For Quick Alerts
ALLOW NOTIFICATIONS  
For Daily Alerts

ಕ್ರೆಡಿಟ್‌ ಕಾರ್ಡ್‌ ಬಿಲ್‌: ಪ್ರತಿ ಬಾರಿ ಕನಿಷ್ಠ ಮೊತ್ತ ಪಾವತಿಸಿದರೆ, ಭಾರೀ ಬೆಲೆ ತೆರಬೇಕಾದೀತು..!

|

ಅನೇಕ ಕ್ರೆಡಿಟ್ ಕಾರ್ಡ್ ಬಳಕೆದಾರರು ಕನಿಷ್ಟ ಮೊತ್ತವನ್ನು ಪಾವತಿಸುವ ಅಭ್ಯಾಸವನ್ನು ಹೊಂದಿದ್ದಾರೆ. ಒಂದು ಬಾರಿ, ಅದು ಉತ್ತಮವಾಗಿರುತ್ತದೆ. ಆದರೆ ಇದೇ ರೀತಿ ಪ್ರತಿ ತಿಂಗಳ ಅಭ್ಯಾಸವಾಗಿದ್ದರೆ, ಅದು ಆರ್ಥಿಕ ಅಪರಾಧ ಅಂದರೆ ತಪ್ಪಾಗಲಾರದು.

ಹೌದು, ವ್ಯವಹಾರದ ದೃಷ್ಟಿಕೋನದಿಂದ, ಬಾಕಿ ಇರುವ ಕನಿಷ್ಠ ಮೊತ್ತ ( MAD -minimum amount due) ಎಂಬ ಪರಿಕಲ್ಪನೆಯು ಕಾರ್ಡ್ ಕಂಪನಿಗಳಿಗೆ ಒಳ್ಳೆಯದು. ಆದರೆ ಸಾಲಗಾರನ ದೃಷ್ಟಿಕೋನದಿಂದ, ಇದು ಒಂದು ಆರ್ಥಿಕ ಬಲೆ.

ಕನಿಷ್ಠ ಬಾಕಿ ಮೊತ್ತ ಪಾವತಿಸಿದರೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ
 

ಕನಿಷ್ಠ ಬಾಕಿ ಮೊತ್ತ ಪಾವತಿಸಿದರೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ

ನಿಮ್ಮ ಕ್ರೆಡಿಟ್ ಕಾರ್ಡ್‌ಗಾಗಿ ನೀವು 10,000 ರೂಗಳನ್ನು ಖರ್ಚು ಮಾಡಿದಾಗ ಮತ್ತು ಕೇವಲ 500 ರೂ.ಗಳ ಕಾರಣದಿಂದಾಗಿ ಕನಿಷ್ಠ ಮೊತ್ತವನ್ನು ಪಾವತಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ ಎಂದು ಬಿಲ್ ಹೇಳಿದಾಗ, ನೀವು ಆ ಆಯ್ಕೆಗೆ ಹೋಗಬಹುದು. ಆದರೆ ಈ ಆಯ್ಕೆಯು ಕೇವಲ ಕಷ್ಟದ ಸಮಯದಲ್ಲಿ ಒಂದು ಬಾರಿ ಸರಿ. ಆದರೆ ಅದನ್ನೇ ಪ್ರವೃತ್ತಿಯಾಗಿಸಿಕೊಂಡರೆ ಹೆಚ್ಚಿನ ಹಣ ಕಳೆದುಕೊಳ್ಳುತ್ತೀರಿ.

ಶೇಕಡಾ 5ರಷ್ಟು ಕನಿಷ್ಠ ಬಾಕಿ ಆಯ್ಕೆ ಇರುವುದು

ಶೇಕಡಾ 5ರಷ್ಟು ಕನಿಷ್ಠ ಬಾಕಿ ಆಯ್ಕೆ ಇರುವುದು

ಬಾಕಿ ಇರುವ ಕನಿಷ್ಟ ಮೊತ್ತ ಎನ್ನುವುದು ಕಾರ್ಡ್ ಕಂಪೆನಿಗಳು ಒದಗಿಸುವ ಸೌಲಭ್ಯವಾಗಿದ್ದು, ಅದು ಪೂರ್ಣ ಬಿಲ್ ಪಾವತಿಸುವ ಬದಲು ಕನಿಷ್ಠ ಮೊತ್ತವನ್ನು (ಸುಮಾರು ಶೇಕಡಾ 5 ) ಪಾವತಿಸುವ ಆಯ್ಕೆಯನ್ನು ನಿಮಗೆ ನೀಡುತ್ತದೆ (ಒಟ್ಟು ಮೊತ್ತದಲ್ಲಿ). ಅಂದರೆ ಬಾಕಿ ಇರುವ ಒಟ್ಟು ಮೊತ್ತ 20,000 ರೂ. ಆಗಿದ್ದರೆ, ನಿಮ್ಮ ಬಾಕಿ ಇರುವ ಕನಿಷ್ಟ ಮೊತ್ತ ಅದರ ಶೇಕಡಾ 5, ಅಂದರೆ 1000 ರೂ.

ದುಬಾರಿ ತಪ್ಪನ್ನು ಮಾಡದಿರಿ..!

ದುಬಾರಿ ತಪ್ಪನ್ನು ಮಾಡದಿರಿ..!

ಕ್ರೆಡಿಟ್ ಕಾರ್ಡ್‌ ಬಿಲ್‌, ಪೂರ್ಣ ಪಾವತಿಸದೇ ಕನಿಷ್ಟ ಮೊತ್ತವನ್ನಷ್ಟೇ ಪಾವತಿಸುತ್ತಿದ್ದರೆ, ನೀವು ಹೆಚ್ಚಿನ ಬಡ್ಡಿ ದರಗಳನ್ನು ಆಕರ್ಷಿಸಿದಂತೆ. ತಿಂಗಳಿಗೆ ಸುಮಾರು ಶೇಕಡಾ 3 ರಿಂದ 4 ರಷ್ಟು ಬಡ್ಡಿ ಪಾವತಿಸಬೇಕು. ಅದು ವರ್ಷಕ್ಕೆ ಶೇಕಡಾ 40 ಕ್ಕಿಂತ ಹೆಚ್ಚು!

ಬಡ್ಡಿ ರಹಿತ ಅವಧಿ 40-45 ದಿನಗಳು
 

ಬಡ್ಡಿ ರಹಿತ ಅವಧಿ 40-45 ದಿನಗಳು

ಉದಾಹರಣೆಗೆ ಪ್ರತಿ ತಿಂಗಳು ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ 15ನೇ ತಾರೀಖಿನಂದು ಜನರೇಟ್‌ ಆಗುತ್ತಿದ್ದರೆ, ಮುಂದಿನ ತಿಂಗಳು 5ನೇ ತಾರೀಖಿನೊಳಗೆ ಬಿಲ್ ಕಟ್ಟಬೇಕಾಗುತ್ತದೆ. ನೀವು ಸೆಪ್ಟೆಂಬರ್ 17ನೇ ತಾರೀಖು 10,000 ಖರ್ಚು ಮಾಡಿದರೆ, ಅಕ್ಟೋಬರ್ 15ರಂದು ಬಿಲ್ ಬರುತ್ತದೆ. ನವೆಂಬರ್ 5ರವರೆಗೆ ಬಡ್ಡಿ ರಹಿತ ಅವಧಿಗಳನ್ನು ಪಡೆಯುತ್ತೀರಿ (ಸುಮಾರು 40-45 ದಿನಗಳು)

ಆದರೆ ಈ ಅವಧಿಯನ್ನು ಮೀರಿದರೆ ನೀವು ವಿಳಂಬ ಶುಲ್ಕದ ಜೊತೆಗೆ ಹೆಚ್ಚುವರಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಬಾಕಿ ಇರುವ ಕನಿಷ್ಟ ಮೊತ್ತವನ್ನು ಪ್ರತಿ ಬಾರಿ ಪಾವತಿಸಿದರೆ ನೀವು ಬಡ್ಡಿಯನ್ನು ಪಾವತಿಸಬೇಕಾಗಿಲ್ಲ ಎಂಬ ತಪ್ಪು ಅಭಿಪ್ರಾಯಕ್ಕೆ ಒಳಗಾಗಬೇಡಿ. ನಿಮ್ಮ ಕನಿಷ್ಠ ಮೊತ್ತವನ್ನು ನೀವು ಪಾವತಿಸಬೇಕಾದರೂ ಅಥವಾ ಬಾಕಿ ಇರುವ ಮೊತ್ತಕ್ಕಿಂತ ಕಡಿಮೆ ಏನಾದರೂ ಪಾವತಿಸಿದರೂ ಬಡ್ಡಿ ಅನ್ವಯವಾಗುತ್ತದೆ.

ನೀವು ನಿಜವಾದ ಹಣದ ಬಿಕ್ಕಟ್ಟನ್ನು ಹೊಂದಿರುವಾಗ ಕನಿಷ್ಠ ಮೊತ್ತವನ್ನು ಒಮ್ಮೆ ಪಾವತಿಸುವುದು ಉತ್ತಮ. ಆದರೆ ಅದನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ಕ್ರೆಡಿಟ್ ಕಾರ್ಡ್ ಒಂದು ಅನುಕೂಲವೇ ಹೊರತು ಆದಾಯದ ಮೂಲವಲ್ಲ. ಆದ್ದರಿಂದ, ಅದನ್ನು ಬುದ್ಧಿವಂತಿಕೆಯಿಂದ ಬಳಸಿ.

English summary

Credit Card Payment: Paying Minimum due on Credit Card attracts heavy Interest on Outstanding

Many credit card users have the habit of paying only the minimum amount due. Once in a while, it is fine. But if this becomes a habit, then it’s attracts heavy interest on outstanding
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X