For Quick Alerts
ALLOW NOTIFICATIONS  
For Daily Alerts

Twitter: ಟ್ವಿಟ್ಟರ್‌ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!

|

ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ತಾನು ವಿಶ್ವದ ಪ್ರಥಮ ಶ್ರೀಮಂತ ವ್ಯಕ್ತಿಯಾಗಿದ್ದಾಗ ಟ್ವಿಟ್ಟರ್ ಅನ್ನು ಖರೀದಿಸಿದ್ದು, ಈಗ ಮೈಕ್ರೋಬ್ಲಾಗಿಂಗ್ ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳು ಉಂಟಾಗಿದೆ. ಕಳೆದ ಹಲವಾರು ತಿಂಗಳುಗಳಿಂದ ಟ್ವಿಟ್ಟರ್ ಅಥವಾ ಅದರ ಮಾಲೀಕ ಎಲಾನ್ ಮಸ್ಕ್ ಬದಲಾವಣೆಗಳ ವಿಚಾರದಲ್ಲೇ ಸುದ್ದಿಯಾಗುತ್ತಿದ್ದಾರೆ. ಈಗ ಟ್ವಿಟ್ಟರ್‌ನ ಗೋಲ್ಡ್ ಬ್ಯಾಡ್ಜ್ ಹೊಂದಿರುವವರಿಗೆ ಒಂದು ಸುದ್ದಿಯಿದೆ.

ಸಂಸ್ಥೆಯಲ್ಲಿ ಇತ್ತೀಚೆಗೆ ಮಾಡಿದ ಪ್ರಮುಖ ಬದಲಾವಣೆಯೆಂದರೆ ಗೋಲ್ಡ್ ಬ್ಯಾಡ್ಜ್ ಶುಲ್ಕದ ಪರಿಷ್ಕರಣೆಯಾಗಿದೆ. ಟ್ವಿಟ್ಟರ್‌ನಲ್ಲಿ ಸಂಸ್ಥೆಗಳು ತಮ್ಮ ಗೋಲ್ಡ್‌ ಬ್ಯಾಡ್ಜ್‌ಗಳನ್ನು ಉಳಿಸಿಕೊಳ್ಳಬೇಕಾದರೆ ಟ್ವಿಟ್ಟರ್‌ಗೆ 1000 ಡಾಲರ್ ಅಂದರೆ ಸರಿಸುಮಾರು 82,233 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ಈ ಮೊತ್ತವನ್ನು ಪಾವತಿ ಮಾಡದಿದ್ದರೆ ಗೋಲ್ಡ್‌ ಬ್ಯಾಡ್ಜ್ ಅನ್ನು ಆ ಸಂಸ್ಥೆಯು ಕಳೆದುಕೊಳ್ಳಲಿದೆ.

ಸಾಮಾಜಿಕ ಮಾಧ್ಯಮ ಸಲಹೆಗಾರ ಮತ್ ನವರಾ ಈ ಬಗ್ಗೆ ಟ್ವೀಟ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟ್ಟರ್‌ ಬ್ಯುಜಿನೆಜ್‌ಗಳಿಗೆ ಮಾಸಿಕವಾಗಿ 1,000 ಡಾಲರ್, ಸಬ್‌ ಅಕೌಂಟ್‌ಗಳಿಗೆ ಹೆಚ್ಚುವರಿಯಾಗಿ ಮಾಸಿಕವಾಗಿ 50 ಡಾಲರ್ ಅನ್ನು ಪಾವತಿ ಮಾಡಬೇಕಾಗುತ್ತದೆ. ಇದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಪಾವತಿಸಬೇಕಾದ ಮೊತ್ತವಾಗಿದೆ.

 ಟ್ವಿಟ್ಟರ್‌ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಬೇಕಾದ್ರೆ ಇಷ್ಟು ಪಾವತಿಸಿ!

ಗೋಲ್ಡ್ ಬ್ಯಾಡ್ಜ್ ಮೊತ್ತ ಪಾವತಿಸದಿದ್ದರೆ ಏನಾಗುತ್ತದೆ?

ಗೋಲ್ಡ್ ಬ್ಯಾಡ್ಜ್ ಮೊತ್ತವನ್ನು ಒಂದು ಸಂಸ್ಥೆಯು ಪಾವತಿ ಮಾಡದಿದ್ದರೆ ಏನಾಗುತ್ತದೆ ಎಂಬ ಸಂಶಯವು ನಿಮಗೆ ಉಂಟಾಗಬಹುದು. ಅದಕ್ಕೆ ನಾವಿಲ್ಲಿ ಉತ್ತರ ನೀಡಿದ್ದೇವೆ. ಸಾಮಾಜಿಕ ಮಾಧ್ಯಮ ಸಲಹೆಗಾರ ಮತ್ ನವರಾ ಪ್ರಕಾರ ಒಂದು ವೇಳೆ ನೀವು ಗೋಲ್ಡ್ ಬ್ಯಾಡ್ಜ್ ವೆರಿಫಿಕೇಶನ್ ಮೊತ್ತವನ್ನು ಸಂಸ್ಥೆಯ ಪರವಾಗಿ ಪಾವತಿ ಮಾಡದಿದ್ದರೆ, ಟ್ವಿಟ್ಟರ್ ಖಾತೆಯ ವೆರಿಫಿಕೇಶನ್ ಬಣ್ಣವು ಬ್ಲ್ಯೂ ಟಿಕ್‌ಗೆ ಬದಲಾವಣೆಯಾಗಲಿದೆ. ಇದು ಡಿಸೆಂಬರ್‌ ಒಳಗೆ ಆಗಲಿದೆ.

ಆದರೆ ಈ ಫೀಚರ್ ಲಾಂಚ್ ಆಗುವ ದಿನಾಂಕ, ಸ್ಥಳ, ಮತ್ತು ಈ ಫೀಚರ್ ಲಾಂಚ್ ಆಗಬಹುದೇ ಎಂಬ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಟ್ವಿಟ್ಟರ್ ಈವರೆಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. "ನಿಮ್ಮ ಸಂಸ್ಥೆಗೆ ಮತ್ತು ಸಂಘದ ಟ್ವಿಟ್ಟರ್ ಖಾತೆಗೆ ನೀವು ಗೋಲ್ಡ್ ಬ್ಯಾಡ್ಜ್ ಅನ್ನು ಪಡೆಯಲು ಸಾಧ್ಯವಾಗಲಿದೆ," ಎಂದು ಮಾತ್ರ ತಿಳಿಸಿದೆ.

ನೀವು ಚಂದಾದಾರಿಕೆ ಮಾಡಿಕೊಳ್ಳುವಲ್ಲಿ ಆಸಕ್ತಿಯನ್ನು ಹೊಂದಿದ್ದರೆ, ಸಂಸ್ಥೆಯ ಖಾತೆಗೆ ಮಾಸಿಕ 1,000 ಡಾಲರ್ ಮತ್ತು ಖಾತೆ ನಿರ್ವಹಣೆ ಮಾಡುವ ಸಂಸ್ಥೆಗೆ 50 ಡಾಲರ್ ಪಾವತಿಸಬೇಕಾಗುತ್ತದೆ. ಮೊದಲ ತಿಂಗಳು ಉಚಿತವಾಗಿರುತ್ತದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಟ್ವಿಟ್ಟರ್ ಬ್ಲ್ಯೂ ಟಿಕ್ ಮತ್ತೆ ಆರಂಭವಾಗಿದೆ. ಅಂಡ್ರಾಯ್ಡ್ ಬಳಕೆದಾರರಿಗೆ ಮಾಸಿಕ 8 ಡಾಲರ್ ಮತ್ತು ಐಫೋನ್ ಬಳಕೆದಾರರಿಗೆ ಮಾಸಿಕ 11 ಡಾಲರ್ ಬ್ಲ್ಯೂ ಟಿಕ್ ವೆರಿಫಿಕೇಶನ್‌ಗೆ ತಗುಲುವ ವೆಚ್ಚವಾಗಿದೆ.

ಇನ್ನು ಹಳೆಯ ಬ್ಲ್ಯೂ ಟಿಕ್ ಚಂದಾದಾರರು ಶೀಘ್ರವೇ ತನ್ನ ಬ್ಲ್ಯೂ ಟಿಕ್ ಅನ್ನು ಕಳೆದುಕೊಳ್ಳಲಿದ್ದಾರೆ ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ. ಅದು ಅತೀ ಹೆಚ್ಚಾಗಿ ಭ್ರಷ್ಟಾಚಾರದಲ್ಲಿ ತೊಡಗಿದವರ ಖಾತೆಗೆ ಬ್ಲ್ಯೂ ಟಿಕ್ ಲಭ್ಯವಾಗದು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಈ ನಡುವೆ ಟ್ವಿಟ್ಟರ್‌ನ ಬ್ಲ್ಯೂ ಟಿಕ್ ಬಳಕೆಯ ಸಂಖ್ಯೆ ಏರಿಕೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

English summary

Elon Musk’s Twitter to charge businesses around Rs 82,000 for verified gold badges, Know details

One of the most recent changes made by the microblogging platform required companies to pay $1,000 (approx Rs 82,233) each month in order to keep their gold badges.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X