For Quick Alerts
ALLOW NOTIFICATIONS  
For Daily Alerts

ರಿಫಂಡ್‌ಗಾಗಿ 15 ದಿನದೊಳಗೆ ಐಟಿಆರ್ ದೃಢೀಕರಿಸಿ: ಐಟಿ ಇಲಾಖೆ ಇಮೇಲ್

|

ನೀವು ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ರಿಟರ್ನ್ (ITR) ಅನ್ನು ಸಲ್ಲಿಸಿದ್ದರೆ, ಅಂದರೆ, FY 2021-22 ಕ್ಕೆ ಆದಾಯ ತೆರಿಗೆ ಮರುಪಾವತಿಗಾಗಿ ಕ್ಲೈಮ್‌ ಮಾಡಿದ್ದರೆ ಅದನ್ನು ಖಚಿತಪಡಿಸುವ ಇಮೇಲ್ ನಿಮಗೆ ಲಭ್ಯವಾಗಲಿದೆ. ನೀವು 15 ದಿನದ ಒಳಗೆ ಈ ದೃಢೀಕರಣ ಮಾಡಲು ಆದಾಯ ತೆರಿಗೆ ಇಲಾಖೆಯು ಹಲವಾರು ತೆರಿಗೆದಾರರಿಗೆ ಇಮೇಲ್ ಮೂಲಕ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ಹಲವಾರು ಐಟಿಆರ್ ಫೈಲ್ ಮಾಡಿದವರಿಗೆ ಈ ಬಗ್ಗೆ ಇಮೇಲ್ ಮಾಡಿದೆ. ತಮ್ಮ ಐಟಿಆರ್‌ಗಳಲ್ಲಿ ಆದಾಯ ತೆರಿಗೆ ಮರುಪಾವತಿಯನ್ನು ಕ್ಲೈಮ್ ಮಾಡಿದ ವೈಯಕ್ತಿಕ ತೆರಿಗೆದಾರರು ತಾವು ಸಲ್ಲಿಕೆ ಮಾಡಿದ ಐಟಿಆರ್ ಸರಿಯಾಗಿದೆಯೇ ಮತ್ತು ವಾಸ್ತವವಾಗಿ ಆದಾಯ ತೆರಿಗೆ ಮರುಪಾವತಿ ಇದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಇಮೇಲ್‌ನಲ್ಲಿ ತಿಳಿಸಿದೆ. ಇದಲ್ಲದೆ, ಇಮೇಲ್ ಸ್ವೀಕರಿಸಿದ 15 ದಿನಗಳಲ್ಲಿ ದೃಢೀಕರಣವನ್ನು ಮಾಡಬೇಕ ಎಂದು ಹೇಳಿದೆ.

ಈ ಕಾರ್ಯ ಮಾಡದಿದ್ದರೆ 2022-23ರ ಐಟಿಆರ್ ಅಮಾನ್ಯ!ಈ ಕಾರ್ಯ ಮಾಡದಿದ್ದರೆ 2022-23ರ ಐಟಿಆರ್ ಅಮಾನ್ಯ!

ಈ 15 ದಿನಗಳ ಗಡುವಿನ ಒಳಗೆ ದೃಢೀಕರಣವನ್ನು ಮಾಡದಿದ್ದರೆ, ಏನಾಗುತ್ತದೆ ಎಂದು ಇಮೇಲ್‌ನಲ್ಲಿ ಉಲ್ಲೇಖ ಮಾಡಿಲ್ಲ. ಆದರೆ ದೃಢೀಕರಣ ಮಾಡದಿದ್ದರೆ ನೋಟಿಸ್ ಲಭ್ಯವಾಗಲಿದೆ ಎಂದು ಈ ಬಗ್ಗೆ ತಿಳಿದಿರುವ ಚಾರ್ಟಡ್ ಅಕೌಂಟೆಡ್‌ಗಳು ಹೇಳಿದ್ದಾರೆ.

 ರಿಫಂಡ್‌ಗಾಗಿ 15 ದಿನದೊಳಗೆ ಐಟಿಆರ್ ದೃಢೀಕರಿಸಿ: ಐಟಿ ಇಲಾಖೆ ಇಮೇಲ್

FY2021-22 ಕ್ಕೆ ಸಲ್ಲಿಸಿದ ITR ಗಳಲ್ಲಿ ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ಕಡಿತವನ್ನು (ಗಳನ್ನು) ಕ್ಲೈಮ್ ಮಾಡಿದ ಅನೇಕ ವೈಯಕ್ತಿಕ ತೆರಿಗೆದಾರರಿಗೆ ಇಮೇಲ್‌ಗಳನ್ನು ಕಳುಹಿಸಲಾಗುತ್ತಿದೆ. ಆದರೆ ಫಾರ್ಮ್ 16 ರಲ್ಲಿ ಕಡಿತದ ಬಗ್ಗೆ ಉಲ್ಲೇಖವಿಲ್ಲ. ಇನ್ನು ತಮ್ಮ ಒಟ್ಟು ಆದಾಯವು ಹಿಂದಿನ ವರ್ಷಕ್ಕಿಂತ ಕಡಿಮೆ ಇದ್ದರೂ ಇಮೇಲ್‌ಗಳು ಲಭ್ಯವಾಗುತ್ತಿದೆ. ಇನ್ನು ಆದಾಯ ತೆರಿಗೆ ಇಲಾಖೆಯು ಯಾವ ರೀತಿ ಇಮೇಲ್ ಅನ್ನು ಕಳುಹಿಸಿದೆ ಎಂಬ ಬಗ್ಗೆ ಮಾಹಿತಿ ಈ ಕೆಳಗಿದೆ. ಮುಂದೆ ಓದಿ....

ಆದಾಯ ತೆರಿಗೆ ಇಲಾಖೆ ಕಳುಹಿಸಿದ ಇಮೇಲ್

ಆತ್ಮೀಯ ತೆರಿಗೆದಾರರೇ,

ನೀವು XXXX ನಲ್ಲಿ ಸಲ್ಲಿಸಿರುವ AY-2022-23 ಗಾಗಿ AAXXXXXXAA ಗಾಗಿ ಆದಾಯ ತೆರಿಗೆ ರಿಟರ್ನ್‌ನಲ್ಲಿ ಮರುಪಾವತಿಯ ಕ್ಲೈಮ್ ಮಾಡಲಾಗಿದೆ ಎಂದು ಕಂಡುಬಂದಿದೆ.

ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಆದಾಯ ತೆರಿಗೆ ಇಲಾಖೆಯ ಅಪಾಯ ನಿರ್ವಹಣೆ ಪ್ರಕ್ರಿಯೆಯ ಅಡಿಯಲ್ಲಿ ಗುರುತಿಸಲಾಗಿದೆ. ಈ ಸಂದರ್ಭದಲ್ಲಿ, ರಿಟರ್ನ್‌ನಲ್ಲಿ ಈ ಕೆಳಗಿನ ಹಕ್ಕು(ಗಳು)/ಕಳೆಯುವಿಕೆ(ಗಳು)/ಲೋಪಗಳ ಕುರಿತು ನಿಮ್ಮ ದೃಢೀಕರಣದ ಅಗತ್ಯವಿದೆ.

ಕಾರಣ: ಕಡಿಮೆಯಾದ ಒಟ್ಟು ಆದಾಯದ ನಿಮ್ಮ ರಿಟರ್ನ್ ಅನ್ನು ನೀವು ಪರಿಷ್ಕರಿಸಿರುವುದು ಕಂಡುಬಂದಿದೆ. ಒಟ್ಟು ಆದಾಯದಲ್ಲಿ ಕಡಿಮೆಯಾದ ಆದಾಯದ ಬಗ್ಗೆ ಕ್ಲೈಮ್‌ಗೆ ಸಂಬಂಧಿಸಿದಂತೆ ಮಾಹಿತಿಯು ಸರಿಯಾಗಿದೆಯೇ ಎಂದು ಪರಿಶೀಲಿಸಿ.

ಕೊನೆ ದಿನಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?ಕೊನೆ ದಿನಕ್ಕೂ ಮುನ್ನ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

ಐಟಿಆರ್ ದೃಢೀಕರಣ ಮಾಡುವುದು ಹೇಗೆ?

ಒಮ್ಮೆ ನೀವು ಇಮೇಲ್ ಅನ್ನು ಸ್ವೀಕರಿಸಿದ ನಂತರ, ವೈಯಕ್ತಿಕ ತೆರಿಗೆದಾರರು ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಮ್ಮ ಖಾತೆಗೆ ಲಾಗಿನ್ ಆಗಿ ಐಟಿಆರ್ ದೃಢೀಕರಣ ಮಾಡಬೇಕಾಗುತ್ತದೆ.

ಹಂತ 1: 'Pending Actions' ಟ್ಯಾಬ್ ಮೇಲೆ ಕ್ಲಿಕ್ ಮಾಡಿ 'Worklist' ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 2: 'Response for Refund Confirmation' ಆಯ್ಕೆ ಮಾಡಿಕೊಳ್ಳಿ

ಇಲ್ಲಿ ನಿಮಗೆ ಎರಡು ಆಯ್ಕೆಗಳು ಲಭ್ಯವಾಗಲಿದೆ.

a) ಆದಾಯ ತೆರಿಗೆ ರಿಟರ್ನ್ ಸರಿಯಾಗಿದೆ
b) ಕ್ಲೈಮ್ ಮಾಡಿದ ಮರುಪಾವತಿಯ ಮೊತ್ತವನ್ನು ಸರಿಪಡಿಸಲು ನಾನು ನನ್ನ ಆದಾಯದ ರಿಟರ್ನ್ ಅನ್ನು ಪರಿಷ್ಕರಿಸುತ್ತೇನೆ.

ನಿಮ್ಮ ಐಟಿಆರ್‌ನಲ್ಲಿ ನೀವು ನಮೂದಿಸಿರುವ ಮಾಹಿತಿಯು ಸರಿಯಾಗಿದ್ದರೆ, ತೆರಿಗೆದಾರರು ಎ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಐಟಿಆರ್‌ನಲ್ಲಿ ಪರಿಷ್ಕರಣೆ ಅಥವಾ ಬದಲಾವಣೆ ಮಾಡಲಿದ್ದರೆ ಬಿ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

English summary

Confirm your ITR in 15 days to get refund Says IT Dept To Taxpayers

ITR filing: Confirm your ITR in 15 days to get refund: income tax dept mails many taxpayers.
Story first published: Saturday, August 20, 2022, 16:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X