For Quick Alerts
ALLOW NOTIFICATIONS  
For Daily Alerts

ಯಶೋಗಾಥೆ- 03: ಮಹಾಲಸಾ ಅವರ 'ಮಂಡಲ' ಕಲೆಯ ಪುಟ್ಟ ಪಯಣ!

|

ಬೆಂಗಳೂರು, ಜೂ. 6 : ಆ ಮಹಿಳೆ ಹತ್ತು ವರ್ಷ ನಾನಾ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಕೆಲಸಕ್ಕೆ ಗುಡ್ ಬೈ ಹೇಳಿದ್ದ ಆ ಮಹಿಳೆ ಕೊರೊನಾ ಕಾಲದಲ್ಲಿ 'ಮಂಡಲ' ಕಲೆ ಕಲಿತರು. ಆ ಮಹಿಳೆಗೆ ಪ್ರತಿಭೆಗೆ ವೇದಿಕೆ ಕಲ್ಪಿಸಿದ್ದು ಧೃತಿ ಮಹಿಳಾ ಮಾರುಕಟ್ಟೆ. ಇದೀಗ ಮಂಡಲ ಕಲೆ ಮಾರುವ ಜತೆಗೆ ಕ್ಲಾಸ್ ಮಾಡುವ ಸ್ವಂತ ಕಾಯಕ ಶುರು ಮಾಡಿದ್ದಾರೆ.

ಕಲೆಯಿಂದ ಬದುಕು ಕಟ್ಟಿಕೊಳ್ಳುವ ಕಲೆ: ಅವರ ಹೆಸರು ಮಹಾಲಸ. ಮೂಲತಃ ಹೊನ್ನಾವರದವರು. ಪ್ರತಿಷ್ಠಿತ ಕಂಪನಿಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಹತ್ತು ವರ್ಷ ಕೆಲಸ ಮಾಡಿದ್ದರು. ಕೈತುಂಬಾ ಕೆಲಸ ಇದ್ದರು. ಕೊರೊನಾ ಸಂದರ್ಭದಲ್ಲಿ ಕೆಲಸ ಕೊಟ್ಟರು. ಈ ಅವಧಿಯಲ್ಲಿ ಏನಾದರೂ ಮಾಡುವ ಪಣ ತೊಟ್ಟ ಮಹಾಲಸಾ, ಭಾರತೀಯ ಸಂಸ್ಕೃತಿಯ ಅತಿ ಪುರಾತನ ಚಾಣಾಕ್ಷ ಕಲೆ ಮಂಡಲ ಬಗ್ಗೆ ಕಲಿತರು. ಕಲೆಯನ್ನು ಕಲಿತು ಒಂದಷ್ಟು ಜನರಿಗೆ ಕಲಿಸುವ ಉದ್ದೇಶದಿಂದ ಕಲಿತಿದ್ದರು. ಮುಂದೆ ಓದಿ...

ಯಶೋಗಾಥೆ: 2 ವರ್ಷದಲ್ಲಿ 200 ಮಹಿಳಾ ಉದ್ಯಮಿ ಸೃಷ್ಟಿಸಿದ 'ಧೃತಿ'ಯಶೋಗಾಥೆ: 2 ವರ್ಷದಲ್ಲಿ 200 ಮಹಿಳಾ ಉದ್ಯಮಿ ಸೃಷ್ಟಿಸಿದ 'ಧೃತಿ'

ಸಂಪಾದನೆ ಮಾಡಬೇಕೆಂಬ ಸಣ್ಣ ಉದ್ದೇಶವಿರಲಿಲ್ಲ

ಸಂಪಾದನೆ ಮಾಡಬೇಕೆಂಬ ಸಣ್ಣ ಉದ್ದೇಶವಿರಲಿಲ್ಲ

ಕಲೆಯಿಂದ ಸಂಪಾದನೆ ಮಾಡಬೇಕೆಂಬ ಸಣ್ಣ ಉದ್ದೇಶವೂ ಅವರ ಮನಸಿನಲ್ಲಿ ಇರಲಿಲ್ಲ. ಐದು ತಿಂಗಳ ಹಿಂದೆ ಧೃತಿ ಮಹಿಳಾ ಮಾರುಕಟ್ಟೆ ಬಳಗ ಸೇರಿದ್ದಾರೆ. ಮಹಾಲಸ ರಚಿಸಿದ ಮಂಡಲ ಕಲಾಕೃತಿಗಳು ಇದೀಗ ಮಾರಾಟವಾಗುತ್ತಿದೆ. ಜತೆಗೆ ಮಂಡಲ ಕಲೆಯನ್ನು ಆನ್‌ಲೈನ್‌ನಲ್ಲಿ ಕಲಿಸುವ ಕಾಯಕವನ್ನು ಶುರು ಮಾಡಿದ್ದಾರೆ.

ಯಶೋಗಾಥೆ 2: ಅಮೆರಿಕಕ್ಕೆ ಅರಳು ಸಂಡಿಗೆ ರಫ್ತು ಮಾಡುವ ಕುಮಾರಸ್ವಾಮಿ ಲೇಔಟ್ ಮಲ್ಲಿಕಾ!ಯಶೋಗಾಥೆ 2: ಅಮೆರಿಕಕ್ಕೆ ಅರಳು ಸಂಡಿಗೆ ರಫ್ತು ಮಾಡುವ ಕುಮಾರಸ್ವಾಮಿ ಲೇಔಟ್ ಮಲ್ಲಿಕಾ!

ಏಕಾಗ್ರತೆ ಹೆಚ್ಚಿಸುವ ಕಲೆಯನ್ನು ಕಲಿತಿದ್ದೇ ರೋಚಕ

ಏಕಾಗ್ರತೆ ಹೆಚ್ಚಿಸುವ ಕಲೆಯನ್ನು ಕಲಿತಿದ್ದೇ ರೋಚಕ

ಕೊರೋನಾ ಸಮಯದಲ್ಲಿ ಎರಡು ವರ್ಷ ಸುಮ್ಮನೆ ಮನೆಯಲ್ಲಿ ಕೂರುವ ಬದಲು ಏನಾದರೂ ಕಲಿಯುವ ಆಸಕ್ತಿ ಬೆಳೆಯಿತು. ನಾನು ಭಾರತೀಯ ಪುರಾತನ ಕಲೆಗಳಲ್ಲಿ ಒಂದಾದ ಅತಿ ಕಠಿಣ ಕಲೆ ಮಂಡಲ ಕಲಿತೆ. ಮಕ್ಕಳ ಏಕಾಗ್ರತೆ ಬೆಳೆಸುವಲ್ಲಿ ಈ ಕಲೆ ತುಂಬಾ ಮಹತ್ವ ವಹಿಸುತ್ತದೆ. ಕ್ಲೇ ಮತ್ತು ಆಕ್ರಾಲಿಕ್ ಬಳಿಸಿ ಮಂಡಲ ಕಲೆ ಕಲಿತು ಕಲಾ ಕೃತಿಗಳನ್ನು ತಯಾರಿಸಿದೆ. ಇದರಿಂದ ಹಣ ಮಾಡಬೇಕು ಎಂಬ ಉದ್ದೇಶ ನನಗೆ ಇರಲಿಲ್ಲ. ನಾನು ಕಲಿತು ಒಂದಷ್ಟು ಮಂದಿಗೆ ಕಲಿಸುವ ಉದ್ದೇಶದಿಂದ ಕಲಿತೆ. ಐದು ತಿಂಗಳ ಹಿಂದೆ ನನಗೆ ಧೃತಿ ಮಹಿಳಾ ಮಾರುಕಟ್ಟೆ ಬಗ್ಗೆ ಗೊತ್ತಾಯಿತು. ಐದು ತಿಂಗಳ ಹಿಂದೆ ಅಲ್ಲಿ ಸದಸ್ಯತ್ವ ಪಡೆದೆ. ಈ ಕಲೆಯೇ ನನಗೊಂದು ಹೊಸ ಭರವಸೆ ಮೂಡಿಸಿದೆ ಎನ್ನುತ್ತಾರೆ ಮಹಾಲಸ.

ಕ್ಲಾಸಿಗೂ ಡಿಮ್ಯಾಂಡ್

ಕ್ಲಾಸಿಗೂ ಡಿಮ್ಯಾಂಡ್

ಮಂಡಲ ಕಲೆ ಕಲಿತು ಒಂದಷ್ಟು ಕಲಾಕೃತಿಗಳನ್ನು ರಚಿಸಿದೆ. ನಾಮಫಲಕಗಳನ್ನು ರಚಿಸಿದೆ. ಅವನ್ನು ಧೃತಿ ಮಹಿಳಾ ಮಾರುಕಟ್ಟೆಯಲ್ಲಿ ಮಾರಾಟದ ಪೋಸ್ಟ್ ಹಾಕಿದೆ. ಒಂದಷ್ಟು ಕಲಾಕೃತಿಗಳು ಮಾರಾಟವಾದವು. ನನಗೆ ತುಂಬಾ ಖುಷಿ ಆಯಿತು. ಇದೀಗ ಮೂರ್ನಾಲ್ಕು ಮಂದಿ ಮಂಡಲ ಕಲೆ ಕಳಿಸುವಂತೆ ಬೇಡಿಕೆ ಇಟ್ಟರು. ಅವರಿಗೆ ಆನ್‌ಲೈನ್ ಮೂಲಕ ಮಂಡಲ ಕಲೆ ಕಲಿಸುತ್ತಿದ್ದೇನೆ. ನನಗೆ ಇದರಲ್ಲಿ ಹಣ ಮಾಡುವ ಉದ್ದೇಶ ಇಲ್ಲದ ಕಾರಣ ನಾಲ್ಕು ತಿಂಗಳ ಕಲಿಕೆಗೆ ತಿಂಗಳಿಗೆ ತಲಾ 500 ರೂ. ನಂತೆ ಶುಲ್ಕ ಪಡೆಯುತ್ತಿದ್ದೇನೆ. ಇನ್ನಷ್ಟು ಮಂದಿ ನನ್ನಿಂದ ತರಬೇತಿ ಪಡೆಯುವ ಭರವಸೆಯಿದೆ. ಆರ್ಡರ್ ಕೊಟ್ಟರೆ ಅದರ ಡಿಸೈನ್ ಆಧಾರದ ಮೇಲೆ ಮಂಡಲ ಕಲೆಯ ಕಲಾಕೃತಿಗಳನ್ನು ರಚಿಸಿಕೊಡುತ್ತೇನೆ. ಜತೆಗೆ ತರಬೇತಿಯನ್ನು ಕೊಡಲು ಅರಂಭಿಸಿದ್ದೇನೆ. ಧೃತಿಯಿಂದ ನನಗೆ ಮೂರು ತಿಂಗಳಿನಿಂದ ಆರ್ಡರ್ ಬರುತ್ತಿದೆ ಎಂದು ಮಹಾಲಸ ತನ್ನ ಕಲೆ ಪುಟ್ಟ ಉದ್ಯಮದತ್ತ ಪಯಣ ಹೊರಟಿರುವ ಬಗ್ಗೆ ವಿವರಿಸಿದರು.

ಸ್ವಂತ ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶ

ಸ್ವಂತ ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶ

ಹೆಣ್ಣು ಮಕ್ಕಳು ಮನೆಯಲ್ಲಿದ್ದು ಏನಾದರೂ ಮಾಡಬೇಕು ಎಂದು ಕನಸು ಕಾಣುವರಿಗೆ ಧೃತಿ ಒಳ್ಳೆಯ ಮಾರುಕಟ್ಟೆ. ಪುಟ್ಟದಾಗಿ ಆರಂಭಿಸಿದರು ಒಂದು ದಿನ ಫಲ ಕೊಡುತ್ತದೆ. ನನ್ನ ಪುಟ್ಟ ಯಶಸ್ಸಿಗೆ ಧೃತಿಯೇ ಕಾರಣವಾಗಿದ್ದು. ಮನೆಯಲ್ಲಿಯೇ ಇದ್ದು ಸ್ವಂತ ಏನಾದರೂ ಮಾಡುವರಿಗೆ ಧೃತಿ ಮಹಿಳಾ ಮಾರುಕಟ್ಟೆ ಉತ್ತಮ ವೇದಿಕೆ ಎಂದು ಅಭಿಪ್ರಾಯ ಪಡುತ್ತಾರೆ ಮಹಾಲಸ.

ಮಂಡಲ ಕಲಾಕೃತಿಗಳಿಗೆ ದುಂಬಾ ಬೇಡಿಕೆಯೂ ಇದೆ

ಮಂಡಲ ಕಲಾಕೃತಿಗಳಿಗೆ ದುಂಬಾ ಬೇಡಿಕೆಯೂ ಇದೆ

ಮಂಡಲ ಎಂಬುದು ಒಂದು ಕಲೆ. ಇದನ್ನು ಮಕ್ಕಳು ಕಲಿಯುವುದರಿಂದ ಅವರ ಏಕಾಗ್ರತೆ ಹೆಚ್ಚಳವಾಗುತ್ತದೆ. ಶೂನ್ಯದಿಂದಲೇ ಮಂಡಲ ಕಲೆ ಅರಂಭವಾಗುತ್ತದೆ. ಇದೀಗ ಅದಕ್ಕೆ ನಾನಾ ರೂಪ ನೀಡಲಾಗುತ್ತಿದೆ. ಜಾಮಿಟ್ರಿ ಫಾರ್ಮ್‌ನಲ್ಲಿರುವ ಮಂಡಲ ಕಲಿಕೆಯಿಂದ ಮಕ್ಕಳ ಏಕಾಗ್ರತೆ ಹೆಚ್ಚಳವಾಗುತ್ತದೆ. ನಾನು ಕಲಿತು ಕಲಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ತನ್ನ ಪುಟ್ಟ ಹೆಜ್ಜೆಗಳ ಪಯಣವನ್ನು ಗುಡ್‌ರಿಟರ್ನ್ಸ್ ಜತೆ ಹಂಚಿಕೊಂಡರು.

ಮಹಿಳೆಯರಿಗೆ ಸಹಾಯ ಮಾಡಲೆಂದೇ ಕೊರೋನಾ ಸಂಕಷ್ಟ ಕಾಲದಲ್ಲಿ ಧೃತಿ ಹುಟ್ಟಿಕೊಂಡಿದೆ. 46 ಸಾವಿರ ಮಂದಿ ಧೃತಿ ಫೇಸ್‌ಬುಕ್ ಪೇಜ್ ಸದಸ್ಯರಾಗಿದ್ದಾರೆ. ಇಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ಕಾರಣ ಧೃತಿ ಉತ್ಪನ್ನಗಳಿಗೆ ತನ್ನದೇ ಆದ ಬ್ರಾಂಡ್ ಕ್ರಿಯೇಟ್ ಆಗುತ್ತಿದೆ. ಏನಾದರೂ ಸಾಧನೆ ಮಾಡಲು ಆಸೆಯುಳ್ಳವರ ಧೃತಿ ಬಳಗ ಸೇರಿ ಬದುಕನ್ನು ಪ್ರಯೋಗ ಮಾಡಲು ವಿಫುಲ ಅವಕಾಶಗಳಿವೆ.

 

English summary

Dhruti Mahila marukatte success story: Mahalasa and Mandala Art Journey

Dhruti Mahila marukatte success story: Here is the Success Story of Dhruti woman market - Part 3, Mahalasa Mandal Sculptures getting demand
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X