For Quick Alerts
ALLOW NOTIFICATIONS  
For Daily Alerts

5, 10 ರೂಪಾಯಿಯ ಹಳೆ ನಾಣ್ಯವನ್ನು 10 ಲಕ್ಷ ರೂ. ಗೆ ಮಾರಿ!

|

ನೀವು ಹಳೆಯ ನಾಣ್ಯಗಳನ್ನು ಸಂಗ್ರಹ ಮಾಡಿಡುವ ಅಥವಾ ವಿರಳವಾಗಿ ಲಭ್ಯವಾಗುವ ವಿಶೇಷ ನಾಣ್ಯಗಳನ್ನು ಸಂಗ್ರಹ ಮಾಡಿಡುವ ಅಭ್ಯಾಸವನ್ನು ಹೊಂದಿದ್ದರೆ, ನಿಮಗೆ ಉತ್ತಮ ಅವಕಾಶವಿದೆ. ನೀವು ಆ ನಾಣ್ಯಗಳನ್ನು ಆನ್‌ಲೈನ್‌ನ ಹರಾಜಿನಲ್ಲಿ ಮಾರಾಟ ಮಾಡಿ ಮನೆಯಲ್ಲಿಯೇ ಕೂತು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಲು ಸಾಧ್ಯವಾಗಲಿದೆ.

ಮಾರುಕಟ್ಟೆಯಲ್ಲಿ ಪ್ರಸ್ತುತ ಹಳೆಯ 1, 2 ರೂಪಾಯಿ ನಾಣ್ಯಗಳಿಗೆ, 1, 2, 5 ರೂಪಾಯಿ ನೋಟುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅಧಿಕವಾಗಿ ಹಳೆಯ ನಾಣ್ಯಗಳ ಸಂಗ್ರಹವನ್ನು ಮಾಡುವವರು ಒಂದು ನಾಣ್ಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ನಿಮ್ಮಲ್ಲಿರುವ ಹಳೆ ನಾಣ್ಯಗಳಲ್ಲಿ ಕೆಲವು ನಾಣ್ಯಗಳ ಮೂಲಕ ನೀವು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ.

ನೋಟಿನ ಮೇಲೆ ಬರೆದಿದ್ದರೆ ಅದು ಅಮಾನ್ಯವೇ, ಆರ್‌ಬಿಐ ನಿಯಮ ತಿಳಿಯಿರಿನೋಟಿನ ಮೇಲೆ ಬರೆದಿದ್ದರೆ ಅದು ಅಮಾನ್ಯವೇ, ಆರ್‌ಬಿಐ ನಿಯಮ ತಿಳಿಯಿರಿ

ನೀವು 10 ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡಲು ಬಯಸಿದರೆ, ನಿಮ್ಮಲ್ಲಿ ನಿರ್ದಿಷ್ಟವಾದ ಹಳೆಯ ನಾಣ್ಯವೇ ಇರಬೇಕಾಗುತ್ತದೆ. 5 ರೂಪಾಯಿ ಮತ್ತು 10 ರೂಪಾಯಿಯ ಮಾತಾ ವೈಷ್ಣೋ ದೇವಿ ನಾಣ್ಯವನ್ನು ಹೊಂದಿದ್ದರೆ 10 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗಲಿದೆ. 2002ರಲ್ಲಿ ಈ ನಾಣ್ಯವನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿದೆ.

5, 10 ರೂಪಾಯಿಯ ಹಳೆ ನಾಣ್ಯವನ್ನು 10 ಲಕ್ಷ ರೂ. ಗೆ ಮಾರಿ!

ಈ ನಾಣ್ಯದಲ್ಲಿ ಮಾತಾ ವೈಷ್ಣೋ ದೇವಿಯ ಫೋಟೋ ಇದೆ ಎಂಬ ಕಾರಣಕ್ಕಾಗಿಯೇ ಈ ನಾಣ್ಯಕ್ಕೆ 10 ಲಕ್ಷ ರೂಪಾಯಿಯನ್ನು ನೀಡಲು ಮುಂದಾಗಿರುವ ಅದೆಷ್ಟೋ ಮಂದಿ ಇದ್ದಾರೆ. ಮಾತಾ ವೈಷ್ಣೋ ದೇವಿಯ ಫೋಟೋ ಇರುವುದಕ್ಕೆ ಈ ನಾಣ್ಯವನ್ನು ಪವಿತ್ರ ನಾಣ್ಯ ಎಂಬ ನಂಬಿಕೆಯನ್ನು ಕೂಡಾ ಕೆಲವು ಭಕ್ತರು ಹೊಂದಿದ್ದಾರೆ. ನೀವು ಆನ್‌ಲೈನ್‌ ಹರಾಜಿನಲ್ಲಿಯೂ ನಾಣ್ಯವನ್ನು ಮಾರಾಟ ಮಾಡಬಹುದು.

ಹೆಚ್ಚು ಬೇಡಿಕೆಯಲ್ಲಿರುವ ನಾಣ್ಯ, ನೋಟುಗಳಿವು

* 1957ರ ಗವರ್ನರ್ ಹೆಚ್‌ಎಂ ಪಾಟೇಲ್ ಸಹಿ ಮಾಡಿದ ರೂಪಾಯಿ 1ರ ನೋಟಿಗೆ ಪ್ರಸ್ತುತ ಬೇಡಿಕೆಯಿದೆ. ಈ ನೋಟಿನ ಸಿರೀಯಲ್ ಸಂಖ್ಯೆಯು 123456 ಆಗಿರಬೇಕು.
* ಒಎನ್‌ಜಿಸಿಯ ಪ್ರಮುಖ ವ್ಯಕ್ತಿಗಳ ಚಿತ್ರವಿರುವ 5 ಮತ್ತು 10 ರೂಪಾಯಿಯ ನಾಣ್ಯಗಳು
* ಆರ್‌ಬಿಐ ಗವರ್ನರ್ ಡಿ ಸುಬ್ಬರಾವ್ ಸಹಿ ಹೊಂದಿರುವ 000 786 ಸಿರಿಯಲ್ ಸಂಖ್ಯೆಯಿರುವ 100 ರೂಪಾಯಿಯ ಅಪನಗದೀಕರಣಕ್ಕೆ ಒಳಗಾದ ನೋಟು
* ಆರ್‌ಬಿಐ ಗವರ್ನರ್ ಸಿಡಿ ದೇಶ್‌ಮುಖ್ ಸಹಿ ಮಾಡಿದ 1943ರ 10 ರೂಪಾಯಿಯ ನೋಟಿಗೆ ಬೇಡಿಕೆಯಿದೆ. ಈ ನೋಟಿನಲ್ಲಿ ಒಂದು ಬದಿಯಲ್ಲಿ ಅಶೋಕ ಪಿಲ್ಲಾರ್ ಮತ್ತು ನೋಟಿನ ಇನ್ನೊಂದು ಬದಿಯಲ್ಲಿ ಬೋಟಿನ ಚಿತ್ರವಿರಲಿದೆ.

Indian Rupee : ಏಷ್ಯಾದಲ್ಲೇ ಅತೀ ಕಳಪೆ ಕರೆನ್ಸಿ ಭಾರತದ ರೂಪಾಯಿ!Indian Rupee : ಏಷ್ಯಾದಲ್ಲೇ ಅತೀ ಕಳಪೆ ಕರೆನ್ಸಿ ಭಾರತದ ರೂಪಾಯಿ!

ಈ ನೋಟುಗಳನ್ನು, ನಾಣ್ಯಗಳನ್ನು ಬೇರೆ ಬೇರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ಮೂಲಕ ಮಾರಾಟ ಮಾಡಬಹುದು ಅಥವಾ ಖರೀದಿ ಮಾಡಬಹುದು. ಇದಕ್ಕಾಗಿ ಲಭ್ಯವಿರುವ ವೆಬ್‌ಸೈಟ್‌ನಲ್ಲಿ ರಿಜಿಸ್ಟಾರ್ ಆಗಿ, ನಾಣ್ಯವನ್ನು ಮಾರಾಟ ಅಥವಾ ಖರೀದಿ ಮಾಡಬಹುದು.

ಗಮನಿಸಿ: ಆಗಸ್ಟ್ 2020ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್‌ನಲ್ಲಿ ಹೀಗೆ ನಾಣ್ಯವನ್ನು ಮಾರಾಟ ಮಾಡುವ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಿಂದಾಗಿ ಆನ್‌ಲೈನ್‌ನಲ್ಲಿ ನಾಣ್ಯವನ್ನು ಮಾರಾಟ ಅಥವಾ ಖರೀದಿ ಮಾಡುವುದನ್ನು ಗ್ರೇನಿಯಮ್ ಸಂಸ್ಥೆಯು ಕೂಡಾ ಉತ್ತೇಜಿಸುವುದಿಲ್ಲ. ಈ ಸುದ್ದಿಯು ಬರೀ ಯಾವೆಲ್ಲ ನಾಣ್ಯಗಳಿಗೆ ಪ್ರಸ್ತುತ ಬೇಡಿಕೆಯಿದೆ ಎಂಬುವುದನ್ನು ತಿಳಿಸುವ ಉದ್ದೇಶದಿಂದ ಪ್ರಕಟಿಸಲಾಗಿದೆ.

English summary

Exchange old Rs 5 coin, Rs 10 Mata Vaishno Devi coin for Rs 10 lakh, Details in Kannada

If you are in possession of rare or special coins, or currency notes then you can auction them online and earn lakhs of rupees by sitting at home.
Story first published: Thursday, January 12, 2023, 14:57 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X