For Quick Alerts
ALLOW NOTIFICATIONS  
For Daily Alerts

ದೀಪಾವಳಿ ಉಡುಗೊರೆಗೆ ತೆರಿಗೆ: ಹೇಗೆ, ಎಷ್ಟು ವಿಧಿಸಲಾಗುತ್ತೆ?

|

ದೀಪಾವಳಿಯು ಮನೆ ಮನಗಳಲ್ಲಿ ಸಂತಸವನ್ನು, ಸಂಭ್ರಮವನ್ನು ಹರಡುವ ಹಬ್ಬವಾಗಿದೆ. ಈಗಾಗಲೇ ದೀಪಾವಳಿಗೆ ಎಲ್ಲ ತಯಾರಿ ನಡೆಯುತ್ತಿದೆ. ಈ ಹಬ್ಬದಲ್ಲಿ ಜನರು ತಮ್ಮ ಸಂಬಂಧಿಕರಿಗೆ, ಸ್ನೇಹಿತರಿಗೆ ಉಡುಗೊರೆ, ಸಿಹಿ ತಿಂಡಿಗಳನ್ನು ನೀಡುವುದು ಸಹಜ. ಆದರೆ ನೀವು ನೀಡುವ ಉಡುಗೊರೆ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂಬುವುದು ನಿಮಗೆ ತಿಳಿದಿದೆಯೇ?

ಇನ್ನು ಉದ್ಯೋಗ ಸ್ಥಳದಲ್ಲಿ ಉದ್ಯೋಗಿಗಳಿಗೆ ಉಡುಗೊರೆ, ಬೋನಸ್, ಸಿಹಿತಿಂಡಿಗಳನ್ನು ನೀಡಲಾಗುತ್ತದೆ. ಇವೆಲ್ಲದಕ್ಕೂ ಆದಾಯ ತೆರಿಗೆ ಕಾಯ್ದೆ ಪ್ರಕಾರವಾಗಿ ತೆರಿಗೆಯನ್ನು ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಪ್ರಕಾರ ಉಡುಗೊರೆಯ ಮೌಲ್ಯ ಹಾಗೂ ಯಾರಿಂದ ಪಡೆದಿದ್ದಾರೆ ಎಂಬ ಆಧಾರದಲ್ಲಿ ತೆರಿಗೆಯನ್ನು ವಿಧಿಸಲಾಗುತ್ತದೆ.

ದೀಪಾವಳಿ ಧಮಾಕ: ಉದ್ಯೋಗಿಗಳಿಗೆ ಕಾರು, ಬೈಕು ಉಡುಗೊರೆ ನೀಡಿದ ಮಾಲೀಕ!ದೀಪಾವಳಿ ಧಮಾಕ: ಉದ್ಯೋಗಿಗಳಿಗೆ ಕಾರು, ಬೈಕು ಉಡುಗೊರೆ ನೀಡಿದ ಮಾಲೀಕ!

ಅಷ್ಟಕ್ಕೂ ನೀವು ಪಡೆಯುವ ಎಲ್ಲ ಉಡುಗೊರೆಗೆ ತೆರಿಗೆಯನ್ನು ವಿಧಿಸಲಾಗುವುದಿಲ್ಲ. ಅದರಲ್ಲೂ ಕೆಲವು ನಿಯಮಗಳು ಇದೆ. ಯಾವ ಉಡುಗೊರೆಯು ತೆರಿಗೆಗೆ ಒಳಪಡದಿರುವ ಉಡುಗೊರೆಯ ಪಟ್ಟಿಯಲ್ಲಿ ಇರುತ್ತದೆಯೋ ಆ ಉಡುಗೊರೆಯ ಮೇಲೆ ಮಾತ್ರ ತೆರಿಗೆಯನ್ನು ವಿಧಿಸಲಾಗುತ್ತದೆ. ಹಾಗಾದರೆ ಎಷ್ಟು ಮೊತ್ತಕ್ಕೆ ತೆರಿಗೆಯನ್ನು ವಿಧಿಸಲಾಗುತ್ತದೆ, ಎಷ್ಟು ವಿಧಿಸಲಾಗುತ್ತದೆ, ಯಾರಿಂದ ಉಡುಗೊರೆ ಪಡೆದರೆ ತೆರಿಗೆಗೆ ಒಳಪಡುವುದಿಲ್ಲ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಎಷ್ಟು ಮೊತ್ತದ ಉಡುಗೊರೆಗೆ ತೆರಿಗೆ ವಿಧಿಸಲಾಗುತ್ತದೆ?

ಎಷ್ಟು ಮೊತ್ತದ ಉಡುಗೊರೆಗೆ ತೆರಿಗೆ ವಿಧಿಸಲಾಗುತ್ತದೆ?

ನೀವು ವಾರ್ಷಿಕವಾಗಿ 50 ಸಾವಿರ ರೂಪಾಯಿಗಿಂತ ಅಧಿಕ ಮೌಲ್ಯದ ಉಡುಗೊರೆಯನ್ನು ಪಡೆದರೆ ಅದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56(2) ಅಡಿಯಲ್ಲಿ ತೆರಿಗೆಗೆ ಒಳಪಡುತ್ತದೆ. ಈ ಉಡುಗೊರೆಯು ನಗದಾಗಲಿ ಅಥವಾ ಬೇರೆ ರೂಪದಲ್ಲಿ ಇರಲಿ, 50 ಸಾವಿರ ರೂಪಾಯಿಗಿಂತ ಅಧಿಕ ಮೌಲ್ಯದಾದ್ದಲ್ಲಿ ತೆರಿಗೆ ವಿಧಿಸಲಾಗುತ್ತದೆ.

 ತೆರಿಗೆ ವಿನಾಯಿತಿಯೂ ಇದೆ!

ತೆರಿಗೆ ವಿನಾಯಿತಿಯೂ ಇದೆ!

ನೀವು ಈ ಉಡುಗೊರೆಯನ್ನು ಹತ್ತಿರದ ಸಂಬಂಧಿಕರಿಂದ ಪಡೆದಿದ್ದರೆ ತೆರಿಗೆ ವಿನಾಯಿತಿಯು ಲಭ್ಯವಾಗುತ್ತದೆ. ವ್ಯಕ್ತಿಯ ಪತ್ನಿ ಅಥವಾ ಪತಿ, ವ್ಯಕ್ತಿಯ ಸಹೋದರ ಅಥವಾ ಸಹೋದರಿ, ವ್ಯಕ್ತಿಯ ಪತ್ನಿ/ಪತಿಯ ಸಹೋದರ ಅಥವಾ ಸಹೋದರಿ, ಪೋಷಕರ ಸಹೋದರ ಅಥವಾ ಸಹೋದರಿ, ವ್ಯಕ್ತಿಯ ಯಾವುದೇ ರಕ್ತಸಂಬಂಧಿ ಅಥವಾ ವಂಶಸ್ಥರು, ವ್ಯಕ್ತಿಯ ಪತಿ/ಪತ್ನಿಯ ರಕ್ತಸಂಬಂಧಿ, ನಿಮ್ಮ ಅಥವಾ ನಿಮ್ಮ ಸಂಗಾತಿಯ ಸಹೋದರ/ಸಹೋದರಿಯ ಸಂಗಾತಿ ಉಡುಗೊರೆಯನ್ನು ನೀಡಿದರೆ ಅದು ತೆರಿಗೆ ವಿನಾಯಿತಿಗೆ ಒಳಪಡುತ್ತದೆ. ಸ್ನೇಹಿತರು ನೀಡಿದ ಉಡುಗೊರೆ 50 ಸಾವಿರ ರೂಪಾಯಿಗಿಂತ ಅಧಿಕ ಮೌಲ್ಯದಾದರೆ ತೆರಿಗೆಗೆ ಒಳಪಡುತ್ತದೆ.

 ಉಡುಗೊರೆ ಎರಡು ವಿಭಾಗದಲ್ಲಿ ವಿಂಗಡನೆ
 

ಉಡುಗೊರೆ ಎರಡು ವಿಭಾಗದಲ್ಲಿ ವಿಂಗಡನೆ

ನಗದು, ಡ್ರಾಫ್ಟ್ ಅಥವಾ ಚೆಕ್ ರೂಪದಲ್ಲಿ ನೀಡಲಾಗುವ ಉಡುಗೊರೆಯನ್ನು ಮಾನೆಟರಿ ಗಿಫ್ಟ್ ಎಂದು ಪರಿಗಣಿಸಲಾಗುತ್ತದೆ. ಅದು ಒಂದು ಹಣಕಾಸು ವರ್ಷದಲ್ಲಿ 50 ಸಾವಿರ ರೂಪಾಯಿಗಿಂತ ಅಧಿಕ ಮೌಲ್ಯವನ್ನು ದಾಟಿದರೆ ಅದಕ್ಕೆ ತೆರಿಗೆಯನ್ನು ವಿಧಿಸಲಾಗುತ್ತದೆ. ಇನ್ನು ಭೂಮಿ ಅಥವಾ ಮನೆ, ಬಿಲ್ಡಿಂಗ್ ರೂಪದಲ್ಲಿ ಉಡುಗೊರೆಯನ್ನು ನೀಡಿದರೆ ಅದನ್ನು ವರ್ಗಾವಣೆ ಮಾಡಲಾಗದ ಆಸ್ತಿ ಎಂದು ಪರಿಗಣಿಸಲಾಗುತ್ತದೆ. ಸ್ಟಾಪ್ ಡ್ಯೂಟಿ 50 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ ಈ ಉಡುಗೊರೆ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಈ ನಡುವೆ ಜ್ಯುವೆಲ್ಲರಿ, ಪೇಟಿಂಗ್, ಡ್ರಾಯಿಂಗ್, ಷೇರು/ಸೆಕ್ಯೂರಿಟಿ, ಸಂಗ್ರಹ ಮಾಡಿದ ವಸ್ತುಗಳು ವರ್ಗಾವಣೆ ಮಾಡಬಹುದಾದ ಸೊತ್ತು ಎಂದು ಪರಿಗಣಿಸಲಾಗುತ್ತದೆ. ಇದರ ಮೌಲ್ಯ ಕೂಡಾ 50 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ ತೆರಿಗೆ ವಿಧಿಸಲಾಗುತ್ತದೆ. ಇನ್ನು ಮೋಟರು ಕಾರುಗಳ ಮೇಲೆ ತೆರಿಗೆಯನ್ನು ವಿಧಿಸಲಾಗುವುದಿಲ್ಲ.

 ಹಣವನ್ನು ಉಡುಗೊರೆಯಾಗಿ ನೀಡಿದರೆ ಉತ್ತಮವೇ?

ಹಣವನ್ನು ಉಡುಗೊರೆಯಾಗಿ ನೀಡಿದರೆ ಉತ್ತಮವೇ?

ನಾವು ಹಣವನ್ನು ದೀಪಾವಳಿಯ ಉಡುಗೊರೆಯಾಗಿ ನೀಡುವುದು ಸರಿಯೇ, ತಪ್ಪೇ ಎಂಬುವುದು ಆ ವ್ಯಕ್ತಿಯ ಮೇಲೆ ನಿರ್ಧರಿತವಾಗುತ್ತದೆ. ನೀವು ಹಣವನ್ನು ನೀಡುವುದಾದರೆ ಆ ವ್ಯಕ್ತಿಗೆ ಹಣದ ಅಗತ್ಯವನ್ನು ಗಮನಕ್ಕೆ ತೆಗೆದುಕೊಂಡು ಉಡುಗೊರೆಯಾಗಿ ಹಣವನ್ನು ನೀಡಬಹುದು. ಅದು ಕೂಡಾ ನೀವು ಹಣವನ್ನು ಉಡುಗೊರೆಯಾಗಿ ನೀಡುವಾಗ ಅದು ತೆರಿಗೆಗೆ ಒಳಪಡದಂತೆ ನೀಡಿದರೆ ಆ ಹಣವು ಸಂಪೂರ್ಣವಾಗಿ ಆ ವ್ಯಕ್ತಿಗೆ ಉಪಯೋಗಿಸಲು ಸಾಧ್ಯವಾಗುತ್ತದೆ.

ದೀಪಾವಳಿ 2022: ನಿಮ್ಮ ಕುಟುಂಬಕ್ಕೆ ಈ ಗಿಫ್ಟ್ಸ್ ನೀಡಿದೀಪಾವಳಿ 2022: ನಿಮ್ಮ ಕುಟುಂಬಕ್ಕೆ ಈ ಗಿಫ್ಟ್ಸ್ ನೀಡಿ

English summary

Deepavali 2022: How Much Taxed On Diwali Gifts Received, Check Details

Deepavali 2022: How Much Taxed On Diwali Gifts Received, Check Details in kannada. explained here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X