For Quick Alerts
ALLOW NOTIFICATIONS  
For Daily Alerts

ಯಶೋಗಾಥೆ 2: ಅಮೆರಿಕಕ್ಕೆ ಅರಳು ಸಂಡಿಗೆ ರಫ್ತು ಮಾಡುವ ಕುಮಾರಸ್ವಾಮಿ ಲೇಔಟ್ ಮಲ್ಲಿಕಾ!

|

ಬೆಂಗಳೂರು, ಜೂ. 03: ಏನಾದರೂ ಮಾಡುವ ಛಲವೊಂದಿದ್ದರೆ ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಕುಮಾರಸ್ವಾಮಿ ಲೇಔಟ್ ನ ನಿವಾಸಿ ಮಲ್ಲಿಕಾ ಅವರೇ ಸಾಕ್ಷಿ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿದ್ದ ಬಟ್ಟೆಯಲ್ಲಿ ಮಾಸ್ಕ್ ತಯಾರಿಸಲು ಅರಂಭಿಸಿದ ಮಲ್ಲಿಕಾ ಅಶ್ವತ್ಥ್ ಅವರು ಕರ್ನಾಟಕದ ತಿಂಡಿಗಳನ್ನು ಈಗ ಅಮೆರಿಕ, ಆಸ್ಟ್ರೇಲಿಯಾ, ದುಬೈಗೆ ಕೊರಿಯರ್ ಮಾಡುವ ಮಟ್ಟಿಗೆ ಬೆಳೆದು ನಿಂತಿದ್ದಾರೆ. ಧೃತಿ ಮಹಿಳಾ ಮಾರುಕಟ್ಟೆಯ ಸದಸ್ಯೆ ಮಲ್ಲಿಕಾ ಅಶ್ವಥ್ ಅವರ ಅಮೆರಿಕ ಎಕ್ಸ್ ಪೋರ್ಟ್ ಜರ್ನಿಯ ವಿವರ ಇಲ್ಲಿದೆ.

 

ಮಲ್ಲಿಕಾ ಅಶ್ವತ್ಥ್ ಅವರ ಪರಿಚಯ: ಮಲ್ಲಿಕಾ ಅಶ್ವಥ್ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ನಿವಾಸಿ. ಇಲ್ಲಿನ ವಸಂತಪುರದಲ್ಲಿ ಪತಿ ಜತೆ ನೆಲೆಸಿದ್ದಾರೆ. ಸದ್ಯಕ್ಕೆ ಉಪ್ಪಿನ ಕಾಯಿ, ಹಪ್ಪಳ, ಸಂಡಿಗೆ, ಹರಳು ಸಂಡಿಗೆ, ರೆಡಿಮೇಡ್ ಮಸಾಲೆ ಪದಾರ್ಥಗಳು ಹಾಗೂ ಕಾಫಿ ಪುಡಿಯನ್ನು ಧೃತಿ ಮಹಿಳಾ ಮಾರುಕಟ್ಟೆ ಮೂಲಕ ಅಮೆರಿಕ, ದುಬೈ, ಆಸ್ಟ್ರೇಲಿಯಾಗೆ ಕೊರಿಯರ್ ಮಾಡುತ್ತಾರೆ. ಮಾತ್ರವಲ್ಲ, ಫುಡ್ ಫೆಸ್ಟಿವಲ್‌ಗಳಲ್ಲಿ ಭಾಗವಹಿಸುವ ಮಲ್ಲಿಕಾ ಅಶ್ವಥ್ ಬೆಂಗಳೂರು ದಕ್ಷಿಣ ಭಾಗದಲ್ಲಿ ಅವರೇ ಕೊರಿಯರ್ ಸೇವೆ ಕಲ್ಪಿಸಿದ್ದಾರೆ. ಮಾಸಿಕ 1 ಲಕ್ಷ ರೂ. ನಷ್ಟು ವಹಿವಾಟು ನಡೆಸುತ್ತಿದ್ದಾರೆ. ಮಲ್ಲಿಕಾ ಅಶ್ವಥ್ ಯಶೋಗಾಥೆ ಅವರ ಮಾತಲ್ಲೇ ಕೇಳಿ.

ಯಶೋಗಾಥೆ: ಹೆಣ್ಣು ಮಕ್ಕಳ ಸ್ವಂತ ಉದ್ಯಮಕ್ಕೆ ಯಶೋಗಾಥೆ: ಹೆಣ್ಣು ಮಕ್ಕಳ ಸ್ವಂತ ಉದ್ಯಮಕ್ಕೆ "ಧೃತಿ" ಮುಕ್ತ ವೇದಿಕೆ

ಹಳೇ ಬಟ್ಟೆಯಲ್ಲಿ ಮಾಸ್ಕ್ ತಯಾರಿಸಲು ಹೋಗಿ!

ಹಳೇ ಬಟ್ಟೆಯಲ್ಲಿ ಮಾಸ್ಕ್ ತಯಾರಿಸಲು ಹೋಗಿ!

ಕೊರೊನಾದಿಂದ ಲಾಕ್‌ಡೌನ್ ಅಗಿತ್ತು. ಮನೆಯಲ್ಲಿ ಸುಮ್ಮನೆ ಕೂರೋಕೆ ಬೇಜಾರ್ ಆಗಿತ್ತು. ಏನಾದ್ರೂ ಮಾಡಬೇಕು ಎಂದುಕೊಂಡೆ. ಲಾಕ್‌ಡೌನ್‌ನಿಂದ ಏನೂ ವಸ್ತು ಸಿಗುತ್ತಿರಲಿಲ್ಲ. ಮನೆಯಲ್ಲಿರುವ ಹಳೇ ಬಟ್ಟೆಯಿಂದ ಮಾಸ್ಕ್ ಮಾಡಲು ಪ್ರಯತ್ನಿಸಿದೆ. ಮೊದಲು ಕೆಲ ಮಾಸ್ಕ್‌ ತಯಾರಿಸಿ ನಾವು ಬಳಸಿಕೊಂಡೆವು. ನನ್ನ ಪರಿಚಿತರು ನನಗೆ ಕೇಳಿದ್ರು. ಅಮೇಲೆ ಸ್ವೀಯಿಂಗ್ ಮಿಷನ್ ತೆಗೆದುಕೊಂಡು ಮಾಸ್ಕ ತಯಾರು ಮಾಡೋಕೆ ಶುರು ಮಾಡಿದೆ. ಅಗ ಫ್ಯಾಕ್ಟರಿಯವರೊಬ್ಬರು 50 ಮಾಸ್ಕ್ ಕೇಳಿದ್ರು. ತುಂಬಾ ಖುಷಿ ಆಯಿತು. ಇದು ನನ್ನ ಮೊದಲ ಬ್ಯುಜಿನೆಸ್ ಎಂದು ಸ್ವಾವಲಂಬಿ ಬದುಕಿನ ಮೊದಲ ಹೆಜ್ಜೆ ಬಗ್ಗೆ ಮಲ್ಲಿಕಾ ವಿವರಿಸಿದ್ರು.

ನೀನೇ ಇದನ್ನು ಮಾರಾಟ ಮಾಡು
 

ನೀನೇ ಇದನ್ನು ಮಾರಾಟ ಮಾಡು

ನನ್ನ ಸ್ನೇಹಿತರೊಬ್ಬರು ಚಿಕ್ಕಮಗಳೂರಿನಲ್ಲಿದ್ದಾರೆ. ಅವರೇ ಸ್ವಂತ ಕಾಫಿ ತಯಾರಿಸಿ ಮಾರಾಟ ಮಾಡುತ್ತಾರೆ. ಮಂಜುಷಾ ಕಾಫಿ ಅದರ ಹೆಸರು. ಒಮ್ಮೆ ನನಗೆ ಕೊಟ್ಟರು. ತುಂಬಾ ಚೆನ್ನಾಗಿತ್ತು. ನಾಲ್ಕು ಜನರಿಗೆ ನಾನು ಕೊಟ್ಟೆ. ಒಳ್ಳೆಯ ಡಿಮ್ಯಾಂಡ್ ಬಂತು. ನಾನು ಈ ಕಾಫಿ ಬ್ರಾಂಡ್ ಅನ್ನು ಮಾರುವ ಉದ್ದೇಶ ಇರಲಿಲ್ಲ. ಬದಲಿಗೆ ನನ್ನ ಸ್ನೇಹಿತೆಗೆ ನಿಮ್ಮ ಕಾಫಿ ಪೌಡರ್‌ಗೆ ಡಿಮ್ಯಾಂಡ್ ಇದೆ ಅಂತ ಹೇಳಿದೆ. ಅದಕ್ಕೆ ನಿನಗೆ ಅಡ್ರಸ್ ಕೊಡ್ತೇನೆ. ನೀನೇ ಇದನ್ನು ಮಾರಾಟ ಮಾಡು ಎಂದು ಹೇಳಿದರು. ನನ್ನ ಆಪ್ತ ಬಳಗದಲ್ಲಿ ಕಾಫಿ ಪೌಡರ್ ಕೊಟ್ಟೆ. ತುಂಬಾ ಬೇಡಿಕೆ ಬಂತು. ಹೀಗೆ ಮಾಡುತ್ತಿರುವಾಗಲೇ ನನ್ನ ಇನ್ನೊಂದಷ್ಟು ಸ್ನೇಹಿತೆಯರು, ಹಪ್ಪಳ, ಸಂಡಿಗೆ, ಹರಳು ಸಂಡಿಗೆ, ಮಸಾಲೆ ಪದಾರ್ಥಗಳನ್ನು ನನ್ನದನ್ನು ಮಾರಾಟ ಮಾಡಿಕೊಡು ಎಂದರು. ಅಲ್ಲಿಂದ ನನ್ನ ಹೊಸ ಜರ್ನಿ ಶುರುವಾಯಿತು.

ಈಗ ಅಮೆರಿಕಗೆ ಹರಳು ಸಂಡಿಗೆ ಕಳಿಸ್ತೀನಿ..

ಈಗ ಅಮೆರಿಕಗೆ ಹರಳು ಸಂಡಿಗೆ ಕಳಿಸ್ತೀನಿ..

ನಾನು ಯಾವುದೇ ತಿಂಡಿಯನ್ನು ಒಮ್ಮೆ ಟೇಸ್ಟ್ ನೋಡುತ್ತೇನೆ. ಇಷ್ಟವಾದರೆ ಅದನ್ನು ರೆಫರ್ ಮಾಡುತ್ತೇನೆ. ಹೀಗೆ ಉಪ್ಪಿನ ಕಾಯಿ, ಹಪ್ಪಳ, ಸಂಡಿಗೆ, ಹರಳು ಸಂಡಿಗೆ, ಅಕ್ಕಿ ಸಂಡಿಗೆ, ಮೊಸಲು ಮೆಣಸಿನ ಕಾಯಿಯನ್ನು ಮಾರಾಟ ಮಾಡುತ್ತಿದ್ದೆ. ನನ್ನ ಸ್ನೇಹಿತರೊಬ್ಬರು ಧೃತಿ ಮಹಿಳಾ ಮಾರುಕಟ್ಟೆಯಲ್ಲಿ ನಿನ್ನ ಪ್ರಾಡಕ್ಟ್ ಹಾಕು ಅಂತ ಕೇಳಿದ್ರು. ನಾನು ಧೃತಿ ಮಹಿಳಾ ಮಾರುಕಟ್ಟೆಯ ಸದಸ್ಯತ್ವ ಪಡೆದುಕೊಂಡು ನನ್ನ ಪ್ರಾಡಕ್ಟ್ ಹಾಕಿದೆ. ನನಗೆ, ಸ್ಥಳೀಯವಾಗಿಯೂ ಆರ್ಡರ್‌ಗಳು ಬಂದವು. ಧೃತಿ ಆನ್‌ಲೈನ್ ವೇದಿಕೆಯಾಗಿದ್ದರಿಂದ ಅಮೆರಿಕ, ಆಸ್ಟ್ರೇಲಿಯಾ, ದುಬೈನಿಂದ ಕರೆಗಳು ಬಂದಿದ್ದವು. ನಮಗೆ ಅಮೆರಿಕಗೆ ಕಳುಹಿಸಿಕೊಡ್ತೀರಾ ಎಂದು ಕೇಳಿದರು. ನನಗೆ ತುಂಬಾ ಖುಷಿಯಾಯಿತು. ಹರಳು ಸಂಡಿಗೆಗೆ ತುಂಬಾ ಚೆನ್ನಾಗಿದೆ ಎಂಬ ರಿವ್ಯೂ ಬಂತು. ಹೀಗಾಗಿ ಅಮೆರಿಕ, ಆಸ್ಟ್ರೇಲಿಯಾ, ದುಬೈಗೆ ನಾನು ಹರಳು ಸಂಡಿಗೆ, ಕಾಫಿ, ಮಸಾಲೆ ಪದಾರ್ಥಗಳನ್ನು ರವಾನೆ ಮಾಡುತ್ತಿದ್ದೇನೆ. ನನ್ನ ಉತ್ಪನ್ನಗಳಿಗೆ ಹೊರ ದೇಶದಲ್ಲಿ ವೇದಿಕೆ ಸಿಕ್ಕಿದ್ದು ಧೃತಿ ಮಹಿಳಾ ಮಾರುಕಟ್ಟೆಯಿಂದ ಎಂದು ಮಲ್ಲಿಕಾ ಅಶ್ವಥ್ ತನ್ನ ಜರ್ನಿ ನೆನಪಿಸಿಕೊಂಡರು.

ನನ್ನ ಲೋಕಲ್ ಡೆಲಿವರಿ :

ನನ್ನ ಲೋಕಲ್ ಡೆಲಿವರಿ :

ತಾಳ್ಮೆ ಮತ್ತು ಗುಣಮಟ್ಟವೇ ಯಶಸ್ಸು: ಇನ್ನು ನಾನು ನನ್ನ ಪತಿ ಅಶ್ವಥ್ ಕೊಟ್ಟ ಬೆಂಬಲ ಮರೆಯೋಕೆ ಆಗಲ್ಲ. ಬೆಂಗಳೂರು ದಕ್ಷಿಣ ಭಾಗದಲ್ಲಿ ಅರ್ಡರ್ ಬಂದ್ರೆ ನನ್ನ ಪತಿಯೇ ಹೋಗಿ ಕೊಟ್ಟು ಬರುತ್ತಾರೆ. ಬೇರೆಯಿಂದ ಆರ್ಡರ್ ಬಂದ್ರೆ ಕೊರಿಯರ್ ಅಥವಾ ಪೊಸ್ಟಲ್‌ನಲ್ಲಿ ಕಳಿಸುತ್ತೇವೆ. ಮೊದಲು ಕೊರಿಯರ್ ಮಾಡಿದ್ದಾಗ ನನಗೆ ಪ್ಯಾಕಿಂಗ್ ಬಗ್ಗೆ ಅರಿವು ಇರಲಿಲ್ಲ. ಎಲ್ಲವೂ ಪುಡಿ ಪುಡಿಯಾಗಿದ್ದವು. ಈಗ ಫ್ಲಿಪ್ ಕಾರ್ಟ್ ಗಿಂತಲೂ ಚೆನ್ನಾಗಿ ಪ್ಯಾಕಿಂಗ್ ಮಾಡಿ ಕಳಿಸುತ್ತೇನೆ ಒಂದು ದೂರು ಇಲ್ಲ. ಇದಕ್ಕೆ ಕಾರಣವಾಗಿದ್ದು ಧೃತಿ ಮಾರುಕಟ್ಟೆ. ನಾನು ನನ್ನ ಸ್ನೇಹಿತರ ಪ್ರಾಡಕ್ಟ್ ಗಳನ್ನೇ ಗುಣಮಟ್ಟ ನೋಡಿ ಚೆನ್ನಾಗಿದ್ದರೆ ಮಾರಾಟ ಮಡುತ್ತಿದ್ದೇನೆ.

ಪರಿಶ್ರಮಕ್ಕೆ ತಕ್ಕ ಫಲ ಇದ್ದೇ ಇರುತ್ತೆ:

ಪರಿಶ್ರಮಕ್ಕೆ ತಕ್ಕ ಫಲ ಇದ್ದೇ ಇರುತ್ತೆ:

ಪರಿಶ್ರಮಕ್ಕೆ ತಕ್ಕ ಫಲ ಇದ್ದೇ ಇರುತ್ತೆ ಎಂಬುದು ಮಲ್ಲಿಕಾ ಅವರ ನಂಬಿಕೆ. ನಾನು ಮಾಸ್ಕ್ ತಯಾರಿಸಲು ಹೋಗಿ ಇದೀಗ ತಿಂಗಳಿಗೆ ಒಂದು ಲಕ್ಷ ರೂ. ಮೊತ್ತದ ವಹಿವಾಟು ನಡೆಸುತ್ತಿದ್ದೇನೆ. ಇದಕ್ಕೆ ನನಗೆ ಬೆನ್ನಲುಬಾಗಿದ್ದು ಧೃತಿ ಮಹಿಳಾ ಮಾರುಕಟ್ಟೆ. ನಾನು ಸ್ವದೇಶಿ ಮೇಳದಲ್ಲಿ ಸ್ಟಾಲ್ ಹಾಕುತ್ತಾನೆ. ಅಲ್ಲಿಯೂ ಒಳ್ಳೆಯ ವ್ಯಾಪಾರವಾಗುತ್ತಿದೆ. ಇದರ ಜತೆಗೆ ಮನೆ ಬಳಿ ಅನೇಕ ಜನ ಹುಡುಕಿಕೊಂಡು ಬರುತ್ತಿದ್ದಾರೆ. ಅವರಿಗೂ ಕೊಡುತ್ತಿದ್ದೇನೆ. ಅಮೆರಿಕ, ಆಸ್ಟ್ರೇಲಿಯಾ, ದುಬೈನಿಂದಲೂ ಆರ್ಡರ್ ಬರುತ್ತಿದೆ. ಒಂದೇ ಸಲ ಕೆಜಿ ಗಟ್ಟಲೇ ಅವರು ತೆಗೆದುಕೊಳ್ಳುತ್ತಾರೆ. ಸುಮ್ಮನೆ ಕೂರಬಾರದು ಎಂಬ ಆಸೆಯಿಂದ ಮಾಸ್ಕ್ ತಯಾರಿಸಲು ಪ್ರಯತ್ನಿಸಿದ್ದು, ಫುಡ್ ಉತ್ಪನ್ನ ಮಾರುಕಟ್ಟೆಯಲ್ಲಿ ಅಂಬೆಗಾಲಿಡುತ್ತಿದ್ದೇನೆ. ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ನನ್ನದು ಎನ್ನುತ್ತಾರೆ ಮಲ್ಲಿಕಾ.

English summary

Dhruti Mahila Marukatte success story: Mallika Ashwanth became American exporter!

Dhruti Mahila Marukatte Success story: Bengaluru based women exporting Haralu Sandige to America and Australia know more.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X