For Quick Alerts
ALLOW NOTIFICATIONS  
For Daily Alerts

137 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ BYJU'Sನ ಆಕಾಶ್ ಇನ್‌ಸ್ಟಿಟ್ಯೂಟ್‌ ಎಂಡಿ

|

ಬೈಜುಸ್ ಮಾಲೀಕತ್ವದ ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್ (AESL) ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆಕಾಶ್ ಚೌಧರಿ ಸುಮಾರು 137 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನು ಖರೀದಿ ಮಾಡಿದ್ದಾರೆ.

 

ದೇಶದ ಅತ್ಯಮೂಲ್ಯ ಸ್ಟಾರ್ಟ್‌ಅಪ್ ಆಗಿರುವ ಬೈಜುಸ್, ಟ್ಯುಟೋರಿಯಲ್ ಚೈನ್ ಆಕಾಶ್ ಎಜುಕೇಷನಲ್ ಸರ್ವಿಸಸ್ ಅನ್ನು 950 ಮಿಲಿಯನ್ ಡಾಲರ್ ನಗದು ಮತ್ತು ಈಕ್ವಿಟಿಗೆ ಖರೀದಿ ಮಾಡುವುದಾಗಿ ಏಪ್ರಿಲ್ 2021 ರಲ್ಲಿ ಘೋಷಣೆ ಮಾಡಿತ್ತು. ಈ ಒಪ್ಪಂದವು ವಿಶ್ವದ ಅತಿದೊಡ್ಡ ಎಡ್ಟೆಕ್ ಒಪ್ಪಂದಗಳಲ್ಲಿ ಒಂದಾಗಿದೆ. ಬೆಂಗಳೂರು ಮೂಲದ ಬೈಜುಸ್ ಮೌಲ್ಯ 10 ಬಿಲಿಯನ್ ಡಾಲರ್ ಆಗಿದೆ.

ಸೌದಿ ಪ್ರಿನ್ಸ್ ಒಡೆತನದ ವಿಶ್ವದ ಅತ್ಯಂತ ದುಬಾರಿ ಬಂಗಲೆ, ಏನಿದರ ಬೆಲೆ?

ಇತ್ತೀಚಿನ ದಿನಗಳಲ್ಲಿ ಹೆಸರು ವಾಸಿಯಾಗುತ್ತಿರುವ ನವದೆಹಲಿಯ ಡಿಪ್ಲೋಮ್ಯಾಟಿಕ್ ಎನ್‌ಕ್ಲೇವ್‌ನಲ್ಲಿರುವ ಕೌಟಿಲ್ಯ ಮಾರ್ಗದಲ್ಲಿರುವ ಬಂಗಲೆಗಾಗಿ ಆಕಾಶ್ ಚೌಧರಿ 137 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಮೂಲಗಳ ಪ್ರಕಾರ ಆಕಾಶ್ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಸ್ಟ್ಯಾಂಪ್ ಡ್ಯೂಟಿಯಾಗಿಯೇ ಸುಮಾರು ರೂ 8.2 ಕೋಟಿ ಪಾವತಿಸಿದ್ದಾರೆ. ಆಗಸ್ಟ್ 1 ರಂದು ಇದರ ನೋಂದಣಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ಬಂಗಲೆ ಎಷ್ಟು ದೊಡ್ಡದಾಗಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ...

 ಈ ಬಂಗಲೆಯ ವಿಸ್ತೀರ್ಣ ಎಷ್ಟು ಗೊತ್ತಾ?

ಈ ಬಂಗಲೆಯ ವಿಸ್ತೀರ್ಣ ಎಷ್ಟು ಗೊತ್ತಾ?

ಈ ಬಂಗಲೆಯು ಐಷಾರಾಮಿ ಬಂಗಲೆಯಾಗಿದೆ. ಇದರ ಒಟ್ಟು ವಿಸ್ತೀರ್ಣವು ಸುಮಾರು 1293.47 ಚದರ ಮೀಟರ್ ಆಗಿದೆ. ಓರಿಯಂಟಲ್ ಸ್ಟ್ರಕ್ಚರ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್‌ನ ಸುಮಿತ್ರಾ ಚಕ್ರವರ್ತಿ ಆಸ್ತಿಯ ಮಾರಾಟಗಾರರಾಗಿದ್ದರೆ. ಇದರ ಬಿಲ್ಡರ್ ಅರವಿಂಗ್ ಸಿಂಗ್ ಆಗಿದ್ದಾರೆ.

98 ಕೋಟಿ ರೂ. ಐಷಾರಾಮಿ ಮನೆ ಖರೀದಿಸಿದ ಟಾಟಾ ಮುಖ್ಯಸ್ಥ ಎನ್ ಚಂದ್ರಶೇಖರನ್

 ಈ ಹಿಂದೆ ಬಂಗಲೆ ಖರೀದಿಸಿದ ಜೆಸಿ ಚೌಧರಿ

ಈ ಹಿಂದೆ ಬಂಗಲೆ ಖರೀದಿಸಿದ ಜೆಸಿ ಚೌಧರಿ

ಕಳೆದ ವರ್ಷ, ಟ್ಯುಟೋರಿಯಲ್ ಚೈನ್ ಆಕಾಶ್ ಎಜುಕೇಷನಲ್ ಸರ್ವಿಸಸ್‌ನ ಸಂಸ್ಥಾಪಕ ಜೆಸಿ ಚೌಧರಿ ದಕ್ಷಿಣ ದೆಹಲಿಯ ವಸಂತ್ ವಿಹಾರ್‌ನಲ್ಲಿ 2,000 ಚದರ ಮೀಟರ್‌ನ ಆಸ್ತಿಗಾಗಿ 100 ಕೋಟಿ ರೂ.ಗಿಂತ ಹೆಚ್ಚು ಪಾವತಿ ಮಾಡಿದ್ದಾರೆ. ಆ ಬಳಿಕ ದಕ್ಷಿಣ ಬಿಜ್ವಾಸನ್‌ನಲ್ಲಿ 5 ಎಕರೆ ಫಾರ್ಮ್‌ಹೌಸ್‌ಗೆ ಸುಮಾರು 96 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

 4,000 ಚದರ ಅಡಿ ವಿಸ್ತೀರ್ಣದ ಬಂಗಲೆ
 

4,000 ಚದರ ಅಡಿ ವಿಸ್ತೀರ್ಣದ ಬಂಗಲೆ

ಬೈಜೂಸ್‌ನಿಂದ ಸ್ವಾಧೀನಪಡಿಸಿಕೊಂಡಿರುವ edtech ಸ್ಟಾರ್ಟ್‌ಅಪ್‌ನ ಸಂಸ್ಥಾಪಕ ಮತ್ತು ಸಿಇಒ ಜಿಶಾನ್ ಹಯಾತ್ ಇತ್ತೀಚೆಗೆ ಮುಂಬೈನ ಬಾಂದ್ರಾ ಜಿಲ್ಲೆಯಲ್ಲಿ ಸಮುದ್ರಕ್ಕೆ ಮುಖ ಮಾಡಿರುವ 4,000 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಾರೆ. ಇದಕ್ಕಾಗಿ 41 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ.

 ಐಷಾರಾಮಿ ಬಂಗಲೆಗೆ ಹೆಚ್ಚಿದ ಬೇಡಿಕೆ

ಐಷಾರಾಮಿ ಬಂಗಲೆಗೆ ಹೆಚ್ಚಿದ ಬೇಡಿಕೆ

ಇನ್ನು ಇತ್ತೀಚೆಗೆ ಮುಂಬೈ, ದೆಹಲಿ, ಗುರುಗ್ರಾಮ್ ಮತ್ತು ನೋಯ್ಡಾದಲ್ಲಿನ ಐಷಾರಾಮಿ ಬಂಗಲೆಗಳು ಅಧಿಕವಾಗಿ ಖರೀದಿಯಾಗುತ್ತಿದೆ. ಇತ್ತೀಚಿನ ತ್ರೈಮಾಸಿಕಗಳಲ್ಲಿ, ಲುಟ್ಯೆನ್ಸ್ ಮತ್ತು ದೆಹಲಿಯ ದಕ್ಷಿಣ ಭಾಗದಲ್ಲಿ ಅಧಿಕವಾಗಿ ಆಸ್ತಿ ಮತ್ತು ಬಂಗಲೆಗಳು ಮಾರಾಟ ಆಗಿದೆ. ಐಷಾರಾಮಿ ಮಹಡಿ ಮನೆಗಳಿಗೆ ಬೇಡಿಕೆ ಹೆಚ್ಚಿದೆ. 2022ರಲ್ಲಿ ಭೂಮಿಯ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇಕಡ 7ರಷ್ಟು ಅಧಿಕವಾಗಿದೆ.

English summary

BYJU'S Owned Aakash Institute MD Buys Bungalow Worth Rs 137 Crore

Aakash Chaudhry, co-founder and managing director of Byju's-owned Aakash Educational Services Ltd (AESL), has spent Rs 137 crore for a bungalow.
Story first published: Saturday, August 13, 2022, 14:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X