For Quick Alerts
ALLOW NOTIFICATIONS  
For Daily Alerts

EPFO Alert: ಬಡ್ಡಿದರ ಶೇ.8.5ರಿಂದ 8.1ಕ್ಕೆ ಇಳಿಕೆ

|

ಇಪಿಎಫ್‌ಒ 2021-22ರ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ. ಸುಮಾರು ಐದು ಕೋಟಿ ಚಂದಾದಾರರಿಗೆ ಸುಮಾರು ನಾಲ್ಕು ದಶಕಗಳ ಕನಿಷ್ಠ ಶೇಕಡಾ 8.1 ಕ್ಕೆ ಇಳಿಸಲು ಶನಿವಾರ ಇಪಿಎಫ್‌ಒ ನಿರ್ಧಾರ ಮಾಡಿದೆ. ಮೂಲಗಳ ಪ್ರಕಾರ ಇದು ನಾಲ್ಕು ದಶಕಗಳ ಬಳಿಕ ತೀರಾ ಕಡಿಮೆಯಾದ ಬಡ್ಡಿದರವಾಗಿದೆ.

 

ಇದು 1977-78 ರ ನಂತರದ ಅತ್ಯಂತ ಕಡಿಮೆ ದರವಾಗಿದೆ. ಆಗ ಇಪಿಎಫ್ ಬಡ್ಡಿ ದರವು 8 ಶೇಕಡ ಆಗಿತ್ತು. "ಶನಿವಾರ ನಡೆದ ಸಭೆಯಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2021-22ಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮೇಲೆ ಶೇಕಡಾ 8.1 ಬಡ್ಡಿದರವನ್ನು ಒದಗಿಸಲು ನಿರ್ಧರಿಸಿದೆ," ಎಂದು ಮೂಲವೊಂದು ತಿಳಿಸಿದೆ. ಗುವಾಹಟಿಯಲ್ಲಿ ನಡೆದ ಇಪಿಎಫ್‌ಒ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 

23 ಕೋಟಿಗೂ ಅಧಿಕ ಖಾತೆಗಳಿಗೆ ಪಿಎಫ್‌ ಬಡ್ಡಿದರ ಜಮೆ: ಹೀಗೆ ಪರಿಶೀಲಿಸಿ..23 ಕೋಟಿಗೂ ಅಧಿಕ ಖಾತೆಗಳಿಗೆ ಪಿಎಫ್‌ ಬಡ್ಡಿದರ ಜಮೆ: ಹೀಗೆ ಪರಿಶೀಲಿಸಿ..

ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಸ್‌ (ಸಿಬಿಟಿ) ಮಾರ್ಚ್ 2021 ರಲ್ಲಿ 2020-21 ಕ್ಕೆ ಇಪಿಎಫ್‌ ಠೇವಣಿಗಳ ಮೇಲೆ 8.5 ಶೇಕಡಾ ಬಡ್ಡಿ ದರವನ್ನು ನಿಗದಿಪಡಿಸಿದೆ. ಇದನ್ನು ಅಕ್ಟೋಬರ್ 2021 ರಲ್ಲಿ ಹಣಕಾಸು ಸಚಿವರು ಅನುಮೋದಿಸಿದ್ದಾರೆ. 8.5 ಶೇಕಡಾ ಬಡ್ಡಿಯನ್ನು ಪಿಎಫ್‌ ಖಾತೆದಾರರ ಖಾತೆಗೆ ಜಮೆ ಮಾಡಲು ಇಪಿಎಫ್‌ಒ ಕ್ಷೇತ್ರ ಕಚೇರಿಗಳಿಗೆ ಸೂಚನೆ ನೀಡಿತ್ತು.

ಪಿಎಫ್‌ ಅಲರ್ಟ್: ಬಡ್ಡಿದರ ಶೇ.8.5ರಿಂದ 8.1ಕ್ಕೆ ಇಳಿಕೆ

ಇಪಿಎಫ್‌ಒ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು 2019-20ಕ್ಕೆ ಏಳು ವರ್ಷಗಳ ಕನಿಷ್ಠ 8.5 ಪ್ರತಿಶತಕ್ಕೆ ಇಳಿಸಲಾಗಿದೆ. ಈಗ ಇದನ್ನು ಇನ್ನೂ ಕೂಡಾ ಕಡಿಮೆ ಮಾಡಲಾಗಿದೆ. ಸುಮಾರು ನಾಲ್ಕು ದಶಕಗಳ ಬಳಿಕ ಬಡ್ಡಿದರವನ್ನು ಇಷ್ಟು ಮಟ್ಟಕ್ಕೆ ಕಡಿತ ಮಾಡಲಾಗಿದೆ ಎಂದು ಮೂಲಗಳು ಹೇಳಿದೆ.

2018-19 ರಲ್ಲಿ 8.65 ಪ್ರತಿಶತ ಬಡ್ಡಿದರವಿತ್ತು. ಹಣಕಾಸು ಸಚಿವಾಲಯವು ಮಂಡಳಿಯ ನಿರ್ಧಾರವನ್ನು ಅನುಮೋದಿಸಿದ ನಂತರ, ಇಪಿಎಫ್‌ಒ ತನ್ನ ಕ್ಷೇತ್ರ ಕಚೇರಿಗಳಿಗೆ 2021-22 ರ ಹೊಸ ದರದಲ್ಲಿ 8.1 ಶೇಕಡಾ ಬಡ್ಡಿ ಆದಾಯವನ್ನು ಚಂದಾದಾರರ ಖಾತೆಗಳಲ್ಲಿ ಕ್ರೆಡಿಟ್ ಮಾಡಲು ನಿರ್ದೇಶನ ನೀಡಲಿದೆ.

ಪಿಎಫ್‌ ಅಲರ್ಟ್: ಒಂದಕ್ಕಿಂತ ಅಧಿಕ ಪಿಎಫ್‌ ಖಾತೆ ಇದೆಯಾ?, ಇಲ್ಲಿ ಗಮನಿಸಿಪಿಎಫ್‌ ಅಲರ್ಟ್: ಒಂದಕ್ಕಿಂತ ಅಧಿಕ ಪಿಎಫ್‌ ಖಾತೆ ಇದೆಯಾ?, ಇಲ್ಲಿ ಗಮನಿಸಿ

ಕಳೆದ ಡಿಸೆಂಬರ್‌ನಲ್ಲಿ ಬಡ್ಡಿದರ ಜಮೆ ಮಾಡಿದ್ದ ಇಪಿಎಫ್‌ಒ

ಕಳೆದ ಡಿಸೆಂಬರ್‌ನಲ್ಲಿ ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಪಿಎಫ್‌ ಬಡ್ಡಿದರ ಶೇಕಡಾ 8.50 ಜಮೆ ಮಾಡಲಾಗಿದೆ. 2020-21 ರ ಹಣಕಾಸು ವರ್ಷದ ಪಿಎಫ್‌ ಬಡ್ಡಿದರವು ಸುಮಾರು 23.34 ಕೋಟಿ ನೌಕರರ ಭವಿಷ್ಯ ನಿಧಿ ಖಾತೆಗಳಿಗೆ ಜಮೆ ಮಾಡಲಾಗಿದೆ. ನೀವು ನಿಮ್ಮ ಇಪಿಎಫ್‌ ಖಾತೆಯಲ್ಲಿ ಬಡ್ಡಿ ದರವು ಜಮೆ ಆಗಿದೆಯೇ ಎಂದು ತಿಳಿಯಲು ಇಪಿಎಫ್‌ ಖಾತೆಯ ಬ್ಯಾಲೆನ್ಸ್‌ ಅನ್ನು ಪರಿಶೀಲನೆ ಮಾಡುವುದು ಅತೀ ಮುಖ್ಯವಾಗಿದೆ. ಇಪಿಎಫ್‌ ಖಾತೆಯ ಬ್ಯಾಲೆನ್ಸ್‌ ಅನ್ನು ನಾವು ಹಲವಾರು ರೀತಿಗಳಲ್ಲಿ, ವಿವಿಧ ಮೂಲಗಳಿಂದ ಪರಿಶೀಲನೆ ಮಾಡಬಹುದು. ನೀವು ನಿಮ್ಮ ಇಪಿಎಫ್‌ ಖಾತೆಯ ಬ್ಯಾಲೆನ್ಸ್‌ ಅನ್ನು ಎಸ್‌ಎಂಎಸ್‌, ಮಿಸ್ಡ್‌ ಕಾಲ್‌, ಆನ್‌ಲೈನ್‌ ಮೂಲಕ ಪರಿಶೀಲನೆ ಮಾಡಬಹುದಾಗಿದೆ. ಹಾಗೆಯೇ ಉಮಾಂಗ್‌ ಆಪ್‌ ಮೂಲಕವೂ ನೀವು ಬ್ಯಾಲೆನ್ಸ್‌ ಅನ್ನು ಪರಿಶೀಲನೆ ಮಾಡಬಹುದು.

ಕಳೆದ ಕೆಲವು ವರ್ಷಗಳಲ್ಲಿ ಪಿಎಫ್ ಬಡ್ಡಿದರವನ್ನು ಕಡಿತ ಮಾಡುತ್ತಾ ಬರಲಾಗಿದೆ. 2020-2021ರಲ್ಲಿ ಶೇಕಡ 8.50, 2019-2020ರಲ್ಲಿ ಶೇಕಡ 8.50, 2018-2019ರಲ್ಲಿ ಶೇಕಡ 8.65, 2017-2018ರಲ್ಲಿ ಶೇಕಡ 8.55, 2016-2017ರಲ್ಲಿ ಶೇಕಡ 8.65, 2015-2016ರಲ್ಲಿ ಶೇಕಡ 8.80, 2013-2015ರಲ್ಲಿ ಶೇಕಡ 8.75, 2012-2013ರಲ್ಲಿ ಶೇಕಡ 8.50, 2011-2012ರಲ್ಲಿ ಶೇಕಡ 8.25, 2010-2011ರಲ್ಲಿ ಶೇಕಡ 9.50, 2005-2006ರಿಂದ 2009-2010ರಲ್ಲಿ ಶೇಕಡ 8.50 ಬಡ್ಡಿದರವನ್ನು ವಿಧಿಸಲಾಗಿದೆ.

English summary

EPFO interest rate for 2021-22 lowered to 8.1% from 8.5%

EPFO interest rate for 2021-22 lowered to 8.1% from 8.5%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X