For Quick Alerts
ALLOW NOTIFICATIONS  
For Daily Alerts

Canara Bank : ಎಟಿಎಂ ವಿತ್‌ಡ್ರಾ ಮಿತಿ ಏರಿಸಿದ ಕೆನರಾ ಬ್ಯಾಂಕ್, ಎಷ್ಟು ನಗದು ಪಡೆಯಬಹುದು?

|

ದೇಶದ ಅತೀ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ದೈನಂದಿನ ಡೆಬಿಟ್ ಕಾರ್ಡ್ ಮಿತಿಯನ್ನು ಹೆಚ್ಚಳ ಮಾಡಿದೆ. ಹಾಗೆಯೇ ಪಾಯಿಂಟ್ ಲೆಸ್ ಸೇಲ್ (ಪಿಒಎಸ್), ಇ ಕಾಮರ್ಸ್ ವಹಿವಾಟು ಮಿತಿಯನ್ನು ಕೂಡಾ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿದೆ. ಈ ಕೂಡಲೇ ಜಾರಿಗೆ ಬರುವಂತೆ ಮಿತಿಯನ್ನು ಏರಿಕೆ ಮಾಡಲಾಗಿದೆ ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಕೆನರಾ ಬ್ಯಾಂಕ್‌ನಲ್ಲಿ ದೈನಂದಿನ ಎಟಿಎಂ ವಹಿವಾಟು ಮಿತಿಯನ್ನು 40 ಸಾವಿರ ರೂಪಾಯಿಯಿಂದ 75 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಪಿಒಎಸ್ ಮಿತಿಯನ್ನು ಕೂಡಾ ಏರಿಸಲಾಗಿದೆ. ಪಿಒಎಸ್ ಮಿತಿಯನ್ನು 1 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಏರಿಸಲಾಗಿದೆ.

Banker's Bank 2022 award: ಬ್ಯಾಂಕರ್ಸ್‌ ಬ್ಯಾಂಕ್ 2022 ಪ್ರಶಸ್ತಿ ಕೆನರಾ ಬ್ಯಾಂಕ್ ತೆಕ್ಕೆಗೆBanker's Bank 2022 award: ಬ್ಯಾಂಕರ್ಸ್‌ ಬ್ಯಾಂಕ್ 2022 ಪ್ರಶಸ್ತಿ ಕೆನರಾ ಬ್ಯಾಂಕ್ ತೆಕ್ಕೆಗೆ

ಎನ್‌ಎಫ್‌ಸಿ ವಹಿವಾಟನ್ನು ಹೆಚ್ಚಳ ಮಾಡಲಾಗಿಲ್ಲ. ಅದು ಈ ಹಿಂದೆಯಂತೆಯೇ 25 ಸಾವಿರ ರೂಪಾಯಿಯಾಗಿದೆ. ಒಂದು ಬಾರಿಗೆ 5 ಸಾವಿರ ರೂಪಾಯಿಯಂತೆ ದೈನಂದಿನ ಐದು ವಹಿವಾಟಿಗೆ ಅವಕಾಶವಿದೆ. ಅಂದರೆ 25 ಸಾವಿರ ರೂಪಾಯಿ ವಹಿವಾಟು ನಡೆಸಬಹುದು. ಹಾಗಾದರೆ ಕೆನರಾ ಬ್ಯಾಂಕ್ ಏನು ಹೇಳುತ್ತದೆ, ಪಿಎನ್‌ಬಿ ಡೆಬಿಟ್ ಕಾರ್ಡ್ ವಹಿವಾಟು ಮಿತಿ ಎಷ್ಟಿದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಮಿತಿ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಎಟಿಎಂ ವಿತ್‌ಡ್ರಾ ಮಿತಿ ಏರಿಸಿದ ಕೆನರಾ ಬ್ಯಾಂಕ್, ಎಷ್ಟು ವಿತ್‌ಡ್ರಾ?

ಪಿಎನ್‌ಬಿ ಡೆಬಿಟ್ ಕಾರ್ಡ್ ಮಿತಿ ಏರಿಕೆ ಚಿಂತನೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಡೆಬಿಟ್ ಕಾರ್ಡ್ ಮಿತಿಯನ್ನು ಏರಿಸುವ ಸಾಧ್ಯತೆ ಇದೆ. ಪಿಎನ್‌ಬಿ ವೆಬ್‌ಸೈಟ್ ಪ್ಲಾಟಿನಂ ಮಾಸ್ಟರ್‌ಕಾರ್ಡ್, ರುಪೇ, ವೀಸಾ ಗೋಲ್ಡ್ ಡೆಬಿಟ್ ಕಾರ್ಡ್‌ನ ಮಿತಿಯನ್ನು ಏರಿಕೆ ಮಾಡುವ ಚಿಂತನೆ ನಡೆಸಿದೆ. ಹಾಗೆತೇ ರುಪೇ ಸೆಲೆಕ್ಟ್ ಹಾಗೂ ವೀಸಾ ಸಿಗ್ನೇಚರ್ ಡೆಬಿಟ್ ಕಾರ್ಡ್‌ನ ಮಿತಿಯನ್ನು ಕೂಡಾ ಅಧಿಕ ಮಾಡುವ ಚಿಂತನೆ ನಡೆಸಿದೆ.

Canara Bank Q2 Results: ಕೆನರಾ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ; ಶೇ. 89ರಷ್ಟು ಲಾಭ ಹೆಚ್ಚಳ, ಷೇರು ಏರಿಕೆCanara Bank Q2 Results: ಕೆನರಾ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ; ಶೇ. 89ರಷ್ಟು ಲಾಭ ಹೆಚ್ಚಳ, ಷೇರು ಏರಿಕೆ

ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟು

ಎಚ್‌ಡಿಎಫ್‌ಸಿ ಬ್ಯಾಂಕ್ ಬಾಡಿಗೆ ಪಾವತಿ ಮಾಡುವುದಕ್ಕೆ ವಿಧಿಸುವ ವೆಚ್ಚವನ್ನು ಪರಿಷ್ಕರಣೆ ಮಾಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್ ಪ್ರಕಾರ ಥರ್ಡ್ ಪಾರ್ಟಿ ಮೆರ್ಚೆಂಟ್ ಪ್ರಕಾರ ಬಾಡಿಗೆ ಪಾವತಿ ಮಾಡುವುದಕ್ಕೆ ಶೇಕಡ 1ರಷ್ಟು ಬಾಡಿಗೆಯ ಮೊತ್ತವನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ.

"ಬ್ಯಾಂಕರ್ಸ್‌ ಬ್ಯಾಂಕ್ 2022 ಪ್ರಶಸ್ತಿ" ಯು ಕೆನರಾ ಬ್ಯಾಂಕ್ ತೆಕ್ಕೆಗೆ ಸೇರಿದೆ. ಜಾಗತಿಕ ಬ್ಯಾಂಕಿಂಗ್ ಸಮ್ಮಿಟ್‌ನಲ್ಲಿ ಕೆನರಾ ಬ್ಯಾಂಕ್‌ಗೆ ಬ್ಯಾಂಕರ್ಸ್‌ ಬ್ಯಾಂಕ್ ಎಂಬ ಪ್ರಶಸ್ತಿ ಲಭ್ಯವಾಗಿದೆ ಎಂದು ಕೆನರಾ ಬ್ಯಾಂಕ್ ಶುಕ್ರವಾರ ಘೋಷಣೆ ಮಾಡಿದೆ. ಇನ್ನು ಕೆನರಾ ಬ್ಯಾಂಕ್ ಈಗಾಗಲೇ ಭಾರತದಲ್ಲಿ ಉತ್ತಮ ಬ್ಯಾಂಕ್ ಎಂದನಿಸಿಕೊಂಡಿದೆ. ಲಂಡನ್‌ನಲ್ಲಿ ನವೆಂಬರ್‌ 29ರಿಂದ ಡಿಸೆಂಬರ್ 1, 2022ರವರೆಗೆ ನಡೆದ ಜಾಗತಿಕ ಬ್ಯಾಂಕಿಂಗ್ ಸಮ್ಮಿಟ್‌ನಲ್ಲಿ ಕೆನರಾ ಬ್ಯಾಂಕ್‌ನ ಎಂಡಿ, ಸಿಇಒ ಎಲ್‌ ವಿ ಪ್ರಭಾಕರ್ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

English summary

Canara Bank hikes daily debit card transaction limit for ATM withdrawals, Details in Kannada

Canara Bank has announced a revision in its daily debit card transaction limit for ATM cash withdrawals, Point of Sale (POS) and e-commerce transactions for its customers with immediate effect.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X