತಮ್ ಅದಾನಿ, ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿದ್ದಾರೆ. ಕಳೆದ ವರ್ಷದಿಂದ 1,600 ಕೋಟಿ ರೂಪಾಯಿ ಆದಾಯ ವೃದ್ಧಿಯಾಗಿದೆ. 10,94,400 ಕೋಟಿ ಆದಾಯವನ್ನು ಹೊಂದಿರುವ ಅದಾನಿ ಆದಾಯವು ಅಂಬಾನಿ ಆದಾಯಕ್ಕಿಂತ 3 ಲಕ್ಷ ಕೋಟಿ ರೂಪಾಯಿ ಹೆಚ್ಚಿದೆ. ಕೇವಲ ಒಂದಲ್ಲ ಏಳು ಮಾರುಕಟ್ಟೆ ಬಂಡವಾಳವನ್ನು ಅಭಿವೃದ್ಧಿ ಮಾಡಿದ ಏಕೈಕ ಭಾರತೀಯ ಗೌತಮ್ ಅದಾನಿಯಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ದೇಶದ ಶ್ರೀಮಂತ ವ್ಯಕ್ತಿ ಎಂಬ ಪಟ್ಟವನ್ನು ಪಡೆದುಕೊಂಡಿದ್ದ ಅಂಬಾನಿ 7.94 ಲಕ್ಷ ಕೋಟಿ ಆದಾಯದೊಂದಿಗೆ 2ನೇ ಸ್ಥಾನಕ್ಕೆ ಇಳಿದಿದ್ದಾರೆ.

 ಒಂದು ವರ್ಷದಲ್ಲೇ ಅದಾನಿ ಆದಾಯ ಭಾರಿ ಏರಿಕೆ

ಒಂದು ವರ್ಷದಲ್ಲೇ ಅದಾನಿ ಆದಾಯ ಭಾರಿ ಏರಿಕೆ

ಕಳೆದ ಒಂದು ವರ್ಷದಲ್ಲೇ ಅದಾನಿ ಆದಾಯ ಭಾರಿ ಏರಿಕೆಯಾಗಿದೆ. ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯ ಪ್ರಕಾರ 2012ರಲ್ಲಿ ಅದಾನಿ ಆದಾಯವು ಅಂಬಾನಿ ಆದಾಯಕ್ಕಿಂತ ಆರನೇ ಒಂದು ಭಾಗದಷ್ಟಿತ್ತು. ಆದರೆ ಕಳೆದ ಹತ್ತು ವರ್ಷದಲ್ಲಿ ಅಂಬಾನಿಯನ್ನೇ ಅದಾನಿ ಹಿಂದಿಕ್ಕಿದ್ದಾರೆ. ಕಳೆದ ವರ್ಷ ಅದಾನಿ ಆದಾಯಕ್ಕಿಂತ ಸುಮಾರು 1 ಲಕ್ಷ ಕೋಟಿ ರೂಪಾಯಿ ಹೆಚ್ಚು ಆದಾಯವನ್ನು ಅಂಬಾನಿ ಹೊಂದಿದ್ದರು. ಆದರೆ ಒಂದು ವರ್ಷದಲ್ಲೇ ಅಂಬಾನಿಯನ್ನು ಅದಾನಿ ಹಿಂದಕ್ಕೆ ತಳ್ಳಿದ್ದು, 3 ಲಕ್ಷ ಕೋಟಿ ರೂಪಾಯಿ ನಿವ್ವಳ ಆದಾಯ ಹೆಚ್ಚಿಸಿಕೊಂಡಿದ್ದಾರೆ. 2021ರಲ್ಲಿ ಗೌತಮ್ ಅದಾನಿ ಪ್ರತಿ ದಿನ 1,612 ಕೋಟಿ ರೂಪಾಯಿ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಂಬಾನಿ ಪ್ರತಿ ದಿನ 210 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.

English summary

Bloomberg Billionaire Index: Gautam Adani Slipped to 3rd in List of World's Richest People

Bloomberg Billionaire Index: Gautam Adani Slipped to 3rd in List of World's Richest People. Mukesh Ambani out of top-10 after Monday’s D-St rout.
Story first published: Tuesday, September 27, 2022, 14:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X