For Quick Alerts
ALLOW NOTIFICATIONS  
For Daily Alerts

Income Tax Calculator : ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಹಣಕಾಸು ವರ್ಷದ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್‌ನ ಮೇಲೆ ತೆರಿಗೆದಾರರು ಇಟ್ಟ ಭರವಸೆಯು ಕೊಂಚ ಈಡೇರಿದೆ ಎಂದರೆ ತಪ್ಪಾಗಲಾರದು. ಹೊಸ ಆದಾಯ ತೆರಿಗೆ ಪದ್ಧತಿಯಡಿಯಲ್ಲಿ 7 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ಈ ಹಿಂದೆ 5 ಲಕ್ಷ ರೂಪಾಯಿಯಿದ್ದ ಈ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂಪಾಯಿಗೆ ಏರಿಸಲಾಗಿದೆ.

 

ಪ್ರಮುಖವಾಗಿ 2024ರ ಲೋಕಸಭೆ ಚುನವಾಣೆಗೂ ಮುನ್ನ ಬರುವ ಕೇಂದ್ರ ಸರ್ಕಾರದ ಪೂರ್ಣವಧಿ ಬಜೆಟ್‌ನಲ್ಲಿ ಮಧ್ಯಮ ವರ್ಗಗಳಿಗೆ ರಿಲೀಫ್ ನೀಡಲಾಗಿದೆ. ಮುಖ್ಯವಾಗಿ ಆದಾಯ ತೆರಿಗೆಗೆ ಸಂಬಂಧಿಸಿದ ಕೆಲವೊಂದು ಘೋಷಣೆಗಳ ಮೂಲಕ ಮಧ್ಯಮ ವರ್ಗದ ಜನರಿಗೆ ರಿಲೀಫ್ ನೀಡಲಾಗಿದೆ. ಪ್ರಮುಖವಾಗಿ ಬಜೆಟ್‌ ಆರಂಭದಲ್ಲಿಯೇ ಇದು ಅಮೃತ ಕಾಲದ ಬಜೆಟ್ ಎಂದು ವಿತ್ತ ಸಚಿವೆ ಘೋಷಣೆ ಮಾಡಿದ್ದಾರೆ.

Income Tax Budget 2023 : ತೆರಿಗೆದಾರರಿಗೆ ಸಿಹಿಸುದ್ದಿ: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿIncome Tax Budget 2023 : ತೆರಿಗೆದಾರರಿಗೆ ಸಿಹಿಸುದ್ದಿ: 7 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ

ತೆರಿಗೆ ಪಾವತಿದಾರರು ಕೇಂದ್ರ ಸರ್ಕಾರದ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳನ್ನು ಹೊಂದಿದ್ದರು. ಅದರಂತೆಯೇ ಕೇಂದ್ರ ಹಣಕಾಸು ಸಚಿವೆ ತೆರಿಗೆ ಪಾವತಿದಾರರಿಗೆ ಸಿಹಿಸುದ್ದಿಯನ್ನು ನೀಡಿದೆ. ಹೊಸ ತೆರಿಗೆ ಪದ್ಧತಿಯಡಿಯಲ್ಲಿ ನಿಮ್ಮ ಆದಾಯ ತೆರಿಗೆಯ ಲೆಕ್ಕಾಚಾರವು ಕೂಡಾ ಬದಲಾವಣೆಯಾಗಲಿದೆ. ಹೊಸ ಲೆಕ್ಕಾಚಾರ ಹೇಗೆ, ನಿಮ್ಮ ಆದಾಯ ತೆರಿಗೆಯನ್ನು ನೀವು ಹೇಗೆ ಲೆಕ್ಕಾಚಾರ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಹೊಸ ಆದಾಯ ತೆರಿಗೆ ಸ್ಲ್ಯಾಬ್

ಹೊಸ ಆದಾಯ ತೆರಿಗೆ ಸ್ಲ್ಯಾಬ್

ವಾರ್ಷಿಕ ಆದಾಯ- ತೆರಿಗೆ ದರ

0-3 ಲಕ್ಷ ರೂಪಾಯಿ - NIL
3-6 ಲಕ್ಷ ರೂಪಾಯಿ - ಶೇಕಡ 5
6-9 ಲಕ್ಷ ರೂಪಾಯಿ - ಶೇಕಡ 10
9-12 ಲಕ್ಷ ರೂಪಾಯಿ - ಶೇಕಡ 15
12-15 ಲಕ್ಷ ರೂಪಾಯಿ - ಶೇಕಡ 20
15 ಲಕ್ಷ ರೂಪಾಯಿಗೂ ಅಧಿಕ - ಶೇಕಡ 30

 

 ಹಳೆ ತೆರಿಗೆ ಸ್ಲ್ಯಾಬ್ ಹೇಗಿದೆ?

ಹಳೆ ತೆರಿಗೆ ಸ್ಲ್ಯಾಬ್ ಹೇಗಿದೆ?

ಹಳೆ ತೆರಿಗೆ ಸ್ಲ್ಯಾಬ್ ವ್ಯವಸ್ಥೆ ಪ್ರಕಾರ 2.5 ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ.

ವಾರ್ಷಿಕ ಆದಾಯ- ತೆರಿಗೆ ದರ

0-2.5 ಲಕ್ಷ ರೂಪಾಯಿ: Nil
2.5-5 ಲಕ್ಷ ರೂಪಾಯಿ:ಶೇಕಡ 5
5-7.5 ಲಕ್ಷ ರೂಪಾಯಿ - ಶೇಕಡ 15
7.5-10 ಲಕ್ಷ ರೂಪಾಯಿ - ಶೇಕಡ 20
10 ಲಕ್ಷ ರೂಪಾಯಿಗೂ ಅಧಿಕ - ಶೇಕಡ 30

 

 ಹೊಸ ತೆರಿಗೆ ಪದ್ಧತಿ vs ಹಳೆ ತೆರಿಗೆ ಪದ್ಧತಿ
 

ಹೊಸ ತೆರಿಗೆ ಪದ್ಧತಿ vs ಹಳೆ ತೆರಿಗೆ ಪದ್ಧತಿ

ಹೊಸ ಆದಾಯ ತೆರಿಗೆ ಪದ್ಧತಿಯು ಡಿಫಾಲ್ಟ್ ತೆರಿಗೆ ಪದ್ಧತಿಯಾಗಿದೆ. ಜನರಿಗೆ ಹಳೆದಯ ಆದಾಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಕೂಡಾ ಇದೆ. ಹಳೆಯ ತೆರಿಗೆ ಪದ್ಧತಿಯು ಪಿಪಿಎಫ್, ಎನ್‌ಪಿಎಸ್ ಮತ್ತು ಇತರೆ ವಿನಾಯಿತಿಯನ್ನು ನೀಡುತ್ತದೆ. ಆದರೆ 7 ಲಕ್ಷ ರೂಪಾಯಿಗಿಂತ ಅಧಿಕ ಆದಾಯವನ್ನು ಹೊಂದಿರುವವರು ಹೊಸ ಆದಾಯ ತೆರಿಗೆ ಪದ್ಧತಿಯನ್ನು ಮತ್ತು ಹಳೆ ಆದಾಯ ತೆರಿಗೆ ಪದ್ಧತಿಯನ್ನು ಪರಿಶೀಲಿಸಿ ಆಯ್ಕೆಮಾಡಿಕೊಳ್ಳುವುದು ಉತ್ತಮ. ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ನಾವು ಸ್ಟಾಡರ್ಡ್ ಡಿಡಾಕ್ಷನ್ ಪ್ರಯೋಜನವನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ.

 ತೆರಿಗೆ ಲೆಕ್ಕಾಚಾರ ಹೇಗಿದೆ ನೋಡಿ

ತೆರಿಗೆ ಲೆಕ್ಕಾಚಾರ ಹೇಗಿದೆ ನೋಡಿ

ವಾರ್ಷಿಕವಾಗಿ 9 ಲಕ್ಷ ರೂಪಾಯಿ ಆದಾಯವನ್ನು ಹೊಂದಿರುವವರು ಶೇಕಡ 5ರಷ್ಟು ಅಂದರೆ 45,000 ರೂಪಾಯಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಪ್ರಸ್ತುತ 9 ಲಕ್ಷ ರೂಪಾಯಿ ಆದಾಯ ಹೊಂದಿರುವವರು 60,000 ರೂಪಾಯಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ. ಇದರಿಂದ 15,000 ರೂಪಾಯಿ ಕಡಿತ ಮಾಡಲಾಗಿದೆ. ವಾರ್ಷಿಕವಾಗಿ 15 ಲಕ್ಷ ಆದಾಯವನ್ನು ಹೊಂದಿರುವವರು, ವಾರ್ಷಿಕವಾಗಿ 1.5 ಲಕ್ಷ ರೂಪಾಯಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ, ಈ ಹಿಂದೆ 1.87 ಲಕ್ಷ ರೂಪಾಯಿ ಪಾವತಿ ಮಾಡಬೇಕಾಗಿತ್ತು. ಗರಿಷ್ಠ ಆದಾಯ ಸರ್‌ಚಾರ್ಜ್ ಶೇಕಡ 37ರಿಂದ ಶೇಕಡ 25ಕ್ಕೆ ಇಳಿಸಲಾಗಿದೆ.

English summary

Budget 2023: How to calculate your tax based on new income tax slabs?, Explained in Kannada

Union Budget 2023: new income tax slabs, How to calculate your tax based on new income tax slabs?. Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X