For Quick Alerts
ALLOW NOTIFICATIONS  
For Daily Alerts

EPFನಲ್ಲಿ ಹೊಸ ಬದಲಾವಣೆ: ವಿಥ್ ಡ್ರಾ ಮಾಡುವುದು ಸಮಸ್ಯೆಯೇ ಅಲ್ಲ

|

ಕಾರ್ಮಿಕ ಭವಿಷ್ಯನಿಧಿ ಸಂಘಟನೆಯು (ಇಪಿಎಫ್ ಒ) ಪಿಎಫ್ ವರ್ಗಾವಣೆ ಮತ್ತು ಕ್ಲೇಮ್ ಪ್ರಕ್ರಿಯೆಯನ್ನು ಸುಲಲಿತ ಮಾಡಲು ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಯತ್ನಿಸುತ್ತಿದೆ. ಈಚೆಗೆ ಆ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯನ್ನಿಟ್ಟಿದೆ. ಇಪಿಎಫ್ ಒನಿಂದ ಹೊಸ ಆನ್ ಲೈನ್ ಫೀಚರ್ ಆರಂಭಿಸಿದೆ. ಅದರಲ್ಲಿ ಉದ್ಯೋಗಿಗಳು ತಾವು ಕಾರ್ಯ ನಿರ್ವಹಿಸಿದ ಹಿಂದಿನ ಸಂಸ್ಥೆಯಿಂದ ನಿರ್ಗಮಿಸಿದ ದಿನಾಂಕವನ್ನು ಅಪ್ ಡೇಟ್ ಮಾಡಬಹುದು.

ಉದ್ಯೋಗಿಗಳು ಹೊಸ ಕೆಲಸಕ್ಕೆ ಬದಲಾಗುವಾಗ ಆನ್ ಲೈನ್ ನಲ್ಲಿ ವರ್ಗಾವಣೆ ಮಾಡಬಹುದು ಅಥವಾ ಒಂದು ವೇಳೆ ಎರಡು ತಿಂಗಳ ಕಾಲ ನಿರುದ್ಯೋಗಿಗಳಾದಾಗ ಕ್ಲೇಮ್ ಮಾಡಬಹುದು. ಈ ಮುಂಚೆ ಉದ್ಯೋಗದಾತರು ಮಾತ್ರ ಉದ್ಯೋಗಿಯ ನಿರ್ಗಮನದ ಮಾಹಿತಿಯನ್ನು ಇಪಿಎಫ್ ಒನಲ್ಲಿ ಅಪ್ ಡೇಟ್ ಮಾಡಬಹುದಿತ್ತು.

ಹೊಸ ಫೀಚರ್ ನಿಂದ ಉದ್ಯೋಗಿಗಳಿಗೆ ಅನುಕೂಲ

ಹೊಸ ಫೀಚರ್ ನಿಂದ ಉದ್ಯೋಗಿಗಳಿಗೆ ಅನುಕೂಲ

ಇಪಿಎಫ್ ಒನ ಹಲವು ಸೇವೆಗಳು ಉದ್ಯೋಗದಾತರ ಮೇಲೇ ಅವಲಂಬಿತವಾಗಿದ್ದವು. ಉದಾಹರಣೆಗೆ ಉದ್ಯೋಗ ಬದಲಾವಣೆ ಮಾಡಿದರೆ, ಉದ್ಯೋಗದಾತರ ಎರಡು ಕೆಲಸ ಮಾಡುತ್ತಿದ್ದರು. ಉದ್ಯೋಗಿಯ ನಿರ್ಗಮನದ ದಿನಾಂಕವನ್ನು ಇಪಿಎಫ್ ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡುತ್ತಿದ್ದರು. ಹೊಸ ಕೆಲಸಕ್ಕೆ ಸೇರಿದ ದಿನಾಂಕವನ್ನು ಹೊಸ ಉದ್ಯೋಗದಾತರು ಅಪ್ ಡೇಟ್ ಮಾಡುತ್ತಿದ್ದರು. ಆ ಸಮಯದಲ್ಲಿ ಉದ್ಯೋಗದಾತರು ಪೋರ್ಟಲ್ ನಲ್ಲಿ ಸರಿಯಾಗಿ ಅಪ್ ಡೇಟ್ ಮಾಡುತ್ತಿರಲಿಲ್ಲ. ಇದರಿಂದ ಉದ್ಯೋಗಿಗಳಿಗೆ ಸಮಸ್ಯೆಯಾಗುತ್ತಿತ್ತು. ಈಗ ಹೊಸ ಫೀಚರ್ ನಿಂದಾಗಿ ಉದ್ಯೋಗಿಗಳಿಗೆ ಸಹಾಯ ಆಗುತ್ತದೆ ಎಂದು ಇಪಿಎಫ್ ಒ ಅಧಿಕಾರಿಗಳು ತಿಳಿಸಿದ್ದಾರೆ.

ಪಿಎಫ್ ನಿರ್ವಹಣೆ ಸುಲಭ

ಪಿಎಫ್ ನಿರ್ವಹಣೆ ಸುಲಭ

ಎಲ್ಲವನ್ನೂ ಆನ್ ಲೈನ್ ಮಾಡುವ ಮೂಲಕ ಪಿಎಫ್ ನಿರ್ವಹಣೆ ಸುಲಭ ಆಗುವಂತೆ ಚಂದಾದಾರರಿಗೆ ಅನುಕೂಲ ಮಾಡಿಕೊಡುತ್ತಿದೆ. ಈ ಹಿಂದೆ ಕೆಲಸ ಬಿಟ್ಟ ದಿನಾಂಕವನ್ನು ಇಪಿಎಫ್ ಒ ಪೋರ್ಟಲ್ ನಲ್ಲಿ ಅಪ್ ಡೇಟ್ ಮಾಡಲು ಉದ್ಯೋಗದಾತರನ್ನೇ ಅವಲಂಬಿಸಬೇಕಿತ್ತು. ಒಂದು ವೇಳೆ ಜಗಳ ಆಡಿಯೋ ಅಥವಾ ಅಹಿತಕರ ಘಟನೆಯಿಂದಲೋ ಕೆಲಸ ಬಿಟ್ಟಲ್ಲಿ ಉದ್ಯೋಗಿಯ ನಿರ್ಗಮನದ ದಿನಾಂಕ ಸರಿಯಾಗಿ ಅಪ್ ಡೇಟ್ ಆಗುತ್ತಿರಲಿಲ್ಲ. ಉದ್ಯೋಗಿಗೂ ಈ ಹಿಂದಿನ ಸಂಸ್ಥೆಗೆ ಕರೆ ಮಾಡಿ, ಆ ಬಗ್ಗೆ ನೆನಪಿಸುವುದು ಸಹ ಮುಜುಗರದ ಸಂಗತಿ ಆಗಿತ್ತು.

ಕೆಲಸ ಬಿಟ್ಟು ಎರಡು ತಿಂಗಳ ಮೇಲಷ್ಟೇ ಅಪ್ ಡೇಟ್ ಸಾಧ್ಯ

ಕೆಲಸ ಬಿಟ್ಟು ಎರಡು ತಿಂಗಳ ಮೇಲಷ್ಟೇ ಅಪ್ ಡೇಟ್ ಸಾಧ್ಯ

ಆದರೆ, ಈ ಫೀಚರ್ ಗೆ ಸಂಬಂಧಿಸಿದಂತೆ ಉದ್ಯೋಗಿಗಳು ಕೆಲ ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಉದ್ಯೋಗ ನಿರ್ಗಮನದ ದಿನಾಂಕವನ್ನು ಕೆಲಸ ಬಿಟ್ಟು ಎರಡು ತಿಂಗಳ ಮೇಲಷ್ಟೇ ಅಪ್ ಡೇಟ್ ಮಾಡಲು ಸಾಧ್ಯ. ಈ ಹಿಂದಿನ ಉದ್ಯೋಗದಾತರು ಪಿಎಫ್ ಮೊತ್ತವನ್ನು ಹಾಕಿದ ತಿಂಗಳಿನ ಯಾವುದೇ ದಿನಾಂಕವಾದರೂ ಕೆಲಸ ಬಿಟ್ಟ ದಿನ ಆಗಿರಬಹುದು. ಈ ಹೊಸ ವ್ಯವಸ್ಥೆಯು ಆಧಾರ್ ಆಧಾರಿತವಾದ ಒನ್ ಟೈಮ್ ಪಾಸ್ ವರ್ಡ್ ಮೇಲೆ ಅವಲಂಬಿಸಿದೆ. ಯಾರು ತಮ್ಮ ಇಪಿಎಫ್ ಖಾತೆಯನ್ನು ಅಧಾರ್ ಜತೆ ಜೋಡಣೆ ಮಾಡಿರುತ್ತಾರೋ ಅಂಥವರಿಗೆ ಈ ಸವಲತ್ತು ಸಿಗುತ್ತದೆ. ಇದರ ಜತೆಗೆ ಆಧಾರ್ ನಲ್ಲಿ ಅಪ್ ಡೇಟ್ ಆದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಆದ್ದರಿಂದ ಆ ಮೊಬೈಲ್ ನಂಬರ್ ಬಳಿ ಇರಬೇಕು.

ಕೆಲಸ ಬಿಟ್ಟ ದಿನಾಂಕ ಅಪ್ ಡೇಟ್ ಮಾಡುವುದು ಹೇಗೆ?

ಕೆಲಸ ಬಿಟ್ಟ ದಿನಾಂಕ ಅಪ್ ಡೇಟ್ ಮಾಡುವುದು ಹೇಗೆ?

ಹಂತ ಒಂದು: ಇಪಿಎಫ್ ಒ ಪೋರ್ಟಲ್ ಗೆ ತೆರಳಿ, ಯುಎಎನ್ (ಆಧಾರ್ ಸಂಖ್ಯೆ) ಮತ್ತು ಪಾಸ್ ವರ್ಡ್ ಬಳಸಿ ಲಾಗ್ ಇನ್ ಆಗಿ.

ಹಂತ ಎರಡು: "ಮ್ಯಾನೇಜ್" ಎಂಬ ಆಯ್ಕೆಯನ್ನು ಮಾಡಿಕೊಂಡು, "ಮಾರ್ಕ್ ಎಕ್ಸಿಟ್" ಮೇಲೆ ಕ್ಲಿಕ್ ಮಾಡಿ. "ಸೆಲೆಕ್ಟ್ ಎಂಪ್ಲಾಯ್ ಮೆಂಟ್" ಡ್ರಾಪ್ ಡೌನ್ ಮಾಡಿ, ಯುಎಎನ್ ಗೆ ಜೋಡಣೆ ಆಗಿರುವ ಈ ಹಿಂದಿನ ಪಿಎಫ್ ಖಾತೆ ಸಂಖ್ಯೆ ಆಯ್ಕೆ ಮಾಡಿಕೊಳ್ಳಿ.

ಹಂತ ಮೂರು: ದಿನಾಂಕ ಮತ್ತು ನಿರ್ಗಮನದ ಕಾರಣವನ್ನು ನಮೂದಿಸಿ.

ಹಂತ ನಾಲ್ಕು: ಒಟಿಪಿಗಾಗಿ ಕೋರಿಕೆ ಸಲ್ಲಿಸಿ. ಆಧಾರ್ ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ.

ಹಂತ ಐದು: ಒಟಿಪಿ ನಮೂದಿಸಿದ ನಂತರ, ಕೋರಿಕೆಯನ್ನು ಸಲ್ಲಿಸಿ.

ನೆನಪಿನಲ್ಲಿಡಿ: ಒಂದು ಸಲ ನಿರ್ಗಮನದ ದಿನಾಂಕ ಅಪ್ ಡೇಟ್ ಆದ ಮೇಲೆ ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಎಚ್ಚರಿಕೆ ಇರಲಿ.

 

English summary

EPFO New Online Feature Helps Employees To Withdraw Easily

EPFO new online feature helps employees to withdraw amount easily after exit. Here is an explainer.
Story first published: Wednesday, January 22, 2020, 13:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X