For Quick Alerts
ALLOW NOTIFICATIONS  
For Daily Alerts

ಶೇ.34 ಲಾಭಕ್ಕಾಗಿ ಈ ಪೆಟ್ರೋಲಿಯಂ ಸ್ಟಾಕ್‌ ಖರೀದಿಸಿ!

|

ಷೇರು ಮಾರುಕಟ್ಟೆ ಕುರಿತಾದ ಸುದ್ದಿಯು ಭಾರತದ ಜನರಲ್ಲಿ ಆಸಕ್ತಿಯನ್ನು ಹೆಚ್ಚಳ ಮಾಡುತ್ತಿದೆ. ಈ ಕೊರೊನಾವೈರಸ್‌ ಸೋಂಕು ಸಂದರ್ಭದಲ್ಲಿ ಭಾರತದ ಷೇರು ಮಾರುಕಟ್ಟೆಯು ಹೊಸ ಹೂಡಿಕೆದಾರರನ್ನು ಕಂಡಿದೆ. ಕುತೂಹಲಕಾರಿಯಾಗಿ, ಅವರಲ್ಲಿ ಹೆಚ್ಚಿನವರು ಯುವಕರಾಗಿದ್ದಾರೆ. ಈ ಹಿನ್ನೆಲೆಯಿಂದಾಗಿ ಅತ್ಯುತ್ತಮ ಆದಾಯವನ್ನು ಗಳಿಸಲು ಸಾಧ್ಯವಾಗುವ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಷೇರುಗಳ ಬಗ್ಗೆ ನಾವು ಇಲ್ಲಿ ನಿಮಗೆ ಮಾಹಿತಿ ನೀಡಿದ್ದೇವೆ.

ಷೇರು ಮಾರುಕಟ್ಟೆ ಸಾಮಾನ್ಯವಾಗಿ ಹೆಚ್ಚು ರಿಸ್ಕ್‌ ಆಗಿದೆ. ಆದರೆ ಅಧಿಕ ರಿಟರ್ನ್ ಬಯಸುವವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು. ಆದರೆ ಅದಕ್ಕೂ ಮುನ್ನ ಈ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವುದು ಮುಖ್ಯವಾಗಿದೆ. ಈ ಸಲಹೆಯನ್ಜು ಹೆಸರಾಂತ ಬ್ರೋಕರೇಜ್ ಸಂಸ್ಥೆ ಎಮ್‌ಕೆ ಗ್ಲೋಬಲ್ ನೀಡಿದೆ.

ಮುಖೇಶ್ ಅಂಬಾನಿ ಕ್ಯಾಡಿಲಾಕ್ ಎಸ್ಕಲೇಡ್ ಕಾರಿನ ಬೆಲೆಯೇ 1.2 ಕೋಟಿ ರೂ.!ಮುಖೇಶ್ ಅಂಬಾನಿ ಕ್ಯಾಡಿಲಾಕ್ ಎಸ್ಕಲೇಡ್ ಕಾರಿನ ಬೆಲೆಯೇ 1.2 ಕೋಟಿ ರೂ.!

ಎಮ್‌ಕೆ ಗ್ಲೋಬಲ್ ಇತ್ತೀಚೆಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್‌) ಷೇರುಗಳನ್ನು ಖರೀದಿ ಮಾಡುವಂತೆ ಹೂಡಿಕೆದಾರರಿಗೆ ಶಿಫಾರಸು ಮಾಡಿದೆ. ಈ ಷೇರುಗಳು ಶೇಕಡ 34.70 ರಷ್ಟು ಏರಿಕೆ ಕಂಡಿದೆ ಎಂದು ತಿಳಿಸಿದೆ. ಮೂರನೇ ತ್ರೈಮಾಸಿಕದಲ್ಲಿ ಬಿಪಿಸಿಎಲ್‌ ಮಾರ್ಕೆಟಿಂಗ್ ಮತ್ತು ಇಂಧನ ಮಾರಾಟದ ವಿಚಾರದಲ್ಲಿ ಅತ್ಯುತ್ತಮವಾಗಿದೆ ಎಂದು ಹೆಸರಾಂತ ಬ್ರೋಕರೇಜ್ ಸಂಸ್ಥೆ ಎಮ್ಕೆ ಗ್ಲೋಬಲ್ ಹೇಳಿದೆ. ಹಾಗಾದರೆ ಷೇರುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ..

ಸ್ಟಾಕ್‌ ಬೆಲೆ ಎಷ್ಟು?

ಸ್ಟಾಕ್‌ ಬೆಲೆ ಎಷ್ಟು?

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್‌) ನ ಪ್ರಸ್ತುತ ಮಾರುಕಟ್ಟೆ ಬೆಲೆ ರೂ. 382 ಆಗಿದೆ. ಸ್ಟಾಕ್‌ನ ಟಾರ್ಗೆಟ್‌ ಪ್ರೈಸ್‌ ಅನ್ನು ರೂಪಾಯಿ 515 ಎಂದು ಎಂಕೆ ಗ್ಲೋಬಲ್ ಗೊತ್ತುಪಡಿಸಿದೆ. ಕಂಪನಿಯು 1 ವರ್ಷದಲ್ಲಿ ಶೇಕಡ 34.70 ಹೆಚ್ಚಳ ರಿಟರ್ನ್ ಅನ್ನು ನೀಡುವ ನಿರೀಕ್ಷೆ ಇದೆ.

 ಕಂಪನಿಗೆ ಎಷ್ಟು ಲಾಭ ದೊರೆತಿದೆ?

ಕಂಪನಿಗೆ ಎಷ್ಟು ಲಾಭ ದೊರೆತಿದೆ?

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್‌) ನ ಹಣಕಾಸು ವರ್ಷ 2022ರ ಮೂರನೇ ತ್ರೈಮಾಸಿಕದಲ್ಲಿ ಏರಿಕೆಯನ್ನು ಕಂಡಿದೆ. ನವೆಂಬರ್ 21 ರಲ್ಲಿ ಇಂಧನ ಅಬಕಾರಿ ಸುಂಕದಲ್ಲಿ ಕಡಿತ ಉಂಟಾದ ಸಂದರ್ಭದಲ್ಲಿ ದಾಸ್ತಾನು ನಷ್ಟದ ಕಾರಣ, ಕಡಿಮೆ ಮಾರ್ಕೆಟಿಂಗ್ ಆದಾಯದಿಂದಾಗಿ, ಬಡ್ಡಿ, ತೆರಿಗೆ ಮೊದಲಾದ ವೆಚ್ಚಕ್ಕೂ ಮುನ್ನವೇ ಬಿಪಿಸಿಎಲ್‌ ಅಂದಾಜು ಶೇಕಡ 27ರಷ್ಟು ಕಳೆದುಕೊಂಡಿತ್ತು. ಆದರೆ ಹಣಕಾಸು ವರ್ಷ 2022ರ ಮೂರನೇ ತ್ರೈಮಾಸಿಕದಲ್ಲಿ ಬಿಪಿಸಿಎಲ್‌ ಪೆಟ್ರೋಲ್/ಡೀಸೆಲ್ ಮಾರಾಟದಲ್ಲಿ ಅತ್ಯಧಿಕ ಬೆಳವಣಿಗೆಯನ್ನು ಕಂಡಿದೆ. ಮಾರುಕಟ್ಟೆ ಪಾಲು 0.48%/0.33% ರಿಂದ 29%+ ರಷ್ಟು ಸುಧಾರಿಸಿದೆ. ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್‌ ಪ್ರಭಾವದ ಹೊರತಾಗಿಯೂ ಅದರ ಬೇಡಿಕೆ ಸ್ಥಿರವಾಗಿದೆ. ಪೆಟ್ರೋಲ್/ಡೀಸೆಲ್ ಮಾರಾಟದ ಪ್ರಮಾಣವು 3% ವರ್ಷಕ್ಕೆ ಏರಿಕೆಯಾಗಿದೆ.

ಬಜೆಟ್ ನಂತರ ಇದು ಹೂಡಿಕೆ ಮಾಡಲು ಸಮಯ..!ಬಜೆಟ್ ನಂತರ ಇದು ಹೂಡಿಕೆ ಮಾಡಲು ಸಮಯ..!

 ಎಂಕೆ ಗ್ಲೋಬಲ್‌ ಹೇಳುವುದೇನು?

ಎಂಕೆ ಗ್ಲೋಬಲ್‌ ಹೇಳುವುದೇನು?

ಸ್ಟಾಕ್ ಕುರಿತು ಮಾಹಿತಿ ನೀಡಿರುವ ಎಂಕೆ ಗ್ಲೋಬಲ್‌, "ನಾವು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅನ್ನು ಭಾಗಗಳ ಮೊತ್ತದ ಮೌಲ್ಯಮಾಪನ ಆಧಾರದ ಮೇಲೆ ಮೌಲ್ಯಮಾಪನ ಮಾಡಿದ್ದೇವೆ. ಸಾಮಾನ್ಯವಾಗಿ ಈ ಸಂಸ್ಥೆಗಳಿಗೆ ಪೆಟ್ರೋಲಿಯಂ ಬೆಲೆಗಳು, ಮಾರ್ಜಿನ್‌ಗಳು, ಯೋಜನೆಯ ವಿಳಂಬ, ಹೂಡಿಕೆ ಮೊದಲಾದ ಸಮಸ್ಯೆ ಉಂಟಾಗುತ್ತದೆ. ಹಣಕಾಸು ವರ್ಷ 2022ರಲ್ಲಿ ಶೇಕಡ 7, ಹಣಕಾಸು ವರ್ಷ 2023ರಲ್ಲಿ ಶೇಕಡ 3 ಹಾಗೂ ಹಣಕಾಸು ವರ್ಷ 2024ರಲ್ಲಿ ಶೇಕಡ 1ರಷ್ಟು ಪ್ರತಿ ಷೇರಿಗೆ ಗಳಿಕೆ ಅಧಿಕವಾಗುವ ನಿರೀಕ್ಷೆ ಇದೆ. ಕಂಪನಿಯ ಪೆಟ್ರೋಲ್/ಡೀಸೆಲ್ ಮಾರಾಟದ ಪ್ರಮಾಣವು ಏರಿಕೆ ಆಗಿದೆ," ಎಂದು ತಿಳಿಸಿದೆ.

 ಕಂಪನಿಯ ಬಗ್ಗೆ ತಿಳಿಯಿರಿ

ಕಂಪನಿಯ ಬಗ್ಗೆ ತಿಳಿಯಿರಿ

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್‌) ಭಾರತದ 'ಅತ್ಯುತ್ತಮ ಪ್ರದರ್ಶನ' ನೀಡುವ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಇದು ಫಾರ್ಚೂನ್ 500 ತೈಲ ಸಂಸ್ಕರಣೆ, ಪರಿಶೋಧನೆ ಮತ್ತು ಮಾರುಕಟ್ಟೆ ಸಂಘಟಿತವಾಗಿದೆ. ಭಾರತದಲ್ಲಿ ಮೊದಲ ಇಂಧನ ಕೇಂದ್ರವನ್ನು 1928 ರಲ್ಲಿ ನಿರ್ಮಿಸಲಾಯಿತು. ಅಂದಿನಿಂದ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನ ಇಂಧನ ಕೇಂದ್ರಗಳ ಸಂಖ್ಯೆಯು 16,000 ಅನ್ನು ದಾಟಿದೆ. ಸರಿಸುಮಾರು 1 ಕೋಟಿ ವಾಹನಗಳು ಪ್ರತಿದಿನ ಇಂಧನವನ್ನು ಈ ಕೇಂದ್ರಗಳಲ್ಲಿ ಹಾಕಿಸಿಕೊಳ್ಳುತ್ತದೆ. ಭಾರತ್ ಪೆಟ್ರೋಲಿಯಂ ಪ್ಯೂರ್ ಫಾರ್ ಶ್ಯೂರ್, ಪ್ರೀಮಿಯಂ ಪೆಟ್ರೋಲ್ ಮತ್ತು ಡೀಸೆಲ್, ಅರ್ಬನ್ ಮತ್ತು ಟ್ರಾನ್ಸ್‌ಪೋರ್ಟ್ ಲಾಯಲ್ಟಿ ಪ್ರೋಗ್ರಾಂ, ಕನ್ವೀನಿಯನ್ಸ್ ಸ್ಟೋರ್ ಇನ್ & ಔಟ್, ಇತ್ಯಾದಿಗಳಂತಹ ಹಲವಾರು ಕಾರ್ಯಕ್ರಮಗಳನ್ನು ಸಂಸ್ಥೆಯು ಆರಂಭ ಮಾಡಿದೆ.

 ಇಲ್ಲಿ ಗಮನಿಸಿ

ಇಲ್ಲಿ ಗಮನಿಸಿ

ಯಾವುದೇ ಷೇರುಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಮತ್ತು ಆದ್ದರಿಂದ ಹೂಡಿಕೆದಾರರು ಅಪಾಯವನ್ನು ಅರ್ಥಮಾಡಿಕೊಂಡು ಹೂಡಿಕೆ ಮಾಡಿ. ಈ ಲೇಖನದ ಆಧಾರದಲ್ಲಿ ಮಾಡಿದ ಹೂಡಿಕೆಯಿಂದಾಗಿ ಯಾವುದೇ ನಷ್ಟ ಉಂಟಾದರೆ ಅದಕ್ಕೆ ಲೇಖಕರು ಮತ್ತು ಗ್ರೇನಿಯಮ್ ಇನ್ಫರ್ಮೇಷನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಜವಾಬ್ದಾರರಾಗಿರುವುದಿಲ್ಲ. ಲೇಖಕರಾಗಲಿ ಅಥವಾ ಕುಟುಂಬದವರಾಗಲಿ ಈ ಮೇಲೆ ಉಲ್ಲೇಖಿಸಲಾದ ಸಂಸ್ಥೆಯಲ್ಲಿ ಷೇರುಗಳನ್ನು ಹೊಂದಿಲ್ಲ.

English summary

Buy BPCL Petroleum Stock For 34% Return, In 1 Year Says Emkay Global

Buy This Petroleum Stock For 34% Return, In 1 Year Says Emkay Global.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X