For Quick Alerts
ALLOW NOTIFICATIONS  
For Daily Alerts

ಹಣ ಬೇಕಾಗಿದೆಯೇ? ಪಿಎಫ್ ಖಾತೆಯಿಂದ 1 ಲಕ್ಷ ರೂ. ಪಡೆಯಬಹುದು!, ಇಲ್ಲಿದೆ ವಿಧಾನ

|

ಕೊರೊನಾವೈರಸ್‌ ರೂಪಾಂತರ ಓಮಿಕ್ರಾನ್‌ ಜಗತ್ತಿನಲ್ಲಿ ಈಗ ಅತೀ ವೇಗವಾಗಿ ಹರುತ್ತಿದೆ. ಇದು ಕೊರೊನಾ ವೈರಸ್‌ ಸೋಂಕಿನ ಅತ್ಯಂತ್ರ ಪ್ರಬಳವಾದ ರೂಪಾಂತರವಾಗಿದೆ. ಭಾರತದಲ್ಲಿ ಈ ರೂಪಾಂತರ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಓಮಿಕ್ರಾನ್‌ ಇನ್ನಷ್ಟು ಅಧಿಕವಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಹಲವಾರು ಕುಟುಂಬಗಳಿಗೆ ಹಣದ ಅವಶ್ಯಕತೆ ಉಂಟಾಗಲಿದೆ.

ಕೊರೊನಾ ವೈರಸ್‌ ಸೋಂಕು ಆರ್ಥಿಕತೆಯ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. ಈ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರಿಗೆ ನೌಕರರ ಭವಿಷ್ಯ ನಿಧಿಯು ಆಸರೆಯಾಗಲಿದೆ. ಹೌದು ನಿಮ್ಮ ಈ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ಅಥವಾ ಇಪಿಎಫ್‌ಒ ಒಂದು ಪರಿಹಾರವನ್ನು ತಂದಿದೆ.

 ಇಪಿಎಫ್‌ಒ ಸೇರ್ಪಡೆ ಚುರುಕು: ಸೆ. 15.41 ಲಕ್ಷಕ್ಕೂ ಅಧಿಕ ಚಂದಾದಾರಿಕೆ! ಇಪಿಎಫ್‌ಒ ಸೇರ್ಪಡೆ ಚುರುಕು: ಸೆ. 15.41 ಲಕ್ಷಕ್ಕೂ ಅಧಿಕ ಚಂದಾದಾರಿಕೆ!

ನೌಕರರ ಭವಿಷ್ಯ ನಿಧಿ ಸಂಸ್ಥೆ ಈಗ ತನ್ನ ಸದಸ್ಯರಿಗೆ ವೈದ್ಯಕೀಯ ಮುಂಗಡ ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ. ಸದಸ್ಯರು ಆಸ್ಪತ್ರೆಗೆ ಸೇರಿಸುವುದು ಸೇರಿದಂತೆ ವೈದ್ಯಕೀಯ ತುರ್ತುಸ್ಥಿತಿಗಾಗಿ ಮುಂಗಡವಾಗಿ 1 ಲಕ್ಷ ರೂಪಾಯಿಯನ್ನು ಪಡೆಯಬಹುದು. ಯಾವುದೇ ದಾಖಲೆಗಳು ನೀಡದೆಯೇ ಇದನ್ನು ಮಾಡಬಹುದು ಎಂದು ಸುತ್ತೋಲೆಯು ಹೇಳಿದೆ.

 ಹಣ ಬೇಕಾಗಿದೆಯೇ? ಪಿಎಫ್ ಖಾತೆಯಿಂದ 1 ಲಕ್ಷ ರೂ. ಪಡೆಯಬಹುದು!

"ಉದ್ಯೋಗಿಗಳ ಕುಟುಂಬದ ಸದಸ್ಯರು ಕೋವಿಡ್‌ ಕಾರಣದಿಂದಾಗಿ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ಆಸ್ಪತ್ರೆಯ ಖರ್ಚು ನಿರ್ವಹಣೆ ಮಾಡಲು ಸಾಧ್ಯವಾಗದಿದ್ದಾಗ ಆಸ್ಪತ್ರೆಯಲ್ಲಿ ಅಂತಹ ಗಂಭೀರ ಒಳರೋಗಿಗಳ ಚಿಕಿತ್ಸೆಗಾಗಿ ಮುಂಗಡ ಸೌಲಭ್ಯವನ್ನು ಸುಲಭ ಮಾಡುವ ಅವಶ್ಯಕತೆ ಇದೆ. ಕೆಲವೊಮ್ಮೆ ಉದ್ಯೋಗಿಗೆ ಸಂಬಂಧಿಸಿದ ರೋಗಿಗಳು ಐಸಿಯುನಲ್ಲಿರಬಹುದು. ಆದ್ದರಿಂದಾಗಿ ಈ ಕೋವಿಡ್ ಸೇರಿದಂತೆ ಗಂಭೀರವಾದ ಮಾರಣಾಂತಿಕ ಅನಾರೋಗ್ಯದ ಕಾರಣ ತುರ್ತು ಆಸ್ಪತ್ರೆಗೆ ವೈದ್ಯಕೀಯ ಮುಂಗಡವನ್ನು ನೀಡಲು ಈ ಕೆಳಗಿನ ವಿಧಾನವನ್ನು ಅಳವಡಿಸಿಕೊಳ್ಳಬಹುದು," ಎಂದು ಸುತ್ತೋಲೆ ಹೇಳಿದೆ. ಹಾಗಾದರೆ ಇಪಿಎಫ್‌ಒ ಮುಂಗಡವನ್ನು ನಾವು ಹೇಗೆ ಪಡೆಯುವುದು ಎಂದು ತಿಳಿಯಲು ಮುಂದೆ ಓದಿ...

ಡಿ.31ರ ಬಳಿಕವೂ ಇಪಿಎಫ್‌ಗೆ ನಾಮಿನಿ ಸೇರಿಸಬಹುದು: ಹೇಗೆ?ಡಿ.31ರ ಬಳಿಕವೂ ಇಪಿಎಫ್‌ಗೆ ನಾಮಿನಿ ಸೇರಿಸಬಹುದು: ಹೇಗೆ?

ಇಪಿಎಫ್‌ಒ ವೈದ್ಯಕೀಯ ಮುಂಗಡವನ್ನು ಹೇಗೆ ಪಡೆಯುವುದು?

* ನಿಯಮಗಳ ಪ್ರಕಾರ ರೋಗಿಯನ್ನು ಸರ್ಕಾರಿ/ಪಿಎಸ್‌ಯು/ಸಿಜಿಎಚ್‌ಎಸ್ ಎಂಪನೆಲ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಆಗಿದ್ದರೆ, ನಿಯಮಗಳಲ್ಲಿ ಸಡಿಲಿಕೆ ಮಾಡಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮನವಿ ಮಾಡಬಹುದು.
* ಮುಂಗಡವನ್ನು ಪಡೆಯಲು ಉದ್ಯೋಗಿ ಅಥವಾ ಕುಟುಂಬದ ಸದಸ್ಯರು ರೋಗಿಯ ಪರವಾಗಿ ಪತ್ರವನ್ನು ಸಲ್ಲಿಸಬೇಕು. ಇದಕ್ಕೆ ವೆಚ್ಚದ ಅಂದಾಜು ಅಗತ್ಯವಿಲ್ಲ, ಆದರೆ ಇದರಲ್ಲಿ ಆಸ್ಪತ್ರೆ ಮತ್ತು ರೋಗಿಯ ವಿವರಗಳನ್ನು ಹೊಂದಿರಬೇಕು.
* 1 ಲಕ್ಷದವರೆಗಿನ ವೈದ್ಯಕೀಯ ಮುಂಗಡವನ್ನು ರೋಗಿಯ ಅಥವಾ ಕುಟುಂಬದ ಸದಸ್ಯರಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಂಜೂರು ಮಾಡಬಹುದು ಅಥವಾ ಚಿಕಿತ್ಸಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ನೇರವಾಗಿ ಆಸ್ಪತ್ರೆಯ ಖಾತೆಗಳಿಗೆ ಠೇವಣಿ ಮಾಡಬಹುದು.
* ಚಿಕಿತ್ಸೆಯ ವೆಚ್ಚವು ರೂ 1 ಲಕ್ಷ ಮುಂಗಡವನ್ನು ಮೀರಿದರೆ, ಇಪಿಎಫ್‌ಒ ವಿತ್‌ಡ್ರಾ ನಿಯಮಗಳ ಅಡಿಯಲ್ಲಿ ಬರುವವರೆಗೆ ಹೆಚ್ಚುವರಿ ಮುಂಗಡವನ್ನು ಪಡೆಯಬಹುದು. ಚಿಕಿತ್ಸೆಗಾಗಿ ಅಂದಾಜು ರಶೀದಿಯ ನಂತರ ಮಾತ್ರ ಈ ಮುಂಗಡ ಹಣವನ್ನು ನೀಡಲಾಗುತ್ತದೆ.
* ಉದ್ಯೋಗಿ ಅಥವಾ ಕುಟುಂಬದ ಸದಸ್ಯರು ಆಸ್ಪತ್ರೆಯ ಬಿಲ್ ಅನ್ನು ಡಿಸ್ಚಾರ್ಜ್ ಮಾಡಿದ ನಂತರ 45 ದಿನಗಳಲ್ಲಿ ಸಲ್ಲಿಸಬೇಕು. ಇಪಿಎಫ್ ನಿಯಮಗಳ ಪ್ರಕಾರ ಆಸ್ಪತ್ರೆಯ ಅಂತಿಮ ಬಿಲ್‌ಗೆ ಸರಿಹೊಂದುವಂತೆ ವೈದ್ಯಕೀಯ ಮುಂಗಡವನ್ನು ಸರಿಹೊಂದಿಸಲಾಗುತ್ತದೆ.

ಈ ನಡುವೆ ದೇಶದಲ್ಲಿ ಇಪಿಎಫ್‌ಒ ಸೇರ್ಪಡೆ ಚುರುಕಾಗಿದೆ. ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒನಲ್ಲಿ ಚಂದಾದಾರಿಕೆ ಸೇರ್ಪಡೆ ಅಧಿಕ ಆಗಿದೆ. 2021 ರ ಸೆಪ್ಟೆಂಬರ್‌ನಲ್ಲಿ 15.41 ಲಕ್ಷ ಮಂದಿ ಚಂದಾದಾರರನ್ನು ಇಪಿಎಫ್‌ಒಗೆ ಸೇರ್ಪಡೆ ಮಾಡಲಾಗಿದೆ. ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆಯ ನಂತರ ವೇತನದಾರರ ಸೇರ್ಪಡೆಯು ಅಧಿಕವಾಗುತ್ತಿದೆ ಎಂಬುವುದು ಇಲ್ಲಿ ಬಿಂಬಿತವಾಗಿದೆ. "ಸೆಪ್ಟೆಂಬರ್ 2021 ರಲ್ಲಿ ಇಪಿಎಫ್‌ಒ ಸುಮಾರು 15.41 ಲಕ್ಷ ನಿವ್ವಳ ಚಂದಾದಾರರನ್ನು ಸೇರಿಸಿದೆ ಎಂದು ಇಪಿಎಫ್‌ಒನ ತಾತ್ಕಾಲಿಕ ವೇತನದಾರರ ದತ್ತಾಂಶವು ತೋರಿಸುತ್ತದೆ," ಎಂದು ನೌಕರರ ಭವಿಷ್ಯ ನಿಧಿ ಸಂಸ್ಥೆ ತಿಳಿಸಿದೆ.

English summary

Covid surge: Need Cash? You Can Withdraw Rs 1 lakh From PF Account. Here's How

Covid surge: Need Cash? You Can Withdraw Rs 1 lakh From PF Account. Here's How.
Story first published: Thursday, January 13, 2022, 19:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X